ಜೋಗಿ ಬರೆಯುತ್ತಾರೆ:ಲ್ಯಾಪ್ಟಾಪು ಎಂಬ ಮೋಹಿನಿ ಮತ್ತು ನಾನೆಂಬ ಪರಕೀಯ

-ಜೋಗಿ

ಯಾಕೆ ಬೇಕು?

ಅವನು ವಿಚಿತ್ರ ಇಂಗ್ಲಿಷಿನಲ್ಲಿ ಕೇಳಿದ. ಬಹುಶಃ ಮಲಯಾಳಿ ಹುಡುಗನಿರಬೇಕು. ಕಷ್ಟಪಟ್ಟು ಮಾರ್ಕೆಟಿಂಗ್ ಭಾಷೆಯನ್ನು ಒಗ್ಗಿಸಿಕೊಳ್ಳಲು ಹೆಣಗುತ್ತಿದ್ದಂತೆ ಕಾಣಿಸುತ್ತಿದ್ದ.

ಯಾಕಾದರೂ ಅಂದ್ಕೋ. ಅದನ್ನು ಕಟ್ಟಿಕೊಂಡು ನಿಂಗೇನಾಗಬೇಕು’ ಅಂತ ನಾನು ಅಹಂಕಾರಿ ಗಿರಾಕಿಯಂತೆ ತಿರುಗಿಬಿದ್ದೆ. ಹಾಗೆ ರೇಗಿದ್ದೇ ತಡ, ಈತನಿಗೆ ಏನೂ ಗೊತ್ತಿಲ್ಲ ಎನ್ನುವ ತೀರ್ಮಾನಕ್ಕ ಬಂದ ಅವನು, ತನಗೆ ಗೊತ್ತಿದ್ದೆಲ್ಲವನ್ನೂ ವಿವರಿಸತೊಡಗಿದ. ಅವನು ಇಂಗ್ಲಿಷಿನಲ್ಲಿ ಹೇಳಿದ್ದರ ಪೈಕಿ ನನಗೆ ಅರ್ಥವಾದದ್ದು ಇಷ್ಟು:

ಒಂದೊಂದು ಉದ್ದೇಶಕ್ಕೆ ಒಂದೊಂದು ಕಂಪ್ಯೂಟರ್ ಬಳಸುತ್ತಾರೆ. ಕೇವಲ ಡಿಟಿಪಿ ಮಾಡುವುದಾದರೆ ಕಡಿಮೆ ಮೆಮರಿ ಇರುವ ಸಾಮಾನ್ಯ ಕಂಪ್ಯೂಟರ್ ಸಾಕು. ನೀವು ಇಂಟರ್ನೆಟ್ ಬಳಸುವವರಾಗಿದ್ದರೆ ಅದಕ್ಕೆ ಇನ್ನಷ್ಟು ಹೆಚ್ಚಿನ ಪರಿಕರಗಳನ್ನು ಹೊಂದಿರುವ ಕಂಪ್ಯೂಟರ್ ಬೇಕಾಗುತ್ತದೆ.

ನೀವು ಅದರೊಂದಿಗೆ ಸಿನಿಮಾ ನೋಡೋದು, ಹಾಡು ಕೇಳೋದು ಕೂಡ ಮಾಡುತ್ತೀರಾದರೆ ನಿಮಗೆ ಒಳ್ಳೆಯ ಸ್ರ್ಕ್ರೀನ್ ರೆಸಲ್ಯೂಷನ್ ಇರುವ ಹೆಚ್ಚಿನ ಡೆಡಿಕೇಟೆಡ್ ಮೆಮರಿ ಇರುವ ವಿಡಿಯೋ ಕಾರ್ಡ್ ಬೇಕಾಗುತ್ತೆ. ಇದಲ್ಲದೇ ನೀವು ಗ್ರಾಫಿಕ್ ಕೂಡ ಮಾಡೋದಾಗಿದ್ದರೆ ಐ ಥ್ರೀ, ಐ ಫೋರ್, ಐ ಫೈವ್ ಪ್ರಾಸೆಸರ್ ಇರುವ ಕಂಪ್ಯೂಟರ್ ತಗೋಬಹುದು. ಅದರಲ್ಲಿ ಏಕಕಾಲಕ್ಕೆ ಹಲವಾರು ಕೆಲಸಗಳನ್ನು ಮಾಡುವ ಮಲ್ಟಿಟಾಸ್ಕಿಂಗ್ ವ್ಯವಸ್ಥೆ ಇರುತ್ತೆ. ಪ್ರೊಸೆಸರ್ ಸ್ಪೀಡ್ ಜಾಸ್ತಿ ಇರೋದರಿಂದ ಪ್ರೋಗ್ರಾಮ್ ಬರೆಯುವವರಿಗೆ, ಗ್ರಾಫಿಕ್ ಬಳಸುವವರಿಗೆ, ಸಿನಿಮಾ ಎಡಿಟ್ ಮಾಡುವವರಿಗೆ ಅದು ಅನುಕೂಲಕರ.

ಇಷ್ಟಕ್ಕೇ ನಾನು ಸುಸ್ತಾಗಿ ಹೋಗಿದ್ದೆ. ಸರಿಯಾಗಿ ಐದು ವರ್ಷಗಳ ಹಿಂದೆ ಒಂದು ಷೋ ರೂಮಿಗೆ ಹೋಗಿ ಆ ಲ್ಯಾಪ್ಟ್ಯಾಪ್ ಕೊಡಿ ಎಂದು ಅಂಡರ್ವೇರ್ ಕೊಳ್ಳುವಷ್ಟೇ ಸರಳವಾಗಿ ಲ್ಯಾಪ್ಟಾಪ್ ಕೊಂಡುಕೊಂಡಿದ್ದೆ. ಈಗ ನೋಡಿದರೆ ಅದರಲ್ಲೇ ಸಾವಿರ ಆಯ್ಕೆಗಳು, ಸಾವಿರ ಗೊಂದಲಗಳು, ಲಕ್ಷ ಸಮಸ್ಯೆಗಳು.

ನನ್ನ ಅಗತ್ಯ ಇಷ್ಟೇ. ನಾನು ಕನ್ನಡದಲ್ಲಿ ಬರೆಯಬೇಕು. ಅದಕ್ಕೋಸ್ಕರ ಒಂದು ಸಾಫ್ಟ್ವೇರ್ ಕೊಂಡುಕೊಂಡಿದ್ದೇನೆ. ಸಾಧ್ಯವಾದರೆ ಅದನ್ನು ಪೇಜ್ಮೇಕರ್ ಸಾಫ್ಟ್ವೇರ್ ಬಳಸಿ ಪುಸ್ತಕರೂಪದಲ್ಲಿ ತರೋದಕ್ಕೆ ಆಗಬೇಕು. ಬೇಜಾರಾದಾಗ ಒಳ್ಳೇ ಸಿನಿಮಾ ನೋಡಬೇಕು, ಕೆಲಸ ಮಾಡುವಾಗಲೂ ಸಂಗೀತ ಕೇಳ್ತಿರಬೇಕು. ತೀರಾ ಬೇಸರವಾದಾಗ ಊರಿಂದಾಚೆ ಹೋಗಿ ಬರೆಯಲು ಕೂರುತ್ತೇನೆ. ಕನಿಷ್ಟ ಮೂರು ನಾಲ್ಕು ಗಂಟೆಯಾದರೂ ಬ್ಯಾಟರಿ ಬ್ಯಾಕಪ್ ಇರಬೇಕು..

ಇದನ್ನು ಅವನಿಗೆ ವಿವರಿಸಲು ಯತ್ನಿಸಿದೆ. ಅವನು ನಿಮಗೆ ಈ ಲ್ಯಾಪ್ಟಾಪ್ ಸಾಕು ಎಂದು ಇಂಟೆಲ್ ಡುಯಲ್ ಕೋರ್, ೩೨೦ ಜಿಬಿ ಹಾರ್ಡ್ ಡಿಸ್ಕ್, ೨ ಜಿಬಿ ರ್ಯಾಮ್ ಇರುವ ಲ್ಯಾಪ್ಟಾಪ್ ಒಂದನ್ನು ಕಟ್ಟಲು ನೋಡಿದ.

ಅದನ್ನು ನಾನು ಕೊಂಡುಕೊಂಡು ಬರಬೇಕಿತ್ತು. ಅಷ್ಟರಲ್ಲಿ ಅದರ ಆಪರೇಟಿಂಗ್ ಸಿಸ್ಟಮ್ ಯಾವುದು ಎಂದು ಗಮನಿಸಿದೆ. ವಿಂಡೋಸ್ ಸೆವೆಲ್ ಹೋಮ್. ಅದರಲ್ಲಿ ನನ್ನ ಕನ್ನಡ ಸಾಫ್ಟ್ವೇರ್ ಕೆಲಸ ಮಾಡುವುದಿಲ್ಲ ಎಂದು ಅನುಮಾನವಾಯಿತು. ಸೂರಿ ಲ್ಯಾಪ್ಟಾಪ್ ಕೊಂಡುಕೊಂಡಾಗ ಅದೇ ಸಮಸ್ಯೆ ಎದುರಿಸಿದ್ದರು. ಅಂಗಡಿಯವನ ಬಳಿ ಕೇಳಿದರೆ ಅವನು ಅಂಥದ್ದೇನಿಲ್ಲ ಬಿಡಿ ಎಂದು ಕೊಂಚ ಅನುಮಾನದಿಂದಲೇ ಹೇಳಿದ.

ತಕ್ಷಣಕ್ಕೆ ನೆನಪಾದವರು ಪವನಜ. ಅವರು ಕಂಪ್ಯೂಟರ್ ವಿಚಾರದಲ್ಲಿ ಅಂತಿಮ ಎಂದು ನಂಬಿರುವ ನಾನು ಅಲ್ಲಿಂದಲೇ ಅವರಿಗೆ ಫೋನಾಯಿಸಿದೆ. ಅವರು ಹೇಳಿದ್ದು ಕೇಳಿ ಮತ್ತಷ್ಟು ಗಾಬರಿಯಾಯಿತು.

ಬುದ್ಧಿ ಇದೆಯೇನ್ರಿ ನಿಮಗೆ. ವಿಂಡೋಸ್ ಸೆವೆನ್ ೬೪ ಬಿಟ್ . ನಿಮ್ಮ ಕನ್ನಡ ಸಾಫ್ಟ್ವೇರ್ಗಳು ೩೨ ಬಿಟ್. ಅದರಲ್ಲಿ ಇದು ಕೆಲಸ ಮಾಡೋದಿಲ್ಲ. ಕೆಲಸ ಮಾಡಲೇಬೇಕು ಅಂತಾದರೆ ಒಂದು ದಾರಿ ಇದೆ. ವಿಂಡೋಸ್ ಪ್ರೊಫೆಷನಲ್ ಆಪರೇಟಿಂಗ್ ಸಿಸ್ಟಮ್ ಹಾಕಿಸಿಕೊಳ್ಳಿ.  ಮೂರು ಜಿಜಿ ಮೆಮರಿ ಅತ್ಯಗತ್ಯ.

ಅದಿದ್ದರೆ ಎಕ್ಸ್ಪಿ ಮೋಡ್ ಲೋಡ್ ಮಾಡಿಕೊಂಡು ವರ್ಚುವಲ್ ಪಿಸಿಯಲ್ಲಿ ಅದನ್ನಲ್ಲ ಹಾಕಿಕೊಳ್ಳಬಹುದು. ಇಲ್ಲದೇ ಹೋದರೆ ಏನೂ ಮಾಡೋಕ್ಕಾಗಲ್ಲ. ನಿಮ್ಮ ಹಾಗೇ ಕವಿಯೊಬ್ಬರು ಕಂಪ್ಯೂಟರ್ ಹೊತ್ತುಕೊಂಡು ಮನೆಗೆ ಬಂದಿದ್ದರು. ಹೇಳದೇ ಕೇಳದೇ ಕೊಂಡುಕೊಂಡು ಎಡವಟ್ಟಾಗಿ ಹೋಗಿತ್ತು’ ಎಂದು ರೇಗಿದರು ಪವನಜ.

ಅವರಿಗೆ ಕನ್ನಡ ಸಾಹಿತಿಗಳ ಮೇಲೆ ಪತ್ರಕರ್ತರ ಮೇಲೆ ಸಿಟ್ಟೋ ಸಿಟ್ಟು. ಯೂನಿಕೋಡ್ ತಂತ್ರಾಂಶದ ಅಭಿವೃದ್ಧಿಗೆ ಯಾರೂ ಪ್ರಯತ್ನಿಸುತ್ತಿಲ್ಲ. ಈ ನುಡಿ ಮತ್ತು ಬರಹವನ್ನು ನಂಬಿಕೊಂಡು ಕೂತಿದ್ದೇವೆ. ಲಕ್ಷಾಂತರ ರುಪಾಯಿ ಕೊಟ್ಟು ಪೇಜ್ಮೇಕರ್ ಸಾಫ್ಟ್ವೇರ್ಗಳನ್ನು ಕೊಳ್ಳುವ ಪತ್ರಿಕಾ ಸಂಸ್ಥೆಗಳು ಅದಕ್ಕೆ ಒತ್ತಾಯಿಸಬೇಕು. ಯಾರೂ ಆ ಕೆಲಸ ಮಾಡ್ತಿಲ್ಲ ಎಂದು ಸಿಟ್ಟಾದರು. ಅವರ ಪ್ರಕಾರ ಪತ್ರಿಕೋದ್ಯಮದಲ್ಲಿ ಸರಿಯಾದ ಕಂಪ್ಯೂಟರ್ ಜ್ಞಾನ ಇರುವವರು ಮೂರೋ ನಾಲ್ಕೋ ಮಂದಿ. ಉಳಿದವರಿಗೆ ಅದೇನು ಅನ್ನುವುದೂ ಗೊತ್ತಿಲ್ಲ.

ಇದೇ ಮಾತನ್ನು ತೇಜಸ್ವಿಯವರೂ ಹೇಳುತ್ತಿದ್ದರು. ಅವರೂ ಕೂಡ ಹಳೇ ತಂತ್ರಾಂಶವನ್ನಿಟ್ಟುಕೊಂಡು ಒದ್ದಾಡಿದವರೇ. ಕನ್ನಡಕ್ಕೆ ಹೊಸ ತಂತ್ರಾಂಶವೊಂದನ್ನು ಹುಟ್ಟುಹಾಕಬೇಕು ಎಂದು ಅವರೂ ಅವರ ಗೆಳೆಯರೂ ಸಾಕಷ್ಟು ಪರದಾಡಿದ್ದರು.

ಪವನಜ ಹಾಗೆ ಹೇಳಿದ ಮೇಲೆ ನನ್ನ ಸಮಸ್ಯೆ ಮತ್ತಷ್ಟು ಜಟಿಲವಾಯಿತು. ಮನೆಗೆ ಬಂದವನೇ, ನಾನು ಬಳಸುವ ಸಾಫ್ಟ್ವೇರ್ ಅಭಿವೃದ್ಧಿ ಪಡಿಸಿದ ಸಿಡಾಕ್ ಸಂಸ್ಥೆಯ ವೆಬ್ಸೈಟು ನೋಡಿದೆ. ಅಲ್ಲಿ ಆ ಸಾಫ್ಟ್ವೇರ್ ವಿಂಡೋಸ್ ವಿಸ್ತಾ ಮತ್ತು ವಿಂಡೋಸ್ ಸೆವೆನ್ಗೆ ಹೊಂದಿಕೆಯಾಗುವುದಿಲ್ಲ ಎಂದಿತ್ತು. ಅದಕ್ಕೇನು ಪರಿಹಾರ ಎನ್ನುವುದನ್ನು ಅವರು ಸೂಚಿಸಿರಲಿಲ್ಲ.

ವಿಂಡೋಸ್ ೭ ಅಲ್ಟಿಮೇಟ್ನಲ್ಲಿ ೩೨ ಬಿಟ್ ವರ್ಷನ್ ಲಭ್ಯವಿದೆ ಎಂದು ಗೆಳೆಯರೊಬ್ಬರು ಸಲಹೆ ಕೊಟ್ಟರು. ೬೪ ಬಿಟ್ ಲ್ಯಾಪ್ಟಾಪ್ ತೆಗೆದುಕೊಂಡು ೩೨ ಬಿಟ್ ಆಪರೇಟಿಂಗ್ ಸಿಸ್ಟಮ್ ಯಾಕೆ ಹಾಕ್ಕೋತೀರಿ. ಇದೊಂದು ಕನ್ನಡ ಸಾಫ್ಟ್ವೇರ್ಗೋಸ್ಕರ ಅದನ್ನೆಲ್ಲ ಯಾಕೆ ಮಾಡಬೇಕು ಎಂದು  ಮತ್ಯಾರೋ ನನ್ನ ಯೋಚನೆಯನ್ನು ತಳ್ಳಿ ಹಾಕಿದರು.

ಕನ್ನಡದಲ್ಲಿ ಬರೆಯೋದಕ್ಕೆ ಹಳೇ ಮೆಷಿನ್ ಇಟ್ಟುಕೊಳ್ಳಿ. ಬೇರೆ ಕೆಲಸಕ್ಕೆ ಹೊಸ ಮೆಷಿನ್ ಬಳಸಿ. ಕನ್ನಡದಲ್ಲಿ ಅಷ್ಟೊಂದು ಬರೆಯೋದಕ್ಕೇನಿರುತ್ತೆ ಅಂತ ಒಂದು ಅಂಗಡಿಯಾತ ಸಲಹೆ ಕೊಟ್ಟ. ಮತ್ತೊಂದು ಅಂಗಡಿಗೆ ಹೋದರೆ ಅವನು ಗುಜರಿ ಸಾಮಾನುಗಳನ್ನು ಮಾರುವ ವ್ಯಾಪಾರಿಯ ಹಾಗೆ ವಿವಿಧ ಗಾತ್ರದ, ಮಾಸಿದ ಲ್ಯಾಪ್ಟಾಪುಗಳನ್ನಿಟ್ಟುಕೊಂಡು ಕೂತಿದ್ದ. ನನಗೆ ಬೇಕಾದ ಲ್ಯಾಪ್ಟಾಪ್ ಬಗ್ಗೆ ಕೇಳಿದಾಗ, ಯಾರಿಗೋ ಫೋನ್ ಮಾಡಿ ಮೈ ಅಬ್ಬಾಸ್ … ಎಂದು ಶುರುಮಾಡಿ ಹಿಂದಿ ಮಿಶ್ರಿತ ಉರ್ದುವಿನಲ್ಲಿ ಏನೇನೋ ಕೇಳಿದ. ಅರ್ಧಗಂಟೇಲಿ ಲ್ಯಾಪ್ಟಾಪ್ ತರಿಸಿ ಕೊಡ್ತೀನಿ. ಅದೇನು ಬೇಕಿದ್ರೂ ಮಾಡೋಣ. ಸಾಫ್ಟ್ವೇರ್ ಎಲ್ಲಾ ಫ್ರೀ ಕೊಡ್ತೀನಿ ಅಂದ. ನಮಗೆ ಗಾಬರಿಯಾಗಿ ಅಲ್ಲಿಂದ ಕಾಲು ಕಿತ್ತೆವು.

ಸೋನಿ ಒಳ್ಳೇದೇ, ಆದರೆ ಅವರು ತಾವೇ ಮಹಾರಾಜರು, ತಮ್ಮದೇ ಸ್ಟಾಂಡರ್ಡ್ ಅಂದ್ಕೊಂಡಿರ್ತಾರೆ. ಡೆಲ್

ಅತ್ಯುತ್ತಮ, ಆದರೆ ಅವರ ಷೋ ರೂಮ್ ಇಲ್ಲ. ಎಚ್ಪಿ ಡಿವಿ ಸೀರೀಸ್ ಚೆನ್ನಾಗಿದೆ. ಆದರೆ ನಾವು ತಗೊಂಡಿರೋ ಲ್ಯಾಪ್ಟಾಪ್ ಪಕ್ಕ ಮೊಬೈಲ್ ಇಟ್ಟರೆ ಸಿಸ್ಟಮ್ ಹ್ಯಾಂಗ್ ಆಗಿಹೋಗುತ್ತೆ. ಲೆನೋವಾ ಒಳ್ಳೆಯ ಸಿಸ್ಟಮ್ಮೇ, ಆದರೆ ದುಬಾರಿ. ಏಸರ್ ಸಾಮಾನ್ಯ ಅಷ್ಟೇ. ತೋಷಿಬಾ ಚೆನ್ನಾಗಿದೆ, ನಂಬಿಕಸ್ತ ಅಲ್ಲ… ಹೀಗೆ ನೂರೆಂಟು ಸಲಹೆಗಳೂ ಎಚ್ಚರಿಕೆಯ ಮಾತುಗಳೂ ಬಂದವು.

ಈ ಮಧ್ಯೆ ಗೆಳೆಯರೊಬ್ಬರು ಫೋನ್ ಮಾಡಿ ಮ್ಯಾಕ್ ಸಿಸ್ಟಮ್ ತಗೊಳ್ಳಿ. ಅದರ ಮುಂದೆ ಬೇರೆ ಯಾವುದೂ ಇಲ್ಲ ಅಂದರು. ಅರವತ್ತು ಸಾವಿರಕ್ಕೆಲ್ಲ ಸಿಗುತ್ತೆ ಅಂತ ಸಲಹೆ ಕೊಟ್ಟರು. ಗೆಳೆಯ ಸೂರಿಯವರ ಕೈಯಲ್ಲಿ ಆ ಮೋಹಿನಿಯನ್ನು ನೋಡಿದ್ದ ನಾನು ಅದೇ ವಾಸಿ ಎಂದುಕೊಂಡು ವಿಚಾರಿಸಿದರೆ ಮತ್ತಷ್ಟು ಹೃದಯವಿದ್ರಾವಕ ಸಂಗತಿಗಳು ಹೊರಬಿದ್ದವು.

ಮ್ಯಾಕ್ನಲ್ಲಿ ಕನ್ನಡ ಕೆಲಸ ಮಾಡುವುದೇ ಇಲ್ಲ. ಅದಕ್ಕೆ ಮತ್ತೆ ವಿಂಡೋಸ್ ಹಾಕಿಕೊಳ್ಳಬೇಕು. ಮ್ಯಾಕ್ಗೆ ಹಾಕುವ ವಿಂಡೋಸ್ಗೆ ಹದಿನೆಂಟು ಸಾವಿರ ಕೊಡಬೇಕು. ಅದಾದ ಮೇಲೂ ಮ್ಯಾಕ್ ಕೇವಲ ಒರಿಜಿನಲ್ ಸಾಫ್ಟ್ವೇರ್ಗಳನ್ನು ಮಾತ್ರ ಸ್ವೀಕರಿಸುತ್ತದೆ. ಹೀಗಾಗಿ ನಮ್ಮ ಅಗತ್ಯಕ್ಕೆ ಬೇಕಾದಂತೆ ಅದನ್ನು ಸಿದ್ದಪಡಿಸಲು ಒಂದೂವರೆ ಲಕ್ಷ ಖರ್ಚಾಗುತ್ತದೆ.

ಮತ್ತೆ ಬಂದು ನನ್ನ ಹಳೆಯ ಲ್ಯಾಪುಟಾಪಿನ ಮುಂದೆ ಕೂತೆ. ಕೀಬೋರ್ಡ್ ಕಿತ್ತುಹೋದ, ಮೌಸ್ ಕೆಲಸ ಮಾಡದ ಅದೇ ತುಂಬ ವರ್ಷ ಜೊತೆಗೆ ಸಂಸಾರ ಮಾಡಿದ ಹೆಂಡತಿಯಂತೆ ಆಪ್ತ ಅನ್ನಿಸಿತು. ಮನೆಯ ಪಕ್ಕದಲ್ಲಿದ್ದ ಅಂಗಡಿಗೆ ಹೋದರೆ ಅವನು ಪುಟ್ಟದೊಂದು ಕೀ ಬೋರ್ಡ್ ಕೊಟ್ಟ, ವೈರ್ಲೆಸ್ ಮೌಸ್ ಕೊಟ್ಟ. ಅದನ್ನು ಜೋಡಿಸಿಕೊಂಡು ಹಳೇ ಲ್ಯಾಪ್ಟಾಪಿನ ಮೇಲೆ ಬೆರಳಾಡಿಸುತ್ತಿದ್ದರೆ ಸಪ್ತಸ್ವರಗಳು ಹೊಮ್ಮಿದವು.

ಕನ್ನಡ ಬರೆಯುವುದನ್ನು ಬಿಡುವುದಾ, ಕನ್ನಡಕ್ಕೊಂದು ತಂತ್ರಾಂಶ ಬೇಕು ಎಂದು ಜಗಳ ಆಡುವುದಾ, ಮತ್ತೆ ಪೆನ್ನಿನಲ್ಲಿ ಬರೆಯಲು ಆರಂಭಿಸೋದಾ ಎಂದು ಯೋಚಿಸುತ್ತಾ ಕೂತಿದ್ದೇನೆ. ಕಣ್ಮುಂದೆ ಲ್ಯಾಪುಟಾಪುಗಳು ಮೆರವಣಿಗೆ ಹೊರಟಿವೆ.


‍ಲೇಖಕರು avadhi

October 27, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

16 ಪ್ರತಿಕ್ರಿಯೆಗಳು

 1. Sushrutha

  ಹಹಹಾ! 😀 ನೀವವತ್ತು ಫೇಸ್‌ಬುಕ್ಕಿನಲ್ಲಿ ಸ್ಟೇಟಸ್ ಹಾಕಿಕೊಂಡಾಗಲೇ ಅನ್ಸಿತ್ತು, ಪಾಪ ಜೋಗಿ ಸರ್ರು ಅಂತ.. 😛

  ಪ್ರತಿಕ್ರಿಯೆ
 2. anand

  Windows XP with Baraha/Nudi (Baraha/Nudi Direct for Unicode) is enough for happy life 🙂

  ಪ್ರತಿಕ್ರಿಯೆ
 3. RJ

  ಒಳ್ಳೇ ಮಜಾ ಅನಿಸ್ತು ಜೋಗಿ ಸರ್…
  ಒಂದು ಕನ್ನಡ ತಂತ್ರಾಂಶಕ್ಕಾಗಿ ಸಿಕ್ಕಾಪಟ್ಟೆ R & D ಮಾಡಿಬಿಟ್ಟಿದ್ದೀರಿ.
  ಇರ್ಲಿ ಬಿಡಿ, at least current technology
  ಬಗ್ಗೆ ಮಾಹಿತಿಯಾದ್ರು ಅಪ್ ಡೇಟ್ ಆಯ್ತಲ್ಲ..
  ನಿಮ್ಮ ಹಳೇ ಕಂಪ್ಯೂಟರ್ ಆರೋಗ್ಯ ಹ್ಯಾಗಿದೆ ಈಗ?
  🙂
  -ರಾಘವೇಂದ್ರ ಜೋಶಿ

  ಪ್ರತಿಕ್ರಿಯೆ
 4. Pavanaja U B

  @anand – Windows XP is no more available to buy or install. Even if you have old XP you will not get service packs and updates.

  Jogi’s problem is the problem with most Kannada writers -they all want to use the old PageMaker, CorelDraw, Photoshop, etc., which are at least a decade or more old. Even though more recent versions of these s/w pacakages are available the issue with Kannada writers is that none of them support Kannada Unicode for DTP. Hence if anyone wants to do a good professional quality Kannada DTP he/she has to stick to the old non-Unicode obsolete s/w. The problem lies here -none of these old s/w work in the latest Windows7 64 bit versions. By default nowadays most laptops come with Win7 64 bit Home Professional. There is a workaround -one has to install the XP mode in Win7 and install the old DTP s/w in that virtual PC. The system requirement for installing XP mode is that it wants Win7 Professional or Ultimate plus minimum of 3 GB RAM. This is what I explained to one Kannada poet before buying a laptop. But he did not listen to my advice and bought a standard Win7 64 bit Home Professional with 2GB RAM. He came to my house complaining that he is not able to do DTP, which I had warned in advance. I told the same story to Jogi.

  ಪ್ರತಿಕ್ರಿಯೆ
  • RJ

   @Mr.Pavanaja
   Win XP pro edition is still available in market but you won’t get updates/patches for that. Of course, all high end and recent laptops are coming with windows 7 editions which is not compatible with most of the kannada s/w.It doesn’t means that you cannot install winXP on that laptop.only thing is you need to install the drivers for XP which is hardly available.
   Usually specs of the laptops/desktops are depends on nature of work.Its true that,Some times end users will buy high end laptops only because of their neighbors opted same.Going for greater specs just for writing in kannada doesn’t makes any sense.Its something like having Benz car and parking at in front of house all the times.. 🙂
   -RJ

   ಪ್ರತಿಕ್ರಿಯೆ
   • Pavanaja U B

    @RJ – My comments are with the assumption that Jogi is going to buy/use licensed WinXP :). You might be able to install WinXP but that is not enough. It needs to be activated. Since WinXP up to SP2 expired on July 13, 2010, it wont be activated unless you have WinXP SP3. Recently my son Ninaada (http://www.ninaada.com/) got WinXP with SP3 installed in one PC. That is because he is a MSP (Microsoft Student Partner) and he has licensed MS s/w obtained through MSDN license. Hence if someone is able to get hold of WinXP with SP3, it is possible to install. But it is not available in market.

    ಪ್ರತಿಕ್ರಿಯೆ
    • RJ

     @Mr.Pavanaja,
     Partially i agree with your comments.I suggested WinXp Pro edition keeping in mind that Mr.Jogi’s wallet is mine.. 🙂
     Obviously one should use genuine s/w. But if people like me wants to buy licensed copies of all s/w,then it will be almost 3-4 times (some times it will be 30-40 times!) of the laptop price. I hope you too know all these..

     ಪ್ರತಿಕ್ರಿಯೆ
 5. ಮಾ ಸು ಮಂಜುನಾಥ

  ನನ್ನ ವಿಂಡೋಸ್ ಫೋನ್ ಗತಿನೂ ಅದೇ ಆಗಿದೆ.ಇವತ್ತು ಒನ್ ಇಂಡಿಯಾ ನೀವ್ಸ್ ಹಂಟ್ ಅಂತ ಯಾವುದೋ ಸಾಪ್ಟ್ ವೇರ್ ಬಳಸಿ ಕನ್ನಡ ಓದುವ ಬಯಕೆ ಹೀಡೇರಲಿಲ್ಲ.

  ಪ್ರತಿಕ್ರಿಯೆ
 6. Mahesh

  ಲೀನಕ್ಸ ತಂತ್ರಜ್ಞಾನದಲ್ಲಿ ಕನ್ನಡ ಸಾಫ್ಟವೇರ್ ಗಳು ಇಲ್ಲವೇ.. ಇನ್ನೂ ಇಲ್ಲದಿದ್ದರೆ ಅದನ್ನು ಬರೆಯಬಲ್ಲ ತಂತ್ರಜ್ಞರು ಬೆಂಗಳೂರಿನಲ್ಲಿ ಇರಬಹುದೇ.. ಎಷ್ಟಂದರೂ ಬೆಂಗಳೂರು ಜಗತ್ತಿನ ಸಾಫ್ಟವೇರ್ ರಾಜಧಾನಿ ತಾನೆ

  ಪ್ರತಿಕ್ರಿಯೆ
 7. Sree

  ನಾನು ಡೆಲ್ ಇನ್ಸ್ಪಿರಾನ್ ತೊಗೊಂಡು ವಿಂಡೋಸ್ ೭ ಜೊತೆ ಗುದ್ದಾಡಿ ಮೈ ಪರಚ್ಕೊತಿದೀನಿ:( ಕನ್ನಡ ಡಿಟಿಪಿಗೆಲ್ಲ ಹಳೆಶಿಲಾಯುಗದ ಪಿಸಿನೆ ಗತಿಯಾಗಿದೆ:((

  ಪ್ರತಿಕ್ರಿಯೆ
 8. ರವಿಪ್ರಕಾಶ

  ಮಾ್ಯಕ್ ನಲ್ಲಿ ಕನ್ನಡ ಕೆಲ್ಸ ಮಾಡುತ್ತೆ, ನಾನು ಮಾ್ಯಕ್ ನಿಂದ ಈ ಕಮೆಂಟ್ ಕೂಡಾ ಮಾಡುತ್ತಿದ್ದೇನೆ. ಬಹುಶಃ ನಿಮ್ಮ ಸಾಪ್ಟವೇರ್ ಗಳು ಮಾ್ಯಕ್ನಲ್ಲಿ ಕೆಲಸ ಮಾಡ್ಲಿಕ್ಕಿಲ್ಲ.

  ರವಿಪ್ರಕಾಶ

  ಪ್ರತಿಕ್ರಿಯೆ
 9. yogi

  ಹಳೆಯ ಅಪ್ಲಿಕೇಶನ್ ಗಳು ೬೪ ಬಿಟ್ ವಿಂಡೋಸ್ ೭ ರಲ್ಲೂ ಕೆಲಸ ಮಾಡುತ್ತವೆ. ನನ್ನ ಬಳಿ ಇರುವ ೬೪ ಬಿಟ್ ವಿಂಡೋಸ್ ೭ ನಲ್ಲಿ ನುಡಿ, ಬರಹ, ಕನ್ನಡ ಯೂನಿಕೋಡ್ ಎಲ್ಲಾನೂ ಸರಿಯಾಗಿ ಕೆಲಸ ಮಾಡುತ್ತಿವೆ. ಯಾವುದೇ ಸಮಸ್ಯೆ ಇಲ್ಲ.

  ಇಲ್ಲಿ ನೋಡಿರಿ:
  http://www.microsoft.com/windows/windows-7/compare/32-bit-64-bit-faq.aspx

  ಪ್ರತಿಕ್ರಿಯೆ
  • Pavanaja U B

   @Yogi – ಬಹುಶಃ ನಿಮ್ಮದು ಸ್ವಲ್ಪ ಅವಸರದ ಪ್ರತಿಕ್ರಿಯೆ. ದಯವಿಟ್ಟು ನಾನು ಬರೆದುದನ್ನೆಲ್ಲ ಕೂಲಂಕುಷವಾಗಿ ಓದಿ ನೋಡಿ. ನಾನು ಸ್ಪಷ್ಟವಾಗಿ ಬರೆದಿದ್ದೇನೆ -ಯಾವ ಹಳೆಯ ತಂತ್ರಾಂಶಗಳು ಕೆಲಸ ಮಾಡುವುದಿಲ್ಲ ಎಂಬುದಾಗಿ. ಬರಹ ಮತ್ತು ಕನ್ನಡ ಯುನಿಕೋಡ್‌ಗಳನ್ನು ನಾನು ದಿನನಿತ್ಯ ಬಳಸುತ್ತಿದ್ದೇನೆ.

   ಪ್ರತಿಕ್ರಿಯೆ
  • yogi

   ಪೇಜ್ ಮೇಕರ್, ಕೋರಲ್ ಡ್ರಾ ಮುಂತಾದ ಹಳೆಯ ಸಾಫ್ಟ್‌ವೇರ್ ಬದಲು ಓಪನ್ ಆಫೀಸ್ ಬಳಸಬಹುದು. ಇದರಲ್ಲಿ ಕನ್ನಡ ಯೂನಿಕೋಡ್ ವರ್ಕ್ ಆಗುತ್ತೆ.

   http://www.openoffice.org/screenshots/

   ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: