ಡಬ್ಬಿಂಗ್ ಚರ್ಚೆ:ಅಚ್ಯುತಕುಮಾರ್ ಅವರೇ,

ಜ್ಞಾನ ಕೇವಲ elite ವರ್ಗದ ಸ್ವತ್ತಾಗಬಾರದು, ಜ್ಞಾನ ಎಲ್ಲರಿಗೂ ಸೇರಿದ್ದು ಎಂಬ ಕಾರಣಕ್ಕೇ ನಾನು ಡಬ್ಬಿಂಗ್ ಬೇಕು ಎಂದು ವಾದ ಮಾಡುತ್ತಿರುವವನಾಗಿರುವುದರಿಂದ ಮತ್ತು ಅದೇ ಕಾರಣಕ್ಕೆ ಪುರೋಹಿತಶಾಹಿಯನ್ನ ವಿರೋಧಿಸುವವನಾಗಿರುವುದರಿಂದ, ನಿಮ್ಮ ಮಾತು ಸ್ವಲ್ಪ ಎಡಬಿಡಂಗಿತನದಿಂದ ಕೂಡಿದೆ ಅನಿಸಿತು. ಕನ್ನಡದ ಸಾಮಾನ್ಯ ಜನರಿಗೆ ಜ್ಞಾನ ಕನ್ನಡದಲ್ಲಿ ತಲುಪಬೇಕು ಎಂದು ಹಂಬಲಿಸುವುದರಲ್ಲಿ ಪುರೋಹಿತಶಾಹಿ ಹೇಗೆ ಅಡಗಿದೆ? ಬದಲಾಗಿ ಸಾಮಾನ್ಯ ಜನರನ್ನ ಜ್ನಾನವಂಚಿತರಾಗಿ ಮಾಡುವುದರಲ್ಲೇ ಪುರೋಹಿತಶಾಹಿ ಮನಸ್ಸು ಕೆಲಸ ಮಾಡುತ್ತಿದೆ ಎಂದು ನಿಮಗೆ ಅನಿಸುತ್ತಿಲ್ಲವೇ? ಕನ್ನಡಿಗರಿಗೆ ಜಗತ್ತಿನ ಜ್ಞಾನವೆಲ್ಲ ಬೇಕು, ಹಾಗಾದಾಗ ಮಾತ್ರ ನಾವು ಸಂಕುಚಿತ ಮನಸ್ಸನ ಕಳಚಿ ವಿಶ್ವದ ಜೊತೆ ಸಮಕಾಲೀನರಾಗಿ ಸಾಗಲು ಸಾಧ್ಯ. ಅದರ ಬದಲು ಭಾರತದಲ್ಲಿ elite ಭಾಷೆಯಾಗಿಯೇ ಉಳಿದಿರುವ ಇಂಗ್ಲಿಷ್ ನಲ್ಲೆ ನೀವು ವಿಷಯವನ್ನ ಹೇಳುತ್ತೀನಿ ಅಂತ ಹೊರಟರೆ ಎಷ್ಟು ಪರ್ಸೆಂಟ್ ಜನ ನಿಜವಾಗಿ ಅರ್ಥ ಮಾಡಿಕೊಳ್ಳಬಲ್ಲರು? ನಿಮ್ಮ ಊರಿನಲ್ಲಿ ಜನರೆಲ್ಲಾ ಇಂಗ್ಲಿಷ್ ನಲ್ಲೇ ಮಾತನಾಡುತ್ತಾರೆಯೇ? ಪ್ರತಿಯೊಬ್ಬ ಕನ್ನಡಿಗನೂ ಇಂಗ್ಲಿಷ್ ಕಲಿತು ಇಂಗ್ಲಿಷ್ ತನ್ನ ಆಡುಭಾಷೆಯಂತೆ ಮಾತನಾಡುವವರಾಗಿ ತಯಾರಾದರೆ ನಮಗೂ ಸಂತೋಷವೇ. ಆದರೆ ಹಾಗೆ ಆಗಲಿಕ್ಕೆ (ಅಕಸ್ಮಾತ್ ಆದರೂ) ಇನ್ನು ೬ ತಲೆಮಾರುಗಳಾದರೂ ಬೇಕು. ಅಲ್ಲೀ ತನಕ ಪ್ರಪಂಚದ ಅರಿವೇ ಇಲ್ಲದೆ ಉಸಿರು ಕಟ್ಟಿಕೊಂಡೇ ಇರೋಣ ಅಂತೀರಾ? ಬುದ್ದಿಜೀವಿಗಳ ಪ್ರಕಾರ ಇಷ್ಟು ದಿನ ಸಂಸ್ಕೃತ ಪುರೋಹಿತಶಾಹಿ ಧೋರಣೆಯಾಗಿತ್ತು ಮತ್ತು ಕನ್ನಡ ಎಲ್ಲರನ್ನೂ ತಲುಪುವ ಮಾರ್ಗ ಆಗಿತ್ತು. ಈಗ ಡಬ್ಬಿಂಗ್ ಬೇಕು ಅಂದ ಕೂಡಲೇ, ಕನ್ನಡ ಪುರೋಹಿತಶಾಹಿ ಆಗಿಬಿಡೋದೇ? ಪುರೋಹಿತಶಾಹಿಗಳಿಂದ ಕನ್ನಡಿಗರ ಮೇಲೆ ಕನ್ನಡದ ಹೇರಿಕೆ! ಹ್ಹ ಹ್ಹ, ಬಹಳ ತಮಾಷೆಯಾಗಿದೆ ಕೇಳೋದಕ್ಕೆ.  ]]>

‍ಲೇಖಕರು G

May 5, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಡಿ ಎಸ್ ರಾಮಸ್ವಾಮಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೂ ಕರೆಯುವುದು ವಾಡಿಕೆ. ಕನ್ನಡ ಭಾಷೆಯು ಕೊಡ ಮಾಡಿದ...

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

೧ ಪ್ರತಿಕ್ರಿಯೆ

  1. Appi

    This is a pure commericialy motivated move from people who support Dubbing. people are not understanding the vested interests involved in this, So far only border districts used to have other language movies running in their theaters which constitutes 50-60 % of theaters, now with this move they want spread this to 100% of theaters in the state thus vanishing kannada movies.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: