ಜೋಗಿ ಬರೆದ ಹೊಸ ಕವಿತೆ: ಕೆಎಸ್ ನ ಇನ್ನಿಲ್ಲ

371ಚಿತ್ರ: ಸೃಜನ್

ಮದುವೆಯೆಂದರೆ

ಕೆಲವರಿಗೆ ತಮಾಷೆ

ಹಲವರಿಗೆ ಮೋಕ್ಷ.

ಎಲ್ಲೋ ಒಂದಷ್ಟು ಮಂದಿಗೆ

ಭೂಗತ ಸ್ಥಿತಿ, ನೆಮ್ಮದಿ, ನಿರಹಂಕಾರ ಮತ್ತು

ಪುನರುಜ್ಜೀವನ.

ಕಿರುಬೆರಳಿಗೆ ಕಿರುಬೆರಳು

ಜೋಡಿಸಿ ಮುತ್ತಿಕ್ಕಿದಾಗ

ಮದುವೆ ಹೀಗಲ್ಲವೆ ಅಂದಳು ಆಕೆ.

ಬೆರಳಿಗೆ ಉಂಗುರ

ತೋಳಿಗೆ ವಂಕಿ, ಸೊಂಟಕ್ಕೆ ಡಾಬು

ಕತ್ತಿಗೊಂದು ಅರಿಶಿನದಾರ

ಅವನಿಗೋ ಜೋಡಿ ಜನಿವಾರ.

ಎಲ್ಲಾ ಸಜ್ಜನ ಪ್ರೀತಿಗೂ

ಮದುವೆ ಕೊನೆ ನಿಲ್ದಾಣ.

ಅಲ್ಲಿಂದಾಚೆ ಅವಳದು ಪ್ರತಿಯೊಂದಕ್ಕೂ

ಮಮಃ

ಅವನು ಮಾತ್ರ ನಿರ್ಮಮ!

ಪೂರ್ವಾಶ್ರಮದ ನೆನಪಿನಿಂದಾಚೆ

ಜಾರಿದರೆ

ಬಾಲ್ಯದ ತೊರೆ. ಅದರಲ್ಲಿ ಈಸಾಡಿದರೆ

ಎಂದೋ ಪ್ರೀತಿಸಿದ ಶೀನ, ಕಿಟ್ಟಿ, ಜನ್ನ, ಕೇಶವ

ಮತ್ತು ಹೆಸರೇ ನೆನಪಿಲ್ಲದ

ಆಳು ಹುಡುಗನ ಹರವಾದ ಎದೆತೋಳು.

ಷ್… ನಿಧಾನ

ಮಗಳು ಎದ್ದಾಳು.

ಮದುವೆಯೆಂದರೆ ಕಾಲು

ದಾರಿ.

ಈ ದಡದಿಂದ ಆ ದಡಕ್ಕೆ

ದುಗುಡಕ್ಕೆ ಬಿನ್ನಾಣಕ್ಕೆ

ಯಾರೋ ಇದ್ದಾರೆ ಎಂಬ ಭರವಸೆಗೆ.

ನಂಬಿಕೆ ಸುಳ್ಳಾಗುವ ವಿಷಾದಕ್ಕೆ.

ವಿಷಾದಯೋಗದ

ಅನಿವಾರ್ಯ ಸಂಭ್ರಮಕ್ಕೆ.

ಯಾರೋ ಈಸಾಡಿ ಹೋದ

ದೇಹದ ವ್ಯಾಮೋಹ ತೊರೆಯಬಲ್ಲ

ವಿರಾಗಕ್ಕೆ, ನಿರ್ಮೋಹಕ್ಕೆ.

ಎಲ್ಲಿಂದಲೋ ಬೀಸಿಬಂದ

ಬಿಸಿಗಾಳಿಗೆ ಕನ್ನಡಕ

ಮಂಜಾಗುತ್ತಿದೆ.

ಕಣ್ಣಿನ ಪೊರೆ ತೆಗೆಯಬಹುದು

ಕನ್ನಡಕದ್ದು?

ಕೆಎಸ್ ನರಸಿಂಹಸ್ವಾಮಿ

ಇನ್ನಿಲ್ಲ

‍ಲೇಖಕರು avadhi

August 5, 2009

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

3 ಪ್ರತಿಕ್ರಿಯೆಗಳು

  1. Rohit Ramachandraiah

    Jogi @ his best ….
    ಎರಡು ಮೂರು ದಿನಗಳ ಹಿಂದೆ ಪತ್ರಿಕೆಯಲ್ಲಿ, ಕೆ ಎಸ್ ನ ರ ಬಾಳಸಂಗಾತಿಯವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಸುದ್ದಿ ಕಣ್ಣಿಗೆ ಬಿದ್ದಿತ್ತು ….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: