ಟಿ ಎನ್ ಸೀತಾರಾಂ ಗೆ ಫ್ರಾನ್ಸ್ ನಿಂದ ಪತ್ರ

ಆತ್ಮ ನಿರ್ದೇಶಿತರಾಗಿ…

ವಿದ್ಯಾಶಂಕರ ಹರಪನಹಳ್ಳಿ, ಟುಲೂಸ್, ಫ್ರಾನ್ಸ್

ಪ್ರೀತಿಯ ಟಿ. ಎನ್. ಸೀತಾರಾಮ್,

ಹೇಗಿದ್ದೀರಿ? ಮುಗಿಯುವುದೇ ಇಲ್ಲ ಅಂದುಕೊಂಡಿದ್ದ ‘ಮುಕ್ತ ಮುಕ್ತ’ ಸೀರಿಯಲ್ ಮುಗಿಸುತ್ತಿದ್ದೀರಿ… ತುಂಬಾ ಸಂತೋಷ ಮತ್ತು ನಿಮಗೆ ಶುಭಾಶಯಗಳು! ಇನ್ನು ನೀವು, ಹೀಗೆ ಸಾರ್ವಜನಿಕವಾಗಿ ಮುಂದೇನು? ಎಂಬ ಪ್ರಶ್ನೆ ಇಟ್ಟಿರುವುದು, ಜೊತೆಗೆ ಆಪ್ಷನ್ಸ್ ಕೊಟ್ಟಿರುವುದು, ನನಗೆ ತಮಾಷೆಯಾಗಿ ಕಾಣಿಸುತ್ತಿದೆ. ಇದು ನಿಮ್ಮ ಹಾಸ್ಯ ಪ್ರವೃತ್ತಿಯನ್ನು ತೋರಿಸುತ್ತಿದೆ. ತಮಾಷೆಯಲ್ಲ, ನಾನು ಗಂಭೀರವಾಗಿ ಈ ಪ್ರಶ್ನೆ ಕೇಳುತ್ತಿದ್ದೇನೆ ಗಾಡ್ ಪ್ರಾಮಿಸ್! ಎಂದು ನೀವು ಅನ್ನುವುದಾದರೆ, ನನ್ನ ಕೆಲ ಅನಿಸಿಕೆಗಳನ್ನ ನಿಮ್ಮ ಜೊತೆ ಹಂಚಿಕೊಳ್ಳಬಯಸುತ್ತೇನೆ. ಸುಮ್ಮನೆ ಕೆಲ ಕ್ಷಣ ಕಲ್ಪಿಸಿಕೊಳ್ಳಿ, ಲಂಕೇಶರು ನಾನು ಈ ವಾರ ಯಾವ ವಿಷಯದ ಬಗ್ಗೆ ಟೀಕೆ ಟಿಪ್ಪಣಿ ಬರೆಯಲಿ? ಈ ವಾರ ಯಾವ ರಾಜಕಾರಣಿಯನ್ನು ಜಾಡಿಸಲಿ ಎಂದು ಕೇಳಿದಂತೆ? ಭೀಮಸೇನ ಜೋಷಿಯವರು ಯಾವ ರಾಗ ಹಾಡಲಿ ಎಂದು ಕೇಳುಗರಿಗೆ ಆಪ್ಷನ್ಸ್ ಕೊಟ್ಟಂತೆ? ನೀವು ಮೆಚ್ಚುವ ಪುಟ್ಟಣ್ಣ ಕಣಗಾಲ್ ಮುಂದಿನ ಚಿತ್ರದಲ್ಲಿ ಹೆಣ್ಣಿನ ಯಾವ ಭಾವನೆಗಳನ್ನು ಚಿತ್ರಿಸಲಿ ಎಂದು ಕೇಳಿದಂತೆ? ಮಾಸ್ತಿಯವರು ಸಣ್ಣಕತೆಯ ನಾಲ್ಕು ಎಳೆಗಳನ್ನು ಬರೆದು ಯಾವುದನ್ನು ಮುಂದುವರಿಸಲಿ ಎಂದು ಕೇಳಿದಂತೆ… ಕೆ.ಎಸ್. ನರಸಿಂಹ ಸ್ವಾಮೀ ಯಾವ ಭಾವಕ್ಕೆ ಒತ್ತುಕೊಟ್ಟು ಮುಂದಿನ ಪ್ರೇಮ ಕವಿತೆ ಬರೆಯಲಿ ಎಂದು ಕೇಳಿದಂತೆ? ಡಾ.ರಾಜ್ ಕುಮಾರ್ ಅಭಿನಯದ ಬಗ್ಗೆ ನಾಲ್ಕು ಆಪ್ಷನ್ಸ್ ಕೊಟ್ಟು, ಯಾವುದು ಚೆನ್ನ, ಯಾವುದನ್ನು ಅಳವಡಿಸಿಕೊಳ್ಳಲಿ ಎಂದು ಕೇಳಿದಂತೆ? ತುಂಬಾ ತಮಾಷೆ ಅನಿಸುತ್ತೆ… ಹಾಗೆಯೆ ಮುಜುಗರ ಆಗುತ್ತದೆ ಅಲ್ಲವೇ? ಸ್ವಾಮೀ, ಅವರೆಲ್ಲ ಸುಮ್ಮನೆ ಲಹರಿಗೆ ಬಿದ್ದು ತಮ್ಮ ಆತ್ಮದ ಪಿಸು ಮಾತನ್ನು ಕೇಳಿಸಿಕೊಂಡು ಸರಿಯೋ, ತಪ್ಪೋ… ಆತ್ಮ ನಿರ್ದೇಶಿತರಾಗಿ ತಮಗೆ ತೋಚಿದನ್ನು ಮಾಡಿದರು… ನಾವೆಲ್ಲ ಮೆಚ್ಚಿದೆವು… ನಮ್ಮ ಮನಸ್ಸಿನಲ್ಲಿ ಅಚ್ಚಳಿಯದ ನೆನಪುಗಳನ್ನು ಬಿಟ್ಟು ಹೋದರು… ನಮ್ಮ ಭಾವ ಕೋಶದಲ್ಲಿ ಬಹು ಮುಖ್ಯರಾದರು… ಸಾಧಕರೆಲ್ಲ ಆತ್ಮ ನಿರ್ದೇಶಿತರಾಗಿದ್ದರೆ ಹೊರತು ಜನರ ನಿರ್ದೇಶನವನ್ನು ನೆಚ್ಚಿಕೊಂಡವರಲ್ಲ , ಜನ ಮೆಚ್ಚುಗೆಯ ಬೆನ್ನು ಬಿದ್ದವರಲ್ಲ… ಈ ಸಂದರ್ಭದಲ್ಲಿ ಒಂದು ಪುಟ್ಟ ಝೆನ್ ಕತೆ ನೆನಪಾಗುತ್ತಿದೆ. ಪ್ರಸಿದ್ಧ ಚಿತ್ರಕಲೆಯ ಗುರುವೊಬ್ಬ ತನ್ನ ಕೊನೆಯ ಮಾಸ್ಟರ್ ಪೀಸ್ ಚಿತ್ರ ಬರೆಯುವ ಸಿದ್ಧತೆಯಲ್ಲಿ ಕುಳಿತ. ಪಕ್ಕದಲ್ಲಿ ಅವನ ಅತ್ಯಂತ ಪ್ರಿಯ ಶಿಷ್ಯನೂ ಕುಳಿತ. ಗುರು ಏನೇ ಚಿತ್ರ ಬರೆದರೂ ಶಿಷ್ಯ ಏನೋ ಒಂದು ಕೊಂಕು ತೆಗೆಯತೊಡಗಿದ. ಹೀಗೆ ಹಲವು ದಿನಗಳು ಕಳೆದವು, ಶಿಷ್ಯ ಪಕ್ಕಾ ನಕ್ಷತ್ರಿಕ, ಗುರುವನ್ನು ಬಿಟ್ಟು ಎಲ್ಲೂ ಹೋಗಲೊಲ್ಲ..! ಅವನಿಗೆ ಮಾಸ್ಟರ್ ಪೀಸ್ ಹುಟ್ಟುವುದನ್ನು ನೋಡುವ ಕುತೂಹಲ… ಹಿಂದೆ ಹಲವು ವಿಕ್ರಮಗಳನ್ನು ಸಾಧಿಸಿದ್ದ ಗುರು, ಈಗ ತಡವರಿಸುತ್ತಿರುವಂತೆ ಶಿಷ್ಯನಿಗೆ ಕಾಣಿಸುತ್ತಿತ್ತು. ಕೊನೆಗೆ ಒಂದು ಮಧ್ಯಾಹ್ನ ನೀರು ತರಲು ದೂರದ ನದಿಗೆ ಶಿಷ್ಯ ಹೊರಟ. ಅವನು ಬರುವುದರಲ್ಲಿ ಗುರುವಿನ ಚಿತ್ರ ರೆಡಿಯಾಗಿತ್ತು… ನದಿಯಿಂದ ಹಿಂದಿರುಗಿ ಬಂದವನೇ ಶಿಷ್ಯ ಉದ್ಗರಿಸಿದ ‘ಇದೇ… ಇದೇ… ಮಾಸ್ಟರ್ ಪೀಸ್!’ ಕಲಾವಿದ ಆತ್ಮ ನಿರ್ದೇಶಿತನಾದಾಗಲೇ ಅಪ್ಪಟ ಸೃಜನಶೀಲನಾಗುವುದು ಎಂಬುದು ನನ್ನ ಬಲವಾದ ನಂಬಿಕೆ… ಹೀಗೆ ಸಾರ್ವಜನಿಕ ಚುನಾವಣೆಗೆ ಆಪ್ಷನ್ ಸಮೇತ ನಿಂತರೆ ಹುಟ್ಟುವುದು ಕಲಾಕೃತಿಯಲ್ಲ, ಕೇವಲ ಟಿ.ಅರ್.ಪಿ ಮತ್ತು ಕಾಸು! ಇದೆಲ್ಲ ನಿಮಗೆ ಗೊತ್ತಿಲ್ಲವೆಂದೇನಲ್ಲ, ಆದರೂ ಯಾಕೋ ನೀವು ಗೊಂದಲದಲ್ಲಿದ್ದೀರಿ… ಗೆಲ್ಲುವ, ಪ್ರೇಕ್ಷಕರ ಮೆಚ್ಚುಗೆಯ ಹಪಹಪಿಯಲ್ಲಿದ್ದೀರಿ… ನಿಮ್ಮ ಗೊಂದಲಕ್ಕೆ ಏಕಾಂತದಲ್ಲಿ ಉತ್ತರ ಸಿಗಲಿ, ಇಲ್ಲದಿದ್ದರೆ ನಿಮ್ಮ ‘ಆತ್ಮ’ ಬಂಧುಗಳ ಹತ್ತಿರ ಚರ್ಚಿಸಿ. ಅದು ಬಿಟ್ಟು ಹೀಗೆ ಸಾರ್ವಜನಿಕವಾಗಿ ಪ್ರಶ್ನೆ ಕೇಳುವುದು, ಜೊತೆಗೆ ಆಪ್ಷನ್ ಕೊಡುವುದು… ದಯವಿಟ್ಟು ಬೇಡ… ಆಯೋಧ್ಯೆಯ ಮಹಾಪ್ರಭು ಶ್ರೀಮಾನ್ ಸೀತಾರಾಮನಂತೆ ಸಾರ್ವಜನಿಕ ಅಭಿಪ್ರಾಯಕ್ಕೆ ಬೆಲೆಕೊಟ್ಟು ಸೀತೆಯನ್ನು (ಅಂದರೆ ನಿಮ್ಮ ಸೃಜನಶೀಲತೆಯನ್ನು, ನಿಮ್ಮ ಆಂತರಿಕ ತುಡಿತವನ್ನು) ಕಾಡಿಗೆ ದಬ್ಬುವ ಆತುರದ ನಿರ್ಧಾರ ಮತ್ತು ಸ್ವಯಂ-ಸಂಶಯದ ನಡೆ ಖಂಡಿತ ಬೇಡ! ಪ್ರೀತಿಯಿಂದ, ವಿದ್ಯಾಶಂಕರ ಹರಪನಹಳ್ಳಿ, ಟುಲೂಸ್, ಫ್ರಾನ್ಸ್  ]]>

‍ಲೇಖಕರು G

May 18, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಧ್ಯಮಕ್ಕೆ ಮರ್ಯಾದೆ ಇದೆ ಅಲ್ಲವೇ.. ಸಾವಿಗೆ ಘನತೆ ಇದೆ ಅಲ್ಲವೇ..

ಮಾಧ್ಯಮಕ್ಕೆ ಮರ್ಯಾದೆ ಇದೆ ಅಲ್ಲವೇ.. ಸಾವಿಗೆ ಘನತೆ ಇದೆ ಅಲ್ಲವೇ..

ಮಾತಿನ ಶೈಲಿ, ಪ್ರಸ್ತುತಪಡಿಸುವಿಕೆ,  ನಿರೂಪಣೆ ಕುರಿತಂತೆ ಸಾಕಷ್ಟು ಅಧ್ಯಯನ ನಡೆಸಿದವರು. ನಿರೂಪಣೆ ಕುರಿತ ಇವರ ಕೃತಿ 'ಮಾತಲ್ಲ ಗೀತೆ'.  ಕರೋನ...

ಪ್ರಧಾನಮಂತ್ರಿ ಎಮ್ಮೆ ಯೋಜನೆ: ಪಿ. ಸಾಯಿನಾಥ್ ಹೇಳಿದ ಕತೆ.

ಪ್ರಧಾನಮಂತ್ರಿ ಎಮ್ಮೆ ಯೋಜನೆ: ಪಿ. ಸಾಯಿನಾಥ್ ಹೇಳಿದ ಕತೆ.

ಕೇಸರಿ ಹರವೂ  ಮಹಾರಾಷ್ಟ್ರದ ವಿದರ್ಭ ಜಿಲ್ಲೆ ಬಹಳ ಮುಂಚಿನಿಂದಲೂ ಹತ್ತಿ ಬೆಳೆಗೆ ಹೆಸರುವಾಸಿಯಾಗಿತ್ತು. ಅಲ್ಲಿಯ ರೈತರು ಹತ್ತಿ ಬೆಳೆಯನ್ನು...

7 ಪ್ರತಿಕ್ರಿಯೆಗಳು

 1. D.RAVI VARMA

  ಪ್ರಿಯ ವಿದ್ಯಾಶಂಕರ್ ,ನಿಜಕ್ಕೂ ನಿಮ್ಮ ಪ್ರತಿಕ್ರಿಯೆ,ಒಡಲಾಳದ ಮಾತು ಮನಮುಟ್ಟುವಂತಿದೆ.ಜನಮೆಚಿಗೆಗಿಂತ,ಮನ ಮೆಚ್ಚಿಗೆಯಾತ ಸರ್ ಸೀತಾರಾಮ್ ಆಲೋಚಿಸಿದರೆ ಒಳ್ಳೆಯದ, ನೀವು ತಿಳಿಸಿದ ಹಾಗೆ,ಅದು ತೀರ ಅತ್ಮೀಯರೊಡನೆ ಮುಕ್ತ ಮಾತುಕತೆ,ಅಥವಾ ಮೌನದ ಘರ್ಭದಿಂದ ಬರಬೇಕಸ್ತೆ . ನಿಮ್ಮ ಯೋಚನೆಯ ದಿಕ್ಕು ಹಾಗು ಜೀವನ ಪ್ರೀತಿ ನನಗೆ ತುಂಬಾ ಇಷ್ಟವಾಯಿತು
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ
 2. sunil

  letter tuumbaa channaagide vidyaashankara avare aadre…
  option keliddralli nangeno tappu kaanalilla….mostly janaranna gamanakke tandukolluva vidhaanavoo irabahudu

  ಪ್ರತಿಕ್ರಿಯೆ
 3. ಮಧು ಹಾಸನ್

  ಸರ್,
  ನಿಮ್ಮ ಪ್ರತಿಕ್ರಿಯೆ ನಿಜಕ್ಕೂ ಅತ್ಯಂತ ಸೂಕ್ತ ಹಾಗು ಸಮಂಜಸ>!

  ಪ್ರತಿಕ್ರಿಯೆ
 4. Subbu

  ವಿದ್ಯಾಶಂಕರ್ , ನಿಮ್ಮ ಪತ್ರ ಓದಲು ತುಂಬಾ chennagide, ಆದ್ರೆ ಕಾರ್ಯಗತ ಮಾಡಲು ಕಾಲಕ್ಕೆ ಹೊಂದುವನ್ತದ್ದಲ್ಲ .ನೀವು ಹೇಳಿದ್ದನ್ನೇ ಮಾಡ ಹೋದರೆ serial ಟೀವಿ ನಲ್ಲಿ ಬರೋ ಸಾಧ್ಯತೆ ಕಮ್ಮಿ. TRP ಟೀವಿ ಚನ್ನೆಲ್ ನವರಿಗೆ ಬೇಕು , ಅದರ ವಿನಃ serial ಪ್ರಸಾರ ಆಗೋಲ್ಲ .ಜನ ನೋಡದ ಕೃತಿ ಅದೆಷ್ಟೇ ಚೆನ್ನಾಗಿದ್ದರೂ ಸಾರ್ಥಕ್ಯ ಪಡೆಯುವುದಿಲ್ಲ .ಆತ್ಮ ಸಂತೋಷಕ್ಕಾಗಿ ಮಾಡೋ ಕೃತಿಗಳು ಇನ್ನೊಂದು ಆತ್ಮವನ್ನು ತತ್ತಿದಷ್ಟೇ ಸಫಲ ಕ್ರುತಿಯಾಗೋದು .

  ಪ್ರತಿಕ್ರಿಯೆ
 5. T.N.Seetharam

  maanya sri vidyashankar avare namaskaara,
  nanage France ninda banda modala patra emba kaaranakke nanage santoshvaaguttide..
  naanu options kottiddu nimage thamashe yaagi kandide..SAAVANNU kooda thamaasheyaagi kandavaru nanage bekaadashtu jana gottu..haagaagi nimma sense of humour nanage hechhu kaadisalilla..!
  idishtu thamaashe aayitu..
  gambhiravaagi heLuvudaadare ..nimmadu udaafeya prashnegaLu alla..nimma chintane proudavaagide..aadare thamage kelavu tappu abhipraayagaLu ide anisutte..
  Naanu Lankesh aagali, bheemasena joshi yaagali, k.s.narasimhaswamy yaagali, rajkumar aagali khandita alla..aagirabahudennuva bhrameyu nanagilla
  avarella agaadha jeevadravada moolaka anubhava kattikottavaru..adarali kelavaru aatma nirdeshitaru..aatmada pisunudigalige hrudayada kivi teredavaru..Raajkumar avarannu bittu mikkavara kalaapraakaaragalu atynta khaasagi sambhaashnegalu..aneka saavira paatragalannu hoththa eka paatraabhinaya kaararu..avaru bereyavara abhipraaya padeyuva avashyakathe iralilla..kaavya prajaprabhutvada chunaavavanege spardhisuvudilla..
  aadare naanu?
  Kevala showman..aatmada pisu maatugalellavu nanna badukina vishaadada adhyaayagalalli sattroo usiraadutta kootive..nanna show madhye ello ondu kade dhvnisidare nanna punya..ady bittare nanage bekaddu janada mechhuge..mattu aa mechhuge chappaLeya saddiginta sookshma vaagirabeku ashte..idannu TRP endu karedare nanage kopavilla..TRP andare mechhuge ashte..
  naanu enu kodaballe mattu veekshakara santosh;ivugala samanvatheye nannantha showman na anthima uddesha..
  adakkaagi naanu veekshakarige nana saraku gala bagge heluttene..avaru mattu naanu ibbaroo ishta paduvanthaddannu maadalu yatnisuttene..heege maaduvaaga maadhyamada mattu veekshakara ghanatege dhakke tharuvudilla..idishte nanna agenda..aathmada pisumatugalaagali aatma nirdeshita sangathigalaagali nanagint tumbaa ettraddu..adara hangu nanage illa..neevu nannannu ittiruva saalinalli naanu illa..hindina benchinalli iddene..nanage veekshakara abhipraaya khanditha beku..adakkagiye hinde naanu samvaada galannu kooda nadesidde..
  innoo heLabahudaada sangathigalu saavira ive..bhaashana aagabaaradu endu heLuttilla..
  France vaathaavaraNa aagaaga sooksmateyinda koodiruttade endu naanu balle..
  ‘vyangyavillade heLuvudaadare ranjane,bhaava mattu santosha galannu kodaballa bayalu naatakadhaari naanu..10 naataka nanage baruttade..yaavudu bekaadaru aarisiko, naanu naataka haakuttene ennuva showman naanu ashte..hechhalla’ide magnalli nanna optionsge jana preetiyida kottiruva pratikriye nodi..namage kriye mattu pratikriye eradoo ottige hoguttave
  Nimage gottillade irabahudaada ondu vichaara;
  TRP namma aatma santoshakke..KAASu channelge..namage baruvudilla
  snehadondige
  TNS madanahalli gauribidanur

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: