ಟಾಕಿಂಗೋ ಟಾಕಿಂಗು…


ನಿನ್ನೆ ಸುವರ್ಣ ನ್ಯೂಸ್ನಲ್ಲಿ ರಂಗನಾಥ್ ಸರ್-ಹಮೀದ್ ಪಾಳ್ಯ ಜೋಡಿ ಜುಗಲಬಂದಿ ಅಕ್ಕ ಸಮ್ಮೇಳನದಲ್ಲಿ ನಡೆದ ದುಃಖ-ದುಮ್ಮಾನಗಳ ಬಗ್ಗೆ ಚರ್ಚೆ ಮಾಡಿದ್ರು. ದಟ್ಸ್ ಕನ್ನಡ ಪತ್ರಿಕೆಯ ಸಂಪಾದಕ ಶಾಮ ಸುಂದರ, ಹಿರಿಯ ಸಾಹಿತಿ ದೊಡ್ಡರಂಗೇ ಗೌಡ್ರು, ಅಕ್ಕ ಮುಖ್ಯಸ್ಥರು ಎಲ್ಲರ ಟಾಕಿಂಗೋ ಟಾಕಿಂಗು.
ಅಮೇರಿಕಾದಲ್ಲಿ ನಡೆಯುವ ಅಕ್ಕ ಸಾಮಾನ್ಯವಾಗಿ ಸ್ವಲ್ಪ ಬೇಸರವನ್ನೇ ಕೊಟ್ಟಿದೆ . ಒಬ್ಬೊಬ್ಬರ ವಯುಕ್ತಿಕ ಅಭಿಪ್ರಾಯ ಒಂದೊಂದು ರೀತಿ ಇರ ಬಹುದು. ಯಾವುದೇ ಕಾರ್ಯಕ್ರಮ ನಡೆಸುವಾಗ ಆರ್ಗನೈಸ್ ಮಾಡುವ ಕೆಲಸ ಇದ್ಯಲ್ಲ ಅದರಷ್ಟು ಕಷ್ಟಕರ ಮತ್ತೊಂದಿಲ್ಲ, ಒಳ್ಳೆಯದರ ಬಗ್ಗೆ ಹೊಗಳುವುದಕ್ಕಿಂತ ಬೇಸರಗಳ ಬಗ್ಗೆ ಆಡಿಕೊಳ್ಳುವುದು ಸಾಮಾನ್ಯ ಸಂಗತಿ
ಪೂರ್ಣ ಓದಿಗೆ ಮೀಡಿಯಾ ಮೈಂಡ್

‍ಲೇಖಕರು avadhi

September 28, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪ್ರೀತಿ ಅನ್ನುವ ಹೂವು ಬಾಡದಿರಲಿ ..

ಪ್ರೀತಿ ಅನ್ನುವ ಹೂವು ಬಾಡದಿರಲಿ ..

ಅದ್ಯಾಕೋ ಗೊತ್ತಿಲ್ಲ ಫೆಬ್ರವರಿ ಹದಿನಾಲ್ಕಕ್ಕೆ ಇರುವ ಮಹತ್ವ ಬೇರೆ ಯಾವುದಕ್ಕೂ ಇಲ್ಲವೇನು ಅನ್ನಿಸುವಂತೆ ಒಂದು ಬಗೆಯ ವಾತಾವರಣ...

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ...

೧ ಪ್ರತಿಕ್ರಿಯೆ

  1. ಕುಮಾರ ರೈತ

    ಅಮೆರಿಕಾದ ಅಕ್ಕ ಬಗ್ಗೆ ಟಿವಿಗಳಲ್ಲಿ, ಪತ್ರಿಕೆಗಳಲ್ಲಿ ಚರ್ಚೆಯೋ ಚರ್ಚೆ. ಇದಕ್ಕೆಲ್ಲ ಕಾರಣ ಅಕ್ಕ ಬಗ್ಗೆ ಅನಗತ್ಯ ನಿರೀಕ್ಷೆಗಳು. ಅಮೆರಿಕಾದ ದೂರ ದೂರದ ರಾಜ್ಯಗಳಲ್ಲಿರುವ ಕನ್ನಡಿಗರು ಎರಡು ವರ್ಷಕ್ಕೊಂದಾವರ್ತಿ ಒಂದೆಡೆ ಸೇರಿ ಸಂಭ್ರಮಿಸುವ ಕ್ಷಣಗಳವು. ಅದು ಜಾತ್ರೆಯೂ ಅಲ್ಲ, ಸಮ್ಮೇಳನವೂ ಅಲ್ಲ. ಅದು ಸಂಭ್ರಮದ ಸಮಾವೇಶ. ಹರಟೆ ಹೊಡೆಯಲು, ಕನ್ನಡದ ಹಾಡುಗಳನ್ನು ಕೇಳಿ-ಹೇಳಿ ತೆರಳುವಾಗ ಎದೆ ತುಂಬ ಕನ್ನಡದ ಖುಷಿ ಹೊತ್ತೊಯ್ಯುವ ಅವಕಾಶ. ಈ ಸಂದರ್ಭ ಮದುವೆ ಸಂಬಂಧಗಳನ್ನು ಬೆಸೆದರೆ ಅದು ಇನ್ನೂ ಅರ್ಥಪೂರ್ಣ.ಇಂಥಲ್ಲಿ ಮಾಡುವ ಭಾಷಣ ಅದು ಎಷ್ಟೇ ಪಾಂಡಿತ್ಯಪೂರ್ಣವಾಗಿದ್ದರೂ ಬೋರ್ ಹೊಡೆಸುತ್ತದೆ. ಉಸಿರುಗಟ್ಟಿಸುವ ಕೆಲಸ-ವಾತಾವರಣದ ನಡುವೆ ಅಮೆರಿಕಾ ಕನ್ನಡಿಗರು ನೀಳವಾಗಿ ಉಸಿರೆಳೆದುಕೊಳ್ಳಲು ಇರುವ ಸದವಕಾಶ. ಇಂಥ ಸಂದರ್ಭಗಳಲ್ಲಿ ಅವರು ಕರೆದಿದ್ದಾರೆ ಎಂದ ಮಾತ್ರಕ್ಕೆ ದೌಡಾಯಿಸುವ ಅಗತ್ಯವಿಲ್ಲ. ಹೀಗೆ ಹೋಗುವವರು ಮೊದಲು ಅಮೆರಿಕಾ ವ್ಯಾಮೋಹ ತೊರೆಯಬೇಕಿದೆ
    ಸುವರ್ಣನ್ಯೂಸ್ ಚರ್ಚೆಯಲ್ಲಿ ದಟ್ಸ್ ಕನ್ನಡದ ಶ್ಯಾಮ್ ಸುಂದರ್ ಮತ್ತು ಹೆಚ್.ಆರ್. ರಂಗನಾಥ್ ಅರ್ಥವತ್ತಾಗಿ ಮಾತನಾಡಿದರು. ಶ್ಯಾಮ್ ಸುಂದರ್ ಮಾತನ್ನು ವಕೀಲಿಕೆ ಎಂದು ಭಾವಿಸುವುದು ಸರಿಯಲ್ಲ. ಟಿವಿ9 ನಡೆಸಿದ ಚರ್ಚೆಯಲ್ಲಿ ಅಕ್ಕ ಬಗ್ಗೆ ಪೂರ್ಣ ನೆಗೆಟಿವ್ ಆಗಿ ಮಾತನಾಡಿದ ದೊಡ್ಡ ರಂಗೇಗೌಡರು ಇಲ್ಲಿ 55/45 ಮಾರ್ಕ್ಸ್ ಕೊಡ್ತೀನಿ ಅಂದ್ರು. ಇವರದು ಅತಿ ಮತ್ತು ಅನಗತ್ಯ ನಿರೀಕ್ಷೆ.
    ಇನ್ನು ಮುಂದಾದರೂ ಅಕ್ಕಾದತ್ತ ಶಿಫಾರಸ್ಸು ಪತ್ರಗಳನ್ನು ಹಿಡಿದು ಧಾವಿಸುವ ಪ್ರವೃತ್ತಿಗೆ ತೆರೆಬೀಳಲಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: