’ಜೋನಿ ಬೆಲ್ಲ ಗೊತ್ತೇನ್ರೀ?’ – ಕೇಳ್ತಾರೆ ಸುಶ್ರುತಾ ದೊಡ್ಡೇರಿ!

ಸುಶ್ರುತನ ಚಾಕೋಲೇಟ್!

ಸುಶ್ರುತಾ ದೊಡ್ಡೇರಿ

ಮೇಡ್ ಬೆಲ್ಲದ ಚಾಕ್ಲೇಟ್ ಆಲ್‌ಮೋಸ್ಟ್ ಆಫ್ಟರ್ ಟೆನ್ ಇಯರ್ಸ್! ಊರಲ್ಲಿದ್ದಾಗ ಕನಿಷ್ಟ ತಿಂಗಳಿಗೆರಡು ಸಲ ಮಾಡಿಕೊಳ್ತಿದ್ದ ನನ್ನಿಷ್ಟದ ತಿಂಡಿಯನ್ನ ಬಿಟ್ಟು ಅದು ಹೇಗೆ ಇಷ್ಟು ವರ್ಷ ಸುಮ್ಮನಿದ್ದೆನೋ! ಶನಿವಾರ ಬಂತು ಅಂದ್ರೆ ಸಾಕು, ಮಧ್ಯಾಹ್ನವೇ ಶಾಲೆಯಿಂದ ಬಂದಿರ್ತಿದ್ದ ನಾನು, ಊಟವಾಗಿ ಎಲ್ಲರೂ ‘ಮದ್ದಿನ್ ಮೇಲಿನ್ ನಿದ್ದೆ’ಗೆ ಶರಣಾದಮೇಲೆ, ನಾನು ಅಡುಗೆಮನೆ ಸೇರಿ, ಬಾಣಲಿ ಒಲೆಯ ಮೇಲಿಟ್ಟು, ಶೇಂಗ-ಅವಲಕ್ಕಿ-ಕಾಯಿ ಇತ್ಯಾದಿ ಹುರಿದು, ಬೆಲ್ಲ ಕಾಯಿಸಿ ಪಾಕ ಮಾಡಿ ತುಪ್ಪ ಬೆರೆಸಿ ಎಲ್ಲಾ ಹದಕ್ಕೆ ಬಂದಮೇಲೆ ಪ್ಲೇಟಿಗೆ ಹೊಯ್ದು…. ಗಟ್ಟಿಯಾದರೆ ಕಟ್ ಮಾಡಿ ಆಗದಿದ್ದರೆ ಉಂಡೆ ಮಾಡಿ ಮೂರ್ಮೂರು ದಿನ ಇಟ್ಕೊಂಡು ತಿಂತಿದ್ದೆ. ಊರ ಹುಡುಗರಿಗೂ ರುಚಿ ಹತ್ತಿಸಿದ್ದೆ. ‘ಸುಶ್ರುತನ ಚಾಕಲೇಟು’ ಅಂತಲೇ ಹೆಸರು ತರಿಸಿದ್ದೆ! ಬೆಂಗಳೂರಿಗೆ ಬಂದಮೇಲೆ, ಊರಿಂದ ಪುಟ್ಟ ಡಬ್ಬಿಯಲ್ಲಿ ತಂದುಕೊಂಡಿರುತ್ತಿದ್ದ ಬೆಲ್ಲದಿಂದ ಚಾಕ್ಲೇಟು ಮಾಡುವ ಆಸೆಯಾಗುತ್ತಿತ್ತಾದರೂ, ಅಷ್ಟು ಕಮ್ಮಿ ಬೆಲ್ಲ ಏನಕ್ಕೂ ಸಾಕಾಗಲ್ಲ ಅಂತಲೂ, ಖರ್ಚಾಗಿಹೋದ್ರೆ ಮುಂದಿನ ಸಲ ಊರಿಗೆ ಹೋಗೋವರೆಗೆ ಏನ್ ಗತಿ ಅಂತಲೂ ಅಂದ್ಕೊಂಡು ಸುಮ್ಮನಿದ್ದಾಗ್ತಿತ್ತು. ಈಗ ಮದುವೆ ಆದ್ಮೇಲೆ ‘ಸಂಸಾರಕ್ಕೆ ಬೇಕು’ ಅಂತ ಅಪ್ಪ ದೊಡ್ಡ ಡಬ್ಬಿಯಲ್ಲೇ ಬೆಲ್ಲ ತಂದುಕೊಟ್ಟಿದ್ದನಲ್ಲಾ, ಇವತ್ತು ಆಸೆ ತಡೀಲಿಕ್ಕೆ ಆಗದೇ, ಹೆಂಡತಿ ಹೆಲ್ಪೂ ತಗೊಂಡು, ಚಾಕ್ಲೇಟು ಮಾಡಿಯೇಬಿಟ್ಟೆ! ಖುಶಿಯೋ ಖುಶಿ. 🙂 🙂 ಈ ಬೆಂಗಳೂರಿನ ಕಡೆ ಜನಕ್ಕೆ ಜೋನಿಬೆಲ್ಲ /ಡಬ್ಬಿಬೆಲ್ಲದ ಪರಿಚಯವೇ ಇಲ್ಲ. ನಾನು ಬೆಲ್ಲದ ಚಾಕ್ಲೇಟಿನ ಬಗ್ಗೆ ಬರೆದಿದ್ದು ನೋಡಿ ನನ್ನ ಕಲೀಗುಗಳೆಲ್ಲ ಕೇಳುವವರೇ: ಹೇಗೆ ಮಾಡ್ತೀರಾ, ಅಷ್ಟು ಗಟ್ಟಿಯಿರೋ ಬೆಲ್ಲ ಹ್ಯಾಗೆ ಕರಗಿಸೋದು, ನೀರು ಹಾಕ್ಬೇಕಾ ಅಂತೆಲ್ಲ. ಇಲ್ರಪ್ಪಾ, ಜೋನಿಬೆಲ್ಲ ಬಾಣಲಿಗೆ ಹಾಕಿ ಒಲೆ ಮೇಲೆ ಇಟ್ರೆ ಆಯ್ತು, ಪಾಕ ಬರುತ್ತೆ ಅಂದ್ರೆ, ‘ಅದೇನದು ಜೋನಿಬೆಲ್ಲ?’ ಅಂದ್ರು. ಜೋನಿ ಬೆಲ್ಲ ಗೊತ್ತಿಲ್ವಾ? ಡಬ್ಬಿಯಲ್ಲಿ ಇರುತ್ತೆ. ಆಲೆಮನೆಯಲ್ಲಿ ಮಾಡೋದು, ಬಿಸಿ ಬೆಲ್ಲ ತಿಂದಿಲ್ವಾ, ಕಬ್ಬು ಗಾಣಕ್ಕೆ ಕೊಡ್ಬೇಕು, ಕೋಣ ತಿರುಗುತ್ವೆ, ಅಹೋರಾತ್ರಿ, ಕೋಣ ಹೊಡೆಯುವವನ ಹಾಡು, ಕಬ್ಬಿನ ಹಾಲು, ಕೊಪ್ಪರಿಗೆ, ಜೊಂಡು, ಇಷ್ಟು ದೊಡ್ಡ ಒಲೆ, ದೊಡ್ಡ ಮರದ ಕುಂಟೆ… ಅಂತೆಲ್ಲ ಹೇಳಿದ್ರೆ ಬಾಯಿ ಬಿಟ್ಕೊಂಡು ಕಥೆ ಥರಾ ಕೇಳಿದರು. ಪೇಸ್ಟ್ ಥರ ಇರುತ್ತೆ ಕಣ್ರೀ ಬೆಲ್ಲಾ, ಸ್ಪೂನಲ್ಲಿ ತೆಗೀಬೇಕು ಅಂದ್ರೆ “ಛೀ ಛೀ” ಅಂದು ಮುಖ ಆ ಕಡೆ ತಿರುಗಿಸಿಕೊಂಡ್ರು. ಕೊನೆಗೂ ಬೆಲ್ಲ ಹೇಗಿರುತ್ತೆ ಅಂತ ಅರ್ಥ ಮಾಡಿಸ್ಲಿಕ್ಕೆ ನಂಗೆ ಆಗಲಿಲ್ಲ. ಇನ್ನು ಆಫೀಸಿಗೆ ಒಂದು ಡಬ್ಬಿ ತರೋದೇ ಗತಿ!]]>

