ಜೋಗಿ ಸೀಕ್ರೆಟ್ ಡೈರಿ : ’ಜೋಕೆ ನಾನು ಬಳ್ಳಿಯ ಮಿ೦ಚು..’

ಅವಳ ಸಾವಿನ ನಂತರ ಹುಟ್ಟಿಕೊಂಡಳು ನಕಲಿ ಮಾತಾಹರಿ!

– ಜೋಗಿ

ಇವತ್ತು ಮಾತಾಹರಿಯ ಅರೆಬರೆ ಚರಿತ್ರೆಯನ್ನು ಕೇಳುತ್ತಾ ಕುಳಿತ ನಮಗೆ ಆಕೆಯ ಬದುಕು ರೋಚಕ ಅನ್ನಿಸಬಹುದು. ಅವಳ ಕುರಿತು ಬಂದಿರುವ ಪುಸ್ತಕಗಳು, ಸಿನಿಮಾಗಳೆಲ್ಲ ಅವಳ ಒಂದು ಮುಖವನ್ನಷ್ಟೇ ನಮಗೆ ಪರಿಚಯಿಸುತ್ತವೆ. ಅವಳು ಕಾಮದರಗಿಣಿಯಾಗಿ, ಪ್ರೇಮಸನ್ನಿಭಳಾಗಿ, ವ್ಯಾಮೋಹವೇ ಮೈವೆತ್ತ ರೂಪವತಿಯಾಗಿ ರೂಪಾಂತರ ಹೊಂದುವ ಮೊದಲಿನ ಅವಳ ಕತೆ ದಾರುಣವೂ ಕರುಣಾಜನಕವೂ ಆಗಿದೆ.

ಮಾತಾಹರಿಯ ಅಪ್ಪ ವ್ಯಾಪಾರದಲ್ಲಿ ನಷ್ಟ ಹೊಂದುತ್ತಾನೆ. ಅವಳ ಅಮ್ಮ ಸತ್ತು ಹೋಗುತ್ತಾಳೆ. ಅಪ್ಪ ಮತ್ತೊಂದು ಮದುವೆ ಮಾಡಿಕೊಂಡು ದೂರವಾಗುತ್ತಾನೆ. ಮಾತಾಹರಿಯನ್ನು ಅವಳ ಸಂಬಂಧಿಯೊಬ್ಬ ವಸತಿ ಶಾಲೆಯೊಂದಕ್ಕೆ ಸೇರಿಸುತ್ತಾನೆ. ಅವಳಿಗಾಗ ಹದಿನಾರು. ಆ ಶಾಲೆಯ ಪ್ರಿನ್ಸಿಪಾಲು ಅವಳ ಜೊತೆ ಗುಪ್ತ ಸಂಬಂಧವಿಟ್ಟುಕೊಂಡದ್ದು ಆತನಿಗೆ ಗೊತ್ತಾಗುತ್ತದೆ. ಅವಳನ್ನು ಸ್ಕೂಲು ಬಿಡಿಸುತ್ತಾನೆ. ಈ ಎಲ್ಲಾ ರಗಳೆಗಳಿಂದ ಪಾರಾಗುವ ಏಕೈಕ ದಾರಿಯೆಂಬಂತೆ ಅವಳು ಹೇಗ್ಗೆ ಓಡಿಹೋಗುತ್ತಾಳೆ.ಲ್ಲಿ ಹೇಗೋ ಕಷ್ಟಪಟ್ಟು ಬದುಕುತ್ತಿದ್ದ ಅವಳ ಬದುಕನ್ನು ಬದಲಾಯಿಸಿದ್ದು ಪತ್ರಿಕೆಯೊಂದರಲ್ಲಿ ಬಂದ ವಧು ಬೇಕಾಗಿದ್ದಾಳೆ ಎಂಬ ಜಾಹೀರಾತು. ಹಾಗೆ ಹೆಣ್ಣು ಹುಡುಕುತ್ತಿದ್ದವನು ಡಚ್ ಕರ್ನಲ್ ರುಡಾಲ್ಫ್ . ಅವನ ಜೊತೆ ಮಾತಾಹರಿಯ ಮದುವೆಯೂ ಆಗುತ್ತದೆ. ಆದರೆ ಅವಳಂದುಕೊಂಡ ಹಾಗೆ ಸಂಸಾರ ಸಾಗುವುದಿಲ್ಲ. ರುಡಾಲ್ಫ್ ವಿಪರೀತ ಕುಡಿಯುತ್ತಿದ್ದ. ಅವನಿಗೆ ಅಸಂಖ್ಯಾತ ಕಾಯಿಲೆಗಳ ಜೊತೆ, ತಾನು ಸಾಧಿಸಬೇಕಾದ್ದನ್ನು ಸಾಧಿಸಲಾಗಲಿಲ್ಲ ಎಂಬ ಕೊರಗು. ಅವನ ಸಿಟ್ಟು ವ್ಯಕ್ತವಾಗುತ್ತಿದ್ದದ್ದು ಮಾತಾಹರಿಯ ಮೇಲೆ. ರುಡಾಲ್ಫ್ಗಿಂತ ಇಪ್ಪತ್ತು ವರ್ಷ ಸಣ್ಣವಳಾಗಿದ್ದ ಮಾತಾಹರಿಗೆ ಅವನಿಂದ ಯಾವ ಸುಖವೂ ಸಿಗುತ್ತಿರಲಿಲ್ಲ. ಅವನು ಹತಾಶೆ, ಸಿಟ್ಟು ಮತ್ತು ತನಗೆ ಪ್ರಮೋಷನ್ ಸಿಗುತ್ತಿಲ್ಲ ಎಂಬ ಕೋಪವನ್ನೆಲ್ಲ ಅವಳ ಮೇಲೆ ತೀರಿಸಿಕೊಳ್ಳುತ್ತಿದ್ದ. ಅವನ ಜೊತೆ ಜಾವಾ ದ್ವೀಪಕ್ಕೆ ಹೋದ ನಂತರ ಮಾತಾಹರಿಗೊಂದು ಆಘಾತಕಾರಿ ಸಂಗತಿ ಗೊತ್ತಾಯಿತು. ರುಡಾಲ್ಫ್ಗೆ ಅಲ್ಲೊಬ್ಬಳು ಹೆಂಡತಿಯಿದ್ದಳು. ಜೊತೆಗೆ ಮತ್ತೊಬ್ಬಳ ಜೊತೆ ಅಕ್ರಮ ಸಂಬಂಧವೂ ಇತ್ತು. ಅವರಿಬ್ಬರೂ ಅವನನ್ನು ಹರಿದು ಮುಕ್ಕುತ್ತಿದ್ದರು. ಅವರಿಬ್ಬರ ಮೇಲಿನ ಸೇಡನ್ನೂ ಅವನು ಮಾತಾಹರಿಯ ಮೇಲೆ ತೀರಿಸಿಕೊಳ್ಳುತ್ತಿದ್ದ.ವನನ್ನು ಮದುವೆ ಆದದ್ದರಿಂದ ಅವಳಿಗಾದ ಏಕೈಕ ಲಾಭ ಎಂದರೆ ಸಮಾಜದಲ್ಲಿ ಉನ್ನತ ಸ್ಥಾನ ಸಿಕ್ಕಿದ್ದು. ಅಲ್ಲಿ ಶ್ರೀಮಂತಿಕೆಗೂ ಕೊರತೆಯಿರಲಿಲ್ಲ. ಗಂಡನ ಕಿರುಕುಳಗಳನ್ನು ಮರೆಯಲು ಅವಳು ಇಂಡೋನೇಷಿಯಾದ ನೃತ್ಯಶಾಲೆಯೊಂದನ್ನು ಸೇರುತ್ತಾಳೆ. ಅಲ್ಲಿ ವಿವಿಧ ನೃತ್ಯಗಳನ್ನು ಕಲಿಯುತ್ತಾಳೆ. ಅವಳನ್ನು ಆನಂತರ ಕಾಪಾಡಿದ್ದು ಅವಳ ಸೌಂದರ್ಯ ಮತ್ತು ನೃತ್ಯಪರಿಣತಿಯೇ.ಮಧ್ಯೆ ಈ ಅಸಮದಾಂಪತ್ಯದಿಂದಲೇ ಅವಳು ಇಬ್ಬರು ಮಕ್ಕಳ ತಾಯಿಯಾಗುತ್ತಾಳೆ. ಇಬ್ಬರು ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಕಾಯಿಲೆ ಬೀಳುತ್ತಾರೆ. ಎರಡನೆಯ ಮಗ ಐದು ವರ್ಷದವನಿದ್ದಾಗಲೇ ತೀರಿಕೊಳ್ಳುತ್ತಾನೆ. ವೈದ್ಯರು ಮಗುವಿನ ಸಾವಿಗೆ ಜನ್ಮತಃ ಬಂದ ಲೈಂಗಿಕ ರೋಗ ಕಾರಣ ಎನ್ನುತ್ತಾರೆ. ತಂದೆಗೆ ಸಿಫಿಲಿಸ್ ತಗಲಿತ್ತು ಅನ್ನುವುದು ಅವಳಿಗೆ ಆಗ ಖಾತ್ರಿಯಾಗುತ್ತದೆ. ಇಪ್ಪತ್ತೊಂದು ವರ್ಷದವನಿದ್ದಾಗ ಎರಡನೆಯ ಮಗನನ್ನೂ ಅದೇ ಸಿಫಿಲಿಸ್ ಬಲಿ ತೆಗೆದುಕೊಳ್ಳುತ್ತದೆ.ಷ್ಟರಲ್ಲಾಗಲೇ ಅವಳು ಗಂಡನಿಂದ ಬಿಡುಗಡೆ ಪಡೆದಾಗಿರುತ್ತದೆ. ಅವನ ಜೊತೆ ಹೊಂದಿಕೊಂಡು ಹೋಗುವ ಪ್ರಯತ್ನಗಳೆಲ್ಲ ವಿಫಲವಾಗಿ, ಅವನ ಕೋಪತಾಪಗಳು ತಾರಕಕ್ಕೆ ತಲುಪಿ ಅವನ ಜೊತೆ ಸಂಸಾರ ಸಾಧ್ಯವೇ ಇಲ್ಲ ಎಂಬ ತೀರ್ಮಾನಕ್ಕೆ ಬರುವ ಮಾತಾಹರಿ ಅವನಿಂದ ಡೈವೋರ್ಸು ಪಡೆಯುತ್ತಾಳೆ. ಮಗನನ್ನು ತನ್ನ ಸುಪರ್ದಿಗೆ ಒಪ್ಪಿಸುವಂತೆ ಆಕೆ ಮಾಡಿಕೊಂಡ ಮನವಿ ಕೂಡ ತಿರಸ್ಕೃತವಾಗುತ್ತದೆ. ವಳ ಉಲ್ಲಾಸದ ದಿನಗಳು ಆರಂಭವಾಗುವುದು ಅವಳು ಮಾದಕ ನೃತ್ಯಪ್ರದರ್ಶನ ನೀಡುವುದಕ್ಕೆ ಆರಂಭಿಸಿದ ನಂತರವೇ. ಅದಕ್ಕೂ ಮುಂಚೆ ಮಾತಾಹರಿ, ಸರ್ಕಸ್ ಕಂಪೆನಿಯಲ್ಲಿ ಕುದುರೆ ಸವಾರಿ ಮಾಡುತ್ತಾ, ಕಲಾವಿದನೊಬ್ಬನಿಗೆ ಮಾಡೆಲ್ ಆಗಿ ಕೆಲಸ ಮಾಡುತ್ತಾ ಹೊಟ್ಟೆ ಹೊರೆಯುವುದೂ ಕಷ್ಟ ಎನ್ನುವ ಸ್ಥಿತಿಗೆ ತಲುಪಿರುತ್ತಾಳೆ. ಕೊನೆಯ ದಾರಿಯೆಂಬಂತೆ ಅವಳು ಆರಿಸಿಕೊಳ್ಳುವುದು ಕಾಮನೃತ್ಯವನ್ನು. ಅದು ಅವಳನ್ನು ಮತ್ತೊಂದು ಎತ್ತರಕ್ಕೆ ತಲುಪಿಸುತ್ತದೆ. ಚಿಕ್ಕದೊಂದು ಕಂಚುಕ ಮತ್ತು ರಾಶಿ ಒಡವೆಗಳನ್ನು ಹೇರಿಕೊಂಡು ಅವಳು ನರ್ತಿಸತೊಡಗಿದರೆ ಇಡೀ ಸಭಾಂಗಣ ಸ್ತಬ್ಧವಾಗುತ್ತಿತ್ತು. ನೃತ್ಯ ಮುಗಿಯುವ ಹೊತ್ತಿಗೆ ಅವಳ ಮುಂದೆ ಒಡವೆಗಳ ಮತ್ತೊಂದು ರಾಶಿಯಿರುತ್ತಿತ್ತು. ಮುಂದೆ ಅವಳು ಗೂಢಚರ ಜಗತ್ತಿಗೆ ಪ್ರವೇಶ ಪಡೆಯುತ್ತಾಳೆ. ಅನಪೇಕ್ಷಿತವಾಗಿ ಆ ಬದುಕು ಅವಳನ್ನು ಹುಡುಕಿಕೊಂಡು ಬರುತ್ತದೆ. ದುಡ್ಡು ಮತ್ತು ರೋಚಕತೆಯ ಹಿಂದೆ ಬೀಳುವ ಅವಳು ತನಗೇ ಗೊತ್ತಿಲ್ಲದ ಹಾಗೆ ಅಪಾಯಕರ ಹಾದಿಗಳಲ್ಲಿ ಹೆಜ್ಜೆಹಾಕುತ್ತಾ ಹೋಗುತ್ತಾಳೆ. ಅವಳ ಮೇಲೆ ಗುಮಾನಿಗಳು ಹೆಚ್ಚುತ್ತಾ ಹೋಗುತ್ತವೆ. ಫೆಬ್ರವರಿ 13, 1917ರಂದು ಅವಳನ್ನು ಪ್ಯಾರಿಸ್ಸಿನ ಹೊಟೆಲ್ ಪ್ಲಾಜಾದಲ್ಲಿ ಬಂಧಿಸುತ್ತಾರೆ. ಜರ್ಮನಿಯ ಗೂಢಚಾರಿಣಿಯಾಗಿ ಕೆಲಸ ಮಾಡಿದ್ದೇ ಅಲ್ಲದೆ, ಐವತ್ತು ಸಾವಿರ ಸೈನಿಕರ ಸಾವಿಗೆ ಅವಳು ಕೊಟ್ಟ ಮಾಹಿತಿಯೇ ಕಾರಣ ಎಂದು ಆಪಾದಿಸಲಾಗುತ್ತದೆ. ವಿಚಾರಣೆಯ ಕೊನೆಗೆ ಅವಳು ಅಪರಾಧಿ ಎನ್ನುವುದಕ್ಕೆ ಯಾವ ಸಾಕ್ಷವೂ ಸಿಗದೇ ಹೋದರೂ ಡಬಲ್ ಏಜಂಟ್ ಎಂಬ ಆರೋಪ ಹೊತ್ತು ಅವಳಿಗೆ ಮರಣದಂಡನೆ ವಿಧಿಸುತ್ತಾರೆ. ವಳು ನಿರಪರಾಧಿ ಅನ್ನುವ ಸತ್ಯ ಹೊರಬಂದದ್ದು 1985ರಲ್ಲಿ. ಅವಳಿಗೆ ಸಂಬಂಧಪಟ್ಟ ಕಾಗದ ಪತ್ರಗಳನ್ನು, ಅವಳ ವಿಚಾರಣೆಯ ವರದಿಗಳನ್ನು ನೂರು ವರ್ಷಗಳ ತನಕ ಮುಟ್ಟಕೂಡದು ಎಂದು ನ್ಯಾಯಾಲಯ ಆದೇಶಿಸಿ, ಅದನ್ನೆಲ್ಲ ಭದ್ರವಾಗಿಡುವಂತೆ ಸೂಚನೆ ನೀಡುತ್ತದೆ. ಅವಳ ಜೀವನಚರಿತ್ರೆ ಬರೆಯಲು ಹೊರಟ ರಸೆಲ್ ವಾರೆನ್ ಹೋವ್, ಫ್ರಾನ್ಸ್ನ ರಕ್ಷಣಾ ಸಚಿವರನ್ನು ಕಾಡಿಬೇಡಿ, ಆ ದಾಖಲೆಗಳನ್ನು 1985ರಲ್ಲಿ ಬಿಡುಗಡೆ ಮಾಡಿಸಿಕೊಂಡಾಗ ಅವಳು ನಿರಪರಾಧಿ ಎಂಬ ಸತ್ಯ ಹೊರಬೀಳುತ್ತದೆ. ವೆಲ್ಲಕ್ಕಿಂತಲೂ ಕುತೂಹಲಕರವಾದ ಕತೆ ಮತ್ತೊಂದಿದೆ. ಅವಳಿಗೆ ಮರಣದಂಡನೆ ವಿಧಿಸಿದ ನಂತರ, ನಿಗೂಢ ರೀತಿಯಲ್ಲಿ ಅವಳ ಶವ ನಾಪತ್ತೆಯಾಗುತ್ತದೆ. ಮಾತಾಹರಿ ಸತ್ತಿಲ್ಲ ಎಂಬ ಸುದ್ದಿ ಫ್ರಾನ್ಸಿನಾದ್ಯಂತ ಹಬ್ಬುತ್ತದೆ. ಮಿಲಿಟರಿ ಅಧಿಕಾರಿಗಳು ಅದನ್ನು ಹತ್ತಿಕ್ಕಲು ಯತ್ನಿಸುವ ಹೊತ್ತಿಗೆ ಮತ್ತೊಂದು ವಿಚಿತ್ರ ಸಂಭವಿಸುತ್ತದೆ. ಫ್ರಾನ್ಸಿನ ಹಲವಾರು ಗುಪ್ತ ಜಾಗಗಳಲ್ಲಿ ಮಾತಾಹರಿ ನೃತ್ಯ ಪ್ರದರ್ಶನ ನೀಡುತ್ತಿದ್ದಾಳೆ ಎಂಬ ವರದಿಗಳು ಬರತೊಡಗುತ್ತವೆ. ಇದರಿಂದಾಗಿ ಅವಳನ್ನು ಗುಂಡಿಟ್ಟು ಸಾಯಿಸಿದ ಫ್ರೆಂಚ್ ಅಧಿಕಾರಿಯ ಮೇಲೆ ಸರ್ಕಾರಕ್ಕೆ ಅನುಮಾನ ಬರುತ್ತದೆ. ಆತನನ್ನು ಕೋರ್ಟ್ಮಾರ್ಷಲ್ಗೆ ಗುರಿ ಮಾಡುತ್ತಾರೆ. ನಿಜಕ್ಕೂ ಮಾತಾಹರಿ ಸತ್ತಿದ್ದಳೇ ಎಂದು ಅವನನ್ನು ಪ್ರಶ್ನಿಸಲಾಗುತ್ತದೆ. ಅವಳು ಸತ್ತಿದ್ದರೆ ಬೇರೆ ಬೇರೆ ಕಡೆಗಳಲ್ಲಿ ಅವಳು ಪ್ರದರ್ಶನ ನೀಡುವುದಕ್ಕೆ ಹೇಗೆ ಸಾಧ್ಯ ಎಂದು ವಿವರಿಸುವಂತೆ ಅವನನ್ನು ಒತ್ತಾಯಿಸಲಾಗುತ್ತದೆ.ಅಧಿಕಾರಿ ಮಾತಾಹರಿಯ ಮೂಲವನ್ನು ಹುಡುಕುತ್ತಾ ಹೋಗುತ್ತಾನೆ. ಆಗ ಅವನಿಗೊಂದು ವಿಚಿತ್ರ ಸತ್ಯ ಗೊತ್ತಾಗುತ್ತದೆ. ಮಾತಾಹರಿ ಸತ್ತಿದ್ದಾಳೆ ಎಂದು ನಂಬಲು ಫ್ರಾನ್ಸಿಗೆ ಫ್ರಾನ್ಸೇ ಸಿದ್ಧವಿರುವುದಿಲ್ಲ. ಅವಳು ಸತ್ತಿಲ್ಲ ಎಂಬ ಗಾಳಿಸುದ್ದಿಯೊಂದು ಚಾಲ್ತಿಯಲ್ಲಿರುತ್ತದೆ. ಆ ಅವಕಾಶವನ್ನು ಬಳಸಿಕೊಂಡು ಬೇರೆ ನರ್ತಕಿಯರು ತಾವೇ ಮಾತಾಹರಿ ಎಂದು ಹೇಳಿಕೊಂಡು ತಿರುಗಾಡುತ್ತಾ, ಅವಳ ಶೈಲಿಯಲ್ಲಿ ನೃತ್ಯ ಪ್ರದರ್ಶನ ನೀಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಅದನ್ನು ಹುಡುಕುತ್ತಾ ಹೋದ ಅಧಿಕಾರಿಗೆ ಹನ್ನೆರಡು ಮಾತಾಹರಿಯರು ಸಿಗುತ್ತಾರೆ. ಮಾತಾಹರಿಯ ಸಾವನ್ನು ವರದಿ ಮಾಡಿದವನು ಬ್ರಿಟಿಷ್ ಪತ್ರಕರ್ತ ಹೆನ್ರಿ ವೇಲ್ಸ್. ಅವನು ನಿರ್ಭಾವುಕವಾಗಿ ಬರೆದ ವರದಿಯಲ್ಲಿ ಸಾವಿನ ಪೂರ್ಣ ಚಿತ್ರಣವಿದೆ. ಮಾತಾಹರಿಯನ್ನು ಗುಂಡಿಟ್ಟು ಕೊಲ್ಲಲು ಕರೆದೊಯ್ಯಲು ಬಂದವರನ್ನು ಆಕೆ ‘ನಾನು ಎರಡೇ ಎರಡು ಪತ್ರ ಬರೆಯಬಹುದಾ?’ ಎಂದು ಕೇಳುತ್ತಾಳೆ. ಕ್ಯಾಪ್ಟನ್ ಬಾಚರ್ಡನ್ ಅನುಮತಿ ಕೊಡುತ್ತಾನೆ. ಅವಳು ಇನ್ನೇನು ಸಾಯುತ್ತೇನೆ ಅನ್ನುವ ಅವಸರದಲ್ಲಿ ಹಾಸಿಗೆಯ ಅಂಚಲ್ಲಿ ಕುಳಿತು ಎರಡು ಪತ್ರಗಳನ್ನು ಬರೆದು ತನ್ನ ವಕೀಲರ ಕೈಗೆ ಕೊಡುತ್ತಾಳೆ. ನಂತರ ಸುಂದರವಾಗಿ ಸಿಂಗರಿಸಿಕೊಂಡು ಸಾವಿನತ್ತ ಹೆಜ್ಜೆಹಾಕಲು ಶುರುಮಾಡುತ್ತಾಳೆ. ನಾನು ರೆಡಿ ಅನ್ನುತ್ತಾಳೆ. ಅವಳನ್ನು ಹೊರಗೆ ನಿಂತಿದ್ದ ಕಾರಿನತ್ತ ಕರೆದೊಯ್ಯಲಾಗುತ್ತದೆ. ಇನ್ನೂ ಎದ್ದಿರದ ನಗರಗಳ ರಸ್ತೆಗಳಲ್ಲಿ ಸಾಗುವ ಕಾರು ಮುಂಜಾವ ಐದೂವರೆಗೆ ಜರ್ಮನ್ ದಾಳಿಗೆ ತಲ್ಲಣಗೊಂಡಿದ್ದ ಹಳೆಕೋಟೆಯತ್ತ ಸಾಗುತ್ತದೆ. ಹನ್ನೆರಡು ಮಂದಿಯ ಫೈರಿಂಗ್ ಸ್ಕ್ವಾಡ್ ಆಜ್ಞೆಗಾಗಿ ಕಾಯುತ್ತಾ ನಿಂತಿದೆ. ಅವರ ಹಿಂದೆ ಒಬ್ಬ ಖಡ್ಗಧಾರಿಯಾಗಿ ನಿಂತಿದ್ದಾನೆ. ಅವಳನ್ನು ಕಾರಿನಿಂದ ಇಳಿಸಿ ಕರೆದುಕೊಂಡು ಬರುತ್ತಾರೆ. ಸೈನಿಕನೊಬ್ಬ ಬಿಳಿ ಬಟ್ಟೆಯೊಂದನ್ನು ಅವಳ ಮುಂದೆ ಹಿಡಿದು ಕಣ್ಣಿಗೆ ಕಟ್ಟಲೇ ಎಂದು ಕೇಳುತ್ತಾನೆ. ಮಾತಾಹರಿ ಅದು ಕಡ್ಡಾಯವೇ ಎಂದು ಮರುಪ್ರಶ್ನೆ ಹಾಕುತ್ತಾಳೆ. ನಿನ್ನಿಷ್ಟ ಎನ್ನುತ್ತಾನೆ ಅಧಿಕಾರಿ. ಅವಳು ಅದು ಬೇಡ ಎಂಬಂತೆ ಎದುರಿನ ಗೋಡೆಯ ಪಕ್ಕ ಹೋಗಿ ನಿಲ್ಲುತ್ತಾಳೆ. ಪಕ್ಕದಲ್ಲೇ ಪಾದ್ರಿ, ಅವಳ ಲಾಯರ್ ಮತ್ತು ಅಧಿಕಾರಿಗಳು ನಿಂತಿದ್ದಾರೆ. ಅವಳು ತನ್ನನ್ನು ಗುಂಡಿಟ್ಟು ಕೊಲ್ಲಲು ಸಿದ್ಧರಾದ ಸೈನಿಕರನ್ನು ನೋಡುತ್ತಾಳೆ. ಎಲ್ಲವೂ ನಿಶ್ಚಲ. ಖಡ್ಗಧಾರಿ ಮುಂದೆ ಬಂದು ಕತ್ತಿಯನ್ನೊಮ್ಮೆ ಮೇಲಕ್ಕೆತ್ತಿ ಕೆಳಗಿಳಿಸುತ್ತಾನೆ. ಆಕಾಶ ಕೆಂಪಾಗುತ್ತದೆ. ಮಾತಾಹರಿ ನಿಂತಲ್ಲೇ ಕುಸಿಯುತ್ತಾಳೆ, ಸದ್ದಿಲ್ಲದೆ. ಮೊಣಕಾಲ ಮೇಲೆ ಅವಳ ದೇಹದ ಭಾರ ಬೀಳುತ್ತದೆ. ತಲೆ ಹಿಂದಕ್ಕೆ ವಾಲುತ್ತದೆ. ಮುಖದ ಭಾವ ಕಿಂಚಿತ್ತೂ ಬದಲಾಗುವುದಿಲ್ಲ. ಆಕಾಶದತ್ತ ಮುಖ ಮಾಡಿ ಅವಳು ಕಣ್ಣವೆ ತೆರೆದುಕೊಂಡೇ ನೆಲದ ಮೇಲೆ ಅಂಗಾತ ಬೀಳುತ್ತಾಳೆ.ಲ್ಲೇ ನಿಂತಿದ್ದ ಅಧಿಕಾರಿ ನಿಧಾನವಾಗಿ ಅವಳ ಬಳಿಗೆ ಹೋಗುತ್ತಾನೆ. ತನ್ನ ಸೊಂಟದಿಂದ ರಿವಾಲ್ವರ್ ಹೊರಗಳೆದು ಅವಳ ಬಲಹಣೆಗೆ ಅದನ್ನು ಒತ್ತಿಹಿಡಿದು ನೆಟ್ಟ ನೋಟದಿಂದ ಗುಂಡು ಹಾರಿಸುತ್ತಾನೆ. ಅವಳ ಮಿದುಳು ಸಿಡಿದು ಚೂರಾಗುತ್ತದೆ. ಮಾತಾಹರಿ ಇಡೀ ಫ್ರಾನ್ಸ್ ಮತ್ತು ಜರ್ಮನಿಯ ರಸಿಕರ ಮನಸ್ಸಲ್ಲಿ ಬದುಕುಳಿಯುತ್ತಾಳೆ.]]>

‍ಲೇಖಕರು G

April 30, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: