ಟಿ ಎನ್ ಸೀತಾರಾಂ ಗೆ ಫ್ರಾನ್ಸ್ ನಿಂದ..

ಬಿಸಿಪು ತಪ್ಪಿದ ಮೇಲೆ… (ಶ್ರೀ ಟಿ. ಏನ್. ಸೀತಾರಾಮ್‌ರಿಗೊಂದು ಪ್ರೀತಿಯ ಪತ್ರ)               ಪ್ರೀತಿಯ ಸೀತಾರಾಮ್‌ರವರಿಗೆ, ಮೊದಲಿಗೆ ನಿಮ್ಮ ಹೇಳಿಕೆ ನೋಡಿ (ಕ್ಷಮಿಸಿ!) ನನಗೆ ಖುಷಿಯಾಯಿತು. ಕೊನೆಗೂ ನೀವು ಸೀರಿಯಲ್ಲಗಳನ್ನು ಮುಗಿಸುವ ಮತ್ತು ಮೀರುವ ಮಾತಾಡಿದಿರಲ್ಲ ಎಂದು. ನಿಮ್ಮ ಹೇಳಿಕೆ, ಹಳಹಳಿಕೆ ಮತ್ತು ಜೋಗಿಯವರ ಪ್ರತಿಕ್ರಿಯೆ ಓದಿದೆ. ಯಥಾ ಪ್ರಕಾರ ಜೋಗಿಯವರು ಪ್ರಾಮಾಣಿಕರಾಗಿ, ಭಾವುಕರಾಗಿ, ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ, ಆದರೆ ಅವರ ಪತ್ರ ದಾರಿತಪ್ಪಿಸುವಂತಿದೆ. ನಿಮ್ಮ ಸಮಸ್ಯೆ ಅವರದೂ ಕೂಡ, ಹಾಗಾಗಿ ಅವರು ಹೊರಗೆ ನಿಂತು ಸ್ಪಷ್ಟವಾಗಿ ಯೋಚಿಸಲಾರರು ಎಂದು ನನ್ನ ನಮ್ರ ಅನಿಸಿಕೆ.                   ನೋಡಿ, ರೌಡಿಗಳ ರೋಚಕ ಜೀವನ ವಿವರಗಳನ್ನು ಓದುತ್ತಾ ರೋಮಾಂಚನಗೊಳ್ಳುತ್ತಿದ್ದ ಓದುಗ, ಇಂದು ರಾಬಿನ್ ಶರ್ಮ, ಎಂಬ ಮೋಟಿವೇಷನಲ್ ಸ್ಪೀಕರ್ ಮುಂದೆ ಕೂತು ಸಣ್ಣ ಕಂಪನಿ ಶುರು ಮಾಡುವುದು ಹೇಗೆ? ಎಂದು ಕೇಳಿಕೊಳ್ಳುತ್ತಿದ್ದಾನೆ. ಜೋಗಿ ಕಾಲಂ ಓದಿ, ಅಲ್ಲಿಯ ಸೂಕ್ಷ್ಮತೆ, ರಮ್ಯ ಕಲ್ಪನೆಗಳ ಬಗ್ಗೆ ಭಾವುಕನಾಗುತ್ತಿದ್ದ, ತಲೆತೂಗುತಿದ್ದ ಓದುಗ, ಹೊಸದೇನಾದರೂ ಬರೆಯಬಹುದಾ? ಎಂದು ಪೆನ್ನು ಕೈಗೆತ್ತಿಕೊಂಡಿದ್ದಾನೆ. ಎಂದೂ ಮುಗಿಯದ ಮೆಗಾ ಧಾರಾವಾಹಿಗಳನ್ನು ನೋಡಿ ಬೇಸತ್ತು ಪ್ರಜ್ಞಾವಂತ ವೀಕ್ಷಕ ಚಾನೆಲ್ ಚೇಂಜ್ ಮಾಡಿ ಬೇರೆ ಸೃಜನಶೀಲ ಪ್ರೊಗ್ರಾಮ್ ಯಾವುದಿದೆ? ಎಂದು ಚಾನೆಲ್ ಸರ್ಫ್ ಮಾಡುತ್ತಿದ್ದಾನೆ. ಯಾವುದೂ ಅರ್ಥಪೂರ್ಣ ಕಾರ್ಯಕ್ರಮ ಸಿಗದಿದ್ದರೆ ನಿರ್ದಾಕ್ಷಿಣ್ಯವಾಗಿ ಟಿ.ವಿ. ಆಫ್ ಮಾಡುತ್ತಿದ್ದಾನೆ. ಹೀಗೆ ಓದುಗ, ಪ್ರೇಕ್ಷಕ ಬೆಳೆಯುತ್ತಿದ್ದರೆ, ಬದಲಾಗುತ್ತಿದ್ದರೆ… ಲೇಖಕ, ನಿರ್ದೇಶಕ ನಿಂತಲ್ಲೇ ನಿಂತು ಬಿಟ್ಟರೆ ಹೇಗೆ? ನೀವು ಟಿ.ವಿ ಚಾನೆಲ್-ಗಳ ಟಿ.ಆರ್.ಪಿ ಗಳಿಕೆ ನಿಂತುಬಿಟ್ಟು ಸೃಜನ ಶೀಲತೆ ಮರೆತರೆ ಹೇಗೆ? ನಿಮ್ಮ ಮಾಯಾಮೃಗ, ಮನ್ವಂತರ ನೋಡಿ ಖುಶಿಪಟ್ಟಿದ್ದೆವು. ಆದರೆ ನೀವು ‘ಮುಕ್ತ’ ಮತ್ತು ‘ಮುಕ್ತ ಮುಕ್ತ’ ಶುರುಮಾಡಿದಾಗ, ಮತ್ತೆ ಅದೇ ಕೋರ್ಟ್ ಸೀನ್‌ಗೆ ಗಂಟು ಬಿದ್ದಾಗ ನಮಗೆಲ್ಲಾ ಖಂಡಿತ ನಿರಾಸೆಯಾಯಿತು. ಸಣ್ಣಗೆ ನಿಮ್ಮ ಸೃಜನಶೀಲತೆ ಖಾಲಿಯಾದ ಬಗ್ಗೆ ಮತ್ತು ನಿಮ್ಮ ಸೀರಿಯಲ್ ಬಗ್ಗೆ ಅಪಸ್ವರ ಎದ್ದಿತು. ಅದು ನಿಮ್ಮ ಗಮನಕ್ಕೂ ಬಂದಿರಬಹುದು, ಅಲ್ಲಾ ಎಷ್ಟೊಂದು ಸಂವಾದ ಕಾರ್ಯಕ್ರಮ ನಡೆಸುತ್ತೀರಿ ನೀವು… ಅಂತಹ ಅಸೂಕ್ಷ್ಮರೇನಲ್ಲ ನೀವು… ನಿಮ್ಮ ಈಗಿನ ಕಷ್ಟ, ನೋವ್ವೆಲ್ಲ ಹೊಸ ಹುಟ್ಟಿನ ಹೆರಿಗೆ ನೋವ್ವು ಅಂದುಕೊಂಡು ಸಹಿಸಿಕೊಂಡು, ಶೋಧನೆ ಮುಂದುವರೆಸಿರಿ. ಬಂಜೆತನಕ್ಕಿಂತ ಹೆರಿಗೆ ನೋವು ಸಾವಿರಪಾಲು ವಾಸಿ. ನಿಮಗೆ ಇದೆಲ್ಲ ಗೊತ್ತಿಲ್ಲಾ ಅಂತಲ್ಲ… ನೀವೇನು ಸಾಮಾನ್ಯರೇನಲ್ಲ… ಇಂತಹ ಹತ್ತು ಹಲವು ಹಂತಗಳನ್ನ ಮೀರಿ ಬೆಳೆದಿದ್ದಿರಿ… ಒಮ್ಮೊಮ್ಮೆ ಎಂತೆಂತವರಿಗೂ ಹೀಗೆ ಆಗುವುದಂತೆ… ಎಲ್ಲೋ ಓದಿದ ಕವಿತೆ ನೆನಪಾಗುತ್ತಿದೆ, ಅದರ ಭಾವಾರ್ಥ ಹೀಗಿತ್ತು ‘ಬಿಸಿಪು ತಪ್ಪಿದ ಮೇಲೆ ಮೈಥುನ ಮುಂದುವರಿಸಬಾರದು, ಮುಂದುವರಿಸಿದರೆ ಆಗುವುದು ಹಿಂಸೆ…’ . ಬಿಟ್ಟುಬಿಡಿ… ಹೊಸದನ್ನೇನಾದರೂ ಯೋಚಿಸಿ… ನೀವು ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಅಪ್ರಸ್ತುತರಾದರೆ ನಮಗೆಲ್ಲ ನಷ್ಟ ಮತ್ತು ತುಂಬಾ ನೋವು. ಏನೋ ನಿಮ್ಮ ಮೇಲಿನ ಪ್ರೀತಿಯಿಂದ ಹೀಗೆ ಬಡಬಡಿಸಿದ್ದೇನೆ, ದಯವಿಟ್ಟು ತಪ್ಪು ತಿಳಿಯಬೇಡಿ.   ಪ್ರೀತಿಯಿಂದ, ವಿದ್ಯಾಶಂಕರ ಹರಪನಹಳ್ಳಿ ಟುಲೂಸ್, ಫ್ರಾನ್ಸ್  ]]>

‍ಲೇಖಕರು G

March 19, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

3 ಪ್ರತಿಕ್ರಿಯೆಗಳು

 1. Sharadhi

  ನೋಡಿ ವಿದ್ಯಾಶಂಕರ್, ಏನೇ ಬೆಂಗಳೂರಿನ ಜಗತ್ತು ಬದಲಾಗಿದೆ, ರಾಬಿನ್ ಶರ್ಮ ರ motivational ಭಾಷಣ ಕೇಳುತ್ತದೆ ಎಂದುಕೊಂಡರೂ, ಭಾಷಣ ಮುಗಿದ ಮೇಲೆ, ಕೀ ಬೋರ್ಡ್ ಕಳಚಿಟ್ಟ ಸಾಫ್ಟ್ವೇರ್ ದಂಪತಿಗಳು ತುಳಸಿ ಪೂಜೆಗೆ ಕೂರುತ್ತಾರೆ, ಎಂದಿಗೂ ಮುಗಿದಯದ ಮೆಗಾ ಸೇರಯಾಲ್ ಗಳ ತಿರುಗನಿಗೆ ಬೀಳುತ್ತಾರೆ. ಏಕೆ!, ಏಕೆಂದರೆ ಒಂದು ಸಂಸ್ಕೃತಿಯನ್ನು ಬದಲಿಸುವುದಕ್ಕೆ ಮನ್ವಂತರವೇ ಬೇಕಾಗಬಹುದು. ರಾಬಿನ್ ಶರ್ಮಾ ಗಿಂತ ಮೊದಲು ನಮ್ಮಲ್ಲಿ ಅದೆಷ್ಟೂ motivational ಗುರುಗಳು ಆಗಿ ಹೋದರು, ‘ಜಗತ್ತು’ ಬದಲಾಯಿತಾ!, ಇಲ್ಲ. ಬದಲಾಗುವುದೂ ಇಲ್ಲ. ಇನ್ನು ‘ಬಿಸುಪು ತಪ್ಪಿ’ದವರಿಗೆನ್ದೆ ಕಸುವು ಹೆಚ್ಚಿಸಲು ಅನೇಕ ಔಷಧಿಗಳಿವೆ. ಮಿತವಾಗಿ ಸೇವಿಸಿ, ಹಿತವಾಗಿ ಮುಲುಗಿ, ಖಿನ್ನತೆ ಹತವಾಗಲಿ.

  ಪ್ರತಿಕ್ರಿಯೆ
 2. ಸುಧಾ ಚಿದಾನಂದಗೌಡ.

  ಉತ್ತಮ ನಿರ್ದೇಶಕರಿಗೆ ಅತ್ಯುತ್ತಮ ಸಲಹೆ

  ಪ್ರತಿಕ್ರಿಯೆ
 3. Srinivasa Harapanahalli

  ‘ಬಿಸಿಪು ತಪ್ಪಿದ ಮೇಲೆ ಮೈಥುನ ಮುಂದುವರಿಸಬಾರದು, ಮುಂದುವರಿಸಿದರೆ ಆಗುವುದು ಹಿಂಸೆ…’
  In-spite age being the barrier MR. Sachin Sab still wants to play for the country… Are you trying to tell him to call it a day!
  -Srinivas

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: