ಟಿ ಎನ್ ಸೀತಾರಾಂ ಕೇಳುತ್ತಾರೆ..

ಸೀರಿಯಲ್  ಗಳನ್ನು ಮಾಡುತ್ತಲೇ ಇರುವುದು ನನಗೆ ಬೇಸರ ಮತ್ತು ಜಿಗುಪ್ಸೆ ತರಿಸುತ್ತಿದೆ.. ನನಗೆ ಬೇರೆ ಕೆಲಸ ಯಾರೂ ಕೊಡುವುದಿಲ್ಲ .. ಸುಮ್ಮನೆ ಕೂತರೆ ಮನಸನ್ನು ಸಾವಿರ ಸಂಗತಿಗಳು ಕಿತ್ತು ತಿನ್ನುತ್ತವೆ.. ಆದರೆ ಈ ಮುಗಿಯದ ಯುದ್ಧದ ಬದಲಾಗದ ಸೈನಿಕನ ವೇಷ ಸಾಕಾಗಿದೆ.. ಕತ್ತಿ  ಹಿಡಿದು ಬೇಡದ ಹೋರಾಟ ಮಾಡುತ್ತಲೇ ಇರಬೇಕು.. ]]>

‍ಲೇಖಕರು G

March 16, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

15 ಪ್ರತಿಕ್ರಿಯೆಗಳು

 1. Gubbachchi Sathish

  ಸರ್, ನಾನು ಸೀರಿಯಲ್ ನೋಡುವುದಿಲ್ಲ. ಟಿವಿಯನ್ನೇ ನೋಡುವುದನ್ನು ಐದು ವರ್ಷಗಳಿಂದ ಬಿಟ್ಟುಬಿಟ್ಟಿದ್ದೇನೆ. ಬೇಡದ ಯುದ್ದವನ್ನು ನೀವು ಮಾಡುತ್ತಿದ್ದರೆ, ನಾವ್ಯಾಕೆ ನೋಡಬೇಕು? ಇರಲಿ. ಒಂದು ಒಳ್ಳೆಯ ಸಿನಿಮಾ ಮಾಡಿ ನಾನು ನೋಡುತ್ತೇನೆ.

  ಪ್ರತಿಕ್ರಿಯೆ
 2. V.N.Laxminarayana

  ಮಾನ್ಯ ಸೀತಾರಾಮು ಅವರೆ, ಹುಸಿ ಸಮಸ್ಯೆಗಳಿಗೆ ಹುಸಿ ಪರಿಹಾರಗಳನ್ನು ಹುಡುಕುತ್ತಾ ಹುಸಿ ಹೋರಾಟ ಮಾಡಿಸುವ ಸೀರಿಯಲ್ ಗಳ ವ್ಯಾಪಾರದಿಂದ ಈಚೆ ಬನ್ನಿ. ಬಲವಂತದ ಹಾಸ್ಯ ಪ್ರಕರಣಗಳನ್ನು ಪ್ರಾರಂಭಿಸಿ ಹೇಗೆ ಮುಗಿಸುವುದೆಂದು ತಿಳಿಯದೆ ಪೆದ್ದು ಮುಕ್ತಾಯಗಳನ್ನು ಕೊಡುವ ಸಿಹಿಕಹಿ ಚಂದ್ರು ಮಾಡಿರುವ ‘ಚಿರಸ್ಮರಣೆ’ಯ ಸರಣಿಯನ್ನು ನೋಡಿದರೆ ಸಂತೋಷವಾಗುತ್ತದೆ. ತಾತ್ವಿಕತೆಯ ಸ್ಪಷ್ಟತೆ ಇರದಿದ್ದಾಗ ಜಾಗತೀಕರಣ ಮತ್ತೊಂದು ಮಸಾಲೆ ಅಷ್ಟೆ. ನನಗೆ ಗೊತ್ತಿರುವ ಕಿರುಚಿತ್ರ-ಚಲನಚಿತ್ರ ಕಲಾವಂತರಿಗೆ, ನಿರಂಜನರ ‘ಮೃತ್ಯುಂಜಯ’ ವನ್ನು ಏಕೆ ಚಿತ್ರೀಕರಿಸಬಾರದು ಎಂದು ಸೂಚಿಸುತ್ತಲೇ ಇರುತ್ತೇನೆ.ಇಂಥ ವಸ್ತುಗಳು ನಿಮ್ಮ ಸುತ್ತಲೇ ಸಿಗಬಹುದು. ಚಿತ್ರ ಮಾಡ ಹೊರಟರೆ ನಿಮೆ ಎದುರಾಗುವ, ನನ್ನ ಅರಿವಿಗೆ ಬಾರದ ಎಷ್ಟೋ ಕಷ್ಟಗಳು ಇವೆ.ಕುಂದನ್ ಷಾ ರ ಕಿರುಚಿತ್ರಗಳನ್ನು ಈಗಲೂ ನೆನೆಸಿಕೊಳ್ಳುತ್ತೇನೆ. ನಿಮಗೆ ಸಾಕಷ್ಟು ಶಕ್ತಿ ಇದೆ. ನಿಮ್ಮ ಜಿಗುಪ್ಸೆ, ಬೇಸರಗಳು ಒಳ್ಳೆಯ ಲಕ್ಷಣಗಳು. ನಿಮಗೆ ಇನ್ನಷ್ಟು, ಮತ್ತಷ್ಟು ಜಿಗುಪ್ಸೆ-ಬೇಸರಗಳು ಆಗಲೆಂದು ಹಾರಯಿಸುತ್ತೇನೆ.
  ವಿ.ಎನ್.ಲಕ್ಷ್ಮೀನಾರಾಯಣ

  ಪ್ರತಿಕ್ರಿಯೆ
 3. ಸಿ. ಎನ್. ರಾಮಚಂದ್ರನ್

  ಪ್ರಿಯ ಸೀತಾರಾಮ್:
  ವರ್ಷಗಟ್ಟಲೆ, ಕಥೆಯೊಂದರ ಹತ್ತು-ಹನ್ನೆರಡು ಎಳೆಗಳನ್ನು ನಿಧಾನವಾಗಿ ಬಿಚ್ಚಿಡುತ್ತಾ, ಪ್ರತಿಯೊಂದು ಎಳೆಗೂ ವಿಶ್ವಸನೀಯ ಮುಕ್ತಾಯವನ್ನು ಚಿಂತಿಸುತ್ತಾ, ಪ್ರತಿಯೊಂದು ಪಾತ್ರ-ಘಟನೆಗೂ ಅರ್ಥಪೂರ್ಣ ರೂಪು ಕೊಡುತ್ತಾ, ’ಬೋಧನೆ-ರಂಜನೆ’ಗಳನ್ನು ಒಂದು ಆರೋಗ್ಯಕರ ಹದದಲ್ಲಿ ಬೆರೆಸುತ್ತಾ, ಧಾರಾವಾಹಿಗಳನ್ನು ಮಾಡುವುದು ಅತ್ಯಂತ ಸವಾಲಿನ ಸಂಗತಿ –ಹಾಗೂ ನೀವು ಹೇಳುವ ಹಾಗೆ ಬೇಸರದ ಸಂಗತಿ —-ನಿಮಗೆ. ಆದರೆ, ನೀವು ಧಾರಾವಾಹಿಗಳನ್ನು ಮಾಡುವುದನ್ನು ನಿಲ್ಲಿಸಿದರೆ ನನ್ನಂತಹ ಸಾವಿರಾರು ಅಭಿಮಾನಿಗಳ ಗತಿ? ಸತ್ಯವೆಂದರೆ, “ಮನ್ವಂತರ,” “ಮುಕ್ತ”ದಂತಹ ಧಾರಾವಾಹಿಗಳನ್ನು ನಿರ್ಮಿಸುವುದು ನಿಮ್ಮ ಸಾಂಸ್ಕೃತಿಕ-ಸಾಮಾಜಿಕ ಧರ್ಮ —ಮತ್ತು ಕರ್ಮ. ಕರ್ಮದಿಂದ ಮುಕ್ತನಾಗುವುದು ಸುಲಭವಲ್ಲ.
  ನಿಮ್ಮ ಅಭಿಮಾನಿ,
  ಸಿ. ಎನ್. ರಾಮಚಂದ್ರನ್

  ಪ್ರತಿಕ್ರಿಯೆ
 4. ಜಿ.ಎನ್.ಅಶೋಕ ವರ್ಧನ

  ಪ್ರಿಯ ಸೀತಾರಾಮ್
  ನಿಮ್ಮ ಚಿಂತನಾಲಹರಿ ತುಂಬಾ ಆರೋಗ್ಯಕರವಾದದ್ದು. ಪರಿಹಾರ ನೀವೇ ಶೋಧಿಸಬೇಕು. ನಿಮಗೆ ಪ್ರತಿಕ್ರಿಯಿಸುವ ನೆಪದಲ್ಲಿ ನಾನು ಸ್ವಪ್ರಚಾರಕ್ಕೆ ಹೊರಟಿದ್ದೇನೆ ಎಂದು ಯಾರಾದರೂ ತಪ್ಪು ತಿಳಿದರೂ ಸರಿಯೇ. ನಾನು ಇಷ್ಟಪಟ್ಟು ಕಟ್ಟಿದ, ಮೂವತ್ತಾರು ವರ್ಷಗಳುದ್ದಕ್ಕೆ ಬೆಳೆಸಿದ ಅತ್ರಿ ಬುಕ್ ಸೆಂಟರನ್ನು ಇಂದು ಇದೇ ಕಾರಣಕ್ಕೆ ಮುಚ್ಚಿ ಹೊರಬರುತ್ತಿದ್ದೇನೆ. ವಿವರಗಳು ಬೇಕಾದರೆ ದಯವಿಟ್ಟು ನನ್ನ ಜಾಲತಾಣ ನೋಡಿ: http://www.athreebook.com
  ನಿಮಗೆ ಶುಭವಾಗಲಿ
  ಅಶೋಕವರ್ಧನ

  ಪ್ರತಿಕ್ರಿಯೆ
 5. bharathi

  badukina ondu ghattadalli baro intha yochne nannoblige andu kondidde. seetharama antha seetharam avrigoo heegansithu andre ….

  ಪ್ರತಿಕ್ರಿಯೆ
 6. malathi S

  ahaa!!u r most welcome to join our organisation….u will think life was better before…
  🙂
  m s

  ಪ್ರತಿಕ್ರಿಯೆ
 7. D.RAVI VARMA

  ಮುಕ್ತ ಮನಸಿನ ಸೀತಾರಾಂ ಸಾರ್ ಗೊಂದು ಪ್ರೀತಿಯ ಪತ್ರ
  ಸಾರ್ ನಿಮಗೊಂದು ಪ್ರೀತಿಪೂರ್ವಕ ನಮಸ್ಕಾರ ,
  ನಿಮ್ಮ ಮನಸಿನ ದುಗುಡ, ಹಳಹಳಿಕೆ ,ಚಿಂತನೆ ಓದಿದೆ ,ಗಾಬರಿಗೊಂಡೆ, ಕನ್ನಡದ ಹಲವೆ ಸಂವೇದನಾಶೀಲ ಚಿನ್ಕರರಲ್ಲಿ ನೀವು ಒಬ್ಬ ಪ್ರಮುಕರು ಬದುಕನ್ನು ಅದಮ್ಯವಾಗಿ ಪ್ರೀತಿಸುತ್ತ ಈ ನಾಡಿನ ಬಗ್ಗೆ, ಇಲ್ಲಿಯ ಜನಾಂಗದ ಬಗ್ಗೆ, ಒಂದಿಸ್ತು ಕಾಳಜಿ, ಪ್ರೀತಿಯೊಂದಿಗೆ ನಮ್ಮ ದಿನನಿತ್ಯದ ಆಗುಹೋಗುಗಳೊಂದಿಗೆ ಸ್ಪಂದಿಸಿದವರು ನೀವು. ಕದೀಮ ರಾಜಕಾರಣಿಗಳ ಬಗ್ಗೆ,, ಗೊಮುಖವ್ಯಗ್ರಗಳ ಬಗ್ಗೆ ನಿಮ್ಮ ನಾಟಕ,ಸಿನಿಮಾ,ಧಾರಾವಾಹಿಗಳಲ್ಲಿ ,ಮನಮುಉತುವಹಾಗೆ ಚಿತ್ರಿಸಿ ಲಕ್ಷಾಂತರ ಜನರ ಹೃದಯ ಮುಟ್ಟಿ ತಟ್ಟಿದವರು ನೀವು ,ನಿಮ್ಮ ಧಾರಾವಾಹಿಗಳಾದ ಮಾಯಾಮೃಗ ,ಮುಕ್ತ, ಮತ್ತು ಮುಕ್ತ ಮುಕ್ತ ವಂತೂ ಅಂದಿನಂದಿನ ಘಟನೆಗಳನ್ನೇ ಜೀವಳವಾಗಿಸಿಕೊಂಡು ,ಒಂದಿಸ್ತು ಸಾಮಾಜಿಕ ಎಚರವನ್ನು ಮೂಡಿಸಲು ಎಚ್ಹರಿಸಲು ಪ್ರಯತ್ನಿಸಿದ ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೊಂದು ನನ್ನ ನಮಸ್ಕಾರ. ಒಂದಿಸ್ತು,ಹಣ,ಗೌರವ, ಜನರ ಪ್ರೀತಿ, ಗೌರವಕ್ಕೆ ಆತ್ಮೀಯತೆಗೆ ಪಾತ್ರರಾಗಿರುವ ನೀವು ಇದ್ದಕಿದ್ದಂತೆ frustrate ಆಗಿ matanaadidu sirನನಗಂತೂ ದೊಡ್ಡ ಶಾಕ್. ಬಹುದೊಡ್ಡ ದಾರ್ಶನಿಕ ಉಮರ್ ಕಯ್ಯಂ ಒಂದೆಡೆ ಹೀಗೆ ಹೇಳುತ್ತಾರೆ .
  ಈ ಜಗಕೆ ನಾನೇಕೆ ಬಂದಿಹೇನೋ ತಿಲಿಯದದು
  ಎಲ್ಲಿಂದ ಬಂದೆನೋ ಪೋಪುದಾವದೆಗೋ
  ಇಚ್ಚೆ ಕೇಳುವರಿಲ್ಲ ಗುಟ್ಟು ಬಿಚ್ಚುವರಿಲ್ಲ
  ಮರುಭೂಮಿಯಲಿ ಬೋರಿಡುವ ಗಾಳಿ ನಾನು .
  ಇಲ್ಲಿ ನಾವು ಬಯಸುವುದೊಂದು ಆದರೆ ಆಗುವುದು ಮತ್ತೊಂದು , ನಿಮಗೆ ಒಂದು ಸತ್ಯ ಹೇಳಲು ಇಷ್ಟ ಪಡುತ್ತೇನೆ ,ನಾವು ಒಂದಿಸ್ತು ಗೆಳೆಯರು ಆಗಾಗ್ಗೆ “ತೆಗ್ಗಿನ ಮಠಕ್ಕೆ ಹೋಗುತ್ತೇವೆ ” ಅಲ್ಲಿ ನಮ್ಮ ಮಾತು ಸಾಹಿತ್ಯದ ಬಗ್ಗೆ,ನಾಟಕದ ಬಗ್ಗೆ, ಸಿನೆಮಾದ ಬಗ್ಗೆ, ರಾಜಕಾರಣದ ಬಗ್ಗೆ ಮಾತನಾಡುತ್ತೇವೆ .ಒಮ್ಮೊಮ್ಮೆ ಇದು ತುಂಬಾ ರಂಗೇರಿ,ಶಾಯರಿ lokavvagi ಕೂಡ ರುಪುಗೊಲ್ಲುತ್ತೆ. ಅಲ್ಲಿ ಒಬ್ಬ ಕನ್ನಡ ಎಂ ಎ ಓದಿದ ಗೆಳೆಯ ನಮಗೆ ಡ್ರಿಂಕ್ಸ್ ಸರಬರಾಜು ಮಾಡುತ್ತಾನೆ ಆತನಿಗೂ ಸಾಹಿತ್ಯ,ಸಂಗೀತ,ಒಳ್ಳೆ ಸಿನಿಮಾ,ಅಸ್ತೆ ಏಕೆ ಆಟ ಲಂಕೇಶರ ಸಿನಿಮಾದ ಎಲ್ಲಿನ್ದಲೋಬಂದವರ ಹಾಡುಗಳನ್ನು ಹಲಗೆ ಹೊಡೆಯುತ್ತ ಅದ್ಬುತವಾಗಿ ಹಾಡುತ್ತಾನೆ ಪುಸ್ತಿಕೆ ಓದುವ ನಾಟಕ ನೋಡುವ, ಹ್ವಿಪರೀತ ಹುಚು ಅವನಿಗೆ. ಒಮ್ಮೆ ಆಟ ನಮ್ಮೊಂದಿಗೆ ತನ್ನ ಅವಸ್ತೆಯ ಬಗ್ಗೆ ನೊಂದು ನುಡಿದ ಮಾತುಗಳು ಕೇಳಿ ನಾನು ಮುಕವಿಸ್ಮಿತನಾದೆ, ಒಬ್ಬ ಪ್ರವಾದಿಯಂತೆ ಮಾತನಾಡಿದ್ದ. ಸ
  ಸರ್ ಇಲ್ಲಿ ಪಂಪನಾವ ಓಡಿದವ ಪಂಪು ಒದೆಯುತ್ತಾನೆ
  ರನ್ನನನು ಓಡಿದವ ರಮ್ಮು ಸರಬರಾಜು ಮಾಡುತ್ತಾನೆ
  ಏನನ್ನು ಒದಲಾರದವ ಇಸ್ಪಿತು ಕ್ಲಬ್ ನಡೆಸುತ್ತಾನೆ,
  matakadande ನಡೆಸುತ್ತಾನೆ, ತಲೆಹಿಡಿಯುವ ಕೆಲಸ ಮಾಡುತ್ತಾನೆ
  ರೊಕ್ಕ ಮಾಡುತ್ತಾನೆ, ಆರಾಮಾಗಿ ಬದುಕುತ್ತಾನೆ
  ಓದಿದವನ ತಪ್ಪೇ ಎಂದು ಆಟ ಕೇಳಿದಾಗ ನನ್ನಲ್ಲಿ ಉತ್ತವಿರಲಿಲ್ಲ, ಒದದವರೇ ಅಲ್ಲ ಓದಿದವರು ಆ ಎಲ್ಲ ಕೆಲಸಗಳನ್ನು ತುಂಬಾ ನಾಜುಕಾಗಿಯೇ ಮಾಡುತ್ತಾರೆ, ನಿಜಹೆಳಬೇಕಂದ್ರೆ ಒದದವರಿಗಿಂತ ಓದಿದವರೇ ಈ ಕೆಲ್ಸಗಲ್ಲಿ ಹೆಚ್ಹು ತೊಡಗಿಸಿಕೊಂಡಿದ್ದಾರೆ ಎಂದು ಹೇಳಿ ಹೊರ ಬಂದೆ .ಇತ್ತ್ತಿಚೆಗೆ ಕುಸ್ವಂತ್ ೯೫ ಪುಸ್ತಕ ಓದುತ್ತಿದ್ದೆ, “ನೀವು ಏನು ಮಾಡುತೀರಿ ಎನ್ನುವ ಪ್ರಸ್ನೇಗೆ ” ನಾನು ಕುರುಡರ ನಾಡಿನಲ್ಲಿ ಕನ್ನಡಿಗಳ ಮಾರುತ್ತಿರುವೆ ಎಂದು ಹೇಳಿದ್ದಾರೆ”
  ಕತ್ತಿ ಹಿಡಿದೋ ,ಪೆನ್ನು ಹಿಡಿದೋ ,ಬೇಡದ ಹೋರಾಟ ಮಾಡುತ್ತಲೇ ಇರೋಣ ,ನಮ್ಮ ಕೊನಯೂಸಿರು ಇರೋವರೆಗೂ ನಾನು ನನ್ನಂಥಹ ನಿಮ್ಮ ಅಭಿಮಾನಿಗಳು ಹೇಳುವ ಕೇಳುವ ಮತ್ತು ಒಂದೇ ” ಎ ದಿಲ್ ಮಾಂಗೆ more ‘ ಒಮ್ಮೆ ಸಿಕ್ಕಾಗ ಮಾತನಾಡೋಣ ಒಂದು ಸಣ್ಣ ಪಾರ್ಟಿ ಜೊತೆ ,ಮನಬಿಚ್ಚುವ ಮಾತಿನ ಜೊತೆ .

  ಪ್ರತಿಕ್ರಿಯೆ
 8. ತ.ನಂ.ಜ್ಞಾನೇಶ್ವರ

  ನೀವು ಬೇರೆ ನಿರ್ದೇಶಕರ ಹಾಗಲ್ಲ. ಕಥೆ ಸಾಗುತ್ತಿರುತ್ತದೆ. ಬೇರೆ ಬೇರೆಯ ಪ್ರಸಂಗಗಳನ್ನು ಎತ್ತಿಕೊಳ್ಳುತ್ತೀರಿ. ನಿಮಗೆ ಇದು ಸವಾಲಿನ ಹಾಗೂ ಬೇಸರದ ಕೆಲಸ ಆಗಿರಬಹುದು. ಆದರೆ ನೀವು ವೀಕ್ಷಕರನ್ನು ಬೇಸರಗೊಳಿಸಿಲ್ಲ. ನಿಮಗೆ ಮುಂದುವರಿಯುವ ನೈತಿಕ ಹಕ್ಕಿದೆ.

  ಪ್ರತಿಕ್ರಿಯೆ
 9. ತ.ನಂ.ಜ್ಞಾನೇಶ್ವರ

  ಇವತ್ತಿನ ರಾಜಕೀಯ, ಮರ್ಯಾದಾ ಹತ್ಯೆ, ವಕೀಲರ ನಡವಳಿಕೆ ಇತ್ಯಾದಿಗಳನ್ನು ನೋಡಿದರೆ ನಿಮಗೆ ವಸ್ತುವಿನ ಕೊರತೆ ಕಾಡಲಾರದೆಂದೇ ನನ್ನ ಭಾವನೆ.

  ಪ್ರತಿಕ್ರಿಯೆ
 10. ರಮೇಶ ದೊಡ್ಡಪುರ

  ದೂರದರ್ಶನದಲ್ಲಿ ಕಳೆದವಾರದಿಂದ ಪ್ರಸಾರವಾಗುತ್ತಿರುವ ‘ಉಪನಿಷದ್ ಗಂಗಾ’ ಧಾರಾವಾಹಿಯಂತೆ ವಾರಕ್ಕೊಂದು ಎಪಿಸೋಡ್ ಮಾಡಿ ನೋಡಬಹುದೇನೋ. ಬಹಳ ಸ್ಪೀಡ್ ಆಗಿದೆ, ನಿರ್ದೇಶಕ-ವೀಕ್ಷಕ ಯಾರಿಗೂ ಬೋರ್ ಆಗಲ್ಲ.

  ಪ್ರತಿಕ್ರಿಯೆ
 11. bmhaneef

  nijakku besara, jigupse aaguttideya..? satya heli. namma anukampa preeti gittisalu hosa dala hakiddera hege?
  BM Haneef

  ಪ್ರತಿಕ್ರಿಯೆ
 12. Geetha b u

  aathmeeyaraadha T.N.S avarige,
  Nimmondhige kelasa maadidhene. Neeveshtu sensitive yemba arivu nanagidhe. Haagaagiye neevu srushtisuva paathragalu jeevantha. Ommomme athee bhavuka yenisuvashtu thudiyuthave. Neevu srushtisuva yella paathragala bhara horuvudu sulabhada maathala. Aa paathragalu avugala bhava vannu nimma mele heruthive. Nimma thoughts galannu Fiction inda non fiction ge shift maadikoli. Lekhanagalannu bareyiri. Lead youngsters with right thoughts. Svathaha ninthu nithyadha Kathi varase maadadhe, Kathi varase maaduvudhannu helikodi. Gurugalaagi maargadarshana maadi. Please please write an autobiography. Then come back to serials. Thaayiye anaarogya, saavu nimmannu kuggisive. Time is the healer. You will come out of it. We want you to come out of it.

  ಪ್ರತಿಕ್ರಿಯೆ
 13. vikram hatwar

  ಜಿಗುಪ್ಸೆ ಹುಟ್ಟದಿದ್ದರೆ ಅದು ಬೇರೆ ಮಾತು. ಯಾರದೋ ಟೀಕೆ ಯಾರದೋ ಒತ್ತಾಯ ಮತ್ಯಾರದೋ ಸಾಧನೆಯ ಬಗೆಗಿನ ಈರ್ಷ್ಯೆ ಇದ್ಯಾವುದಕ್ಕೂ ಅಲ್ಲದೆ ನಮ್ಮಲ್ಲೇ ಜಿಗುಪ್ಸೆಯೊಂದು ಹುಟ್ಟಿದ್ದು ನಿಜವೇ ಆದರೆ ಅದು ನಮ್ಮ ಒಳ್ಳೆಯದಕ್ಕೇ. ಸೃಜನಶೀಲತೆ ಸದಾ ಹೊಸ ಹೊಸ ಸವಾಲುಗಳನ್ನು ಎದುರಿಸುತ್ತಲೇ ಇರಬೇಕು. ಮೊಂಡಾಗಬಾರದು. ಮಂಚ ಅದೇ ಇರಲಿ, ಆದರೆ ಕೋಮಾದಲ್ಲಿರುವ ಮನುಷ್ಯನೂ ಆಗಾಗ ಮಗ್ಗಲು ಬದಲಿಸಲೇ ಬೇಕು. ಇಲ್ಲದಿದ್ದರೆ ಎಲ್ಲ ಹುಣ್ಣು ಹುಣ್ಣು.
  ಸೀತಾರಾಂ ಸರ್ ಅಂದರೆ ನಮಗೆಲ್ಲ ಪ್ರೀತಿ ಅನ್ನೋದು ನಿಜ. ಅವರು ಸೀರಿಯಲ್ ಮಾಡುತ್ತಲೇ ಇರಬೇಕು ಅನ್ನೋದು ನಮ್ಮೆಲ್ಲರ ಒತ್ತಾಸೆ. ಕಾಮನಬಿಲ್ಲು, ಕಾಲೇಜು ರಂಗ, ಮಾಯಾಮೃಗ…ಎಲ್ಲವನ್ನೂ ಇಷ್ಟ ಪಟ್ಟಿದ್ದೇವೆ. ಅವರ ಸೀರಿಯಲ್ ಒಂದರ ಸದಾಶಿವ ಆನೋ ಪಾತ್ರದ ಪ್ರೇರಣೆಯಿಂದಲೇ ನಾನು ಕಾಲೇಜಿನಲ್ಲಿರುವಾಗ ಫ್ರೆಂಚ್ ಬಿಯರ್ಡ್ ಬಿಡಲು ಶುರು ಮಾಡಿದ್ದು.
  ದಶಕಗಳಾಗಿವೆ. ಜಿಗುಪ್ಸೆ ಹುಟ್ಟಿದು ಒಳ್ಳೆಯದೇ ಆಯಿತು. ದಯವಿಟ್ಟು ಮಗ್ಗಲು ಬದಲಿಸಿ. ನಿಮ್ಮ ಮನೆಯದೇ ಅಡುಗೆ ಇರಲಿ. ಮೆನು ಬದಲಾಗಲಿ ಅಷ್ಟೇ.
  ಯಾವ ಟೀಮು, ಯಾವ ಮೈದಾನ, ಯಾರು ನೋಡುತ್ತಿದ್ದಾರೆ ಅನ್ನೋದೆಲ್ಲ ಗಮನಿಸದಿದ್ದರೂ, ಒಂದೇ ಟೀಮಿನ ಜೊತೆ ಒಂದೇ ಮೈದಾನದಲ್ಲಿ ಒಂದೇ ಟೀಮಿನ ಎದುರು ಆಡುತ್ತಲೇ ಇದ್ದಿದ್ದರೆ ದೇವರಂಥ ಸಚಿನ್ ಕೂಡ ದೇವರಾಗುತ್ತಿರಲಿಲ್ಲ.
  -vikram hatwar

  ಪ್ರತಿಕ್ರಿಯೆ
 14. ಅಮಾಸ

  ಯಾಕ್ರೀ ನಾಟಕ ಬರೆಯೋದನ್ನು, ಮಾಡೋದನ್ನು ಬಿಟ್ರೀ ? ಒಂದೊಮ್ಮೆ ನಾಟಕದ ಕಸಬು ಜಿಗುಪ್ಸೆ ತಂದಿತ್ತಲ್ಲವಾ… ನನಗೆ ನಿಮ್ಮ ಮಾತು ನಿಜಕ್ಕೂ ಬೇಸರ ತಂದಿದೆ. ಯಾಕೆಂದರೆ ಹೀಗೆಲ್ಲ ವಿದಾಯ ಹೇಳುವ ಬಗ್ಗೆ ಭಾರಿ ಸುದ್ಧಿ ಮಾಡುವುದು ಬೇಡವಾಗಿತ್ತು.ನಿರ್ಧಾರವನ್ನು ಪ್ರಕಟಿಸಿ ಪ್ರಚಾರ ಪಡೆಯುವುದು ಕ್ರಿಕೇಟ್, ರಾಜಕೀಯದವರಿಗೇ ಮಾತ್ರ ಸಾಕು. ಕಲಾಪ್ರಪಂಚದ ಮೊಣಚು ತಾಕುವುದು ಎದೆಗೂ ಹೌದು, ಸಮಷ್ಠಿಗೂ ಹೌದು. ಹಾಗಿದ್ದ ಮೇಲೆ ನಿಮ್ಮೊಳಗಿನ ಕೌಶಲ್ಯ ಬರೀ ಸೀರಿಯಲ್ ಒಂದೆ ಹೌದಾ? ಬರವಣಿಗೆ, ನಾಟಕ, ಸಿನೆಮಾ ಹೀಗೆ ಎನೆಲ್ಲ ಮಾಡುತ್ತಿದ್ದ ನೀವು ಹೀಗಾದರೆ ಹೇಗೆ ಸ್ವಾಮಿ. ನಿಮಗೆ ಸಹಾಯಕಿ ಆಗಿರುವ ನನ್ನ ತಂಗಿ ಕಾವ್ಯ ನಿಮ್ಮ ಬಗ್ಗೆ ತುಂಬ ಹೇಳ್ತಿರತಾಳೆ.

  ಪ್ರತಿಕ್ರಿಯೆ
 15. nempedevaraj

  nimage jigupse bandiruvudakke karana hudukalu idiiga niivu srushtisida preekshaka vargakke purusottilla. hasi hasiyagi samasyeglannu huttu haki kuudale parihara nintallee koduvududee nimma vyaaparada suvarna kalavagittu.nimmantaha suukshma samveedaneyavaru enisikondu eenadaruu madiddira endare mattashtu samasye huttu hakida truptiyinda hora hoogiddiiri ashte. olleye masaleya hudukata nirantara.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: