ಟಿ ಎನ್ ಸೀತಾರಾ೦ ಪತ್ರಕ್ಕೆ ರಾಘವೇ೦ದ್ರ ಜೋಶಿ ಸ್ಪ೦ದನ

‘ಮುಕ್ತ.. ಮುಕ್ತ..’ ಮುಗಿಯುವ ಸೂಚನೆ ನೀಡಿದ ಟಿ ಎನ್ ಸೀತಾರಾಂ ಅವರು ಮುಂದೇನು ಮಾಡಬೇಕು ಹೇಳಿ ಎಂದು ವೀಕ್ಷಕ, ಓದುಗರನ್ನು ಕೇಳಿದ್ದರು. ಒಂದಿಷ್ಟು ಆಪ್ಷನ್ಸ್ ಮುಂದಿಟ್ಟಿದ್ದರು. ಅದು ಇಲ್ಲಿದೆ. ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಹರಿದುಬಂದಿದೆ. ಫ್ರಾನ್ಸ್ ನಿಂದ ವಿದ್ಯಾಶಂಕರ ಹರಪನಹಳ್ಳಿ ಅವರು ಒಂದು ಗಂಭೀರ ಪತ್ರ ಬರೆದಿದ್ದರು ಅದು ಇಲ್ಲಿದೆ. ಇವರಿಬ್ಬರ ಪತ್ರಗಳಿಗೆ ರಾಘವೇ೦ದ್ರ ಜೋಶಿ ಹೀಗೆ ಸ್ಪ೦ದಿಸಿದ್ದಾರೆ : ಕಳೆದ ಕೆಲದಿನಗಳಿಂದ TN ಸೀತಾರಾಂ ಅವರ ‘ಆಯ್ಕೆಯ ಪ್ರಶ್ನೆಗಳು’ ಮತ್ತು ಅನೇಕರ ಅಭಿಪ್ರಾಯಗಳನ್ನು ನೋಡುತ್ತಲೇ ಇದ್ದೇನೆ.ಅದರಲ್ಲಿ ಮೊನ್ನೆ ಫ್ರಾನ್ಸ್ ನಿಂದ ಬಂದ, ಮಿತ್ರರಾದ ಶ್ರೀಯುತ ವಿದ್ಯಾಶಂಕರ್ ಅವರು ಬರೆದ ಪತ್ರ ಕೊಂಚ ಗಮನ ಸೆಳೆಯಿತು. ಬಹುಶಃ ಸೀತಾರಾಂ ಅವರ ಬಗ್ಗೆ ಒಂದು ತೆರನಾದ ಪ್ರೀತಿ ಇಟ್ಟುಕೊಂಡೇ ಬರೆದಿರುವ ಈ ಪತ್ರದಲ್ಲಿ ವಿದ್ಯಾಶಂಕರ್ ಅವರು ಕೆಲವೊಂದು ಗಂಭೀರ ಮತ್ತು ಅಷ್ಟೇ ಸೂಕ್ಷ್ಮ ವಿಚಾರಗಳನ್ನು ಹಂಚಿಕೊಳ್ಳುತ್ತಾ,ಏನಾದರೂ ಮಾಡಿ ಆದರೆ ಆತ್ಮನಿರ್ದೇಶಿತರಾಗಿ ಮಾಡಿ ಎಂದು ವಿನಂತಿಸಿಕೊಂಡಿದ್ದಾರೆ.ಈಗ ಮೂಲ ವಿಷಯಕ್ಕೆ ಬಂದರೆ: “ಏನು ಮಾಡಲಿ ಮುಂದೆ..?” ಅಂತ ಟಿಎನ್ನೆಸ್ ಕೊಟ್ಟಿರುವ ಐದಾರು option ಗಳಲ್ಲಿ ‘ಆತ್ಮಕತೆ’ಯೊಂದನ್ನು ಬಿಟ್ಟರೆ ಮತ್ಯಾವುದನ್ನೂ ಅವರು ಅತ್ಮನಿರ್ದೇಶಿತನಾಗಿ ಮಾಡುವ ಸಂಭವಗಳು ತೀರ ಕಡಿಮೆ.ಯಾಕೆಂದರೆ ಪ್ರಸ್ತುತ ದೃಶ್ಯ ಮಾಧ್ಯಮದಲ್ಲಿ ಈಗಾಗಲೇ ಯಶಸ್ಸಿನ ಹಾದಿಯಲ್ಲಿರುವ ಅವರು ಏನೆಲ್ಲ ಧಾರಾವಾಹಿಗಳನ್ನು ಮಾಡಿದ್ದರೂ ಅವೆಲ್ಲ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಹೆಣೆದಿದ್ದರಿಂದ Hit ಆದವೇ ಹೊರತು ಬೇರೆ ಯಾವ ಕಾರಣಗಳೂ ಇರಲಿಕ್ಕಿಲ್ಲ. ಇವೆಲ್ಲ ಧಾರಾವಾಹಿಗಳಲ್ಲಿ ಸೀತಾರಾಂ ಅವರ ಒಳತುಡಿತಗಳು,ಮೌಲ್ಯಗಳು ಪಾತ್ರಗಳ ಮೂಲಕ ಅಥವಾ ಡೈಲಾಗ್ ಗಳ ಮೂಲಕ ಅಲ್ಲಲ್ಲಿ ಹೊರಬಂದಿರಲೂ ಸಾಕು.ಆದರೆ ಎಷ್ಟಾದರೂ ಅದು ಟೀವಿ. ಅದೊಂದು ಮಾರಾಟ. ಮತ್ತು ಅದೊಂದು ವ್ಯವಹಾರ.ಹೀಗಾಗಿ ಎಲ್ಲ ‘ಬೇಡ’ಗಳ ನಡುವೆಯೂ ‘ಬೇಕು’ಗಳನ್ನು ಸಂಭಾಳಿಸುತ್ತ ಹೋಗಲೇಬೇಕಾಗುತ್ತದೆ. ಹಿಂದೊಮ್ಮೆ ಅವರ ಸೀರಿಯಲ್ (ಬಹುಶಃ ‘ಮುಕ್ತ’ ಇರಬೇಕು) ನಲ್ಲಿ ರಾಜೀವ್ ದೀಕ್ಷಿತ್ ಅವರ ವಿಚಾರಧಾರೆಯಾದ ‘ಸ್ವದೇಶಿ ಚಳುವಳಿ’ಯನ್ನು ಬಿಂಬಿಸುವ ಪ್ರಯತ್ನ ಮಾಡಿದ್ದರು. ಆಗ ಕೆಲದಿನಗಳ ಮಟ್ಟಿಗೆ ಅವರ ಧಾರಾವಾಹಿಗೆ ಸ್ವಲ್ಪ ಮಟ್ಟಿಗೆ (ಜಾಸ್ತಿ ಇದ್ದರೂ ಇರಬಹುದು) ಜಾಹಿರಾತುಗಳ ಸಮಸ್ಯೆಯಾಗಿತ್ತು. ಯಾಕೆಂದರೆ ಅವರ ಧಾರಾವಾಹಿಗೆ ಜಾಹಿರಾತು ಬರುತ್ತಿದ್ದುದೇ ಮಲ್ಟಿನ್ಯಾಷನಲ್ ಕಂಪೆನಿಗಳಿಂದ! ನೀವು ನಿಮ್ಮ ಸೀರಿಯಲ್ ನಲ್ಲಿ ವಿದೇಶಿ ಕಂಪೆನಿಗಳ ಪ್ರಾಡಕ್ಟುಗಳನ್ನು ವಿರೋಧಿಸಿ ಅಂತ ಸಂದೇಶ ಕೊಡುತ್ತ ಹೋದಾಗ ಯಾವ ಮಲ್ಟಿನ್ಯಾಷನಲ್ ಕಂಪೆನಿ ನಿಮಗೆ ಜಾಹಿರಾತು ಕೊಟ್ಟು ಸ್ಪಾನ್ಸರ್ ಮಾಡುತ್ತೆ ಹೇಳಿ? ಹಾಗಂತ ಯಾವುದೋ ಒಂದು ಸಂವಾದದಲ್ಲಿ ಸೀತಾರಾಂ ಅವರು ಹೇಳಿದ್ದು ನನಗಿನ್ನೂ ನೆನಪಿದೆ. ಹೀಗಾಗಿ ಈ ಮಾಧ್ಯಮದಲ್ಲಿ ಆತ್ಮನಿರ್ದೇಶಿತನಾಗಿಯೋ,ಆತ್ಮಖುಷಿಗಾಗಿಯೋ ಕೆಲಸ ಮಾಡುತ್ತ ಹೋದರೆ ನಾಳೆಯೇ ಅವರು ಕೆಲಸಕ್ಕೆ ಗುಡ್ ಬೈ ಹೇಳುವ ಪ್ರಸಂಗ ಬರಬಹುದು. ನನಗೆ ತಿಳಿದಂತೆ,ಆತ್ಮನಿರ್ದೇಶಿತನಾಗಿ ಆತ್ಮಕತೆ ಬರೆಯಬಹುದು.ಆದರೆ ಆತ್ಮನಿರ್ದೇಶಿತನಾಗಿ ಅದನ್ನು ಪ್ರಿಂಟು ಮಾಡಲಾಗುವದಿಲ್ಲ. ಆತ್ಮಖುಶಿಗಾಗಿ ಕವಿತೆ ಹೆಣೆಯಬಹುದು;ಸಂಕಲಿಸಿ ಬಿಡುಗಡೆ ಮಾಡಲಾಗುವದಿಲ್ಲ.ಇವೆರಡನ್ನೂ ಯಾರಾದರೂ ಆತ್ಮನಿರ್ದೇಶಿತನಾಗಿ ಆತ್ಮಖುಶಿಯಿಂದ ಮಾಡಿದರೆ ಅದಕ್ಕಿಂತ ಖುಷಿ ಮತ್ತೊಂದಿಲ್ಲ..]]>

‍ಲೇಖಕರು G

May 20, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಆನೆ ಕಥೆ’ ಪುಸ್ತಕವನ್ನು ತಲುಪಿಸಲು ಹೋಗಿ ಒಂದು ಇಡೀ ಆನೆಗಳ ತಂಡಕ್ಕೆ ತೊಂದರೆ ಕೊಟ್ಟರಲ್ಲ?

‘ಆನೆ ಕಥೆ’ ಪುಸ್ತಕವನ್ನು ತಲುಪಿಸಲು ಹೋಗಿ ಒಂದು ಇಡೀ ಆನೆಗಳ ತಂಡಕ್ಕೆ ತೊಂದರೆ ಕೊಟ್ಟರಲ್ಲ?

ಅಭಿನವ ನಾಗರಾಜ ನವೀಮನೆ ಅವರ ಆನೆ ಕಥೆ ಕೃತಿಯನ್ನು ಹೊರತಂದಿದೆ. ಈ ಕೃತಿಯನ್ನು ಲೇಖಕರಿಗೆ ತಲುಪಿಸಿದ ಬಗ್ಗೆ ಅಭಿನವದ ಕೃಷ್ಣ ಚೆಂಗಡಿ ಅವರು...

ಟೀಕೆ ಮಾಡುವಾಗ ಸಂಯಮವಿರಲಿ..

ಟೀಕೆ ಮಾಡುವಾಗ ಸಂಯಮವಿರಲಿ..

ಕೇಂದ್ರ ಸಾಹಿತ್ಯ ಅಕಾಡೆಮಿ ಇತ್ತೀಚೆಗೆ ಕಲಬುರ್ಗಿಯಲ್ಲಿ ‘ಸಮಕಾಲಿನ ಸಣ್ಣಕಥೆಗಳ ಓದು  ಮತ್ತು ಸಂವಾದ’ ಹಮ್ಮಿಕೊಂಡಿತ್ತು. ಬಸವರಾಜ ಡೋಣೂರು...

ಇದು ಯಾರೋ ಬೇಕೆಂದಲೇ ಬರೆಸಿದ್ದು..

ಇದು ಯಾರೋ ಬೇಕೆಂದಲೇ ಬರೆಸಿದ್ದು..

ಕೇಂದ್ರ ಸಾಹಿತ್ಯ ಅಕಾಡೆಮಿ ಇತ್ತೀಚೆಗೆ ಕಲಬುರ್ಗಿಯಲ್ಲಿ ‘ಸಮಕಾಲಿನ ಸಣ್ಣಕಥೆಗಳ ಓದು  ಮತ್ತು ಸಂವಾದ’ ಹಮ್ಮಿಕೊಂಡಿತ್ತು. ಬಸವರಾಜ ಡೋಣೂರು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This