‍ಲೇಖಕರು G

September 13, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

4 ಪ್ರತಿಕ್ರಿಯೆಗಳು

 1. malathi S

  Joni bella gottu kaNo tamma aadre chocolate gottirlillaa..we try it out after Ganapathi habba..:-)
  malathakka

  ಪ್ರತಿಕ್ರಿಯೆ
 2. Gopaal Wajapeyi

  ಆಹಾ ಜೋನಿ ಬೆಲ್ಲ… ನಿನ್ನ ರುಚಿಯಂ ಬಲ್ಲವನೇ ಬಲ್ಲ…

  ಪ್ರತಿಕ್ರಿಯೆ
 3. paresh Saraf

  ಇಲ್ಲಿ ಪಿಜ್ಜಾ, ಬರ್ಗರು ತಿಂದು ಯಾಂತ್ರಿಕ ಜೀವನ ನಡೆಸುತ್ತಿರುವ ನಮಗೆ ಇಂತಹ ನೆನಪುಗಳು ಬದುಕಿದ್ದೇವೆ ಎಂಬುದನ್ನು ನೆನಪಿಸುತ್ತವೆ.. ಚೆನ್ನಾಗಿದೆ 🙂

  ಪ್ರತಿಕ್ರಿಯೆ
 4. Vanamala V

  ನಾವು ದೋಸೆ, ರೊಟ್ಟಿ, ಇಡ್ಲಿ ಜೊತೆ ಜೋನಿ ಬೆಲ್ಲವನ್ನು ತಿಂತಾ ಇದ್ವಿ. ಹೀಗೊಂದು ತಿಂಡಿಯನ್ನೂ ಮಾಡ್ಬೋದು ಅಂತ ಗೊತ್ತಿರ್ಲಿಲ್ಲ. ಸಧ್ಯದಲ್ಲೇ ಮಾಡಿ ನೋಡ್ತೀನಿ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: