ಟೈ೦ ಪಾಸ್ ಕಡ್ಲೆಕಾಯಿ: ಚೋರ್, ಚೋರ್!!

ಶೀನಣ್ಣ ಅಂತ ಕಡಿದಾಳು ಮಂಜಪ್ಪನವರ ಕೊನೆಯ ತಮ್ಮ. ಮೈಸೂರಿನಲ್ಲಿ ಡಾಕ್ಟರ್ ಆಗಿದ್ರು. ಯಾದವಗಿರಿಯಲ್ಲಿ ಆರ್.ಕೆ. ನಾರಾಯಣ್ ಮನೆ ಎದುರಿಗೆ ಶೀನಣ್ಣನ ಮನೆ. ಅವರ ಹೆಂಡತಿ ಹೆರಿಗೆಗೆ ಹೋಗಿದ್ದಾಗ `ನೀ ಬಂದು ಜೊತೆಗಿರು’ ಅಂತ ನನ್ನನ್ನ ಸ್ವಲ್ಪ ದಿನ ಅವರ ಮನೆಯಲ್ಲಿರಿಸಿಕೊಂಡಿದ್ರು. ಆ ಮನೆಯ ಒಂದು ಕೋಣೆಯನ್ನ ಡಾಕರ್್ರೂಮ್ ಮಾಡ್ಕಂಡು ಫೋಟೋ ಪ್ರಿಂಟ್ ಮಾಡ್ತಿದ್ವಿ.

ಒಂದಿನ ನಾನು ಶೀನಣ್ಣ ಇಬ್ರೂ ಇಲ್ಲದ ಹೊತ್ನಲ್ಲಿ ಆ ಮನೆಗೊಬ್ಬ ಕಳ್ಳ ನುಗ್ಗಿ ಬಿಟ್ಟಿದ್ದ. ಒಳಗಿಂದ ಚಿಲಕ ಹಾಕ್ಕಂಡು ವಸ್ತುಗಳನ್ನೆಲ್ಲ ಗಂಟು ಕಟ್ತಾ ಇರೋ ಹೊತ್ನಲ್ಲಿ ಶೀನಣ್ಣ ಬಂದು ಬಾಗಿಲು ತಳ್ಳಿದಾರೆ. ಯಥಾಪ್ರಕಾರ ಒಳಗೆ ಏನೋ ಶಬ್ದ ಆಗ್ತಿದೆ. ಆದರೆ ಬಾಗಿಲು ತೆಗೀತಿಲ್ಲ. ಶಾಮಣ್ಣ, ತೇಜಸ್ವಿ ಸೇರ್ಕಂಡು ಫೋಟೋ ಪ್ರಿಂಟ್ ಮಾಡ್ತಿದಾರೆ. `ಬಾಗಿಲು ತೆಗೆದ್ರೆ ಬೆಳಕಿಗೆ ಫೋಟೋ ಎಕ್ಸಫೋಸ್ ಆಗತ್ತೆ ಎಂದು ಬಾಗಿಲು ತೆಗಿತಿಲ್ಲ’ ಅಂತ ತಿಳ್ಕಂಡ ಶೀನಣ್ಣ ಸುಮ್ನೆ ಮನೆ ಮುಂದೆ ಕೈ ಕಟ್ಟಿಕೊಂಡು ಬಾಗಿಲು ತೆಗೆಯೋದನ್ನೆ ಕಾಯ್ತಾ ನಿಂತಿದಾರೆ. ಅಷ್ಟೊತ್ತಿಗೆ ನಾನು ಸೈಕಲ್ ಹೊಡ್ಕಂಡು ಅಲ್ಲಿಗೆ ಬಂದೆ. ನನ್ನನ್ನ ನೋಡಿದ್ದೆ ಅವರಿಗೆ ಆಶ್ಚಯರ್ಾಘಾತವಾಗಿ 1ಅಯ್ಯೋ, ನೀನು ಒಳಗಿದೀಯ ಅನ್ಕಂಡಿದ್ದೆ. ಹಂಗಾದ್ರೆ ಒಳಗಿರದು ಯಾರು? ಅಂತ ಕೇಳಿದರು. ಇಬ್ರಿಗೂ ಕಳ್ಳರು ಒಳಗೆ ನುಗ್ಗಿದಾರೆ ಅನ್ನೋದು ಅಂದಾಜಾಯ್ತು. ಪ್ಲಾನ್ ಮಾಡಿ ಕಳ್ಳನ್ನ ಹಿಡೀಬೇಕು ಅಂತೇಳಿ ಮುಂದಿನ ಬಾಗಿಲು ತೆಗೆಯದಂತೆ ಹೊರಗಡೆಯಿಂದ ಚಿಲಕಕ್ಕೆ ಕಡ್ಡಿ ಸಿಗಿಸಿ, ಇಬ್ರೂ ಹಿಂದ್ಗಡೆ ಬಾಗಿಲಿಂದ ಮನೆ ಒಳಗೆ ನುಗ್ಗಿದ್ವಿ. ಕಳ್ಳ ನಮ್ಮನ್ನು ನೋಡಿದ್ದೆ ಗಂಟು ಸಮೇತ ಓಡಿಕೊಂಡು ಹೋಗಿ ಮುಂದಿನ ಬಾಗಿಲನ್ನು ಜೋರಾಗಿ ತಳ್ಳಿದ. ಚಿಲಕ ಹಾಕಿದ ಮುಂದಿನ ಬಾಗಿಲಲ್ಲಿ ಒಂದು ತೆರಕಳ್ತು ಮತ್ತೊಂದು ತೆರಕಳಲಿಲ್ಲ. ಕಳ್ಳ ಕದ್ದ ವಸ್ತುಗಳನ್ನ ಎರಡು ಗಂಟು ಕಟ್ಟಿ ಒಂದು ಹೆಗಲಿಗೆ ಹಾಕ್ಕಂಡು, ಮತ್ತೊಂದನ್ನ ಕೈನಲ್ಲಿ ಹಿಡ್ಕಂಡಿದ್ದ ಜೊತೆಗೆ ನನ್ನ ಕ್ಯಾಮರವನ್ನು ಕದ್ದು ಹೆಗಲಿಗೆ ಹಾಕಂಡಿದ್ದ. ನಾವು ಹಿಂದಿನ ಬಾಗಿಲಿಂದ ಓಡಿ ಹಿಡಿಯೋ ಅಷ್ಟರಲ್ಲೆ ಅವನು ತೆರೆದ ಮುಂದಿನ ಒಂದೆ ಬಾಗಿಲಿಂದ ನುಸುಳಿ ಓಡಿದ. ಆಗ ಅವನ ಕೈಲಿದ್ದ ಗಂಟು ಅಲ್ಲೆ ಬಿಚ್ಚಿಕಳ್ತು. ಅದನ್ನ ಅಲ್ಲೆ ಬಿಟ್ಬಿಟ್ಟು ಮತ್ತೊಂದನ್ನ ಹೊತ್ಕಂಡು ಓಡ್ಲಿಕ್ಕೆ ಶುರುಮಾಡಿದ. ಅವನ ಹಿಂದೆ ನಾವು ಓಡಿದ್ವಿ. ಅಷ್ಟೊತ್ತಿಗೆ ಪಕ್ಕದ ಮನೆಯ ಹುಡುಗನೊಬ್ಬ ಗಲಾಟೆ ಕೇಳಿ ಮನೆ ಹತ್ರ ಬಂದವನು ನಮ್ಜೊತೆ ಸೇರಿ ಯಾದವಗಿರಿಯ ರೈಲ್ವೇ ಸ್ಟೇಷನ್ ಕಡೆ ಓಡ್ತಾ ಇದ್ದ ಕಳ್ಳನ್ನ ಹಿಂಬಾಲಿಸಿದ. ಮೂವರು ವೇಗವಾಗಿ ಓಡಿ ಇನ್ನೇನು ಕಳ್ಳನ್ನ ಹಿಡಿದೇ ಬಿಟ್ವಿ ಅನ್ನೋ ಹಂತದಲ್ಲಿ ಕಳ್ಳ ಇದ್ದವನು ಕ್ಯಾಮರಾವನ್ನು ನಮ್ಮ ಕಡೆ ಎಸೆದ. ನಮ್ಮ ಗಮನ ಕ್ಯಾಮರಾದ ಕಡೆ ಹೋಗಕ್ಕೂ ಕ್ಷಣಾರ್ಧದಲ್ಲಿ ಕಳ್ಳ ಗಂಟಿನೊಂದಿಗೆ ಮರೆಯಾದ.  ]]>

‍ಲೇಖಕರು G

April 11, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬಿರಿಯಾನಿಯಿಂದ ಫಿರ್ನಿವರೆಗೆ..

ಬಿರಿಯಾನಿಯಿಂದ ಫಿರ್ನಿವರೆಗೆ..

ಕೆ ಮುದ್ದುಕೃಷ್ಣ  ಮೈಸೂರಿಗರಿಗೆ ಒಂದು ಸಿಹಿ ಸುದ್ದಿ. ಬಹಳ ವರ್ಷಗಳಿಂದ ದೊಡ್ಡ ಚರ್ಚ್ ಬಳಿ ಮಾತ್ರವೇ ಇದ್ದ ಪ್ರಸಿದ್ದ “ನಶೇಮನ್” ಹೋಟೆಲ್ ಈಗ...

ಪೂಜೆ!!

ಪೂಜೆ!!

ಎಸ್.ಜಿ.ಶಿವಶಂಕರ್ ನನ್ನ ಚಡ್ಡಿ ಫ್ರೆಂಡು ಸುಬ್ಬು ಯಾನೆ ಸುಭಾಶ್ ಲಂಚ್‍ಗೆ ಮುಂಚೆ ಮನೆಗೆ ಹೋಗಿದ್ದು ತಿಳಿದು ಆತಂಕಗೊಂಡೆ. ಕಾರಣ...

ಇದು ನನ್ನ ಸವಾಲ್..

ಇದು ನನ್ನ ಸವಾಲ್..

ನಾಗೇಂದ್ರ ಶಾ  ಹೀಗೊಂದು ಹೋಟ್ಲು ರಾಜರಾಜೇಶ್ವರಿ ನಗರದಲ್ಲಿ. ಹೆಸರಿಗೂ ಒಳಗಿನ ಊಟ, ತಿಂಡಿಗೂ ಸಂಬಂಧವಿಲ್ಲ. ಒಳ ಹೊಕ್ಕರೆ ಅಪ್ಪಟ ದೇಸಿ ಊಟ....

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This