ಜೋಗಿ ಲಹರಿ
– ಜೋಗಿ
ಎಂಥ ಚೆಂದದ ಹೂವು
ಕೂಡ ಸಂಜೆಯಾದಂತೆ
ಮುದುಡಿ ಬಿದ್ದುಹೋಗುವುದು
ಎಂದು ಗೊತ್ತಿದ್ದೂ ಮೊಗ್ಗಾಗಿ
ಹೂವಾಗಿಸುವ ಮಂದಾರದ
ಹಾಗೆ
ಪ್ರೇಮಿಸುವುದು ಕೂಡ
ಅಂತರಂಗದ ಸ್ಪೂರ್ತಿ.
ಅದು ಮುದುಡುವುದು
ಲೋಕದ ಕುಖ್ಯಾತಿ.
ನಿರಂತರ ಪ್ರೀತಿಸುತ್ತಿರು
ಎಂದು ಅವಳಿಗೆ ಉಪದೇಶಿಸಲಾರೆ.
ನುಡಿದಂತೆ ನಡೆಯುವುದು
ಮೋಹದಲ್ಲಿ ಸಂಭಾವ್ಯ, ಕಾಮದಲ್ಲಿ ಶಕ್ತ್ಯಾನುಸಾರ,
ದ್ವೇಷದಲ್ಲಿ ಸಾವಕಾಶ
ಪ್ರೇಮದಲ್ಲಿ ಮಾತ್ರ
ಪರವಶ.
]]>
e preethiya parinaama nanna hrudaykke maatra gotthaitu, bhashegaagi thadakadide, sigalilla, sory jogi