ಜೋಗಿ ಸೀಕ್ರೆಟ್ ಡೈರಿ : ಮಾತಾಹರಿ

ಜೋಗಿ

ನಮ್ಮ ಊರುಗಳಲ್ಲಿ ಈಗ ಕಾಣಸಿಗುವ ಗುಪ್ತಚರ ಇಲಾಖೆಗೆ ಸೇರಿದವರನ್ನು ನೋಡಿದರೆ, ಗೂಢಚಾರರ ನಿಜವಾದ ಪರಿಚಯ ಆಗುವುದಕ್ಕೇ ಸಾಧ್ಯವಿಲ್ಲ. ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಅಡ್ಡಾಡುತ್ತಾ, ಮಾಹಿತಿ ಸಂಗ್ರಹಿಸುತ್ತಾ ಇರುವ ಇವರ ಪತ್ತೇದಾರಿಕೆ ಬಳಕೆಯಾಗುವುದು ಚುನಾವಣೆಯ ಸಂದರ್ಭಗಳಲ್ಲಿ ಮಾತ್ರ. ಯಾವ ಊರಿನಲ್ಲಿ ಕೋಮುಗಲಭೆ ಆಗುವ ಸೂಚನೆ ಇದೆ. ಯಾವ ಊರಿಗೆ ಮುಖ್ಯಮಂತ್ರಿ ಹೋಗಿ ಭಾಷಣ ಮಾಡುವುದು ಅಪಾಯಕಾರಿ ಎಂಬಿತ್ಯಾದಿ ಮಾಹಿತಿಗಳನ್ನು ಅವರು ಸಂಗ್ರಹಿಸುತ್ತಿರುತ್ತಾರೆ. ಅಂಥ ಅಪಾಯಗಳೇನಾದರೂ ಕಂಡರೆ ಸೆನ್ಸಿಟಿವ್ ಏರಿಯಾ ಎಂದು ಮಾಹಿತಿ ಕೊಡುತ್ತಾರೆ.ೆಲವು ವರ್ಷಗಳ ಹಿಂದೆ ಚುನಾವಣೆಯ ಸಮೀಕ್ಷೆಗೆಂದು ನಾವು ಬಳ್ಳಾರಿಗೆ ಹೋಗಿದ್ದಾಗ ಗುಪ್ತಚರ ಇಲಾಖೆಯ ಗೂಡಚಾರರೊಬ್ಬರು ಸಿಕ್ಕಿದ್ದರು. ಮೂಲತಃ ತುಮಕೂರು ಸಮೀಪದ ಪಾವಗಡದವರಾದ ಅವರು ಬಳ್ಳಾರಿಯಲ್ಲಿ ಉದ್ಯೋಗದಲ್ಲಿದ್ದರು. ಪತ್ರಕರ್ತರ ಜೊತೆಗೆ, ಅಧಿಕಾರಿಗಳ ಜೊತೆ ಓಡಾಡುತ್ತಾ ಬಳ್ಳಾರಿಯಲ್ಲಿ ಯಾವ ಪಕ್ಷ ಗೆಲ್ಲಬಹುದು, ಯಾಕೆ ಗೆಲ್ಲುತ್ತದೆ ಎಂಬಿತ್ಯಾದಿ ಮಾಹಿತಿಗಳನ್ನು ಕಲೆ ಹಾಕುತ್ತಿದ್ದ ಅವರನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದದ್ದು ಸರ್ಕಾರ ಅಲ್ಲ. ಆ ಊರಿನ ರಿಯಲ್ ಎಸ್ಟೇಟ್ ಏಜಂಟರು. ಹತ್ತಾರು ಊರು ಸುತ್ತಾಡಿದ ಅವರಿಗೆ ಯಾವ ಊರಿವಲ್ಲಿ ಭೂಮಿಗೆ ಯಾವ ಬೆಲೆ ಎನ್ನುವುದು ಗೊತ್ತಿತ್ತು. ಮಾತಿನ ಮಧ್ಯೆ ಅವರು ಎದ್ದು ಹೋಗಿ ರಹಸ್ಯವಾಗಿ ಫೋನಿನಲ್ಲಿ ಮಾತಾಡಿ ಬರುತ್ತಿದ್ದರು. ಯಾವುದೋ ಮಹತ್ವದ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದುಕೊಂಡಿದ್ದ ನಮಗೇ ಎರಡೇ ದಿನಕ್ಕೆ ಅವರು ಮಾತಾಡುತ್ತಿದ್ದದ್ದು ಯಾವುದೋ ಗಿರಾಕಿಯ ಹತ್ತಿರ ಎನ್ನುವುದು ಗೊತ್ತಾಗಿಹೋಯಿತು. ” ನಾವು ಕೊಟ್ಟಿಗೆಹಾರ ಸಮೀಪದ ಕಳಸ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಲೆದಾಡುತ್ತಿದ್ದಾಗಲೂ ಆಗಾಗ ಗುಪ್ತಚರ ಇಲಾಖೆಯವರು ಎದುರಾಗುತ್ತಿದ್ದರು. ನಾವು ಪತ್ರಕರ್ತರೆಂದು ತಿಳಿಯುತ್ತಲೇ ಅವರಾಗಿಯೇ ಬಂದು ನಾನು ಸ್ಟೇಟ್ ಇಂಟೆಲಿಜೆನ್ಸ್ ಸ್ಟಾಫ್ ಎಂದು ಪರಿಚಯಿಸಿಕೊಂಡರು. ಅವರಿಗೆ ಆ ಪ್ರದೇಶದ ಇಂಚಿಂಚೂ ಗೊತ್ತಿತ್ತು. ಅಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಅರಿವೂ ಇತ್ತು. ಬಂದೂಕು ಹಿಡಿದ ಜನರ ನಿಜವಾದ ಸಮಸ್ಯೆಯೂ ಗೊತ್ತಿತ್ತು. ನಕ್ಸಲರು ದಾಳಿ ಮಾಡುತ್ತಾರೆ ಅನ್ನುವ ಮಾಹಿತಿಯನ್ನೂ ಅವರು ತಮ್ಮ ಮೇಲಧಿಕಾರಿಗೆ ಕಳುಹಿಸಿಕೊಡುತ್ತಿದ್ದರು. ನಾವು ಕಳುಹಿಸುವ ಮಾಹಿತಿಯನ್ನು ಅಲ್ಲಿ ನೋಡುವವರೇ ಇಲ್ಲ. ನೋಡುವಷ್ಟು ಪುರುಸೊತ್ತು ಯಾರಿಗಿದೆ. ನಮ್ಮ ಕರ್ತವ್ಯ ನಾವು ಮಾಡುತ್ತಿದ್ದೇವೆ. ಇಲ್ಲೇನಾದರೂ ತೊಂದರೆ ಆಗುತ್ತಿದೆ ಎಂದರೆ ಕಳುಹಿಸೋದಕ್ಕೆ ಸಿಬ್ಬಂದಿಯೂ ಇಲ್ಲಎಂದು ಅವರು ಬೇಸರದಿಂದ ಮಾತಾಡುತ್ತಿದ್ದರು.ುಪ್ತಚರ ಇಲಾಖೆಯಿಂದ ನೇಮಿಸಲ್ಪಟ್ಟ ಗೂಢಚಾರರನ್ನು ನೋಡಿದ ಮೇಲೆ ನಮ್ಮ ಕಲ್ಪನೆಯೇ ಬದಲಾಯ್ತು. ಅವರು ಸರ್ವಶಕ್ತರೆಂದೂ ನಾವು ಓದಿದ ಕಾದಂಬರಿಗಳ ಪತ್ತೇದಾರರ ಥರ ಇರುತ್ತಾರೆಂದು ನಿರೀಕ್ಷಿಸಿದ್ದೆಲ್ಲ ತಳಕೆಳಗಾಯ್ತು. ಅವರಿಗೆ ಇಲಾಖೆಯಿಂದ ಯಾವ ವಿಧವಾದ ಸಹಕಾರವೂ ಸಿಗುತ್ತಿರಲಿಲ್ಲ. ಸದಾ ಮಫ್ತಿಯಲ್ಲಿ ಇರುತ್ತಿದ್ದದರಿಂದ ಅವರಿಗೆ ಸಿಗಬೇಕಾದ ಗೌರವವೂ ಸಿಗುತ್ತಿರಲಿಲ್ಲ. ಅವರಿಗೆ ಮೊಬೈಲ್ ಫೋನು ಕೊಡುತ್ತಿರಲಿಲ್ಲ. ಓಡಾಟಕ್ಕೆ ಸೈಕಲ್ ಕೊಡಿಸಬೇಕೆಂದು ಮೇಲಧಿಕಾರಿಗಳು ಶಿಫಾರಸ್ಸು ಮಾಡಿದ್ದರೂ ಅದಿನ್ನೂ ಕಾರ್ಯರೂಪಕ್ಕೆ ಬಂದಿರಲಿಲ್ಲ. ಹೀಗಾಗಿ ಅವರು ದರವೇಶಿಗಳ ಹಾಗೆ ತಿರುಗಾಡುತ್ತಿದ್ದರು. ಅಮೂಲ್ಯವಾದ ಮಾಹಿತಿಯೇನಾದರೂ ಅವರ ಕಿವಿಗೆ ಬಿದ್ದರೆ, ಅದನ್ನು ಮೇಲಧಿಕಾರಿಗಳಿಗೆ ತಲುಪಿಸುವುದಕ್ಕೆ ಅವರು ಟೆಲಿಫೋನ್ ಬೂತ್ ಹುಡುಕಿಕೊಂಡು ಓಡಾಡಬೇಕಿತ್ತು. ಎಷ್ಟೋ ಸಾರಿ ಆ ಕಾಡು ಪ್ರದೇಶದಲ್ಲಿ ಫೋನು ಕೆಟ್ಟು ಹೋಗಿ ಮಾಹಿತಿ ಅವರ ಬಳಿಯೇ ಉಳಿದುಕೊಳ್ಳುತ್ತಿತ್ತು. -ಗೂಡಚರ ಜಗತ್ತಿನ ರೋಚಕ ಸಂಗತಿಗಳನ್ನು ತಿಳಿದುಕೊಳ್ಳಬೇಕಾದರೆ ನಾವು ಅಮೆರಿಕಾ, ಬ್ರಿಟನ್, ಇಸ್ರೇಲ್, ಜರ್ಮನಿಗಳ ಗುಪ್ತಚರ ಇಲಾಖೆಗಳು ಕಾರ್ಯನಿರ್ವಹಿಸುವ ಕ್ರಮವನ್ನು ನೋಡಬೇಕು. ಅಮೆರಿಕದ ಸೆಂಟ್ರಲ್ ಇಂಟೆಲಿಜೆನ್ಸ್ ಏಜನ್ಸಿ ವರ್ಷವೊಂದಕ್ಕೆ ಎಂಬತ್ತು ಸಾವಿರ ಕೋಟಿ ಡಾಲರ್ ಖರ್ಚು ಮಾಡುತ್ತದೆ ಎನ್ನುವುದು ಹೋಮ್ಲ್ಯಾಂಡ್ ಮಾರ್ಕೆಟ್ ಸಮೀಕ್ಷೆಯ ಅಂದಾಜು. ಇದನ್ನು ಹೇಗೆ ಖರ್ಚು ಮಾಡಲಾಗುತ್ತಿದೆ ಅನ್ನುವ ದಾಖಲೆ ಕೂಡ ನಿಗೂಢ. ಇಂಗ್ಲೆಂಡ, ಜರ್ಮನಿ, ರಷಿಯಾಗಳೆಲ್ಲ ಮಹಾಯುದ್ಧದ ಸಂದರ್ಭದಲ್ಲಿ ತುಂಬ ದೊಡ್ಡ ಮೊತ್ತವನ್ನು ಗೂಢಚಾರಿಕೆಗಾಗಿ ಮೀಸಲಿಟ್ಟಿದ್ದವು. ಇವುಗಳಿಗೆ ಹಣ ಮಂಜೂರು ಸರ್ಕಾರಕ್ಕೂ ಆ ಹಣ ಹೇಗೆ ಬಳಕೆಯಾಗುತ್ತದೆ ಅನ್ನುವುದು ಗೊತ್ತಿರುವುದಿಲ್ಲ, ಅದನ್ನು ಕೇಳಬಾರದು ಎಂದು ಮೊದಲೇ ಒಪ್ಪಂದವಾಗಿರುತ್ತದೆ.ಾಗತಿಕ ಮಟ್ಟದ ಗೂಢಚರ ಸಂಸ್ಥೆಗಳು ಕಾರ್ಯನಿರ್ವಹಿಸುವ ರೀತಿಯೇ ಬೇರೆ. ಅವುಗಳ ಏಜಂಟರು ಎಲ್ಲಿ, ಯಾವ ರೂಪದಲ್ಲಿರುತ್ತಾರೆ ಎಂದು ಊಹಿಸುವುದು ಕಷ್ಟ. ಒಂದು ದೇಶದ ಗೂಢಚರ ಸಂಸ್ಥೆ, ಮತ್ತೊಂದು ದೇಶದ ಗೂಢಚರ ಸಂಸ್ಥೆಯ ಏಜಂಟನನ್ನು ತನ್ನವನನ್ನಾಗಿ ಮಾಡಿಕೊಂಡಿರುವುದೂ ಇದೆ. ಅಂತ ಸಂದರ್ಭದಲ್ಲಿ ಅವನ ಹೆಸರನ್ನು ಬಹಿರಂಗಗೊಳಿಸುವಂತಿಲ್ಲ. ಹೀಗಾಗಿ ದುಡ್ಡು ಹೇಗೆ ಬಟವಾಡೆಯಾಯಿತು ಎಂದು ಹೇಳುವುದಕ್ಕಾಗುವುದಿಲ್ಲ ಎಂಬುದು ಗೂಢಚರ ಸಂಸ್ಥೆಗಳ ವಾದ. ಇದನ್ನು ಸರ್ಕಾರಗಳೂ ಒಪ್ಪಿಕೊಂಡಿವೆ.ವತ್ತಂತೂ ಗೂಢಚಾರರಿಗಿಂತ ಹೆಚ್ಚಿವ ಕೆಲಸವನ್ನು ತಂತ್ರಜ್ಞಾನವೇ ಮಾಡುತ್ತಿದೆ. ಅಮೆರಿಕಾದಂಥ ರಾಷ್ಟ್ರಗಳಲ್ಲಿ ಪ್ರತಿಯೊಬ್ಬನ ಸಕಲ ಮಾಹಿತಿಯನ್ನು ಬಾಚಿಕೊಂಡು ರಾಶಿ ಹಾಕುವ ವ್ಯವಸ್ಥೆಯೇ ಇದೆ. ಒಬ್ಬ ಎಷ್ಟು ಸಂಪಾದಿಸುತ್ತಾನೆ, ಎಷ್ಟು ಖರ್ಚು ಮಾಡುತ್ತಾನೆ. ಎಲ್ಲೆಲ್ಲಿ ಸುತ್ತಾಡುತ್ತಾನೆ. ಯಾವ ಆಹಾರ ಸೇವಿಸುತ್ತಾನೆ, ಯಾರ ಜೊತೆ ಎಷ್ಟು ಹೊತ್ತು ಮಾತಾಡುತ್ತಾನೆ. ಅವನ ಗೆಳೆಯರು ಯಾರು, ಮೆಚ್ಚಿನ ಮದ್ಯ ಯಾವುದು, ಯಾವ ದೇಶದಲ್ಲಿ ತಯಾರಾದ ವಸ್ತುಗಳನ್ನು ಕೊಳ್ಳುತ್ತಾನೆ- ಇವೆಲ್ಲವನ್ನೂ ತಂತ್ರಜ್ಞಾನವೇ ಕಲೆಹಾಕಬಲ್ಲದು.ೂಢಚರರು ಮಾಡುತ್ತಿದ್ದದ್ದು ಇದನ್ನೇ. ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಇಂಗ್ಲೆಂಡಿನ ತುಂಬ ಗೂಢಚಾರರೇ ತುಂಬಿಕೊಂಡಿದ್ದರು. ಅವರಲ್ಲಿ ಇಂಗ್ಲೆಂಡಲ್ಲೇ ಹುಟ್ಟಿ ಅಲ್ಲೇ ಬೆಳೆದು ಅಲ್ಲೇ ಉದ್ಯೋಗ ಮಾಡಿಕೊಂಡವರೂ ಇದ್ದರು. ಅವರು ಗೂಢಚಾರರು ಎಂದು ಪತ್ತೆ ಮಾಡುವುದಕ್ಕೆ ಸಾಧ್ಯವೇ ಆಗುತ್ತಿರಲಿಲ್ಲ. ಅಂಥವರನ್ನು ಅವರ ಆಹಾರ ಪದ್ಧತಿ, ಅವರು ಕೇಳುವ ಸಂಗೀತ, ಅವರು ಓದುವ ಪತ್ರಿಕೆ- ಇವುಗಳ ಆಧಾರದಿಂದ ಯಾವ ದೇಶದ ಮೇಲೆ ಒಲವು ತೋರುತ್ತಾರೆ ಎಂದು ಕಂಡುಹಿಡಿಯಲಾಗುತ್ತಿತ್ತು. ಹಾಗೆ ನೋಡಿದರೆ, ಈ ಗುಪ್ತಚರರನ್ನು ಶಾಂತಿಯ ಸಮಯದಲ್ಲಿ ಸಾಕುವುದು ಯಾವ ದೇಶಕ್ಕೇ ಆದರೂ ಹೊರೆಯೇ. ಯುದ್ಧಭೀತಿಯೇ ಇಲ್ಲದಿದ್ದಾಗ, ಮಾಹಿತಿ ಸಂಗ್ರಹಿಸುವುದು ಕೂಡ ಅನಗತ್ಯ. ಮೊದಲ ಮಹಾಯುದ್ಧ ಮುಕ್ತಾಯವಾಗುತ್ತಿದ್ದಂತೆ ಅನೇಕ ದೇಶಗಳು ಗುಪ್ತಚರರನ್ನು ಕೈ ಬಿಟ್ಟವು. ನಾವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸುತ್ತೇವೆ ಎಂಬ ಅವರ ಅಹವಾಲನ್ನು ಕೇಳುವವರೇ ಇರಲಿಲ್ಲ. ಇದರಿಂದ ಬೇಸತ್ತ ಅನೇಕರು ಬೇರೆ ದೇಶಗಳಿಗೆ ಹೋಗಿ ನೆಲೆಯಾದರು. ಎರಡನೆಯ ಮಹಾಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿದವರು ಇವರೇ.ಗುಪ್ತಚರ ಇಲಾಖೆಗಳಿಂದ ಚಿಕ್ಕಾಸಿನ ಪ್ರಯೋಜನವೂ ಇಲ್ಲ ಎಂದು ಈಗ ಸರ್ಕಾರಗಳಿಗೂ ಗೊತ್ತಿದೆ. ಇಪ್ಪತ್ತು ವರ್ಷಗಳ ಹಿಂದೆಯೇ, ಸಿಐಎಗಾಗಿ ಕೆಲಸ ಮಾಡುತ್ತಿದ್ದ ಥಾಮಸ್ ಬ್ರಾಡನ್ ಹೇಳಿದ ಮಾತಿದುನಾವು ಇಷ್ಟೆಲ್ಲ ದುಡ್ಡು ಖರ್ಚು ಮಾಡುತ್ತೇವೆ. ಲಕ್ಷಾಂತರ ಪುಟದ ವರದಿ ಸಂಗ್ರಹಿಸುತ್ತೇವೆ. ಅಂತಿಮವಾಗಿ ಅದರಿಂದ ಏನು ಪ್ರಯೋಜನವೋ ನನಗೆ ಗೊತ್ತಿಲ್ಲ. ನಾವು ಕೊಟ್ಟ ವರದಿಗಳು ಓದುವವರಿಲ್ಲದೇ ಬಿದ್ದಿರುತ್ತದೆ. ಅದನ್ನು ಕಾಯುವುದಕ್ಕೆಂದು ಪ್ರತಿವರ್ಷವೂ ಮತ್ತೊಂದಷ್ಟು ಮಂದಿ ನೇಮಕವಾಗುತ್ತಿರುತ್ತಾರೆ. ಆ ಕಾನ್ಪಿಡೆನ್ಶಿಯಲ್ ವರದಿಗಳು ಎಷ್ಟು ರಹಸ್ಯವಾದವು ಎಂದರೆ ಯಾರೊಬ್ಬನಿಗೂ ಅದರಲ್ಲಿ ಏನಿದೆ ಎಂದು ಗೊತ್ತಿರುವುದೇ ಇಲ್ಲ.ಬ್ರಾಡನ್ ಥರ ಯೋಚಿಸುವವರು ಸಾಕಷ್ಟು ಮಂದಿ ಇದ್ದರು. ಆದರೆ ಅವರೇನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. 1909ರಲ್ಲಿ ಶುರುವಾದ ಇಂಟೆಲಿಜೆನ್ಸ್ ಏಜನ್ಸಿಗಳು ಅಷ್ಟು ಹೊತ್ತಿಗಾಗಲೇ ಪೆಡಂಭೂತಗಳಾಗಿಬಿಟ್ಟಿದ್ದವು. ಅವನನ್ನು ನಿರಾಕರಿಸುವ ಧೈರ್ಯ ಯಾರಿಗೂ ಇರಲಿಲ್ಲ. ಅಮೆರಿಕದ ಅನೇಕ ಅಧ್ಯಕ್ಷರು ಗುಪ್ತಚರ ಇಲಾಖೆಯ ಅಗತ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರೂ ಅದನ್ನು ತೊಡೆದುಹಾಕುವ ಧೈರ್ಯ ಮಾಡಲಿಲ್ಲ. ರಷಿಯಾ ನಾಯಕರು ಕೆಜಿಬಿಯನ್ನು ರದ್ದು ಮಾಡಲು ಯತ್ನಿಸಿ ಸೋತರು. ಹೆರಾಲ್ಡ್ ವಿಲ್ಸನ್ ಇಂಗ್ಲೆಂಡಿನ ಪ್ರಧಾನಿಯಾಗಿದ್ದಾಗ ಗುಪ್ತಚರ ಇಲಾಖೆ ಬೇಡ ಎಂದರು. ಅವರು ಹೋದರು, ಇಲಾಖೆ ಮುಂದುವರಿಯಿತು.ದೇಕೋ ಏನೋ ವಿನ್ಸ್ಟನ್ ಚರ್ಚಿಲ್, ಕೆನಡಿ ಮುಂತಾದವರಿಗೆ ಗುಪ್ತಚರರ ಮೇಲೆ ವಿಪರೀತ ಮೋಹವಿತ್ತು. ಈ ಗೂಢಚರರು ಕೊಡುವ ಮಾಹಿತಿ ಸತ್ಯವೋ ಸುಳ್ಳೋ ಎಂದು ಯಾರೂ ಕೇಳುವುದಕ್ಕೆ ಹೋಗುತ್ತಿರಲಿಲ್ಲ. ಆದರೆ ಅದು ರೋಚಕವಾಗಿರುತ್ತಿತ್ತು ಅನ್ನುವುದು ಸುಳ್ಳಲ್ಲ.ರೋಚಕತೆ ಅರ್ಥವಾಗಬೇಕಿದ್ದರೆ ನೀವು ದಿ ಈಗಲ್ ಹ್ಯಾಸ್ ಲ್ಯಾಂಡೆಡ್ ಎಂಬ ಸಿನಿಮಾ ನೋಡಬೇಕು. ಚರ್ಚಿಲ್ ಹತ್ಯೆಯ ಕುರಿತ ಸಿನಿಮಾ ಅದು. ಗೂಢಚರ ಜಗತ್ತಿನ ಸಾಹಸಗಳನ್ನು ಅದು ಕಣ್ಣಿಗೆ ಕಟ್ಟಿದಂತೆ ತೋರಿಸುತ್ತದೆ. ಅದಕ್ಕಿಂತ ರೋಚಕವಾದದ್ದು ಮಾತಾಹರಿಯ ಕತೆ. ಆಕೆ ನರ್ತಕಿ, ವೇಶ್ಯೆ ಎರಡೂ ಆಗಿದ್ದವಳು. ಅವಳೇ ಜಗತ್ತಿನ ಗೂಢಚರರ ಪೈಕಿ ನಂಬರ್ ವನ್.]]>

‍ಲೇಖಕರು G

April 16, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

2 ಪ್ರತಿಕ್ರಿಯೆಗಳು

 1. sunil

  obba lekhanada saamagri hidididuttade
  guptachara ilaakheya kaarya yaavagaloo samaanyarige ondu sojigave
  khandita cinema noduve

  ಪ್ರತಿಕ್ರಿಯೆ
 2. ತಿಪ್ಪೇಸ್ವಾಮಿ ಹೊಸೂರು

  ಜೋಗಿಯವರೇ,
  ನಿಮ್ಮ “ಪತ್ತೇದಾರಿ” ಕಾದಂಬರಿ ತುಂಬಾ ಚೆನ್ನಾಗಿದೆ. ಇತ್ತೀಚೆಗೆ ಟಿಂಕರ್ ಟೈಲರ್ ಸೋಲ್ಜರ್ ಸ್ಪೈ ಎಂಬ ವೃತ್ತಿಪರ ಪತ್ತೇದಾರರ ಕುರಿತಾದ ಸಿನೆಮಾ ನೋಡಿದೆ. ತುಂಬಾ ಚೆನ್ನಾಗಿತ್ತು. ವಿವರ ಇಲ್ಲಿದೆ http://en.wikipedia.org/wiki/Tinker_Tailor_Soldier_Spy_%28film%29
  ಅಲ್ಲದೇ, ಬಿಬಿಸಿ ಯಲ್ಲಿ ಬಂದ ಬೆನೆಡಿಕ್ಟ್ ಮಿಟೆಲ್ಬ್ಯಾಕ್ ನಾಯಕನಾದ “ಶೆರ್ಲಾಕ್” ಧಾರಾವಾಹಿಯೂ ತುಂಬಾ ಚೆನ್ನಾಗಿತ್ತು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: