ಟೈಮ್ ಪಾಸ್ ಕಡ್ಲೆ ಕಾಯ್ : ’ಕು೦ಡಗಳಿರುವುದೇ ಹೀಗೆ ಎನ್ನುವ ಬದಲು…!’

ಅಡ್ವಾನ್ಸಡ್ ಇನ್ ಪ್ರಿಂಟಿಂಗ್ ಟೆಕ್ನಾಲಜಿ

– ಕೆ ಅಕ್ಷತಾ

ಪ್ರೆಸ್ಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ನಾವೊಂದು ಲೆಟರ್ ಹೆಡ್ನ್ನು ಮಾಡಿಸಿಕೊಂಡಿರಲಿಲ್ಲ. ಅನಿವಾರ್ಯತೆ ಒದಗಿ ಬಂದಾಗ ರಾಜೀವ್ ತಾರಾನಾಥ್ ನೃಪತುಂಗ ಮುದ್ರಣಾಲಯ ಅಡ್ವಾನ್ಸಡ್ ಇನ್ ಪ್ರಿಂಟಿಂಗ್ ಟೆಕ್ನಾಲಜಿ ಅಂತ ಇಂಗ್ಲಿಷ್ನಲ್ಲಿ ಲೆಟರ್ ಹೆಡ್ ಬರೆದುಕೊಟ್ಟರು. ಪುಟ್ಟಪ್ಪನವರು ಈ ಲೆಟರ್ಹೆಡ್ನಲ್ಲಿದ್ದದನ್ನು ಓದಿ `ಅಡ್ವಾನ್ಸಡ್ ಇನ್ ಪ್ರಿಂಟಿಂಗ್ ಟೆಕ್ನಾಲಜಿ ಅಂದ್ರೆ ಅಡ್ವಾನ್ಸ್ ತಗಂಡು ಪ್ರಿಂಟ್ ಮಾಡಿಕೊಡುವವರು ಅಂತ್ಲೊ?’ ಎಂದು ಕೇಳಿದ್ದರು. ಅವರು ಹಾಗೆ ಕೇಳೋದಕ್ಕೂ ಕಾರಣ ಇತ್ತು. ಪುಟ್ಟಪ್ಪನವರ ಪುಸ್ತಕಗಳೆಲ್ಲವು ವೆಸ್ಲೆ ಪ್ರೆಸ್ನಲ್ಲಿ ಪ್ರಿಂಟಾಗ್ತಾ ಇದ್ವು. ತೇಜಸ್ವಿ ನಾವು ಪ್ರೆಸ್ ಮಾಡಿ ಎಷ್ಟೊ ದಿನಗಳ ಬಳಿಕ ಪುಟ್ಟಪ್ಪನವರ `ಕೃತ್ತಿಕೆ’ ಕವನಸಂಕಲನವನ್ನು ನಮ್ಮಲ್ಲಿ ಪ್ರಿಂಟ್ ಮಾಡ್ಲಿಕ್ಕೆ ತಂದ್ರು. ಈಗಿರೋ ಟೈಪ್ಸ್ ಎಲ್ಲ ಹಳತಾಗಿದೆ. ಬೃಂದಾವನ ಸೀರಿಸ್ ಅಂತ ಹೊಸ ತರದ್ದು ಬಂದಿದೆ. ಈ ಪುಸ್ತಕವನ್ನು ಅದರಲ್ಲೆ ಪ್ರಿಂಟ್ ಮಾಡಣಾ ಅಂತ ಆರ್ಡರ್ ಕೊಟ್ವಿ. ಬೃಂದಾವನ ಸೀರಿಸ್ ಬರೋದರ ಒಳಗೆ ತೇಜಸ್ವಿ ಪ್ರೆಸ್ ಬಿಟ್ಟು ಮೂಡಿಗೆರೆಗೆ ಹೋದ್ರು. ಅವರು ಹೋದ ಬಳಿಕ ಆರ್ಡರ್ ಮಾಡಿದ್ದ ಹೊಸ ನಮೂನೆಯ ಟೈಪ್ಸ್ ಸರಬರಾಜು ಆಯಿತು. ಆದರೆ ಅದನ್ನು ಬಿಡಿಸಿಕೊಳ್ಳಲು ಎರಡು ಸಾವಿರ ರೂಪಾಯಿ ಕಟ್ಟಬೇಕಿತ್ತು. ಪುಟ್ಟಪ್ಪನವರ ಪುಸ್ತಕವೇ ತಾನೇ ಪ್ರಿಂಟ್ ಆಗೋದು; ಅವರ ಹತ್ರ ಅಡ್ವಾನ್ಸ್ ರೂಪದಲ್ಲಿ ಹಣ ಪಡೆದು ಇದಕ್ಕೆ ಕೊಡಣಾ ಅಂತ್ಹೇಳಿ ಅವರ ಮನೆಗೆ ಹೋಗಿ ಅಡ್ವಾನ್ಸ್ ಕೇಳಿದೆ. ಅವ್ರಿದ್ದೋರು `ಚೈತ್ರನ ಹಾಸ್ಟೆಲ್ ಫೀಸ್ ಕಟ್ಟಲಿಕ್ಕೆ ದುಡ್ಡು ಹೊಂದಿಸ್ತಿದೀನಿ. ಅಡ್ವಾನ್ಸ್ ಕೊಡಕ್ಕೆ ದುಡ್ಡಿಲ್ಲ. ವೆಸ್ಲೆ ಪ್ರೆಸ್ನಲ್ಲಿ ಯಾವತ್ತೂ ಅಡ್ವಾನ್ಸ್ ಕೊಟ್ಟಿಲ್ಲ. ಪುಸ್ತಕ ಪ್ರಿಂಟ್ ಆದಮೇಲೆ, ಅದೂ ಏನೂ ತಪ್ಪುಗಳಿಲ್ಲ ಅಂತ ಖಾತ್ರಿ ಆದ್ಮೇಲೆ ಹಣ ಕೊಡೋದು. ಪುಸ್ತಕ ಪ್ರಿಂಟ್ ಮಾಡಿಕೊಂಡು ಬಾ. ಆಮೇಲೆ ದುಡ್ಡು ಕೊಡ್ತೀನಿ’ ಅಂದ್ರು. ಸರಿಯಾಗಿ ಪ್ರೂಫ್ ತಿದ್ದದೇ ಹೋದರೆ ಎಂತಹ ಅನಾಹುತವಾಗುತ್ತದೆ ಎಂಬುದಕ್ಕೆ ಸುಜನಾರ ಪದ್ಯವೇ ಉದಾಹರಣೆ. ಅವರು `ಕುಂಡಗಳಿರುವುದೇ ಹೀಗೆ’ ಎಂದು ಪದ್ಯ ಬರೆದುಕೊಟ್ಟರೆ `ಕುಂಡೆಗಳಿರುವುದೆ ಹೀಗೆ’ ಎಂದು ಅಚ್ಚು ಮಾಡಿದ್ದೆ. ಬೇಕಂತ ಹಾಗೆ ಮಾಡಿದ್ದಲ್ಲ ಸರಿಯಾಗಿ ಪ್ರೂಫ್ ನೋಡದೆ ಹೋದದ್ದರಿಂದಾಗಿ ಹಾಗಾಗಿತ್ತು. ನಾರಾಯಣಶೆಟ್ಟರ ಗಮನಕ್ಕೆ ಬಂದರೂ ಅವರು ಒಂದು ಚೂರು ಸಿಟ್ಟಾಗಲಿಲ್ಲ.  ]]>

‍ಲೇಖಕರು G

May 25, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬಿರಿಯಾನಿಯಿಂದ ಫಿರ್ನಿವರೆಗೆ..

ಬಿರಿಯಾನಿಯಿಂದ ಫಿರ್ನಿವರೆಗೆ..

ಕೆ ಮುದ್ದುಕೃಷ್ಣ  ಮೈಸೂರಿಗರಿಗೆ ಒಂದು ಸಿಹಿ ಸುದ್ದಿ. ಬಹಳ ವರ್ಷಗಳಿಂದ ದೊಡ್ಡ ಚರ್ಚ್ ಬಳಿ ಮಾತ್ರವೇ ಇದ್ದ ಪ್ರಸಿದ್ದ “ನಶೇಮನ್” ಹೋಟೆಲ್ ಈಗ...

ಪೂಜೆ!!

ಪೂಜೆ!!

ಎಸ್.ಜಿ.ಶಿವಶಂಕರ್ ನನ್ನ ಚಡ್ಡಿ ಫ್ರೆಂಡು ಸುಬ್ಬು ಯಾನೆ ಸುಭಾಶ್ ಲಂಚ್‍ಗೆ ಮುಂಚೆ ಮನೆಗೆ ಹೋಗಿದ್ದು ತಿಳಿದು ಆತಂಕಗೊಂಡೆ. ಕಾರಣ...

ಇದು ನನ್ನ ಸವಾಲ್..

ಇದು ನನ್ನ ಸವಾಲ್..

ನಾಗೇಂದ್ರ ಶಾ  ಹೀಗೊಂದು ಹೋಟ್ಲು ರಾಜರಾಜೇಶ್ವರಿ ನಗರದಲ್ಲಿ. ಹೆಸರಿಗೂ ಒಳಗಿನ ಊಟ, ತಿಂಡಿಗೂ ಸಂಬಂಧವಿಲ್ಲ. ಒಳ ಹೊಕ್ಕರೆ ಅಪ್ಪಟ ದೇಸಿ ಊಟ....

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This