ಟಿ ಎನ್ ಸೀತಾರಾಂ ಎಂಬ 'ಸಿಎಸ್ಪಿ'ಗೆ ಕವಿತೆ ಬೇಕು..

ನನಗೆ ನನ್ನ  arguments ಟೈಮ್ ನಲ್ಲಿ ಓದೋಕೆ ಕೆಲವು ಕಾವ್ಯಗಳ ಸಾಲು ಬೇಕು..

ಯಾರಾದ್ರೂ ದಯವಿಟ್ಟು ಸಜೆಸ್ಟ್ ಮಾಡ್ತೀರ?

-ಟಿ ಎನ್ ಸೀತಾರಾಂ

]]>

‍ಲೇಖಕರು G

July 19, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

12 ಪ್ರತಿಕ್ರಿಯೆಗಳು

 1. sritri

  ಎಸ್. ವಿ. ಪರಮೇಶ್ವರ ಭಟ್ಟರ ‘ಇಂದ್ರಚಾಪ’ ಮತ್ತು ಇದೇ ರೀತಿಯ ಕೆಲವು ಸಂಕಲನಗಳಲ್ಲಿನ ಮುಕ್ತಕಗಳು, ಸುಭಾಷಿತಗಳಂತೆ, ಬಿಡಿಬಿಡಿಯಾಗಿ ಉಪಯೋಗಿಸಲು ಬಹಳ ಚೆನ್ನಾಗಿವೆ. ಮತ್ತು, ನಿಮ್ಮ ಪಾಂಡು ಪಾಟೀಲನಿಗೂ ಅರ್ಥವಾಗುವಷ್ಟು ಸರಳ, ಸುಲಭವಾಗಿವೆ ಸರ್ 🙂

  ಪ್ರತಿಕ್ರಿಯೆ
 2. ಎಂ.ಆರ್. ದತ್ತಾತ್ರಿ

  ಅಡಿಗರ ‘ಸತ್ತೆ ಬದುಕುವ ಮಂದಿ’ ಕವಿತೆ ನಿಮ್ಮ ಬಿಂಗಾ ಸಾಹೇಬನ ಪಾತ್ರಕ್ಕೆ ಬಹಳ ಹೊಂದುತ್ತದೆ, ನೋಡಿ.

  ಪ್ರತಿಕ್ರಿಯೆ
 3. Dr,D,T,KRISHNA MURTHY.

  ಡಿ.ವಿ.ಜಿ.ಯವರ ಕಗ್ಗದ ೬೫೮ನೇ ಕವನದ ಸಾಲುಗಳು ಇಂತಿವೆ;
  “ಎದ್ದೆದ್ದು ಬೀಳುತಿಹೆ,ಗುದ್ದಾಡಿ ಸೋಲುತಿಹೆ
  ಗದ್ದಲವ ತುಂಬಿ ಪ್ರಸಿದ್ಧನಾಗುತಿಹೆ
  ಉದ್ಧರಿಸುವೆನು ಜಗವನೆನ್ನುತಿಹ ಸಖನೇ
  ನಿನ್ನುದ್ಧಾರವೆಷ್ಟಾಯ್ತೋ?-ಮಂಕುತಿಮ್ಮ”
  ಹಾಗೆಯೇ ೬೫೨,೬೫೩,೬೫೪,೬೫೬,೬೫೭ ನೇ ಪದ್ಯಗಳೂ ಚೆನ್ನಾಗಿವೆ.
  ಉಪಯೋಗವಾಗಬಹುದೇ ನೋಡಿ ಸೀತಾರಾಂ ಸರ್.ನಮಸ್ಕಾರ.

  ಪ್ರತಿಕ್ರಿಯೆ
 4. Nataraju S M

  ಮಾನ್ಯರೇ, ನಮ್ಮ ಕನ್ನಡದ ಕೆಲವು ಉದಯೋನ್ಮುಖ ಬ್ಲಾಗ್ ಬರಹಗಾರರ ಮಾತುಕತೆ, ಕವಿತೆ, ಲೇಖನ ಮತ್ತು ಅವರುಗಳ ಬ್ಲಾಗಿನ ಲಿಂಕ್ ಗಳನ್ನು ಈ ಕೆಳಗೆ ನೀಡಿರುವ ಬ್ಲಾಗಿನಲಿ ಕಲೆ ಹಾಕುವ ಪ್ರಯತ್ನ ಮಾಡಿದ್ದೇನೆ. ಈ ಮಾಹಿತಿ ತಮಗೆ ಉಪಯೋಗಕ್ಕೆ ಬರಬಹುದು. ಶುಭವಾಗಲಿ..
  http://smnattu.blogspot.in/

  ಪ್ರತಿಕ್ರಿಯೆ
 5. Pramod ambekar

  Sir, neevu onderdu Bendre avar kavangallannu heli,
  Ambekar Pramod
  98440 39532

  ಪ್ರತಿಕ್ರಿಯೆ
 6. Meena Spoorthy

  ನನ್ನ suggession ಆದ್ರೆ ಅದು ರನ್ನ ನ ‘ಗದಾಯುದ್ಧ’ ಕಾವ್ಯದ ಸಾಲುಗಳನ್ನ ಆರಿಸಿಕೊಳ್ಳಬಹುದು …
  I remm reading it in my school & PU days… its contains.. best argument part.. and same you can adopt if its suitable..
  but who delivers those in dialogues they should know about reading those poems mainly punctuation and pronunciation side
  needs to be taken care…

  Regards,
  Meena Spoorthy.

  ಪ್ರತಿಕ್ರಿಯೆ
 7. D.RAVI VARMA

  ಬಸವಣ್ಣ ಮತ್ತು ಅಲ್ಲಮ ಪ್ರಭು ಅವರ ವಚನಗಳು ನಿಮಗೆ ಆ ಸಮಯಕ್ಕೆ ಸುಕ್ತವಾಗಬಲ್ಲವು ಅನಿಸುತ್ತೆ
  ಮಾತು ಮಾಣಿಕ್ಯದ ದೀಪ್ತಿಯಂತಿರಬೇಕು ,
  ಮಾತು ಸ್ಪಟಿಕದ ಸಲಾಕೆಯಂತಿರಬೇಕು ,
  ಮಾತು ಮುತ್ತಿನ ಹಾರದಂತಿರಬೇಕು ,
  ಮಾತನಾಡಿದರೆ ,
  ಲಿಂಗವು ಮೆಚ್ಚಿ ಹೌದೌ ದು ಎನ್ನಬೇಕು .
  ಹಾಗೆಯೇ ದಿ.ವಿ,ಜಿ ಅವರ ಸಾಲುಗಳು
  ಬದುಕು ಜಟಕಾಬಂಡಿ ,ವಿಧಿ ಅದರ ಸಾಹೇಬ ,
  ಕುದುರೆ ನೀನ್ ಅವ ಪೇಳ್ದಂತೆ ಪಯಣಿಗರು ,
  ಮದುವೆಗೋ ಮಸಣಕೋ ಹೊಗೆನ್ದಕದೆಗೊಗೋ ,
  ಪದಕುಸಿವ ನೆಲವಿಹುದು ಮಂಕುತಿಮ್ಮ . ಹೀಗೆ,ಹೀಗೆ …..
  ಜಿ,ಎಸ. ಶಿವರುದ್ರಪ್ಪ ಅವರ ಕಾವ್ಯ, ನಿಸಾರ ಅಹ್ಮದರ
  ಕುರಿಗಳು ಸಾರ್ ಕುರಿಗಳು ,
  ಒಂದರ ಹಿಂದೆ ಇನ್ನೊಂದು ,
  ಅದರ ಹಿಂದೆ ಮತ್ತೊಂದು,
  ಅಂಡಲೆಯುವ, ನಾವು ,ನೀವು, ಅವರು ಇವರು
  ಕುರಿಗಳು ಸಾರ್ ಕುರಿಗಳು …. ಹೀಗೆ ಹೀಗೆ ……
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ
 8. GOLD

  ಬದುಕು ಮಾಯೆಯ ಮಾಟ
  ಮಾತು ನೊರೆ-ತೆರೆಯಾಟ
  ಜೀವ ಮೌನದ ತುಂಬ ಗುಂಭ ಮುನ್ನೀರು
  ಕರುಣೋದಯದ ಕೂಡ
  ಅರುಣೋದಯವು ಇರಲು
  ಎದೆಯ ತುಂಬುತ್ತಲಿದೆ ಹೊಚ್ಚ ಹೊನ್ನೀರು!
  ನಿಜದಲ್ಲೆ ಒಲವಿರಲಿ
  ಚೆಲುವಿನಲೆ ನಲಿವಿರಲಿ
  ಒಳಿತಿನಲೆ ಬಲವಿರಲಿ ಜೀವಕೆಳೆಯಾ!
  ದೇವ ಜೀವನ ಕೇಂದ್ರ
  ಒಬ್ಬೊಬ್ಬನು ಇಂದ್ರ
  ಏನಿದ್ದರು ಎಲ್ಲ ಎಲ್ಲೆ ತಿಳಿಯಾ.
  ಆತನಾಕೆಯೆ ನಮ್ಮ
  ಜೀವನೌಕೆಯ ತಮ್ಮ
  ಧ್ರುವ ಮರೆಯದಂತೆ ನಡೆಸುತ್ತಲಿರಲಿ
  ಈ ನಾನು ಆ ನೀನು
  ಒಂದೆ ತಾನಿನ ತಾನು
  ತಾಳಲಯ ರಾಗಗಳು ಸಹಜ ಬರಲಿ. *GOLD*

  ಪ್ರತಿಕ್ರಿಯೆ
 9. GOLD

  ಅಮೃತವಾಹಿನಿಯೊಂದು ಹರಿಯುತಿದೆ
  ಮಾನವನ ಎದೆಯಿಂದಲೆದೆಗೆ ಸತತ.
  ಗ್ರೀಷ್ಮಗಳು ನೂರಾರು ಉರಿಸಿದರು ಆರದಿದು
  ಸುತ್ತಮುತ್ತಲು ಮರಳು ಮೇಲೆ ಪಾಚಿ.
  ಮುತ್ತಿಕೊಂಡರು ಲುಪ್ತವಾಗದೀ ಅಮೃತ ಧುನಿ
  ಕಿರಿದಾಗಿ ಬರಿದಾಗಿ ನೀರ ಗೆರೆಯಾಗಿ
  ತಳದೊಳೆಲ್ಲೋ ತಳುವಿ ಗುಳುಗುಳಿಸುತಿದೆ ಸೆಲೆಯು
  ಏನನೋ ಕಾಯುತಿದೆ ಗುಪ್ತವಾಗಿ.
  ಇಂದಲ್ಲ ನಾಳೆ ಹೊಸ ಬಾನು ಬಗೆ ತೆರೆದೀತು
  ಕರಗೀತು ಮುಗಿಲ ಬಳಗ
  ಬಂದೀತು ಸೊದೆಯ ಮಳೆ, ತುಂಬೀತು ಎದೆಯ ಹೊಳೆ
  ತೊಳೆದೀತು ಒಳಗು ಹೊರಗ
  ಈ ಸೆಲೆಗೆ ಆ ಮಳೆಯು ಎದೆಗೆ ಎದೆ ಎದೆ ಹೊಳೆಯು
  ಸೇರದಿರೆ ಇಲ್ಲ ನಿಸ್ತಾರ
  ಬಂದೆ ಬರಬೇಕಯ್ಯೋ, ಬಂದೆ ತೀರಲು ಬೇಕು
  ಈ ಬಾಳಿಗಾ ಮಹಾಪೂರ!!!
  *GOLD*

  ಪ್ರತಿಕ್ರಿಯೆ
 10. GOLD

  ಧರ್ಮವೇ ಜಯವೆಂಬ ದಿವ್ಯಮಂತ್ರ || ಪ ||
  ಮರ್ಮವನರಿತು ಮಾಡಲಿಬೇಕು ತಂತ್ರ || ಅ.ಪ ||
  ವಿಷವಿಕ್ಕಿದವನಿಗೆ ಷಡುರಸವನುಣಿಸಲಿಬೇಕು
  ದ್ವೇಷ ಮಾಡಿದವನ ಪೋಷಿಸಲಿಬೇಕು
  ಪುಸಿ ಮಾಡಿ ಕೆಡಿಸುವನ ಹಾಡಿ ಹರಸಲಿಬೇಕು
  ಮೋಸ ಮಾಡುವನ ಹೆಸರು ಮಗನಿಗಿಡಬೇಕು || 1 ||
  ಹಿಂದೆ ನಿಂದಿಪರನ್ನು ವಂದಿಸುತಲಿರಬೇಕು
  ಬಂಧನದೊಳಿಟ್ಟವರ ಬೆರೆಯಬೇಕು
  ಕೊಂದ ವೈರಿಯ ಮನೆಗೆ ನಡೆದು ಹೋಗಲಿಬೇಕು
  ಕುಂದೆಣಿಸುವವರ ಗೆಳೆತನ ಮಾಡಬೇಕು || 2 ||
  ಕೊಂಡೊಯ್ದು ಬಡಿಯುವರ ಕೊಂಡಾಡುತಿರಬೇಕು
  ಕಂಡು ಸಹಿಸದವರ ಕರೆಯಬೇಕು
  ಪುಂಡರೀಕಾಕ್ಷ ಶ್ರೀಪುರಂದರವಿಠ್ಠಲನ
  ಕೊಂಡಾಡಿ ತಾ ಧನ್ಯನಾಗಬೇಕು || 3 ||
  *GOLD*

  ಪ್ರತಿಕ್ರಿಯೆ
 11. ಟಿ.ಕೆ.ಗಂಗಾಧರ ಪತ್ತಾರ.

  ಮಾನವೀಯತೆಯೊಂದೆ
  ಸಾಕು ನಮಗೆ
  ಬಾನವರ ಸುಧೆ ಬೇಡ
  ದಾನವರ ಬಲ ಬೇಡ-(ಕವಿಯ ಹೆಸರು ತಿಳಿಯದು)

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: