ಟೈಮ್ ಪಾಸ್ ಕಡ್ಲೆ ಕಾಯ್ : ’ಇದೆ೦ಗೇ?!’

ಚಲನಚಿತ್ರಗಳು ನಮಗರಿವಾಗದಂತೆಯೇ ಕಲಿಸಿಕೊಡುವ ಪಾಠಗಳು..

– ರ೦ಜಿತ್

ಕಾಫ಼ೀಕ್ಲಬ್ ಹಾಲಿವುಡ್ ಹೇಳಿಕೊಡುವ ಪಾಠಗಳು : ೧. ಕುಂಗ್ ಫು ಹೇಳಿಕೊಡುವುದು ಮತ್ತು ಅಭ್ಯಾಸ ಮಾಡುವುದು ಬಿಟ್ಟರೆ ಚೈನೀಸ್ ಜನರಿಗೆ ಬೇರೆ ಕೆಲ್ಸ ಇಲ್ಲ. ೨. ಶೇ ೫೦ ಕ್ಕೂ ಹೆಚ್ಚು ಅಮೇರಿಕನ್ನರು FBI / CIA ಏಜೆಂಟುಗಳಾಗಿ ಸದಾ ಮಫ್ತಿಯಲ್ಲಿರ್ತಾರೆ. ೩. ಅನ್ಯಗ್ರಹಜೀವಿಗಳು ಯಾವಾಗಲೂ ಅಮೇರಿಕಾವನ್ನೇ ಟಾರ್ಗೆಟ್ ಮಾಡ್ತಾರೆ. ೪. ಅಮೇರಿಕಾದಲ್ಲಿ ಮಾತ್ರ ನೀವು ರಕ್ತಪಿಪಾಸು (vampires), ಸ್ಪೈಡರ್ ಮ್ಯಾನ್, ಬ್ಯಾಟ್ ಮ್ಯಾನ್ ರನ್ನು ನೋಡಬಹುದು   ಬಾಲಿವುಡ್ ಕಲಿಸಿಕೊಡುವುದು : ೧. ವಿಲನ್ ಜೊತೆಗೆ ಫೈಟ್ ಮಾಡುವಾಗ ಚೂರೂ ನೋವಾಗದ ಹೀರೋ ಗೆ, ಹೀರೋಯಿನ್ನು ಗಾಯ ತೊಳೆವಾಗ ಇನ್ನಿಲ್ಲದಷ್ಟು ನೋವು ಬರುತ್ತೆ. ೨. ಪತ್ತೇದಾರರು / ಪೋಲೀಸರು ಯಾವಾಗಲೂ ಸಸ್ಪೆಂಡ್ ಆದ ಮೇಲೆಯೇ ಉತ್ತಮವಾಗಿ ಕೆಲಸ ಮಾಡಬಲ್ಲರು. ೩. ಹೀರೋ ರಸ್ತೆಯಲ್ಲಿ ಕುಣಿಯಲು ಶುರುಮಾಡಿದಾಗ ರಸ್ತೆಯಲ್ಲಿ ಹೋಗುವವರೆಲ್ಲರಿಗೂ ಸ್ಟೆಪ್ಸ್ ಹಾಕುವುದು ಗೊತ್ತಿರುತ್ತೆ. ೪. ಬಾಂಬ್ ನ ವೈರ್ ತುಂಡರಿಸುವಾಗ ಹೀರೋ ಯಾವಾಗಲೂ ಸರಿಯಾದ ವೈರ್ ನ್ನೇ ತುಂಡು ಮಾಡ್ತಾನೆ.   ಕನ್ನಡ ಫಿಲಮ್ ಗಳು ತಿಳಿಸುವ ಅಂಶಗಳು : ೧. ಹೀರೋ ವಿಲನ್ ಗೆ ಹೊಡೆವಾಗಲೆಲ್ಲ “ಡಿಶುಂ” ಅನ್ನುವ ಶಬ್ದ ಬರುತ್ತೆ. ಪಿಸ್ತೂಲ್ ನಿಂದ ’ಡಿಶ್ಕ್ಯಾಂ’ ಅನ್ನುವ ಸದ್ದು ಬರುತ್ತೆ. ೨. ನೋಡೋಕೆ ಕೆಟ್ಟದಾಗಿರುವವರೆಲ್ಲ ವಿಲನ್ ಗಳಾಗಿರ್ತಾರೆ. ೩. ಹೀರೋ ಚಿತ್ರದಲ್ಲಿ ಮೆಕ್ಯಾನಿಕ್ ಪಾತ್ರ ಮಾಡುತ್ತಿದ್ದರೂ ರಸ್ತೆಯಲ್ಲಿ ಅವನು ದೊಡ್ಡ ’ಹೀರೋ’ ಎಂಬಂತೆ ಅಲ್ಲಿನ ಜನರು ಅವನತ್ತಲೇ ನೋಡ್ತಾ ಇರ್ತಾರೆ. ೪. ಹೀರೋಯಿನ್ ಗೆಳತಿ ಹೀರೋಯಿನ್ ಗಿಂತಲೂ ಚೆನ್ನಾಗಿದ್ರೂನೂ ಹೀರೋ ಗೆ ಹೀರೋಯಿನ್ ಮೇಲೆಯೇ ಮೊದಲ ನೋಟದ ಪ್ರೀತಿ ಹುಟ್ಟುತ್ತದೆ.  ]]>

‍ಲೇಖಕರು G

June 7, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬಿರಿಯಾನಿಯಿಂದ ಫಿರ್ನಿವರೆಗೆ..

ಬಿರಿಯಾನಿಯಿಂದ ಫಿರ್ನಿವರೆಗೆ..

ಕೆ ಮುದ್ದುಕೃಷ್ಣ  ಮೈಸೂರಿಗರಿಗೆ ಒಂದು ಸಿಹಿ ಸುದ್ದಿ. ಬಹಳ ವರ್ಷಗಳಿಂದ ದೊಡ್ಡ ಚರ್ಚ್ ಬಳಿ ಮಾತ್ರವೇ ಇದ್ದ ಪ್ರಸಿದ್ದ “ನಶೇಮನ್” ಹೋಟೆಲ್ ಈಗ...

ಪೂಜೆ!!

ಪೂಜೆ!!

ಎಸ್.ಜಿ.ಶಿವಶಂಕರ್ ನನ್ನ ಚಡ್ಡಿ ಫ್ರೆಂಡು ಸುಬ್ಬು ಯಾನೆ ಸುಭಾಶ್ ಲಂಚ್‍ಗೆ ಮುಂಚೆ ಮನೆಗೆ ಹೋಗಿದ್ದು ತಿಳಿದು ಆತಂಕಗೊಂಡೆ. ಕಾರಣ...

ಇದು ನನ್ನ ಸವಾಲ್..

ಇದು ನನ್ನ ಸವಾಲ್..

ನಾಗೇಂದ್ರ ಶಾ  ಹೀಗೊಂದು ಹೋಟ್ಲು ರಾಜರಾಜೇಶ್ವರಿ ನಗರದಲ್ಲಿ. ಹೆಸರಿಗೂ ಒಳಗಿನ ಊಟ, ತಿಂಡಿಗೂ ಸಂಬಂಧವಿಲ್ಲ. ಒಳ ಹೊಕ್ಕರೆ ಅಪ್ಪಟ ದೇಸಿ ಊಟ....

೧ ಪ್ರತಿಕ್ರಿಯೆ

 1. ಅರುಣ್ ಕಾಸರಗುಪ್ಪೆ

  ಜೊತೆಗೆ ಇನ್ನೊಂದಿಷ್ಟು.
  ಹಾಲಿವುಡ್‌:
  1. ಅನ್ಯಗ್ರಹದ ಜೀವಿಗಳು ಭೂಮಿಯ ಮೇಲೆ ದಾಳಿ ಮಾಡಿದಾಗ, ಪ್ರಾಕೃತಿಕ ಅವಘಡಗಳು ಸಂಭವಿಸಿದಾಗ ಅವುಗಳಿಂದ ಭೂಮಿಯನ್ನು,ಸಕಲ ರಾಷ್ಟ್ರಗಳನ್ನು ಬದುಕಿಸುವ ಹೊಣೆಗಾರಿಕೆಯನ್ನು ಅಮೆರಿಕವೇ ಹೊತ್ತುಕೊಳ್ಳುತ್ತದೆ.
  2. ಅಮೆರಿಕದಲ್ಲಿ ಕಂಡುಬರುವ ವಿಲನ್‌ಗಳೆಲ್ಲರೂ ಹೆಚ್ಚಾಗಿ ರಷ್ಯನ್‌ ಮಂದಿ
  3. ಹೀರೋ ಎಷ್ಟು ಜನರನ್ನು ಹೊಡೆದು ಉರುಳಿಸಿದರೂ, ಎಷ್ಟು ರಕ್ತ ಚೆಲ್ಲಿದರೂ ಪೊಲೀಸರು ಅವರನ್ನು ಮುಟ್ಟುವ ಗೋಜಿಗೂ ಹೋಗುವುದಿಲ್ಲ. ನಮ್ಮಲ್ಲಿ ಕೊನೆಯಲ್ಲಾದರೂ ಬರುತ್ತಾರೆ!
  ಬಾಲಿವುಡ್‌‌:
  1. ಹೀರೋ ಎಷ್ಟೇ ಬಡವನೆಂದರೂ ತನ್ನ ಮನದನ್ನೆಯ ಜೊತೆ ಆತ ಡ್ಯುಯೆಟ್‌ ಹಾಡುವುದು ಯೂರೋಪಿನ ರಾಷ್ಟ್ರಗಳ ಟಾರು ರಸ್ತೆಯ ಮೇಲೇ !
  2. ಎಷ್ಟೇ ಬಡವರಾದರೂ ಒಮ್ಮೆ ಹಾಕಿದ ಬಟ್ಟೆಯನ್ನು ಮತ್ತೆ ಹಾಕುವುದಿಲ್ಲ.
  3. ಹೀರೋ ರಸ್ತೆಯಲ್ಲಿ ಮಾತ್ರವಲ್ಲ, ಕಾಡಿನಲ್ಲಿ ಸ್ಟೆಪ್ಸ್‌ ಹಾಕಿದರೂ ಹಿಂದಕ್ಕೆ ಒಂದಿಷ್ಟು ಕಾಡು ಜನರೂ ಸ್ಟೆಪ್ಸ್‌ ಹಾಕುತ್ತಾರೆ.
  4. ವಿಲನ್‌ ನಗರದ ಯಾವುದೇ ಭಾಗದಲ್ಲಿ ಅಪರಾಧ ಎಸಗಿದರೂ ನಮ್ಮ ‘ಹೀರೋ’ ಇನ್‌ಸ್ಪೆಕ್ಟರ್‌ ಅಲ್ಲಿರುತ್ತಾನೆ. ಆತನಿಗೆ ಜ್ಯೂರಿಡಿಕ್ಷನ್‌ಗಳ ಹಂಗಿಲ್ಲ!
  ಕನ್ನಡ ಫಿಲ್ಮ್‌ಗಳು:
  1. ಎಲ್ಲಾ ಕನ್ನಡ ಲೆಕ್ಚರರ್‌‌ಗಳೂ ಗುಬಾಲ್‌ಗಳೇ!

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: