ಈ ನಿರೀಕ್ಷೆಯೇ ಈ ಪುಸ್ತಕದ ಮಹತ್ವವನ್ನೂ ಸೂಚಿಸುತ್ತದೆ..

ಟಿ ಎಸ್ ಗೊರವರ ಪುಸ್ತಕದ ಮುಖಪುಟ

ಹಾಗೂ ನಟರಾಜ್ ಹುಳಿಯಾರ್ ಬರೆದಿರುವ ಬೆನ್ನುಡಿ

-ಡಾ. ನಟರಾಜ್ ಹುಳಿಯಾರ ಬರೆಯುತ್ತಾರೆ :

ಭಾರತದಲ್ಲಿ ಬಡವರ ಬದುಕಿನಲ್ಲಿ ನಡೆಯುವ ಎಲ್ಲವೂ ಆಕಸ್ಮಿಕವೇನೋ. ಜೀತಗಾರನೊಬ್ಬನ ಮಗ ಆಡು ಕಾಯುತ್ತಾ ಬೆಳೆದ.ಬಡತನ ಮುತ್ತಿದ ಮನೆಯ ಹಿಂಸೆ,ಕಷ್ಟಗಳ ನಡುವೆಯೂ ಅಪ್ಪ, ಅವ್ವ ಹಲ್ಲುಕಚ್ಚಿ ಬೇರೆಯವರೆದುರು ಬೇಡದೆ ವಿಚಿತ್ರ ಸ್ವಾಭಿಮಾನದಿಂದ, ಘನತೆಯಿಂದ ಬದುಕಲೆತ್ನಿಸುತ್ತಿದ್ದುದನ್ನು ದಿನನಿತ್ಯ ಕಂಡ. ಕೂಲಿಗೆ ಹೋಗುವ ತಾಯಿಯ ಸ್ಥಿತಿಯ ಮೂಲಕ ಇಡೀ ಉತ್ತರ ಕನರ್ಾಟಕದ ಕೂಲಿಕಾರ ಹೆಂಗಸರ ಕಷ್ಟವನ್ನು ಅರಿಯತೊಡಗಿದ. ಈ ಸ್ಥಿತಿಯ ಹೊರತಾಗಿ ಬೇರೆ ಯಾವ ಸಾಧ್ಯತೆಯೂ ಇಲ್ಲದ, ಆ ಸಾಧ್ಯತೆಯ ಬಯಕೆ ಕೂಡ ಹುಟ್ಟಲಾರದ ಕಾಲದಲ್ಲಿ ಹುಡುಗ ಶಾಲೆಯ ಕಠಿಣ ಶ್ರಮದಿಂದ ಎಮ್ಮೆ ಕಾಯುವ ಬಯಲಿನ ಸ್ವಾತಂತ್ರ್ಯಕ್ಕೆ ಓಡಲು ಹಾತೊರೆಯುತ್ತಲೇ ಇದ್ದ. ಆ ಹೊತ್ತಿನಲ್ಲಿ ಅಕಸ್ಮಾತ್ ನಾಟಕವೊಂದರಲ್ಲಿ ಭಾಗವಹಿಸಿದ್ದೇ ಅವನ ಜೀವನದ ತಿರುವಿಗೆ ಕಾರಣವಾಯಿತು. ಡಾಕ್ಟರೊಬ್ಬರು ಅವನನ್ನು ಓದಿನ ಲೋಕದತ್ತ ಹೊರಳಿಸಿದರು. ಪುಸ್ತಕಗಳ ಸ್ಪರ್ಶದಿಂದ ಎಲ್ಲೋ ಅವನೊಳಗಿದ್ದ ಸೃಜನಶೀಲತೆಯ ಸಣ್ಣ ಕಿಡಿ ಹತ್ತಿ ಪದ್ಯ ಬರೆದ. ಮುಂದೊಮ್ಮೆ ಕತೆಗಾರನಾಗುವ ಊಹೆ ಕೂಡ ಮಾಡಲಾಗದ ಗೊರವರ್ಗೆ ಈ ಎಲ್ಲ ಲೋಕಗಳ ನೆನಪಿನ ಕೋಶವೇ ಮುಂದೊಮ್ಮೆ ಕತೆಗಳನ್ನು ಬರೆಸತೊಡಗಿತೇನೋ. ಆ ಮೂಲ ದ್ರವ್ಯವೇ ಇದೀಗ ಈ ನೆನಪಿನ ಕಥನವನ್ನೂ ಬರೆಸಿದೆ. ಈ ಸ್ವಂತದ ಹಾಗೂ ಸಾಮಾಜಿಕ ನೆನಪುಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಹೆಚ್ಚು ಪರಿಚಿತವಲ್ಲದ ಅನುಭವಲೋಕವೊಂದು ವೈವಿಧ್ಯಮಯ ವಿವರಗಳೊಂದಿಗೆ ಈ ಪುಸ್ತಕದ ಮೂಲಕ ಪ್ರವೇಶಿಸಿದೆ. ಗೊರವರ್ ಎಲ್ಲ ವೃತ್ತಿಪರ ಬರಹಗಾರರಂತೆ ಕೊಂಚ ಸ್ವಾಥರ್ಿ ಹಾಗೂ ಜಿಪುಣನಾಗಿದ್ದರೆ, ಈ ನೆನಪುಗಳ ಲೋಕವನ್ನು ಹಾಗೂ ಅದರ ವಿಚಿತ್ರ ಸತ್ಯಗಳನ್ನು ಇನ್ನಷ್ಟು ತಾಳ್ಮೆಯಿಂದ ಶೋಸಿದ್ದರೆ ಈ ನೆನಪುಗಳ ಸರಣಿಯನ್ನು ಒಂದು ಅಪರೂಪದ ಕಾದಂಬರಿಯಾಗಿಸಬಹುದಾಗಿತ್ತು. ಆದರೇನಂತೆ, ಇದೇ ಈಗ ಭರವಸೆಯ ಕತೆಗಾರನಾಗಿ ಅರಳುತ್ತಿರುವ ಗೊರವರ್ ಈ ನೇರ ನೆನಪುಗಳಲ್ಲಿ ಹೇಳಲಾಗದ ಹಾಗೂ ಪರೀಕ್ಷಿಸಲಾಗದ ಖಾಸಗಿ ವಿವರಗಳು ಮುಂದೊಂದು ದಿನ ಕಾದಂಬರಿಯಾಗದೆ ಬಿಡಲಾರವು ಎನ್ನಿಸುತ್ತದೆ. ಈ ನಿರೀಕ್ಷೆಯೇ ಈ ಪುಸ್ತಕದ ಮಹತ್ವವನ್ನೂ ಸೂಚಿಸುತ್ತದೆ.    ]]>

‍ಲೇಖಕರು G

June 5, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು...

ಸಂಗೀತ ಲೋಕದ ಸಂತ

ಸಂಗೀತ ಲೋಕದ ಸಂತ

ಡಾ.ಎನ್. ಜಗದೀಶ್ ಕೊಪ್ಪ ಸಂಗೀತ ಲೋಕದ ಸಂತಬಿಸ್ಮಿಲ್ಲಾ ಖಾನ್(ಜೀವನ ಚರಿತ್ರೆ)ಲೇಖಕರು: ಡಾ. ಎನ್ ಜಗದೀಶ್ ಕೊಪ್ಪಪ್ರಕಾಶಕರು: ಮನೋಹರ ಗ್ರಂಥಾಲಯ,...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: