ಟೈಮ್ ಪಾಸ್ ಕಡ್ಲೇಕಾಯ್: ಮೊಟ್ಟೆಗೂ ಕನ್ನ!!

ಕಡಿದಾಳು ಶಾಮಣ್ಣ ನಿಮಗೆ ಗೊತ್ತು, ಅವರ ಹೋರಾಟ ನಿಮಗೆ ಗೊತ್ತು, ಕೆ ಅಕ್ಷತಾ ನಿಮಗೆ ಗೊತ್ತು. ಅವರು ಶಾಮಣ್ಣನವರ ಅನುಭವಗಳನ್ನ ನಿರೂಪಿಸಿರುವುದು ಗೊತ್ತು. ಅಹರ್ನಿಶಿ ಪ್ರಕಾಶನ ನಿಮಗೆ ಗೊತ್ತು. ಅವರು ಈ ಕೃತಿಯನ್ನು ಹೊರತಂದಿರುವುದು ಗೊತ್ತು. ಈ ಎಲ್ಲಾ ಗೊತ್ತು..ಗೊತ್ತು..ಗಳ ಮಧ್ಯೆ ಗೊತ್ತಿಲ್ಲದ ಸಂಗತಿ ಇಲ್ಲಿದೆ. ಅದು ಕಡಿದಾಳು ಶಾಮಣ್ಣನವರ ಮಹಾ ಹಾಸ್ಯಪ್ರಜ್ಞೆ. ಅವರ ಕೃತಿಯಿಂದ ಆಯ್ದ ಇಂತಹ ಪುಟ್ಟ ಜ್ಹಲಕ್ ಗಳು ಆಗೀಗ ನಿಮ್ಮ ಮುಂದೆ ಇಡುತ್ತೇವೆ– ಅಣ್ಣಯ್ಯ ಹೆಗ್ಡೇರ ತಮ್ಮಂದಿರು ಶ್ರೀನಿವಾಸ ಮತ್ತು ಕಿಟ್ಟಯ್ಯ ಪೇಟೆಯಿಂದ ಬಂದಾಗ ಅವರಿಗಾಗಿ ಮೂಡುವಳ್ಳಿ ಅಜ್ಜಿ ಮೊಟ್ಟೆ ತಂದಿಡೋರು. ಅದರಲ್ಲಿ ನಮಗೇನು ಪಾಲಿರಲಿಲ್ಲ. ಆದರೆ ಮೊಟ್ಟೆ ನೋಡ್ತಿದ್ದಂಗೆ ತಿನ್ನೊ ಆಸೆ ತಡೆಯಕಾಗ್ತಿರಲಿಲ್ಲ. ಅದಕ್ಕೆ ಒಂದು ಉಪಾಯ ಕಂಡುಕೊಂಡಿದ್ದೆ. ಮೊಟ್ಟೆ ಕದ್ದು ಅದರ ಚಿಪ್ಪನ್ನು ಸೂಜಿಯಿಂದ ಚುಚ್ಚಿ ಅತಿ ಸಣ್ಣ ರಂಧ್ರ ಮಾಡಿ ಅದರ ಮೂಲಕ ಒಳಗಿನ ಲೋಳೆಯನ್ನು ಹೀರಿ ಮತ್ತೆ ಖಾಲಿ ಚಿಪ್ಪನ್ನ ಅದಿರೋ ಜಾಗದಲ್ಲಿ ಇಟ್ಟು ಸುಮ್ನಿದ್ದು ಬಿಡ್ತಿದ್ದೆ. ಮೊಟ್ಟೆಯ ಹೊರಗಿನ ಆಕಾರ ಇದ್ದಂಗೆ ಇರ್ತಿತ್ತು. ಒಳಗೆ ಮಾತ್ರ ಖಾಲಿಯಾಗಿರ್ತಿತ್ತು. ಮೊಟ್ಟೆಗೆ ತೂತು ಕೊರೆದಿರೋದು ಕಾಣಲೇಬಾರದು ಹಾಗೆ, ಚುಚ್ಚಬೇಕಿತ್ತು. ಅದೇನು ಸುಲಭದ್ದಾಗಿರಲಿಲ್ಲ. ಹಠಯೋಗ ಸಾಧನೆ ಮಾಡಿದಷ್ಟು ಕಠಿಣವಾಗಿರೋದು. ಆದರೆ ಮೊಟ್ಟೆ ತಿನ್ನೋ ಆಸೆ ಎಂಥ ಹಠಯೋಗದ ಪ್ರಲೋಭನೆಗೂ ಪ್ರೇರೇಪಿಸುವಷ್ಟಿತ್ತು. ಅಂತೂ ಮೊಟ್ಟೆ ತೂತು ಮಾಡಿ ಹೊರಗಿನ ಚಿಪ್ಪಿನ ಮೇಲೆ ಚೂರು ಲೋಳೆ ಕಲೆ ಬೀಳಬಾರದು ಹಾಗೆ ಎಚ್ಚರಿಕೆಯಿಂದ ಹೀರ್ತಿದ್ದೆ. ಕಿಟ್ಟಯ್ಯ ಮಾವ ಅ ಮೊಟ್ಟೆಗಳನ್ನ ಎತ್ತಿ ಹಿಡಿದು, ಅಯ್ಯೋ ಎಷ್ಟು ಹಗುರವಾಗಿದೆ ಅಂತ ಅಚ್ಚರಿಯಿಂದ ಒಡೆದು ನೋಡೋರು. ಅಲ್ಲೇನಿರ್ತಿತ್ತು? ಬರಿ ಚಿಪ್ಪು. ಮೊದ ಮೊದಲು ಸತ್ಯ ಏನು ಅಂತ ತಿಳೀಲಿಲ್ಲ. ನಾನು ಇವ್ರಿಗೆ ಗೊತ್ತಾಗೋಕೆ ಸಾಧ್ಯವೇ ಇಲ್ಲ ಅನ್ನೋ ನಿಧರ್ಾರಕ್ಕೆ ಬಂದು ನಿರಾಂತಕವಾಗಿ ನನ್ನ ಕಳ್ತನ ಮುಂದುವರೆಸಿದೆ. ಆದರೆ ನಿರಂತರವಾಗಿ ಮೊಟ್ಟೆ ಲೋಳೆ ಕಳ್ತನ ಆಗಲಿಕ್ಕೆ ಶುರುವಾದಾಗ ಇದು ಯಾರದ್ದೋ ಮಾಸ್ಟರ್ ಮೈಂಡ್ ಇಲ್ಲಿ ಕೆಲಸ ಮಾಡಿದೆ ಅನ್ನೋ ನಿಧರ್ಾರಕ್ಕೆ ಬಂದ ಮನೆಯವ್ರು ಕೊನೆಗೊಂದು ದಿನ ರೆಡ್ ಹ್ಯಾಂಡಾಗಿ ಕಳ್ಳನನ್ನು ಹಿಡಿದು ನನ್ನ ಕೆಲಸಕ್ಕೆ ಕಲ್ಲು ಹಾಕಿದ್ರು.]]>

‍ಲೇಖಕರು G

February 10, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬಿರಿಯಾನಿಯಿಂದ ಫಿರ್ನಿವರೆಗೆ..

ಬಿರಿಯಾನಿಯಿಂದ ಫಿರ್ನಿವರೆಗೆ..

ಕೆ ಮುದ್ದುಕೃಷ್ಣ  ಮೈಸೂರಿಗರಿಗೆ ಒಂದು ಸಿಹಿ ಸುದ್ದಿ. ಬಹಳ ವರ್ಷಗಳಿಂದ ದೊಡ್ಡ ಚರ್ಚ್ ಬಳಿ ಮಾತ್ರವೇ ಇದ್ದ ಪ್ರಸಿದ್ದ “ನಶೇಮನ್” ಹೋಟೆಲ್ ಈಗ...

ಪೂಜೆ!!

ಪೂಜೆ!!

ಎಸ್.ಜಿ.ಶಿವಶಂಕರ್ ನನ್ನ ಚಡ್ಡಿ ಫ್ರೆಂಡು ಸುಬ್ಬು ಯಾನೆ ಸುಭಾಶ್ ಲಂಚ್‍ಗೆ ಮುಂಚೆ ಮನೆಗೆ ಹೋಗಿದ್ದು ತಿಳಿದು ಆತಂಕಗೊಂಡೆ. ಕಾರಣ...

ಇದು ನನ್ನ ಸವಾಲ್..

ಇದು ನನ್ನ ಸವಾಲ್..

ನಾಗೇಂದ್ರ ಶಾ  ಹೀಗೊಂದು ಹೋಟ್ಲು ರಾಜರಾಜೇಶ್ವರಿ ನಗರದಲ್ಲಿ. ಹೆಸರಿಗೂ ಒಳಗಿನ ಊಟ, ತಿಂಡಿಗೂ ಸಂಬಂಧವಿಲ್ಲ. ಒಳ ಹೊಕ್ಕರೆ ಅಪ್ಪಟ ದೇಸಿ ಊಟ....

3 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: