ಟಿ ಎನ್ ಸೀತಾರಾಂ ಗೆ ಇನ್ನಷ್ಟು ಪತ್ರಗಳು..

                    ಆತ್ಮೀಯರಾದ  ಟಿ ಎನ್ ಎಸ್  ಅವರಿಗೆ, ನಿಮ್ಮೊಂದಿಗೆ ಕೆಲಸ ಮಾಡಿದ್ದೇನೆ. ನೀವೆಷ್ಟು sensitive ಎಂಬ ಅರಿವು ನನಗಿದೆ. ಹಾಗಾಗಿಯೇ ನೀವು ಸೃಷ್ಟಿಸುವ ಪಾತ್ರಗಳು  ಜೀವಂತ. ಒಮ್ಮೊಮ್ಮೆ ಅತೀ  ಭಾವುಕ ಎನಿಸುವಷ್ಟು ತುಡಿಯುತ್ತವೆ. ನೀವು ಸೃಷ್ಟಿಸುವ ಎಲ್ಲಾ ಪಾತ್ರಗಳ ಭಾರ ಹೊರುವುದು ಸುಲಭದ ಮಾತಲ್ಲ. ಆ ಪಾತ್ರಗಳು ಅವುಗಳ ಭಾವವನ್ನು ನಿಮ್ಮ ಮೇಲೆ ಹೇರುತ್ತಿವೆ. ನಿಮ್ಮ thoughts ಗಳನ್ನು Fiction ಇಂದ non fiction ಗೆ shift ಮಾಡಿಕೊಳ್ಳಿ. ಲೇಖನಗಳನ್ನು  ಬರೆಯಿರಿ. Lead youngsters with right thoughts. ಸ್ವತಹ ನಿಂತು ನಿತ್ಯದ ಕತ್ತಿ  ವರಸೆ ಮಾಡದೆ, ಕತ್ತಿ ವರಸೆ ಮಾಡುವುದನ್ನು ಹೇಳಿಕೊಡಿ. ಗುರುಗಳಾಗಿ ಮಾರ್ಗದರ್ಶನ ಮಾಡಿ. Please please write an autobiography. Then come back to serials. ತಾಯಿಯ ಅನಾರೋಗ್ಯ, ಸಾವು ನಿಮ್ಮನ್ನು ಕುಗ್ಗಿಸಿವೆ. Time is the healer. You will come out of it. We want you to come out of it.     –ಬಿ ಯು ಗೀತಾ     ++ ಜಿಗುಪ್ಸೆ ಹುಟ್ಟದಿದ್ದರೆ ಅದು ಬೇರೆ ಮಾತು. ಯಾರದೋ ಟೀಕೆ ಯಾರದೋ ಒತ್ತಾಯ ಮತ್ಯಾರದೋ ಸಾಧನೆಯ ಬಗೆಗಿನ ಈರ್ಷ್ಯೆ ಇದ್ಯಾವುದಕ್ಕೂ ಅಲ್ಲದೆ ನಮ್ಮಲ್ಲೇ ಜಿಗುಪ್ಸೆಯೊಂದು ಹುಟ್ಟಿದ್ದು ನಿಜವೇ ಆದರೆ ಅದು ನಮ್ಮ ಒಳ್ಳೆಯದಕ್ಕೇ. ಸೃಜನಶೀಲತೆ ಸದಾ ಹೊಸ ಹೊಸ ಸವಾಲುಗಳನ್ನು ಎದುರಿಸುತ್ತಲೇ ಇರಬೇಕು. ಮೊಂಡಾಗಬಾರದು. ಮಂಚ ಅದೇ ಇರಲಿ, ಆದರೆ ಕೋಮಾದಲ್ಲಿರುವ ಮನುಷ್ಯನೂ ಆಗಾಗ ಮಗ್ಗಲು ಬದಲಿಸಲೇ ಬೇಕು. ಇಲ್ಲದಿದ್ದರೆ ಎಲ್ಲ ಹುಣ್ಣು ಹುಣ್ಣು. ಸೀತಾರಾಂ ಸರ್ ಅಂದರೆ ನಮಗೆಲ್ಲ ಪ್ರೀತಿ ಅನ್ನೋದು ನಿಜ. ಅವರು ಸೀರಿಯಲ್ ಮಾಡುತ್ತಲೇ ಇರಬೇಕು ಅನ್ನೋದು ನಮ್ಮೆಲ್ಲರ ಒತ್ತಾಸೆ. ಕಾಮನಬಿಲ್ಲು, ಕಾಲೇಜು ರಂಗ, ಮಾಯಾಮೃಗ…ಎಲ್ಲವನ್ನೂ ಇಷ್ಟ ಪಟ್ಟಿದ್ದೇವೆ. ಅವರ ಸೀರಿಯಲ್ ಒಂದರ ಸದಾಶಿವ ಆನೋ ಪಾತ್ರದ ಪ್ರೇರಣೆಯಿಂದಲೇ ನಾನು ಕಾಲೇಜಿನಲ್ಲಿರುವಾಗ ಫ್ರೆಂಚ್ ಬಿಯರ್ಡ್ ಬಿಡಲು ಶುರು ಮಾಡಿದ್ದು. ದಶಕಗಳಾಗಿವೆ. ಜಿಗುಪ್ಸೆ ಹುಟ್ಟಿದು ಒಳ್ಳೆಯದೇ ಆಯಿತು. ದಯವಿಟ್ಟು ಮಗ್ಗಲು ಬದಲಿಸಿ. ನಿಮ್ಮ ಮನೆಯದೇ ಅಡುಗೆ ಇರಲಿ. ಮೆನು ಬದಲಾಗಲಿ ಅಷ್ಟೇ. ಯಾವ ಟೀಮು, ಯಾವ ಮೈದಾನ, ಯಾರು ನೋಡುತ್ತಿದ್ದಾರೆ ಅನ್ನೋದೆಲ್ಲ ಗಮನಿಸದಿದ್ದರೂ, ಒಂದೇ ಟೀಮಿನ ಜೊತೆ ಒಂದೇ ಮೈದಾನದಲ್ಲಿ ಒಂದೇ ಟೀಮಿನ ಎದುರು ಆಡುತ್ತಲೇ ಇದ್ದಿದ್ದರೆ ದೇವರಂಥ ಸಚಿನ್ ಕೂಡ ದೇವರಾಗುತ್ತಿರಲಿಲ್ಲ. -ವಿಕ್ರಂ ಹತ್ವಾರ್  ]]>

‍ಲೇಖಕರು G

March 18, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

2 ಪ್ರತಿಕ್ರಿಯೆಗಳು

 1. malathi S

  @ Vikram Hatwar
  ದಯವಿಟ್ಟು ಮಗ್ಗಲು ಬದಲಿಸಿ. ನಿಮ್ಮ ಮನೆಯದೇ ಅಡುಗೆ ಇರಲಿ. ಮೆನು ಬದಲಾಗಲಿ ಅಷ್ಟೇ.
  wow what a thought!!!
  ms

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: