ಟೈಮ್ ಪಾಸ್ ಕಡ್ಲೆಕಾಯಿ : ಬ್ರೇಕ್ ಫಾಸ್ಟ್ ಗೆ ಬ೦ದು ಕೊಲೆಯಾದ ಹ೦ದಿ

– ಕೆ ಅಕ್ಷತಾ

ಮೈಸೂರಿನಲ್ಲಿ ಆಗ ಹೆಚ್ಚಿನ ಮನೆಗಳಲ್ಲಿ ಫ್ಲಶ್ ಔಟ್ ಕಕ್ಕಸ್ ಇರಲಿಲ್ಲ. ತಲೆ ಮೇಲೆ ಮಲ ಹೊರುವ ಪದ್ದತಿಯ ಕಕ್ಕಸ್ಗಳೇ ಎಲ್ಲೆಲ್ಲೂ ಇದ್ದವು. ನಮ್ಮ ಈ ಮನೆಯ ಕಕ್ಕಸ್ಗಂತೂ ಯಾವಾಗಲೂ ಹಂದಿಗಳು ದಾಳಿಯಿಟ್ಟಿರುತಿದ್ದವು. ಒಂದು ದಿನ ಹೀಗೆ ನಾನು ನನ್ನ ತಮ್ಮಂದಿರು ಸೇರಿ ಹಂದಿಗಳನ್ನು ಹೊಡೆದು ಬೆರಸುತ್ತಿರುವಾಗ ತೇಜಸ್ವಿ ಬಂದ್ರು. ‘ಈ ಹಂದಿಗಳಿಂದ ಗೋಳಾಗ್ಬಿಟ್ಟಿದೆ ಮಾರಾಯ್ರ. ಕೆಟ್ಟ ದುನರ್ಾತದಲ್ಲಿ ಇರಕ್ಕೇ ಸಾಧ್ಯವಿಲ್ಲ. ಬೇರೆ ಬಾಡಿಗೆ ಮನೆ ಹುಡುಕೋದೆ ಸೈ’ ಎಂದು ಅವರತ್ರ ಹೇಳಿದೆ. ‘ಒಂಟಿಕೊಪ್ಪಲಿನ ಹಲವು ಮನೆಗಳಲ್ಲಿ ಇದೇ ಕಥೆ ಕಣ್ರಿ, ದಯಾನಂದ ಪಕ್ಕದ ಪಡುವಾರಳ್ಳಿಯ ಯಾರಾದ್ರೂ ರೈತರ ಮನೆಯಿಂದ ಕಬ್ಬಿಣದ ಹಾರೆಕೋಲನ್ನು ಸಂಜೆ ವಾಪಾಸ್ ಕೊಡ್ತೀವಂತ ಹೇಳಿ ತಂದಿಡು. ಆ ದಗಡಿ ಹಂದಿನ ಮತ್ತೆ ಈ ಕಡೆ ಸುಳಿಯದಂತೆ ಹಲ್ಲು ಚೆಲ್ಲಸ್ತೀನಿ’ ಎಂದು ಹೇಳಿ ಹೋದರು. ನಾನು, ದಯಾ ಇಬ್ಬರೂ ಆವತ್ತೆ ನಮ್ಮ ಗುರ್ತಿನ ಜಟಕಾ ಗಾಡಿ ಮಾಲೀಕ ಪುಟ್ಟಸ್ವಾಮಿಯಿಂದ ಹಾರೆಕೋಲು ಕೇಳಿ ತಂದಿಟ್ಟುಕೊಂಡೆವು. ಮರುದಿನ ತೇಜಸ್ವಿ ಹಂದಿಗಳು ಬ್ರೇಕ್ ಫಾಸ್ಟ್ಗೆ ಬರುವ ಸಮಯಕ್ಕೆ ಸರಿಯಾಗಿ ಬಂದರು. ಕಕ್ಕಸ್ಸಿಗೆ ಹಂದಿಗಳು ಕನ್ಸರ್ವೆನ್ಸಿ ಮೂಲಕ ಬರುವಾಗ ನನಗೆ ಸೂಕ್ಷ್ಮ ಕೊಡು ಎಂದು ದಯಾನಿಗೆ ಹೇಳಿ ಹಂದಿ ಬಂದು ತನ್ನ ಬ್ರೇಕ್ ಫಾಸ್ಟ್ಗೆ ಬಾಯಿ ಹಾಕಿದ ಕೂಡಲೇ ದಯಾನಿಂದ ಸೂಚನೆ ಪಡೆದು ರೆಡಿಯಾಗಿದ್ದ ತೇಜಸ್ವಿ ಹಾರೆಕೋಲಿಂದ ಅದರ ತಲೆಗೆ ಸರಿಯಾಗಿ ಕೊಟ್ಟರು. ಹೊಡೆತ ತಿಂದ ಹಂದಿ ರಕ್ತ ಸುರಿಸುತ್ತಾ ಕಿರ್ರೋ ಮರ್ರೋ ಎಂದು ಎಂದು ಕೂಗಿಕೊಳ್ಳುತ್ತಾ ರಸ್ತೆ ಬದಿ ಓಡಿತು. ಅದರ ಜೊತೆಯಲ್ಲಿದ್ದ ಹಿಂಡು ಹಂದಿಗಳು ಪ್ರಾಣಭಯದಿಂದ ಅದರ ಹಿಂದೆ ಕೂಗಿಕೊಳ್ಳುತ್ತಾ ಓಡಿದವು. ‘ದಯಾನಂದ ಇನ್ನು ಈ ಕಡೆ ಹಂದಿಗಳು ತಲೆ ಹಾಕಿದರೆ ಕೇಳು. ಇಷ್ಟು ಮಾಡಲಿಕ್ಕೆ ನಿನಗೆ ತಿಳಿಯಲಿಲ್ಲ’ ಎಂದರು ತೇಜಸ್ವಿ. ಅದಾದಮೇಲೆ ನಾವಿಬ್ಬರು ಪೇಟೆಗೆ ಹೋಗಿ ಓಡಾಡಿಕೊಂಡು ವಾಪಾಸ್ ಬಂದಾಗ ನಮ್ಮನೆ ಎದುರಿಗೆ ಬಹಳಷ್ಟು ಜನ ಸೇರಿದ್ದಾರೆ. ತೇಜಸ್ವಿ ಹಾರೆಕೋಲನ್ನು ಹಂದಿಗೆ ಇಡುಕಿದ ಹೊಡ್ತಕ್ಕೆ ಹಂದಿ ಪ್ರಾಣ ಬಿಟ್ಟಿರಲಿಲ್ಲ ಅಷ್ಟೆ. ಅದರ ಸ್ಥಿತಿ ಆಗಲೋ ಈಗಲೋ ಎಂಬಂತೆ ಇತ್ತು. ‘ಅದರ ಮಾಲೀಕ ಕೆಂಪ ಎಂಬಾತ ತನ್ನ ಕಡೆಯ ಜನರನ್ನು ಕರೆದುಕೊಂಡು ಜಗಳಕ್ಕೆ ಬಂದಿದ್ದಾನೆ’ ಎಂದು ಪುಟ್ಟಸ್ವಾಮಿ ತಿಳಿಸಿದ. ಪಡುವಾರಳ್ಳಿಯಲ್ಲಿ ಹಳ್ಳವೊಂದಿತ್ತು ಅದರ ಬದಿಯಲ್ಲಿ ಹಂದಿಯನ್ನು ಇಳಿಸಿದರು. ನನ್ನ ಬಳಿ 50 ರೂ ದಂಡ ಕಟ್ಟಿಸಿಕೊಳ್ಳುವುದು ಹಾಗೂ ಸತ್ತ ಹಂದಿಯನ್ನು ಮೂರು ಪಾಲು ಮಾಡುವುದೆಂದು ತೀಮರ್ಾನಿಸಿದರು. ಒಂದು ಪಾಲು ಅದರ ಮಾಲೀಕನಿಗೆ, ಇನ್ನೊಂದು ಪಾಲು ಪಂಚಾಯ್ತಿದಾರರಿಗೆ ಅಂದರೆ ಹಂದಿ ಸಂಬಂಧವಾಗಿ ಕೆಂಪನ ಜೊತೆ ನನ್ನ ಮೇಲೆ ಜಗಳಕ್ಕೆ ಬಂದಿದ್ದರಲ್ಲ ಅವರಿಗೆ, ಮತ್ತು ಮೂರನೇಯ ಪಾಲು ತಪ್ಪಿತಸ್ಥನಾದ ನನಗೆ ಮಾಡಿದ ತಪ್ಪಿಗೆ ದಂಡ ಕಟ್ಟುತಿದ್ದೇನಲ್ಲ ಅದರ ಬದಲಿಗೆ ಹಂದಿ ಮಾಂಸ. ಆದರೆ ನಾವು ಮನೆಯಿಂದ ಹೊರಡುವಾಗಲೇ ‘ಆ ಹಂದಿಯ ಮಾಂಸವನ್ನ ಮನೆಗೇನಾದ್ರೂ ತಂದ್ರೆ ನಾನು ಸುಮ್ಮನಿರಲ್ಲ’ ಎಂದು ಚಂದ್ರಾ ಎಚ್ಚರಿಕೆ ಕೊಟ್ಟೆ ಕಳಿಸಿದ್ದಳು. ಜೊತೆಗೆ ಅದು ದಿನವೂ ಬ್ರೇಕ್ ಫಾಸ್ಟಿಗೆ ಬರುತಿದ್ದುದನ್ನೂ ಕಣ್ಣಾರೆ ಕಂಡಿದ್ದ ನನಗೆ ಹೇಸಿಗೆಯಾಗಿ ‘ನಮ್ಮ ಪಾಲಿನ ಮಾಂಸ ಬೇಡ’ ಎಂದು ಹೇಳಿಬಿಡೋಣ ಎಂದುಕೊಂಡೆ. ಆದರೆ ಅಡುಗೆಯ ಅಣ್ಣಯ್ಯಗೌಡ್ರಿದ್ದೋರು ‘ಶಾಮಯ್ಯ, ನಿಂಗೊತ್ತಾಗಲ್ಲ ಮಾಂಸ ಬಹಳ ಚೆನ್ನಾಗಿದೆ. ಕಡಿಮೆ ಅಂದ್ರೂ ನಮ್ಮ ಪಾಲಿಗೆ 10 ಕೆ.ಜಿ. ಮಾಂಸ ಬರತ್ತೆ. ನೂರು ರೂಪಾಯಿ ಆಗತ್ತೆ 10 ಕೆ.ಜಿಗೆ. ಅದನ್ಯಾಕೆ ಇವರಿಗೆ ಬಿಡೋದು. ಹಂದಿಯ ಕಳ್ಳು ತೆಗೆದು ಹಾಕಿದರೆ ಅಲ್ಲಿಗೆ ಅದು ತಿಂದಿದ್ದೇನೂ ಉಳಿಯಲ್ಲ’ ಎಂದರು. ‘ಇರಬಹುದು ಮಾರಾಯ್ರೆ ಆದರೆ ನಾವು ಅದು ತಿನ್ನೋದನ್ನ ನೋಡಿಬಿಟ್ಟಿರೋದ್ರಿಂದ ನಮಗೆ ತಿನ್ನಕೆ ಹೇಸಿಗೆ ಆಗತ್ತೆ. ಚಂದ್ರಾ ಬೇರೆ ತರಲೇ ಕೂಡದು ಅಂತ ಹೇಳಿ ಕಳಿಸಿದ್ದಾಳೆ. ಇದನ್ನ ತಗಂಡು ಹೋದ್ರೆ ವಾರಗಟ್ಟಲೆ ವಾಂತಿ ಮಾಡಿಕೊಳ್ತಾಳೆ. ದುಡ್ಡು ಹೋದ್ರು ಪರವಾಗಿಲ್ಲ ಮಾಂಸ ಬೇಡವೇ ಬೇಡ’ ಎಂದೆ. ಅಲ್ಲಿಗೂ ಅವರು ಸುಮ್ಮನಾಗದೇ ದಯಾನಂದನನ್ನು ಈ ವಿಷಯದಲ್ಲಿ ಒಪ್ಪಿಸಲು ಪ್ರಯತ್ನಿಸಿದರು. ಅವನಿದ್ದೋನು ನನ್ನ ಕಡೆ ಕೈ ತೋರಿಸಿ ‘ಅಣ್ಣಯ್ಯ ಹ್ಯಾಗೆ ಹೇಳ್ತಾರೋ ಹಾಗೆ’ ಎಂದ. ನಾನು ಕೆಂಪನನ್ನು ಕರೆದು ದಂಡದ ಜೊತೆ ‘ನನ್ನ ಪಾಲಿನ ಮಾಂಸವನ್ನು ನೀನೆ ಇಟ್ಕೋ ಆದರೆ ಕಕ್ಕಸ್ ಹೊರೋಕೆ ಮಾತ್ರ ಬರದೇ ಇರಬೇಡ’ ಎಂದು ಹೇಳಿದೆ. ದಂಡವನ್ನೂ ಕಟ್ಟಿ, ಹಂದಿ ಮಾಂಸವನ್ನು ಅವರಿಗೆ ಕೊಟ್ಟು ಖಾಲಿ ಕೈಯಲ್ಲಿ ಮನೆಗೆ ಬರುತ್ತಿರುವಾಗ ದಯಾನಂದ ಇದ್ದೋನು ಅಣ್ಣಯ್ಯ, ‘ಪ್ರತಿ ಭಾನುವಾರ ನಮ್ಮನಿಗೆ ಹಂದಿ ಮಾಂಸ ತರ್ತಿದ್ನಲ್ಲ ಅದನ್ನ ಎಲ್ಲಿಂದ ತರ್ತಿದ್ದೆ ಅನ್ಕಂಡಿದೀಯಾ, ಇಲ್ಲಿಂದಲೇ ತಗಂಬರ್ತಿದ್ದಿದು ಮತ್ತೆ ಕೆಂಪನೇ ರೆಡಿ ಮಾಡಿ ಕೊಡ್ತಿದಿದ್ದು’ ಎಂದ.]]>

‍ಲೇಖಕರು G

May 10, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬಿರಿಯಾನಿಯಿಂದ ಫಿರ್ನಿವರೆಗೆ..

ಬಿರಿಯಾನಿಯಿಂದ ಫಿರ್ನಿವರೆಗೆ..

ಕೆ ಮುದ್ದುಕೃಷ್ಣ  ಮೈಸೂರಿಗರಿಗೆ ಒಂದು ಸಿಹಿ ಸುದ್ದಿ. ಬಹಳ ವರ್ಷಗಳಿಂದ ದೊಡ್ಡ ಚರ್ಚ್ ಬಳಿ ಮಾತ್ರವೇ ಇದ್ದ ಪ್ರಸಿದ್ದ “ನಶೇಮನ್” ಹೋಟೆಲ್ ಈಗ...

ಪೂಜೆ!!

ಪೂಜೆ!!

ಎಸ್.ಜಿ.ಶಿವಶಂಕರ್ ನನ್ನ ಚಡ್ಡಿ ಫ್ರೆಂಡು ಸುಬ್ಬು ಯಾನೆ ಸುಭಾಶ್ ಲಂಚ್‍ಗೆ ಮುಂಚೆ ಮನೆಗೆ ಹೋಗಿದ್ದು ತಿಳಿದು ಆತಂಕಗೊಂಡೆ. ಕಾರಣ...

ಇದು ನನ್ನ ಸವಾಲ್..

ಇದು ನನ್ನ ಸವಾಲ್..

ನಾಗೇಂದ್ರ ಶಾ  ಹೀಗೊಂದು ಹೋಟ್ಲು ರಾಜರಾಜೇಶ್ವರಿ ನಗರದಲ್ಲಿ. ಹೆಸರಿಗೂ ಒಳಗಿನ ಊಟ, ತಿಂಡಿಗೂ ಸಂಬಂಧವಿಲ್ಲ. ಒಳ ಹೊಕ್ಕರೆ ಅಪ್ಪಟ ದೇಸಿ ಊಟ....

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: