ಟೈ೦ ಪಾಸ್ ಕಡ್ಲೆ ಕಾಯ್ : ಗ್ಯಾಸ್ ಪ್ರಾಬ್ಲ೦!!

“ಗ್ಯಾಸ್ಟ್ರಿಕ್”ಪ್ರಾಬ್ಲಂ….!!!!

ಡಾ ಡಿ ಕೆ ಕೃಷ್ಣ ಮೂರ್ತಿ

ಕೊಳಲು ಮೊದಲೆಲ್ಲಾ ಯಾರಾದರೂ “ಗ್ಯಾಸ್ಟ್ರಿಕ್”ಪ್ರಾಬ್ಲಂ ಇದೇ ಸಾರ್ ಎಂದರೆ,ಅವರಿಗೆಲ್ಲೋ ಅಸಿಡಿಟಿ ಯಾಗಿ ಹೊಟ್ಟೆ ಉರಿ ಆಗಿರಬೇಕು ಎಂದುಕೊಳ್ಳುತ್ತಿದ್ದೆ.ಸಣ್ಣ ಸಣ್ಣ ಹುಡುಗರನ್ನೂ ಕರೆದುಕೊಂಡು ಬಂದು “ಇವನಿಗೆ ಗ್ಯಾಸ್ಟ್ರಿಕ್ ಪ್ರಾಬ್ಲಂ ಇದೆ,ಏನಾದರೂ ಔಷಧಿ ಕೊಡಿ ಸಾರ್”ಎಂದುಕೇಳಿದಾಗ, ‘ಇಷ್ಟು ಸಣ್ಣ ಹುಡುಗನಿಗೂ ಹೊಟ್ಟೆ ಉರಿ ಯಾಗುತ್ತದೆಯೇ ?’ಎನ್ನುತ್ತಿದ್ದೆ.”ಅವನಿಗೆ ಹೊಟ್ಟೆ ಉರಿ ಏನೂ ಇಲ್ಲಾ ಸಾರ್!ಗ್ಯಾಸ್ ಬಿಟ್ಟರೆ ಕೆಟ್ಟ ವಾಸನೆ. ಇವನ ಕಾಟದಿಂದ ಮನೇಲಿ ಯಾರೂ ಇರೋ ಹಂಗಿಲ್ಲಾ “ಎಂದು ಅಲವತ್ತು ಕೊಳ್ಳುತ್ತಿದ್ದರು.’ಗ್ಯಾಸ್ ಸಮಸ್ಯೆಗೆ’, “ಗ್ಯಾಸ್ಟ್ರಿಕ್”ಸಮಸ್ಯೆ ಎನ್ನುತ್ತಾರೆಂದು ಆಗ ಅರ್ಥವಾಯಿತು! ಸಾಮಾನ್ಯವಾಗಿ ಮಧ್ಯವಯಸ್ಸಿನ,ಅಥವಾ ವಯಸ್ಸಾದ ಗಂಡಸರಿಗೆ ಈ ಸಮಸ್ಯೆ ಹೆಚ್ಚು . ಅವರ “ಗ್ಯಾಸ್ಟ್ರಿಕ್ “ಸಮಸ್ಯೆ, ಸಶಬ್ಧವಾಗಿ ಡಂಗೂರ ಸಾರಿ ಎಲ್ಲರಿಗೂ ತಿಳಿಸುವಂತಹುದು.ಸಮಯ,ಸಂದರ್ಭ ಒಂದೂ ನೋಡದೆ ಹೊರ ಬಂದು, ಅವರನ್ನು ಪೇಚಿನಲ್ಲಿ ಸಿಗಿಸಿ ಬಿಡುತ್ತದೆ . ನಮ್ಮ ಪರಿಚಯದವರೊಬ್ಬರ ಮಗಳು ತನ್ನ ಕಾಲೇಜಿನ ಸಹಪಾಟಿಗಳನ್ನು ಮನೆಗೆ ಕರೆದುಕೊಂಡು ಬಂದು, “ಇವಳು ದೀಪ,ಇವಳು ಸ್ನೇಹ,ಇವಳು ರೂಪ……”ಅಂತ ತನ್ನ ತಂದೆಗೆ ಪರಿಚಯ ಮಾಡಿಕೊಡುತ್ತಿದ್ದಾಗ,ಅವರ ತಂದೆ ಸಶಬ್ಧವಾಗಿ ಗ್ಯಾಸ್ ಬಿಟ್ಟರು.ಆ ವಯಸ್ಸಿನ ಹುಡುಗಿಯರಿಗೆ ಮೊದಲೇ ನಗು ಜಾಸ್ತಿ!ಸಣ್ಣ ಪುಟ್ಟದ್ದಕ್ಕೆಲ್ಲಾ ಕಿಸ ಕಿಸನೇ ನಗುವ ವಯಸ್ಸು.ಆ ಶಬ್ಧಕ್ಕೆ ಬಂದ ಹುಡುಗಿಯರೆಲ್ಲಾ ಹೆದರಿಕೊಂಡು, “ಹೋ…….”ಎಂದು ನಗುತ್ತಾ ,ಚೆಲ್ಲಾ ಪಿಲ್ಲಿಯಾಗಿ ಹೊರಗೋಡಿದರು!!! ಅವರ ಮಗಳು ತನ್ನ ಸ್ನೇಹಿತೆಯರ ಎದುರಿಗೆ ಆದ ಅವಮಾನಕ್ಕೆ ,ತಂದೆಯ ಮೇಲೆ ಮುನಿಸಿಕೊಂಡು ಎರಡು ದಿನ ಮಾತು ಬಿಟ್ಟಳು! ನನ್ನ ಸ್ನೇಹಿತರೊಬ್ಬರ ಇಬ್ಬರು ಮಕ್ಕಳು ರಜಾ ಕಳೆಯಲೆಂದು ಅಜ್ಜಿಯ ಮನೆಗೆ ಹೋಗಿದ್ದರು.ರಾತ್ರಿ ಅಜ್ಜಿಯ ಪಕ್ಕ ಮಲಗಿದ್ದರು. ಬೆಳಿಗ್ಗೆ ಹಜಾರದಲ್ಲಿ ಮನೆ ಮಂದಿ ಎಲ್ಲಾ ಸೇರಿ,ಕಾಫಿ ಕುಡಿಯುತ್ತಿದ್ದಾಗ ಆ ಹುಡುಗರಲ್ಲೊಬ್ಬಅವರಮ್ಮನ ಬಳಿ ಹೋಗಿ ಅವರ ಅಜ್ಜಿಯನ್ನೇ ನೋಡುತ್ತಾ ಆಶ್ಚರ್ಯದಿಂದ “ಅಮ್ಮಾ …,ಹೆಂಗಸರೂ ಗ್ಯಾಸ್ ಬಿಡುತ್ತಾರಾ?”ಎಂದು ಪ್ರಶ್ನಿಸಿದ. ಪಾಪ ಅವನ ಅಜ್ಜಿಗೆ ಹೇಗಾಗಿರಬೇಡ! ಅವರು ನಾಚಿಕೆಯಿಂದ ಮುಖ ಕೆಂಪಗೆ ಮಾಡಿಕೊಂಡು ಅಡಿಗೆ ಮನೆ ಸೇರಿಕೊಂಡರೆ ,ಅಜ್ಜನೂ ಸೇರಿದಂತೆ ಮಿಕ್ಕವರೆಲ್ಲಾ ನಗು ತಡೆದು ಕೊಳ್ಳಲು ಒದ್ದಾಡುತ್ತಿದ್ದರಂತೆ!!! ಒಟ್ಟಿನಲ್ಲಿ “ಗ್ಯಾಸ್ಟ್ರಿಕ್ “ಪ್ರಾಬ್ಲಂನಿಂದ ಒದ್ದಾಡುವವರ ಕಥೆ , ಆಡುವಂತಿಲ್ಲ,ಅನುಭವಿಸುವಂತಿಲ್ಲ!!!]]>

‍ಲೇಖಕರು G

June 6, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

6 ಪ್ರತಿಕ್ರಿಯೆಗಳು

 1. D.RAVI VARMA

  ಈ ವಿಸಿಸ್ತ ಹಾಗು ಬಲು ಮುಜುಗರ ತರುವ ಸಮಸ್ಯಬಗ್ಗೆ ಜೋಗಿ ಅವರು ತಮ್ಮ ಇತ್ತೀಚಿನ ಫಾಸೆಬೂಕ್ ನಲ್ಲಿ ಒಂದು ಅದ್ಬುತ ಸನ್ನಿವೇಶ ಹಾಕಿದ್ದರೆ ಅದು ಹೀಗಿದೆ ಜೋಗಿ jokes
  ಇತ್ತೀಚಿನ ಬರಹಗಾರಲ್ಲಿ ನನಗೆ ಇಷ್ಟಾಗುವ ಲೇಖಕರಲ್ಲಿ ಜೋಗಿ ಕೂಡ ಒಬ್ಬರು. ಅವರ ಏನನ್ನೋ ಬರೆಯುತ್ತಾರೆ ಅನ್ನಿಸುವುದಿಲ್ಲ, ನಮ್ಮ ಪಕ್ಕದಲ್ಲೇ ಕೂತು ಒಂದು ಪಿಸುಮಾತು, ಒಂದು ಸಾಂತ್ವನ, ಒಂದು ಹಳಹಳಿಕೆ, ನಮ್ಮ ಅಂತರಂಗವನ್ನು ಮುಟ್ಟಿ ಎದೆತಟ್ಟಿ, ಬೆನ್ನು ತಟ್ಟುವ,,ಸಮಾದಾನಿಸುವ ಬರಹ ಅವರದು ,ittichege ಅವರ facebook.com /manasa joshi ಪುಸ್ತಿಕೆ horabandide. it is an excellent book ಒಮ್ಮೆ ಓದಿದರೆ ಮತ್ತೊಮ್ಮೆ ಓದಬೇಕೆನಿಸುವಸ್ತು ಚೆನ್ನಾಗಿದೆ ,ಅದು ನಮ್ಮ ನಿಮ್ಮ ಬದುಕಿನ ಘಟನೆಗಳನ್ನೇ ತಿರುಗಿ ನಮಗ e ಹೇಳುವಂತಿದೆ , ಆ ಪುಸ್ತಕದಲ್ಲಿರುವ jokesgalu ನನಗೆ ತುಂಬಾ a ಇಸ್ತವಾದವು .
  ಹೊಗಳು ಭಟರು
  ಶ್ರೀಮಂತ ಮನೆತನೆಕ್ಕೆ ಸೇರಿದ ಬರಹಗಾರರೊಬ್ಬರಿಗೆ ಹೊಗಳಿಸಿಕೊಳ್ಳುವ ಚಟ ,ಅದಕ್ಕೆಂದೇ ಅವರು ಒಂದಷ್ಟು hogalubhatarannu ಸಾಕಿಕೊಂಡಿದ್ದರು .ಅವರೆಲ್ಲ ಲೇಖಕರ ಮನೆಯಲ್ಲಿ ಸೇರಿ ಅವರನ್ನು ಆಗಾಗ kondaadutiddaru .
  ಅಂತಾ ಒಂದು ಔತಣ ಕೂಟದಲ್ಲಿ ಮೂವರ ಗೆಳೆಯರ ಜೊತೆ ಊಟ ಮಾಡುವಾಗ ಬರಹಗಾರ ಅಪಾನವಾಯು ವಿಸರ್ಜಿಸಿದ .ಅದು ಸಾಕಷ್ಟು ಸದ್ದು ಮಾಡುತ್ತಾ ಹೊರಬಂದಿದ್ದರಿಂದ ಎಲ್ಲರ ಗಮನಕ್ಕೂ ಬಂತು .ತಕ್ಷಣವೇ ಒಬ್ಬ ಹೊಗಳುಭಟ ಹೇಳಿದ
  “ಅಸ್ಟೊಂದು ಶಬ್ಧವಾದರು ಅದನ್ನು ಊಸು ಎಂದು ಕರೆಯುವಹಾಗಿಲ್ಲ ,ಯಾಕೆಂದರೆ ಒಂದಿಷ್ಟೂ ವಾಸನೆ ಇಲ್ಲ ”
  ಮತ್ತೊಬ್ಬ ಅದನ್ನು ಮುಂದುವರಿಸಿದ “ವಾಸನೆ ಬರಲಿಲ್ಲ ಅನ್ನುವುದಸ್ತೆ ಸರಿಯಲ್ಲ.ಜೊತೆಗೇ ಒಂತರದ ಮದುರ ಪರಿಮಳದಲ್ಲಿ ನಾವು ತೆಲಾಡುತಿದ್ದೇವೆ”
  ಬರಹಗಾರನಿಗೆ ಗಾಬರಿಯಾಯಿತು “ಅಲ್ರೀ ಊಸು ನಾತ ಬರದೆ ಇದ್ರೆ ಹೊಟ್ಟೆಯೊಳಗೆ ಕೆಟ್ಟಕಾಯಿಲೆ ಇದೆ ಅನ್ನೋ ಸೂಚನೆ ಅಂತಾರೆ ,ಅಂಥವರು ಜಾಸ್ತಿ ವರ್ಷ ಬದುಕೊದಿಲ್ಲವಂತೆ ನಾನು ಬೇಗ ಸಾಯ್ತೀನ ” ಎಂದು ದುಖತಪ್ತನಾಗಿ ಕೇಳಿದ
  ತಕ್ಷಣವೇ ಒಬ್ಬ ಹೇಳಿದ “ರಾಯರೇ ಈಗ ಇತ್ತಕಡೆ ವಾಸನೆ ಬರೋದಕ್ಕೆ ಶುರುವಾಗಿದೆ ,ನೀವೇನೂ ಹೆದರಬೇಕಾಗಿಲ್ಲ ”
  ಅವನ ಮಾತು ಮುಗಿಸುವ ಮೊದಲೇ ಮತ್ತೊಬ್ಬ ಬಾಯ್ತೆರದ “ಇಲ್ಲಂತೂ ಕೆಟ್ಟ ಕಮಟು ವಾಸನೆ ತಿಂದಿದ್ದೆಲ್ಲ ಕಕ್ಕಿಕೊಳ್ಳಬೇಕು,ಹಾಗೆ ಹೋಡಿತಿದೆ ”
  D,RAVI VARMA HOSAPETE

  ಪ್ರತಿಕ್ರಿಯೆ
  • D.RAVI VARMA

   ಪ್ರಯತ್ನಿಸುತ್ತಾ ಇದ್ದೇನೆ,ಸರ್ ವಂದನೆಗಳು

   ಪ್ರತಿಕ್ರಿಯೆ
 2. Badarinath Palavalli

  ಆದ್ಯಾತ್ಮಿಕ ವಿವಾರಗಳನ್ನು ಮತ್ತು ವೈದ್ಯಕೀಯ ಬರಹಗಳನ್ನು ಅದ್ಭುತವಾಗಿ ಬರೆದುಕೊಡುವುದರಲ್ಲಿ ಡಾಕ್ಟರರು ಸಿದ್ಧ ಹಸ್ತರು. ಈ ಬರಹ ನನಗೆ ನಗೆ ಉಕ್ಕಿಸಿತು.
  ಬರಹಕ್ಕೆ ಒಪ್ಪುವ ಫೋಟೋ. ಅಲ್ಲಿ ನೋಡಿದ್ರಾ ಗ್ಯಾಸ್ ಬಿಟ್ಟಿದ್ದಕ್ಕೆ ಹಿಂದೆ ಫೋಟೋದಲ್ಲಿ ಹೂವೂ ಮಟಾಷ್…
  ಗಬ್ಬು ಗ್ಯಾಸೂ ಸಹ ಲಾಫಿಂಗ್ ಗ್ಯಾಸ್ ಆದ ಬಗ್ಗೆ ಬಲೇ ಸೊಗಸಾಗಿ ಹೇಳಿದ್ದಾರೆ.
  ಗ್ಯಾಸ್ ಸಮಸ್ಯೆ ಎಂತಹ ಫಜೀತಿಗಳನ್ನು ಉಂಟು ಮಾಡುತ್ತವೆ ಮತ್ತು ಅದರ ಪರಿಹಾರಕ್ಕೆ ಉಚಿತ ವ್ಯದ್ಯಕೀಯ ಸಲಹೆ ಉತ್ತಮ ಅಲ್ವಾ?

  ಪ್ರತಿಕ್ರಿಯೆ
 3. ಬಾಲಸುಬ್ರಹ್ಮಣ್ಯ

  ಈ ಗ್ಯಾಸ್ ಪ್ರಾಬ್ಲಂ ಹಿರಿಯರನ್ನೇ ಅಲ್ಲಾ ಕಿರಿಯರಲ್ಲೂ ಸಹ ಕಾಡುತ್ತಿದೆ. ಆಹಾರ ಕ್ರಮ ಸರಿಯಾದರೆ , ಸಿಕ್ಕ ಸಿಕ್ಕ ಆಹಾರವನ್ನು, ಚಾಟ್ಸ್ ,ಕುರುಕಲು ತಿಂಡಿಯನ್ನು ಅನಿಯಮಿತವಾಗಿ ತಿನ್ನುವವರನ್ನು ಇದು ಕಾಡುತ್ತದೆ.ಚಪಲಕ್ಕೆ ತಿಂದು ಬಿತ್ತಿ ಮನರಂಜನೆ ನೀಡುವ ಅಪಹಾಸ್ಯದ ಗ್ಯಾಸೇಶ್ವರ ಆಗೋದು ಸಾಮಾನ್ಯವಾಗಿದೆ. ಒಳ್ಳೆ ಲೇಖನ.ಅಭಿನಂಧನೆಗಳು ಡಿ.ಟಿ.ಕೆ. ಸಾರ್.

  ಪ್ರತಿಕ್ರಿಯೆ
 4. Dr,D,T,KRISHNA MURTHY.

  ಬದರಿಸರ್,ಬಾಲೂಸರ್;ಪ್ರತಿಕ್ರಿಯೆಗೆ ಧನ್ಯವಾದಗಳು.
  ಹಿತವಾದ,ಮಿತವಾದ ಆಹಾರಸೇವನೆ,ಸಾಕಷ್ಟು ನೀರು ಕುಡಿಯುವುದು,ನಿಯಮಿತ ದೈಹಿಕ ವ್ಯಾಯಾಮ ದಿಂದ ಈ ಸಮಸ್ಯೆ ಅಷ್ಟಾಗಿ ಕಾಡುವುದಿಲ್ಲ.ಹೆಚ್ಚು ಸಮಸ್ಯೆ ಇದ್ದವರು ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.ನಮಸ್ಕಾರ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: