ಜೋಗಿ ಬಿನ್ನಹ..

– ಜೋಗಿ

ಆತ್ಮೀಯರೇ, ಸಾಹಿತ್ಯ, ಕಲೆ, ಸೃಜನಶೀಲತೆಯ ಆರಂಭಿಕ ನೆಲೆಗಳ ಕುರಿತು ತರುಣ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂಥ ಕಿರುಹೊತ್ತಿಗೆಯೊಂದನ್ನು ಹೊರತರುವ ಆಲೋಚನೆ ನನ್ನದು. ಹಲವಾರು ಶಾಲೆ ಮತ್ತು ಕಾಲೇಜುಗಳಿಗೆ ಹೋಗಿ ಅಲ್ಲಿನ ವಿದ್ಯಾರ್ಥಿಗಳನ್ನು ಭೇಟಿ ಮಾಡಿದಾಗ, ಅವರಲ್ಲಿ ಸಾಹಿತ್ಯ ರಚನೆಯ, ಓದುವ ಕುರಿತು ಅಪಾರ ಆಸಕ್ತಿ ಇರುವುದು ಗೋಚರವಾಯಿತು. ಆದರೆ ಎಲ್ಲರಲ್ಲೂ ಕೆಲವೊಂದು ಗೊಂದಲಗಳಿವೆ. ಹೇಗೆ ಬರೆಯಬೇಕು, ಬರೆವಣಿಗೆಗೆ ಪ್ರೇರಣೆ ಏನು, ಯಾವುದನ್ನು ಓದಬೇಕು, ಎಲ್ಲಿಂದ ಆರಂಭಿಸಬೇಕು, ಪರಂಪರೆಯ ಲೇಖಕರು ಮುಖ್ಯವಾ, ಸಮಕಾಲೀನ ಲೇಖಕರನ್ನೇ ಓದಬೇಕಾ, ಎಷ್ಟು ಓದಬೇಕು, ಪದ್ಯವನ್ನು ಓದುವುದು ಹೇಗೆ, ಸಣ್ಣಕತೆಗೂ ಕಿರುಕತೆಗೂ ನೀಳ್ಗತೆಗೂ ಕಾದಂಬರಿಗೂ ಏನು ವ್ಯತ್ಯಾಸ- ಇವೇ ಮುಂತಾದ ಪ್ರಶ್ನೆಗಳನ್ನು ಅವರು ಕೇಳುತ್ತಲೇ ಇರುತ್ತಾರೆ. ಅವರ ಆಸಕ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ಈ ಪುಸ್ತಕ ನೆರವಾದೀತೇನೋ ಎಂಬ ನಂಬಿಕೆಯೊಂದಿಗೆ ಅಂಥದ್ದೊಂದು ಕೃತಿಯ ರಚನೆಗೆ ಕೈ ಹಾಕಿದ್ದೇನೆ. ಇದಕ್ಕೆ ತಮ್ಮ ಸಹಕಾರ ಬೇಕು. ಅನೇಕರು ನಮ್ಮ ಹಿರಿಯ ಲೇಖಕರು ಯಾವಾಗ ಬರೆಯಲು ಆರಂಭಿಸಿದರು, ಅವರಿಗೆ ಸ್ಪೂರ್ತಿ ಆದದ್ದೇನು, ಅವರನ್ನು ಪ್ರೋತ್ಸಾಹಿಸಿದವರು ಯಾರು, ಮೊದಲು ಬರೆಯಲು ಶುರುಮಾಡಿದಾಗ ಅವರ ಆತ್ಮವಿಶ್ವಾಸ ಹೇಗಿತ್ತು ಎಂಬಿತ್ಯಾದಿ ವಿಚಾರಗಳ ಬಗ್ಗೆ ತೀವ್ರ ಕುತೂಹಲ ಹೊಂದಿದ್ದಾರೆ. ನನ್ನ ಕೃತಿಯ ಎರಡನೆಯ ಭಾಗದಲ್ಲಿ ಕನ್ನಡದ ಪ್ರಮುಖ ಲೇಖಕರು ತಮ್ಮದೇ ಮಾತಿನಲ್ಲಿ ತಮ್ಮ ಆರಂಭದ ದಿನಗಳ ಬರವಣಿಗೆಯ ಬಗ್ಗೆ ಹೇಳಿದ ಮಾತುಗಳು ಇರುತ್ತವೆ. ನೀವು ನಿಮ್ಮ ಬರವಣಿಗೆಯ ಪ್ರೇರಣೆ, ಸ್ಪೂರ್ತಿ, ನೀವು ಬರೆಯಲು ಆರಂಭಿಸಿದ ಕ್ಷಣದ ಖುಷಿ, ತಲ್ಲಣ, ಎದುರಿಸಿದ ಸವಾಲುಗಳ ಬಗ್ಗೆ ಒಂದು ಪುಟ್ಟ ಟಿಪ್ಪಣಿ ಬರೆದುಕೊಡಲು ಸಾಧ್ಯವೇ. ಅದು ನನ್ನ ಪುಸ್ತಕದ ಎರಡನೆಯ ಹಾಗೂ ಬಹುಮುಖ್ಯವಾದ ಭಾಗವಾಗಿ ಬರುತ್ತದೆ. ಇದು ತರುಣ ಮತ್ತು ಉದಯೋನ್ಮುಖ ಲೇಖಕರಿಗೆ ಸ್ಪೂರ್ತಿಯ ಸೆಲೆಯಾಗುತ್ತದೆ ಎಂಬುದು ನನ್ನ ಅನಿಸಿಕೆ. ಪದಗಳ ಮಿತಿಯಿಲ್ಲ. ನಿಮ್ಮ ಅನುಭವವನ್ನು ದಯವಿಟ್ಟು ಬರೆದು ಕಳುಹಿಸಿದರೆ ಅನುಕೂಲ ಮತ್ತು ಸಂತೋಷ. ಪುಸ್ತಕ ಸೆಪ್ಟೆಂಬರ್ 16ರಂದು ಬಿಡುಗಡೆ ಆಗುತ್ತದೆ. ಅಂಕಿತ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸುತ್ತಿದೆ. ದಯವಿಟ್ಟು ಆಗಸ್ಟ್ 31ರ ಒಳಗೆ ತಲುಪುವಂತೆ ಕಳುಹಿಸಿಕೊಡಲು ಸಾಧ್ಯವೇ. ಬರೆಯುವ ಒತ್ತಡ ಇದ್ದರೆ ದಯವಿಟ್ಟು ತಿಳಿಸಿ. ನೀವು ಮಾತಾಡಿದರೂ ಸಾಕು. ನಾನೇ ಬಂದು ಅದನ್ನು ಬರೆದುಕೊಳ್ಳುತ್ತೇನೆ. ಪ್ರೀತಿಯಿಟ್ಟು ಒಪ್ಪಿಕೊಳ್ಳಬೇಕಾಗಿ ವಿನಯದಿಂದ ಕೇಳಿಕೊಳ್ಳುತ್ತಿದ್ದೇನೆ. ವಿಶ್ವಾಸದಿಂದ ಜೋಗಿ

**************

ನಿಮ್ಮ ಬರಹಗಳನ್ನು [email protected] ಗೆ ಕಳುಹಿಸಿ, ನಾವು ಅದನ್ನು ಜೋಗಿಯವರಿಗೆ ತಲುಪಿಸುತ್ತೇವೆ

 ]]>

‍ಲೇಖಕರು G

August 27, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This