ಟೈಟಾನಿಕ್, ಟೈಟಾನಿಕ್,,

– ಅಶೋಕ್ ಶೆಟ್ಟರ್

ಶಾಲ್ಮಲಾ

ಪ್ರೇಮದೇವತೆ ಎಷ್ಟು ಬ್ರಹ್ಮವರ್ಷ ಬಚ್ಚಿಟ್ಟು ಪ್ರಣಯೋನ್ಮಾದಕ್ಕೊಪ್ಪಿಸಿದ ಏಂಜೆಲ್ ಹೊಳೆವ ಹೊಂಗೂದಲ ಮುಗ್ಧ ಉದ್ಧಟ ರೋಸ್ ಅವಳಂತರಂಗದ ನೆರಳುಗಳಲ್ಲಿ ಮೈಯ್ಯ ಹೊರಳುಗಳಲ್ಲಿ ಜಾಕ್ ಕಿತ್ತೆಸೆದ ಐಸಿರಿಯ ನೊಗಗಳ ಧಡಕಿಯಲ್ಲಿ ಲಂಗ ನಸು ಮೇಲೆತ್ತಿ ಕುಣಿದ ಹೆಜ್ಜೆಯ ಲಯ ಜಾಕ್ ಓ ಜಾಕ್.. ಹುರಿದು ಮುಕ್ಕುವ ಪೋಲಿ ಕಂಗಳ ಜಾಕ್ ಉಸಿರ ಬಿಸಿ ತಾಗಬೇಕು, ಮೈಯ್ಯ ಮಂಜುಗಡ್ಡೆಗಳು ಕರಗಿ ತೊಡುಗೆ ತೋಯ್ದು ಅಂಗೈ ತುಂಬಿ ಹೊನ್ನ ಹೊಳಪಿನ ಬೆತ್ತಲೆ ಬೆರಳುಗಳ ನಡುವೆ ಉಬ್ಬಿ ತೊಟ್ಟು ಬಿಗಿಗೊಳ್ಳಬೇಕು; ಮೊಗ ಸಣ್ಣಗೆ ಬೆವರಿ ಹೊರಳೆ ಹಿಗ್ಗಿ ಚೆಂದುಟಿಗಳರೆ ಬಿರಿದು ಬಾಯ್ದೆರೆದ ಸೀಳು ಬಿರುಸ ಹಂಬಲಿಸುತ್ತ ಕಣ್ಣಪಾಪೆಗಳಲ್ಲಿ ರಾಗರತಿ ಹೊಯ್ದಾಡಿ ಲಜ್ಜೆಗೆಟ್ಟು ತುಂಬುವಲ್ಲಿ ತುಳುಕುವಲ್ಲಿ ಜಲಗಾನ ಹಿಮ್ಮೇಳದಲ್ಲಿ ವಿಧಿಯೇ! ಘಟನೆ ಘಟಿಸಿದೆ.. ಶಾಪಗ್ರಸ್ತ ಕೋಮಲ ಕೆಳೆತನದ ಜಲಸಮಾಧಿಯ ರಾತ್ರಿ ನೀರೂ ಮಿಂಚದ ನಿಶಾಂಧಕಾರ ಎಲ್ಲರೂ ಕೂಗುತ್ತಿರುವಲ್ಲಿ ಯಾರ ಕೂಗಿಗೂ ಆಕಾರವಿಲ್ಲ ಸಾರ್ಥಕಗೊಳ್ಳುತ್ತಿರುವ ಎರಡು ಹರೆಯಗಳ ಸುತ್ತ ಸಾವಿನ ಭಾರ ಹೊತ್ತ ಶಬ್ದಗಳ ಹುತ್ತಗಟ್ಟಿ ದಿಕ್ಕೆಟ್ಟು ಚಲಿಸುತ್ತಿವೆ ಮಾನವಾಕೃತಿಗಳೆ? ಸಾವಿನ ನೆರಳುಗಳೆ? ಚೀತ್ಕಾರಗಳಿಗೆ ಆಕ್ರಂದನಗಳ ಸಾಂತ್ವನ ನಿರ್ದಯೆಯ ಸಾಕ್ಷಿ ಚಂದ್ರ ಹೇಡಿ ತಾರೆಗಳ ಬೆಳಕಿಗೆ ತಾಕತ್ತಿಲ್ಲ ಕಾವಳದಲ್ಲಿ ಕಣ್ಣು ಹಿಗ್ಗಿದಷ್ಟೂ ಆಶೆ ಕುಗ್ಗಿ ದೇವರೇ, ದಿಗ್ದೆಸೆಗಳಲ್ಲೆಲ್ಲೂ ಸಾವಿಗೂ ಬದುಕಿಗೂ ದಡಗಳೇ ಇಲ್ಲ ಮೊನ್ನೆ ನಿನ್ನೆಯ ಚಂದ ನೀಲಜಲ ವಿಸ್ತಾರ ಸಾವಿನ ಜಲಶಯ್ಯೆ ಅಟ್ಲಾಂಟಿಕ್ ನುಂಗಿ ನೊಣೆಯಲು ಹೊಂಚಿ ಶಕ್ತಿಗಳು ಕುಳಿತಂತೆ ತಳದಿಂದ ಕೇಕೆಗಳು..ಟೈಟಾನಿಕ್ ಟೈಟಾನಿಕ್ ಅಂತಸ್ತಿನ ಅಗೋಚರ ಗೋಡೆಗಳ ಕುಸಿತದಲ್ಲಿ ಪ್ರೇಮ ಚಿಗುರಬೇಕು ಸಾವಿಂದ ಬದುಕ ಬೇರ್ಪಡಿಸುವ ಗೋಡೆಗಳೊಡೆಯುತ್ತಿವೆ ನೀರಿನ್ನೂ ನುಗ್ಗಿರದ ಇಂಚಿಂಚು ಸ್ಥಳ ಸ್ವರ್ಗ ಇನ್ನರೆಗಳಿಗೆ ಬದುಕ ಬರಸೆಳೆದು ಬಿಗಿದಪ್ಪಿ ಎದೆಗವಚಿ ಇನ್ನೊಂದರೆಗಳಿಗೆ ಸಾವನೊದ್ದು ಬದಿಗೆ ತಳ್ಳಿ ಹಿಂದೆ ನೂಕಿ ನನ್ನ ಸಂಕಟ ಚಲನಚಿತ್ರವೆ? ಜೀವನದರ್ಶನವೆ? ಘಟಿಸಿದವಘಡ ಅರಿವಿಗೆ ದಕ್ಕುವ ನಡುವಿನವಧಿಯ ಅಂತರ ಕಾಲದ್ದೆ? ಭ್ರಮೆ-ವಾಸ್ತವಗಳದ್ದೆ? ಅಮಾನುಷ ವೈಶಾಲ್ಯದಲ್ಲಿ ಮಕ್ಕಳಾಟದ ದೋಣಿಗೆ ಸಮ ಕ್ಷುದ್ರಗೊಂಡು ಮುಳುಗಿದ್ದು ಹಡಗೆ? ಅಥವ.. … ….]]>

‍ಲೇಖಕರು G

April 17, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರ

ನಿರುತ್ತರ

ಪ್ರಕಾಶ್ ಬಿ ಬೊಕ್ಕುತಲೆ, ಹಸಿದ ದೇಹ, ಒಣಗಿದ ಗಂಟಲು, ಗಂಟು ಗಂಟಾದ ಕೂದಲು ತ್ರಾಣವಿಲ್ಲದ ಶರೀರ, ಮಳೆ ನಿಂತ ಕಾದ ನೆಲ. ತೆರೆದ ಬಾಯೊಳಗೆ...

ನನ್ನ ಬುದ್ಧ

ನನ್ನ ಬುದ್ಧ

ನಂದಿನಿ ಹೆದ್ದುರ್ಗ ಹೊಸಪ್ರೇಮಿಗಳ ನಡುರಾತ್ರಿಯ ಮೊರೆವಮಾತುಗಳ ನಡುವಿಂದ ಕದ್ದು ಓಡಿಬರುತ್ತವೆ ಒಂದಷ್ಟು ಮುದ್ದುಮುದ್ದು ಪದಗಳು.ಅದು ಅವಳು ಪದ್ಯ...

ಜೀವನದ ಹೊಟ್ಟೆ ತುಂಬಿ

ಜೀವನದ ಹೊಟ್ಟೆ ತುಂಬಿ

ಮಾಲಾ.ಮ.ಅಕ್ಕಿಶೆಟ್ಟಿ ವಿಧ ವಿಧ ಭಕ್ಷ್ಯಗಳು ಸಿಹಿ ಖಾರ ಹುಳಿ ಒಗರು ಈರುಳ್ಳಿ ಬೆಳ್ಳುಳ್ಳಿ ಹುಣಸೆ ಬೆಲ್ಲ  ಎಣ್ಣೆ ಹೆಚ್ಚೋ ಕಡಿಮೆಯೋ ರುಚಿ ಪಾಪಿ...

4 ಪ್ರತಿಕ್ರಿಯೆಗಳು

 1. Sharadhi

  This is one of the best poems that I read recently. The imagery is great, words convey a lot, while the pause between the words tell it all and everything.

  ಪ್ರತಿಕ್ರಿಯೆ
 2. D.RAVI VARMA

  ಸರ್ ನಾನು ಹಿಂದೆ ನಾಕಾರು ಸಾರಿ ನೋಡಿ ಅತ್ತು ಬಂದಿದ್ದ ಸಿನಿಮಾ ಅದು ,ನಿಮ್ಮ ಈ ಅದ್ಬುತ ಲೇಖನದಿಂದ ಮತ್ತೆ ಇಡೀ ಸಿನಿಮಾ ನೆನಪಿಗೆ ಬಂತು ಆ ಕಾಲದಲ್ಲೇ ಅಸ್ತು ಅದ್ಬುತ ಹಾಗು ಕಲಾತ್ಮಕ ಪ್ರೇಕ್ಷಕರ ಎದೆ ಜಲ್ಲೆನಿಸುವ , ಸಿನಿಮಾ ಕೊಟ್ಟ ನಿರ್ದೇಶಕನಿಗೊಂದು ಪ್ರೀತಿಪೂರ್ವಕ ನಮಸ್ಕಾರ. ಆ ಸಿನಿಮಾದ ತಾಂತ್ರಿಕ ವರ್ಗಕ್ಕೂ ಕೂಡ, ಅಸ್ತೆ ಅಲ್ಲದೆ ಈಗ ಆ ದಿಕ್ಕಿನೆಡೆಗೆ ಮತ್ತೊಮ್ಮೆ ನಮ್ಮನ್ನು ಸೆಳೆದು ಕೊಂಡು ಹೋದ ನಿಮ್ಮ ಲೇಖನಕ್ಕೆ ನನ್ನ ಪ್ರೀತಿ ಪೂರ್ವಕ ನಮಸ್ಕಾರಗಳು
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: