ಡಬ್ಬಿಂಗ್: ಎಂ ಆರ್ ದತ್ತಾತ್ರಿ ಲಾಸ್ ಏಂಜಲೀಸ್ ನಿಂದ ಬೆ೦ಗಳೂರಿಗೆ

ಎಂ.ಆರ್. ದತ್ತಾತ್ರಿ

ಲಾಸ್ ಏಂಜಲೀಸ್ ನಿಂದ

ಡಬ್ಬಿಂಗ್‍ನ್ನು ವಿರೋಧಿಸಿದ್ದ/ವಿರೋಧಿಸುವ ಮಂದಿ – ವರನಟ ರಾಜಕುಮಾರರನ್ನೂ ಸೇರಿಸಿ, ರಾಜ್ಯದಲ್ಲಿ ಪರಭಾಷಾ ಚಿತ್ರಗಳ ಪ್ರದರ್ಶನವನ್ನೂ ವಿರೋಧಿಸಿ ಡಬ್ಬಿಂಗ್‍ನ ಮೇಲಾದಂತೆ ಅದರ ಮೇಲೂ ಬ್ಯಾನ್ ಹಾಕಿಸಿದ್ದರೆ ಅವರ ಹೋರಾಟಕ್ಕೆ ಒಂದು ದಿಕ್ಕು ಬರುತ್ತಿತ್ತು (ಸರಿಯೋ ತಪ್ಪೋ, ಸಂವಿಧಾತ್ಮಕವೋ ಅಸಂವಿಧಾತ್ಮಕವೋ, ಅದು ಬೇರೇ ವಿಚಾರ). ಇವತ್ತಿನ ವಿಪರ್ಯಾಸವನ್ನು ನೋಡಿ – ಟೈಟಾನಿಕ್‌ ಅಥವಾ ಷಿಂಡ್ಲರ್ಸ್‌ ಲಿಸ್ಟನ್ನು ನೀವು ನಿಮ್ಮ ಊರಿನಲ್ಲಿಯೇ ಇಂಗ್ಲೀಷಿನಲ್ಲಿ ನೋಡಬಹುದು ಆದರೆ ಅವಕಾಶವಿದ್ದರೂ ನಿಮ್ಮ ಮಾತೃಭಾಷೆಯಾದ ಕನ್ನಡದಲ್ಲಲ್ಲ! ಡಬ್ಬಿಂಗ್ ನಿಷೇಧವನ್ನು ಯಾವ ದೃಷ್ಟಿಯಲ್ಲಿ ನೋಡಿದರೂ ನಮ್ಮ ಕನ್ನಡಕ್ಕೆ ಹೇಗೆ ಒಳ್ಳೆಯದಾಗುತ್ತದೆ ಎಂದು ಹೊಳೆಯುವುದಿಲ್ಲ. ವಸುಧೇಂದ್ರ ಹೇಳುತ್ತಿರುವಂತೆ ಸಾಹಿತ್ಯದಲ್ಲಿ ಅನುವಾದವೆಂಬುದು ಇರದಿದ್ದಲ್ಲಿ ಜಗತ್ತಿನ ಅನೇಕ ಶ್ರ‍ೇಷ್ಠ ಕೃತಿಗಳು ನಮ್ಮ ಭಾಷೆಯನ್ನು ತಲುಪುವ ಬೇರೆ ಬಗೆ ಯಾವುದಿತ್ತು? ಟಾಲ್‌ಸ್ಟಾಯ್ ಓದದೆ ನಮಗೆ ನಾವೇ ನಿಷೇಧವನ್ನು ಹೇರಿಕೊಂಡಿದ್ದರೆ ಅದರ ನಷ್ಟ ಯಾರಿಗಾಗುತ್ತಿತ್ತು? ಟಾಲ್‌ಸ್ಟಾಯ್‍ ಸಾಹಿತ್ಯದ ಪ್ರಭಾವವಿರದಿದ್ದಲ್ಲಿ ಮಲೆಗಳಲ್ಲಿ ಮದುಮಗಳು ಥರದ ಶ್ರ‍ೇಷ್ಠ ಕೃತಿ ಎಷ್ಟರ ಮಟ್ಟಿಗೆ ಕನ್ನಡದಲ್ಲಿ ಮೂಡುತ್ತಿತ್ತು? ಅಕ್ಷರಪ್ರಪಂಚದಲ್ಲಿ ಹಾಗಿರುವಾಗ, ಸೃಜನಶೀಲತೆಯಲ್ಲಿ ಸಾಹಿತ್ಯದ ಒತ್ತೊಟ್ಟಿಗೇ ನಿಲ್ಲುವ ದೃಶ್ಯಮಾದ್ಯಮಕ್ಕೇಕೆ ಈ ನಿಬಂಧನ? ಹಾಲಿವುಡ್‌ನ ಬಹುಪಾಲು ಚಿತ್ರಗಳು ಹೆಚ್ಚುಕಡಿಮೆ ಇಂಗ್ಲಿಷ್ ಆವೃತ್ತಿಯ ಬಿಡುಗಡೆಯ ಜೊತೆಗೇ ಸ್ಪಾನಿಷ್‌‍ನಲ್ಲಿ ಬರುತ್ತವೆ ಮತ್ತು ಲ್ಯಾಟಿನ್ ಅಮೆರಿಕದಲ್ಲಿ ಬಿಡುಗಡೆಯನ್ನು ಕಾಣುತ್ತವೆ. ಆದರೂ, ಹಾಲಿವುಡ್‌ನ ಪಕ್ಕದಲ್ಲಿದ್ದುಕೊಂಡೂ, ಮೇಕ್ಸಿಕೋದ ಸಿನಿಮಾ ಉದ್ದಿಮೆ ಚೆನ್ನಾಗಿಯೇ ಇದೆ. ಸ್ಪರ್ಧೆಯಲ್ಲಿ ಒಳ್ಳೆಯ ಚಿತ್ರಗಳು ನಿರ್ಮಾಣಗೊಳ್ಳುತ್ತಿವೆ. ಅಲ್ಲಿನ ವೀಕ್ಷಕರನ್ನು ಗಮನದಲ್ಲಿಟ್ಟುಕೊಂಡು ಹಾಲಿವುಡ್ ಸಿನಿಮಾ ಮಾಡುವಷ್ಟರ ಮಟ್ಟಿಗೆ ಈ ಅನುಬಂಧ ಬೆಳೆದಿದೆ. ಹಾಲಿವುಡ್ ತನ್ನ ಲ್ಯಾಟಿನ್ ಸೆನ್ಸಿಬಿಲಿಟಿಯನ್ನು ಕಂಡುಕೊಂಡಂತೆ ಬಾಲಿವುಡ್ ಕೂಡ ಕನ್ನಡ ಸೆನ್ಸಿಬಿಲಿಟಿಯನ್ನು ಕಂಡುಕೊಳ್ಳಬಹುದು. ವೀಕ್ಷಕರು ಹೆಚ್ಚಾದಂತೆ ಆಮೀರ್ ಖಾನ್‍ ಕೂಡ ನಮ್ಮದೇ ಸಮಸ್ಯೆಗಳನ್ನು ತನ್ನ ಕಾರ್ಯಕ್ರಮಗಳಲ್ಲಿ ಚರ್ಚಿಸಬಹುದು. ಕಲೆಯು ಭಾಷೆಯ ಬಂಧವನ್ನು ಬಿಡಿಸಿಕೊಳ್ಳುವ ದಾರಿಯನ್ನು ಕಂಡುಕೊಳ್ಳುವಾಗ ನಾವೇಕೆ ಅಡ್ಡನಿಲ್ಲಬೇಕು? ಪ್ರಜಾಪ್ರಭುತ್ವದಲ್ಲಿ ನಿರ್ಬಂಧವೆನ್ನುವುದು ಸಲೀಸಾಗಿ ಹೊಂದಿಕೊಳ್ಳುವಂತದ್ದಲ್ಲ. ಒಮ್ಮೊಮ್ಮೆ ನಿರ್ಬಂಧಗಳು ವ್ಯಕ್ತಿಯ ಸ್ವಾತಂತ್ರದೊಂದಿಗೆ ಆಟವಾಡುತ್ತವೆ. ಆಗಾಗ ನಡೆಯುವ ಪುಸ್ತಕಗಳ ಮೇಲಾಗುವ ನಿರ್ಬಂಧಗಳನ್ನೂ ಸೇರಿಸಿ ಈ ಮಾತನ್ನು ಹೇಳುತ್ತಿದ್ದೇನೆ. ಯಾವ ಪುಸ್ತಕಗಳನ್ನು ಮಾತ್ರ ಓದಬೇಕು ಮತ್ತು ಯಾವ ಸಿನಿಮಾಗಳನ್ನಷ್ಟೇ -ಮತ್ತು ಯಾವ ಭಾಷೆಯಲ್ಲಿ- ನೋಡಬೇಕು ಎನ್ನುವ ನಿರ್ಧಾರಗಳನ್ನು ನನ್ನ ಪರವಾಗಿ ಬೇರೆಯವರು ಏಕೆ ಮಾಡಬೇಕು?]]>

‍ಲೇಖಕರು G

May 12, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ಕೆ. ಪುಟ್ಟಸ್ವಾಮಿ ಹಿಂದೀ ಭಾಷೆಯ ಹೇರಿಕೆಯ ನಾನಾ ನಮೂನೆಗಳನ್ನು ನೋಡಾಯಿತು. ಈಗ ನಮ್ಮ ಸರ್ಕಾರದ ಮುಖ್ಯಸ್ಥರಾದ ಘನತೆವೆತ್ತ ರಾಜ್ಯಪಾಲರು ಇನ್ನೂ...

6 ಪ್ರತಿಕ್ರಿಯೆಗಳು

 1. ಎಂ.ಆರ್. ದತ್ತಾತ್ರಿ

  ಸಂಪಾದಕರೇ, ಒಂದು ಸಣ್ಣ ತಿದ್ದುಪಡಿ. ನಾನೀಗ ಲಾಸ್ ಏಂಜಲಿಸ್‌ನಲ್ಲಿಲ್ಲ, ಬೆಂಗಳೂರಿಗೆ ವಾಪಸ್ಸು ಬಂದು ನೆಲೆಸಿದ್ದೇನೆ. ವಾಪಸ್ಸು ಬಂದು ಮುಂದಿನ ತಿಂಗಳಿಗೆ ಒಂದು ವರ್ಷವಾಗುತ್ತದೆ.
  ದತ್ತಾತ್ರಿ

  ಪ್ರತಿಕ್ರಿಯೆ
 2. shama, nandibetta

  ಕಲೆಯು ಭಾಷೆಯ ಬಂಧವನ್ನು ಬಿಡಿಸಿಕೊಳ್ಳುವ ದಾರಿಯನ್ನು ಕಂಡುಕೊಳ್ಳುವಾಗ ನಾವೇಕೆ ಅಡ್ಡನಿಲ್ಲಬೇಕು?

  ಪ್ರತಿಕ್ರಿಯೆ
 3. Geetha b u

  Yaaru heluvavaru?? Nannannu kaaduthiruvudhu edhe. Aa na kru nethrathva dalli 40 varshada hindhe thogonda nirdhaara anthaare , dubbing over my dead body anthaare…thamma thamma manegalali yella bhasheya chitragalannu nodi, Kannada dalli remake maadthaare, naavu namma Kannada dalliye aa movies galannu, t v kaaryakrama galannu nodtheevi andre bhashe bagge abhimaanavilladavaru anthaare. Market chikkadhu Kannada cinema kke, compete madodhu kashta anthella edhare adhe reasons kodi. Bhashaabhimaanada sogeke??

  ಪ್ರತಿಕ್ರಿಯೆ
 4. sritri

  ಡಬ್ಬಿಂಗಿಗೂ ಕನ್ನಡಕ್ಕೂ-ಸಂಸ್ಕೃತಿಗೂ ತಳುಕು ಹಾಕುತ್ತಿರುವುದನ್ನು ನೋಡಿದೆ. ಕನ್ನಡವೆಂದರೆ ಬರೀ ಸಿನಿಮಾ ಅಲ್ಲ. ಕನ್ನಡ ಲೇಖಕ-ಲೇಖಕಿಯರು ನಿರ್ಭಿಡೆಯಿಂದ ತಮ್ಮ ನಿಲುವನ್ನು ವ್ಯಕ್ತಪಡಿಸುತ್ತಿರುವುದು ಸ್ವಾಗತಾರ್ಹ.

  ಪ್ರತಿಕ್ರಿಯೆ
 5. Vikram Hathwar

  @Geeta, I agree with you. My question is why are we making our arguments in support of Dubbing to oppose such elements? Instead of impulsive reactions, do we really foresee and understand what would be the implications of Dubbing? Are we equipped enough to come to a conclusion? I would welcome if one decides to Dub Amir Khan’s show. I would demand for having History and discovery channel in Kannada. Agreeing to that, how can we stop Rakhi Sawant’s show? If you form a committee for that. I have this question- WHO ARE YOU TO DECIDE WHAT TO DUB AND WAHT NOT? I demand you also dub Raakhi Sawant’s Show and Amitab’s Crorepati. I find it more entertaining, knowledgable. etc., India is a free country and we are Indian’s first. Moreover Art should not have any fence. So, My demand is plz allow all kind of programs to be dubbed in Kannada. Do not stop anybody. Do not form any comittee. I am a matured enough to decide what I should watch. And, If a channel head thinks that hundred other dubbed high quality programs are better than our serials (including Seetaram Sir’s and other young talents with even higher potential), then nobody should have any objection to that.
  @Dattatri Sir- Plz do not frame this argument on the basis of Literary translations. There is a difference between Inspiration and Competition. We should also understand that Cinema and T.V have space and time constraint. Books do not have that.
  I have couple of simple points:
  1) Allow Dubbing of any movies and release them in DVDs only. (Plz don’t tell me how I can expect everybody to have DVD players at house). If the only concern is opening ourselves globaly, then it is served.
  2) Allow channel dubbing. Instead of occupying space in kannada why dont they create their own space in kannada? Ask them to telecast all their programs in kannada.
  I know that Amir has nothing to do with it. He is just selling his product to various TV channels. But, do you think it is hard for Mr. Amir khan to create such shows in selective local languages to discuss with the people of that land? Am not questioning Amir’s social concerns. If he really wanted to reach people and create awareness countrywide, he would have thought about it in a bigger canvas than simply dubbing it to other languages.
  If somebody is stopping dubbing with goondagiri, I oppose it. If somebody tells I want to enlighten my people so I support dubbing and form a committee to judge what people should see, I can’t buy it.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: