ಡಬ್ಬಿಂಗ್: ವಿಕ್ರಂ ಹತ್ವಾರ್ ನ್ಯೂಜೆರ್ಸಿಯಿಂದ…

ವಿಕ್ರಂ ಹತ್ವಾರ್

ನ್ಯೂಜೆರ್ಸಿಯಿಂದ…

ತಿರುಮಲೇಶರೊಂದಿಗೆ ಮಾತಾಡುತ್ತ ನಾನೂ ಯಾವುದೋ ಆವೇಗದಲ್ಲಿ ಹೇಳಿಬಿಟ್ಟೆ- `ಡಬ್ಬಿಂಗ್ ಒಂದು ಬಂದುಬಿಡಲಿ ಸರ್, ಈಗ ಬರುತ್ತಿರುವಂಥ ಕೆಟ್ಟ ಕಳಪೆ ಚಿತ್ರಗಳೆಲ್ಲ ಬಂದ್ ಆಗಿಬಿಡುತ್ತವೆ’ ಅಂತ. ಆದರೆ ಮಾತು ಮುಗಿಸಿದ ಮೇಲೆ ಯಾಕೋ ಆ ಮಾತಿನ ಮೇಲೆ ನನಗೆ ನಂಬಿಕೆ ಉಳಿಯಲಿಲ್ಲ. ನನ್ನದೇ ನಿಲುವು ತಲೆಕೆಳಗಾಯಿತು. ಡಬ್ಬಿಂಗ್ ಬೇಕೋ ಬೇಡವೋ? ಅದರಿಂದ ಕನ್ನಡಕ್ಕೆ ಕನ್ನಡಿಗರಿಗೆ ಆಗುವ ಅನುಕೂಲ ಅನಾನುಕೂಲಗಳೇನು? ಅನ್ನುವ ವಿಷಯದಲ್ಲಿ ಮಂಡನೆಯಾದ ವಾದಗಳನ್ನು ಗಮನಿಸಿದರೆ ಕೆಲವರು ಚರ್ಚೆ ಎಂದರೆ ತಾವು ನಂಬಿರುವ ತಮ್ಮ ನಿರ್ಣಯವನ್ನೇ ಹೊರಹಾಕುವುದು ಅಂತಲೇ ಭಾವಿಸಿದಂತಿದೆ. ಈ ಚರ್ಚೆ ಇನ್ನಷ್ಟು ವ್ಯಾಪಕವಾಗಿ ಸಮರ್ಪಕವಾಗಿ ಆಗದೆ ಈಗಲೇ ಒಂದು ನಿರ್ಣಯ ತಳೆಯುವುದಕ್ಕೆ ಬೇಕಾದ ಸಿದ್ಧತೆ ನಮಗಿಲ್ಲ ಅನ್ನುವುದು ನನ್ನ ಅನಿಸಿಕೆ. ಕಳಪೆ ಚಿತ್ರಗಳನ್ನು ಮಾಡುತ್ತಿರುವವರೇ ಡಬ್ಬಿಂಗ್ ವಿರೋಧಿಸುತ್ತಿರುವುದು. ಅವರಿಗೆ ಭಯ ಕಾಡ್ತಿದೆ ಅನ್ನೋದನ್ನೇ ಹಿಡಿದು ನಾವು ಡಬ್ಬಿಂಗ್ ಪರವಾಗಿ ಮಾತಾಡೋದು ಬೇಡ. ಡಬ್ಬಿಂಗ್ ಬೇಡ ಅನ್ನುವವರ ಕಾರಣಗಳು ಏನೇ ಇರಲಿ. ಅದನ್ನು ಪಕ್ಕಕ್ಕಿಡೋಣ. ಯಾರೋ ಒಬ್ಬರು ಬೇಡ ಅನ್ನುತ್ತಿದ್ದಾರೆ ಅನ್ನೋದಕ್ಕೆ ನಾವು ಬೇಕು ಅನ್ನಬಾರದಲ್ಲ? ಯಾವುದರ ಪರ ವಿರೋಧ ಅನ್ನುವುದನ್ನು ಬಿಟ್ಟು, ಈಗ ಡಬ್ಬಿಂಗ್ ಬೇಕು ಅನ್ನುವವರಿಂದ `ತೇಲಿ’ ಬರುತ್ತಿರುವ ಆಲೋಚನೆ ತರ್ಕಗಳನ್ನೇ ಗಮನಿಸೋಣ. ಕಳಪೆ ಚಿತ್ರಗಳ ಬಗ್ಗೆ ಮಾತಾಡುವವರಿಗೆ: 1) ಡಬ್ಬಿಂಗ್ ಮಾಡಲು ಅನುಮತಿ ಕೊಟ್ಟ ಕೂಡಲೇ ಕಳಪೆ ಮಟ್ಟದ ಚಿತ್ರಗಳು ಬರುವುದು ನಿಂತುಬಿಡುತ್ತವೆಯೇ? ಗಿರೀಶ್ ಕಾಸರವಳ್ಳಿಯಂಥ ನಿರ್ದೇಶಕರು ನಮ್ಮ ಜೊತೆ ಇರುವ ಸಮಯದಲ್ಲೂ ಕಳಪೆ ಚಿತ್ರಗಳು ತಯಾರಾಗುತ್ತಲೇ ಇದೆಯಲ್ಲವೆ? ಕನ್ನಡ ಸಾಹಿತ್ಯ ಇಷ್ಟೊಂದು ಶ್ರೀಮಂತವಿರುವಲ್ಲು ಕಳಪೆ ಕೃತಿಗಳು ಬರುತ್ತಿಲ್ಲವೇ? 2) ಉತ್ತಮ ಗುಣಮಟ್ಟದ ಚಿತ್ರಗಳನ್ನು ತಯಾರು ಮಾಡಲು ಬೇಕಿರುವುದು ನಮ್ಮದೇ ಸ್ವಯಾರ್ಜಿತ ಪ್ರತಿಭೆಯ ಒತ್ತಡವೋ? ಅಥವ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೊರಗಿನವರ ಮುಂದೆ ತಾನು ಉಳಿಯಬೇಕೆಂಬ ಭೀತಿಯೋ? ಶಾಲಾ ಮಕ್ಕಳ ಮೇಲೆ ಸ್ಪರ್ಧೆಯ ಹೆಸರಿನಲ್ಲಿ ಒಡ್ಡುತ್ತಿರುವ ಒತ್ತಡವನ್ನೇ ನಾವು ವಿರೋಧಿಸುತ್ತಿರುವಾಗ, ಕಲೆಯ ವಿಚಾರದಲ್ಲಿ ಸ್ಪರ್ಧೆ ಎನ್ನುವುದು ಎಷ್ಟು ಸರಿ? ಒಬ್ಬ ನಿಜವಾದ ಕವಿ ಸ್ಪರ್ಧೆಗಾಗಿ ಕವಿತೆ ಬರಿಯಲಾರ. ಸ್ಪರ್ಧಾತ್ಮಕ ವಾತಾವರಣ ಇರುವುದರಿಂದಲೇ ಒಬ್ಬ ಒಳ್ಳೆಯ ಕವಿ ಹುಟ್ಟಿಕೊಂಡ ಅಥವ ಒಳ್ಳೆಯ ಚಿತ್ರ ತಯಾರಾಯಿತು ಎನ್ನುವುದಕ್ಕೆ ಯಾವುದಾದರು ಉದಾಹರಣೆ ಇದೆಯೇ? 3) ಒಳ್ಳೆಯ ಚಿತ್ರಗಳನ್ನು ಮಾಡುವವನು ಸುಮ್ಮನೇ ತನ್ನ ಕೆಲಸವನ್ನು ತಾನು ಶೃದ್ಧೆಯಿಂದ ಮಾಡುತ್ತಾನೆ (Once again Kasaravalli). ಹೊರಗಿನ ಸವಾಲುಗಳಿಗೆ ಕಾಯುತ್ತ ಕೂರುವುದಿಲ್ಲ. 4) ನಮ್ಮಲ್ಲೇ ನಮ್ಮವರೇ ತಯಾರು ಮಾಡುತ್ತಿರುವ ಕಳಪೆ ಚಿತ್ರಗಳನ್ನು ನಿಲ್ಲಿಸಲು ಹೊರಗಿನವರ ಸಹಾಯ ಪಡೆಯುವಷ್ಟು ನಾವು ನಿರ್ಗತಿಕರಾಗಿದ್ದೇವೆಯೇ? ಇಲ್ಲಿ ಪುನಃ `ನಾವೇಕೆ  ಸ್ಪರ್ಧೆಗೆ ಹೆದರಬೇಕು’ ಎನ್ನುವ ಪ್ರತಿವಾದ ಬಂದುಬಿಡುತ್ತದೆ. ಆದರೆ `ನಮಗೆ ಸ್ಪರ್ಧೆ ಬೇಕು, ಆದ್ದರಿಂದ ಡಬ್ಬಿಂಗ್ ಬೇಕು’ ಎನ್ನುವ ಅವಶ್ಯಕತೆ ಇಲ್ಲ ಅನ್ನುವುದಷ್ಟೇ ನನ್ನ ಉದ್ದೇಶ. ವ್ಯಕ್ತಿಗತ ಸ್ವಾತಂತ್ರ್ಯದ ಪ್ರಶ್ನೆ ಎದುರಾದಾಗಲೂ ಸಮಸ್ಯೆ ಇದೆ. ಕರ್ನಾಟಕದಲ್ಲಿ ಕನ್ನಡವೇ ಬಾರದ ಕನ್ನಡಿಗರಿದ್ದಾರೆ. ದಕ್ಷಿಣ ಕನ್ನಡದ ಕೆಲವರಿಗೆ ತುಳು ಬಿಟ್ಟು ಕನ್ನಡವೂ ಮಾತಾಡಲು ಬರುವುದಿಲ್ಲ. ಅಲ್ಲದೆ, ತಮಿಳರು, ತೆಲುಗಿನವರು ಎಲ್ಲರೂ ಇಲ್ಲಿದ್ದಾರೆ. ಕನ್ನಡಕ್ಕೆ ಡಬ್ ಆದ ಚಿತ್ರಗಳ ಜೊತೆ ಬೇರೆ ಬೇರೆ ಭಾಷೆಗೆ ಡಬ್ ಆದ ಚಿತ್ರಗಳನ್ನೂ ಇಲ್ಲಿ ಬಿಡುಗಡೆ ಮಾಡಲು ಅವಕಾಶ ಕೊಡಬೇಕೇ? ವ್ಯಕ್ತಿಗತ ಸ್ವಾತಂತ್ರ್ಯದ ಹಿನ್ನಲೆಯಲ್ಲಿ ವಾದ ಮಾಡುವವರು ಇದನ್ನು ಒಪ್ಪದೆ ವಿಧಿಯಿಲ್ಲ. ಎಲ್ಲ ಭಾಷೆಗು ಅದರದ್ದೇ ಆದ ಚಾನೆಲ್ ಇರುವುದರಿಂದ ಟಿ.ವಿ ಸೀರಿಯಲ್ ವಿಚಾರದಲ್ಲಿ ಈ ಗೊಂದಲವಿಲ್ಲ. ಮತ್ತೊಂದು ವಾದ ಹೀಗಿದೆ: ಕನ್ನಡಕ್ಕೆ ಡಬ್ ಮಾಡಲು ಅವಕಾಶ ಕೊಡದೆ ಇರುವುದರಿಂದ ಜನರು ಆಯಾ ಭಾಷೆಯಲ್ಲೇ ಆ ಸಿನಿಮಾ ಅಥವ ಕಾರ್ಯಕ್ರಮವನ್ನು ನೋಡುತ್ತಾರೆ. ನಾವು ಪರೋಕ್ಷವಾಗಿ ನಮ್ಮ ಜನರನ್ನು ನಮ್ಮ ಮಕ್ಕಳನ್ನು ಕನ್ನಡದಿಂದ ದೂರ ತಳ್ಳುತ್ತಿದ್ದೇವೆ. ಇದರಿಂದ ಹೆಚ್ಚೆಂದರೆ ಈಗ ಕೇವಲ ಕನ್ನಡ ಮಾತ್ರ ಗೊತ್ತಿರುವವನನ್ನು ಕನ್ನಡದಿಂದ ಆಚೆ ಹೋಗದಂತೆ ತಡೆಯಬಹುದು. ಅಂದರೆ ಅವರನ್ನು ಬೇರೆ ಭಾಷೆ ಕಲಿಯದಂತೆ ಸೋಮಾರಿಗಳನ್ನಾಗಿ ಮಾಡಬಹುದು. ಅದಲ್ಲದೆ ಆ ವ್ಯಕ್ತಿಯ ಆಲೋಚನೆ, ಸಂಸ್ಕೃತಿ ಎಲ್ಲವೂ ಕನ್ನಡದ್ದೇ ಆಗಿರುತ್ತದೆ ಅನ್ನುವ ಯಾವ ಗ್ಯಾರಂಟಿಯೂ ಇಲ್ಲ. ಇನ್ನು ಇಂಗ್ಲೀಷು, ಹಿಂದಿ, ತೆಲುಗು, ತಮಿಳು ಬರುವ ಜನರಂತು ಕನ್ನಡಕ್ಕೆ ಡಬ್ ಆದ ಸಿನಿಮಾಗಳನ್ನಾಗಲೀ ಟಿ.ವಿ ಶೋಗಳನ್ನಾಗಲಿ ಖಂಡಿತಾ ನೋಡುವುದಿಲ್ಲ. ಹಾಗಾದರೆ, ಯಾವುದೇ ಕಾರ್ಯಕ್ರಮ ಯಾವುದೇ ಸಿನಿಮಾ ಕನ್ನಡಕ್ಕೆ ಡಬ್ ಆಗಿಯೇ ಕರ್ನಾಟಕಕ್ಕೆ ಬರಬೇಕು ಎಂದರೆ ಮತ್ತೆ ವ್ಯಕ್ತಿಗತ ಸ್ವಾತಂತ್ರ್ಯದ ಪ್ರಶ್ನೆ ಉದ್ಭವಿಸುತ್ತದೆ. ಇದೊಂದು ಲೂಪಿಂಗ್ ಇಶ್ಯೂ ಆಗಿಬಿಡುತ್ತದೆ. ಯಾವುದೋ ಚಿತ್ರ ಕನ್ನಡಕ್ಕೆ ಡಬ್ ಆಗಿ ಬರುತ್ತದಂತೆ ಅಂದರೆ, ಎಲ್ಲವನ್ನೂ ಮುಕ್ತವಾಗಿ ಸ್ವೀಕರಿಸುವ ನನ್ನ ಮನಸ್ಸು ಸಹಜವಾಗಿ `ಬರಲಿ ಬಿಡು’ ಎನ್ನುತ್ತದೆ. ಯಾರಾದರು ಡಬ್ಬಿಂಗ್ ತಡೆಯುತ್ತೇನೆ ಅಂದರೆ ಕೂಡಲೆ ಪಾಳೇಗಾರಿಕೆಯ ನೆರಳು ಸೋಕಿದಂತಾಗಿ ಡಬ್ಬಿಂಗ್ ಬೇಕೇ ಬೇಕು ಎನ್ನುವ ನಿಟ್ಟಿನಲ್ಲಿ ವಾದಗಳನ್ನು ಹೂಡುತ್ತದೆ. ಅಂಥ ವಾದಗಳೆಲ್ಲ ಬಹಳ ತೆಳುವಾಗಿ ಕಾಣತೊಡಗುತ್ತದೆ. ಅದರ ಮುಂದೆ ಡಬ್ಬಿಂಗ್ ಬೇಡ ಎನ್ನುವವರ ಹೊಟ್ಟೆಪಾಡಿನ ಕೂಗು, ಪ್ರತಿಭಾ ಸೂಚಿಸಿದಂತೆ ಅವಕಾಶ ವಂಚನೆಯ ವಾದವೇ ಉತ್ತಮವೆನಿಸುತ್ತೆ. ಉದಾಹರಣೆಗೆ ಕನ್ನಡಕ್ಕೆ ಡಬ್ ಆದ ಅಮಿತಾಬ್ ನಡೆಸುವ ಕೋಟ್ಯಾಧಿಪತಿ ಮತ್ತು ಪುನೀತ್ ನಡೆಸುವ ಕನ್ನಡದ ಕೋಟ್ಯಾಧಿಪತಿ – ಇವೆರಡರಲ್ಲಿ ಯಾವುದು ಬೇಕು (ವೈಯಕ್ತಿವಾಗಿ ನಮಗೆ ಮತ್ತು ಮಾರುಕಟ್ಟೆ ಸ್ಪರ್ಧೆ ಒಂದೇ ಮಾನದಂಡವಾದ ವಾಹಿನಿಗಳಿಗೆ) ಅಂತ ನಮ್ಮನ್ನು ನಾವೇ ಕೇಳಿಕೊಂಡರೆ ನಮ್ಮ ವಾದಗಳೆಲ್ಲ ತಲೆಕೆಳಗಾಗಬಹುದು. ಕನ್ನಡದ ಅಳಿವು-ಉಳಿವು, ಸಂಸ್ಕೃತಿ, ಗುಣಮಟ್ಟ ಅನ್ನೋದನ್ನೆಲ್ಲ ಬಿಟ್ಟು, ಭಾಷೆಯ ತೊಡಕಿಲ್ಲದೆ ಎಲ್ಲ ಒಳ್ಳೆಯ ವಿಚಾರಗಳೂ ನನಗೆ ತಿಳಿಯುವಂತಾಗಲಿ ಅನ್ನೋದೊಂದೇ ಆಶಯವಾದರೆ ಆಗ `ಡಬ್ಬಿಂಗ್ ವಿರೋಧವಿಲ್ಲ’ದ ನಿಲುವನ್ನು ಒಪ್ಪಬಹುದೇನೋ. ಡಿಸ್ಕವರಿ ಚ್ಯಾನೆಲ್ಲು, ಹಿಸ್ಟರಿ ಚ್ಯಾನೆಲ್ ಹೊರತುಪಡಿಸಿ ಡಬ್ಬಿಂಗ್ ಬೇಕೇ ಬೇಕು ಅನ್ನುವ ವಾದಕ್ಕೆ ಇನ್ನಷ್ಟು ಪ್ರಬುದ್ಧ ಕಾರಣಗಳು ಬೇಕಿವೆ.]]>

‍ಲೇಖಕರು G

May 12, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ಕೆ. ಪುಟ್ಟಸ್ವಾಮಿ ಹಿಂದೀ ಭಾಷೆಯ ಹೇರಿಕೆಯ ನಾನಾ ನಮೂನೆಗಳನ್ನು ನೋಡಾಯಿತು. ಈಗ ನಮ್ಮ ಸರ್ಕಾರದ ಮುಖ್ಯಸ್ಥರಾದ ಘನತೆವೆತ್ತ ರಾಜ್ಯಪಾಲರು ಇನ್ನೂ...

16 ಪ್ರತಿಕ್ರಿಯೆಗಳು

 1. sritri

  ನಾನು ಕನ್ನಡ ಚಿತ್ರ ಪ್ರೇಕ್ಷಕಿ(ಪ್ರೇಕ್ಷಕ). ನನ್ನ ಪರವಾಗಿ ನೀವೆಲ್ಲ ಯಾಕ್ರಪ್ಪ ಇಷ್ಟೆಲ್ಲಾ ವಾದ-ವಿವಾದ ಮಾಡಿಕೊಂಡು ತಲೆ ಕೆಡಿಸ್ಕೋತಿದ್ದೀರಾ? ನನಗೇನು ಬೇಕೋ ಅದನ್ನು ನೋಡಲು ನನಗೇ ಬಿಡ್ರಪ್ಪಾ… ಬಿಟ್ಟುಬಿಡ್ರಪ್ಪಾ ನನ್ನ 🙂

  ಪ್ರತಿಕ್ರಿಯೆ
 2. Geetha b u

  Adhe logic thogondre svaathimuthyam ,kamalahaasan natisisdha haleya chitra. Karnatakadallu chennagi odithu. Adannu sudeep Kannada dalli remake maadidhaaga odalila. We had all seen it in Telugu and enjoyed it long ago. Kotyaadhipathi kaaryakrama chennagidhe. No pb. Puneeth kooda ” ayyo, amitabh bachan ge naan a holisabedi please. Naanu avara fan” antha karyakramadalliye heluvashtu humility ettukondidhaare. Kannada dalli programme maadidhaage kannadigaru bagavahisabahudhu , it is welcome. Aadare Sathyameva jayathe kaaryakramada vyaapthiye bere. Big boss, raakhi show, swayamvar antha noorentu programmes banthu, bartha edhe. No one is asking to dub them in Kannada. All India level nalli namma desha da samasyegala bagge charche maaduthiruva kaaryakrama adhu. Aamir khan movie galannu enjoy maadi avarige mannane kottidheve. Praanthyagaarike yannu bittu noduvudannu , yochisuvudhannu bittubiduthidhevalla. We are Indians first and then kannadigas. Bihar nallo , kashmir nallo eruvavara samasye galu kooda sathyameva jayathe nalli baruthadhe. Kannadadalli maadabahudhu, maadali. Santosha. Aadare vyaapthi chikkadaaguthallave??

  ಪ್ರತಿಕ್ರಿಯೆ
 3. ತಿಪ್ಪೇಸ್ವಾಮಿ

  ರ್ರೀ ಹತ್ವಾರ್ರೇ,
  ನೀವು ಕೇಳಿರುವ ನಾಲ್ಕು ಪ್ರಶ್ನೆಗಳೂ ತತ್ತ್ವಶಾಸ್ತ್ರದ ತರಗತಿಗಳಲ್ಲಿ ಚರ್ಚೆ ಮಾಡುವುದಕ್ಕೆ ತುಂಬಾ ಸರಿಯಾದ ಮೆಟಿರಿಯಲ್ಸ್; ಆದ್ರೆ ನಿಜಜೀವನದಲ್ಲಿ ಈ ಲೆವೆಲ್ಲಲ್ಲಿ ನಾವ್ಯಾರೂ ಯೋಚನೆ ಮಾಡಲ್ಲ, ಅದ್ರಲ್ಲು ನಮ್ಮ ಚಿತ್ರರಂಗದವರಂತೂ ಮಾಡೋದೇ ಇಲ್ಲ. ಮಾಡಿದ್ರೆ ನಮ್ಮವ್ರು “ಸೂಪರ್”, “ಉಲ್ಟಾ ಪುಲ್ಟಾ”, “ಜಾಲಿ ಡೇಯ್ಸ್”, “ಭದ್ರ”, “ಕನಸುಗಾರ” ಇವೇ ಮುಂತಾದ ಕಳಪೆ ಚಿತ್ರಗಳು ಯೂಪಿಯೆ ಸರಕಾರದ ಹಗರಣಗಳ ರೀತಿಯಲ್ಲಿ ಒಂದಾದ ಮೇಲೆ ಒಂದು ತಯಾರಾಗ್ತಾ ಇರಲಿಲ್ಲ.
  –ಶಾಲಾ ಮಕ್ಕಳ ಮೇಲೆ ಸ್ಪರ್ಧೆಯ ಹೆಸರಿನಲ್ಲಿ ಒಡ್ಡುತ್ತಿರುವ ಒತ್ತಡವನ್ನೇ ನಾವು ವಿರೋಧಿಸುತ್ತಿರುವಾಗ, ಕಲೆಯ ವಿಚಾರದಲ್ಲಿ ಸ್ಪರ್ಧೆ ಎನ್ನುವುದು ಎಷ್ಟು ಸರಿ? ಒಬ್ಬ ನಿಜವಾದ ಕವಿ ಸ್ಪರ್ಧೆಗಾಗಿ ಕವಿತೆ ಬರಿಯಲಾರ. —
  ತುಂಬಾ ಬಾಲಿಶವಾಗಿದೆ ಈ ವಾಕ್ಯಗಳು. ಏನ್ ಹೇಳ್ಬೇಕೋ ಗೊತ್ತಾಗ್ತಿಲ್ಲ. ಯಾವುದನ್ನ ಯಾವುದಕ್ಕೆ ಹೋಲಿಕೆ ಮಾಡ್ತಾ ಇದೀರಾ ಇಲ್ಲಿ? ಶಾಲಾ ಮಕ್ಕಳ ಲೆವೆಲ್ಲನ್ನ ನಮ್ಮ “ಪ್ರೌಢ/ಬಲಿತ” ಚಿತ್ರರಂಗದ ಮಂದಿಯೊಂದಿಗೆ?
  –ಕೇವಲ ಕನ್ನಡ ಮಾತ್ರ ಗೊತ್ತಿರುವವನನ್ನು ಕನ್ನಡದಿಂದ ಆಚೆ ಹೋಗದಂತೆ ತಡೆಯಬಹುದು–
  ಇದಕ್ಕಿಂತ ಒಳ್ಳೆ ಕೆಲಸ ಬೇರೆ ಇದೆಯೇನ್ರೀ? ಶಾಲೆ ಕಾಲೇಜುಗಳಲ್ಲಿ ಇಂಗ್ಲಿಷ್ ಕಲ್ತೇ ಕಲೀತೀವಿ. ಉಳಿದ ಭಾಷೆ ಕಲಿಯೋ ಅಗತ್ಯ ನನಗಿಲ್ಲ, ನನ್ನ ಪ್ರಕಾರ ಯಾವ ಕನ್ನಡಿಗನೂ ಅಗತ್ಯ ಇಲ್ಲ.
  –ಡಬ್ಬಿಂಗ್ ಬೇಡ ಎನ್ನುವವರ ಹೊಟ್ಟೆಪಾಡಿನ ಕೂಗು–
  ಡಬ್ಬಿಂಗ್ ಶುರು ಮಾಡಿದ್ರೆ ಅದ್ರಿಂದ ಸಾಕಷ್ಟು ಉದ್ಯೋಗ ಸೃಷ್ಟಿ ಆಗೋದಿಲ್ವೇನ್ರೀ? ಒಳ್ಳೇ ಕಮ್ಯುನಿಷ್ಟರು ಕಂಪ್ಯೂಟರ್ ವಿರೋಧಿಸಿದ ರೀತಿಯಲ್ಲಿ ಮಾತಾಡ್ತೀರಲ್ರೀ? ಡಬಿಂಗ್ ಮಾಡೋದ್ರಿಂದ ಇಲ್ಲಾ ಅಟ್ಲೀಸ್ಟ್ ಸಬ್-ಟೈಟಲ್ ಹಾಕೋದ್ರಿಂದ ನಮ್ಮ ಇಂಗ್ಲಿಷಾದ್ರೂ ಸ್ವಲ್ಪ ಸುಧಾರಿಸಬಹುದೇನೋ.
  ಚಿತ್ರರಂಗವನ್ನ ತಮ್ಮ ಕುಟುಂಬದ ಪಿತ್ರಾರ್ಜಿತ ಆಸ್ತಿಯ ಥರಾ ಮುಂದುವರೆಸಿಕೊಂಡು ಹೋಗಬೇಕು ಅನ್ನೋ ಮೆಂಟಾಲಿಟಿಯ ಮಂದಿಗೆ ಇಂಥಾ ಅಸಮರ್ಪಕ ಸಮರ್ಥನೆಗಳ ಐಡಿಯಾ ಕೊಡೋ ಮೂಲಕ ಪಾಳೇಗಾರಿಕೆ ಮುಂದುವರಿಕೆಗೆ ನಿಮ್ಮದೇ ಆದ ಕೊಡುಗೆ ನೀಡ್ತಾ ಇದೀರಾ ಹತ್ವಾರ್ರೇ.. ನೆನಪಿರಲಿ.

  ಪ್ರತಿಕ್ರಿಯೆ
 4. Vikram Hathwar

  Mr. Tippeswamy,
  If Super, Ultpa Palta were bad movies, then it looks like you want to stop such movies by allowing dubbing ‘Robot’, ‘Kabhi Kushi Kabhi Gham’ and other HIGH QUALITY movies to our theaters.
  It is easy to pick few lines from the writeup, make it out of the context and throw some thoughts. You should remember that I am not taking any stand here. And, on comparing school kids. That is exactly what I said. Let us not compare yourselves to school kids. If one is matured enough then he would not support Dubbing for the purpose of making great movies. Thats ridiculous.
  What I am all asking for is for some sensible reasons. I neither got any clarification nor any sensible justification from your comment. So, I ignore it.

  ಪ್ರತಿಕ್ರಿಯೆ
 5. Kuppeswamy

  ರೀ ತಿಪ್ಪೇಸ್ವಾಮಿ ನೀವೇ ದೊಡ್ಡ ಪಾಳೆಗಾರನ ಥರ ಮಾತಾಡ್ತೀರಲ್ರೀ…

  ಪ್ರತಿಕ್ರಿಯೆ
  • ತಿಪ್ಪೇಸ್ವಾಮಿ ಹೊಸೂರು

   🙂
   ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ….

   ಪ್ರತಿಕ್ರಿಯೆ
 6. Harsha

  ಕೆಲವರು ಚರ್ಚೆ ಎಂದರೆ ತಾವು ನಂಬಿರುವ ತಮ್ಮ ನಿರ್ಣಯವನ್ನೇ ಹೊರಹಾಕುವುದು ಅಂತಲೇ ಭಾವಿಸಿದಂತಿದೆ.
  ಹಾಗಿದ್ದರೆ ಚರ್ಚೆ ಎಂದರೆ ಏನು ಎನ್ನುವುದನ್ನು ತಾವು ದಯಮಾಡಿ ವಿವರಿಸಬೇಕು.
  1) ಡಬ್ಬಿಂಗ್ ಮಾಡಲು ಅನುಮತಿ ಕೊಟ್ಟ ಕೂಡಲೇ ಕಳಪೆ ಮಟ್ಟದ ಚಿತ್ರಗಳು ಬರುವುದು ನಿಂತುಬಿಡುತ್ತವೆಯೇ?
  ಇಲ್ಲ. ಮತ್ತು ಅದು ನಮ್ಮ ವಾದವೂ ಅಲ್ಲ. ಕಳಪೆ ಮಟ್ಟದ ಚಿತ್ರಗಳು ಹಿಂದೆಯೂ ಇದ್ದವು, ಈಗಲೂ ಇವೆ ಮತ್ತು ಮುಂದೂ ಇರುತ್ತವೆ. ಕಳಪೆ ಮಟ್ಟದ ಚಿತ್ರಗಳಿಲ್ಲದಿದ್ದರೆ ಉತ್ತಮ ಚಿತ್ರಗಳಿಗೆ ಬೆಲೆಯಾದರೂ ಹೇಗೆ ಬರುತ್ತದೆ? ಅಸಲು ಡಬ್ಬಿಂಗ್ ಬರುವುದಕ್ಕೂ. ಚಿತ್ರಗಳ ಗುಣಮಟ್ಟಕ್ಕೂ ಸಂಭಂದವೇ ಇಲ್ಲ. ನಾವು ಕೇಳುತ್ತಿರುವುದು ಜಗತ್ತಿನ ಚಿತ್ರಗಳನ್ನ ನಮ್ಮ ಭಾಷೆಯಲ್ಲಿ ನೋಡುವ ಹಕ್ಕಿನ ಬಗ್ಗೆಯೇ ಹೊರತು ಕನ್ನಡ ಚಿತ್ರಗಳು ಏಕಾಏಕಿ ಗುಣಮಟ್ಟದಲ್ಲಿ ಏರಿಸಿಕೊಳ್ಳಬೇಕು ಅಂತಲ್ಲ.
  2) ಸ್ಪರ್ಧಾತ್ಮಕ ವಾತಾವರಣ ಇರುವುದರಿಂದಲೇ ಒಬ್ಬ ಒಳ್ಳೆಯ ಕವಿ ಹುಟ್ಟಿಕೊಂಡ ಅಥವ ಒಳ್ಳೆಯ ಚಿತ್ರ ತಯಾರಾಯಿತು ಎನ್ನುವುದಕ್ಕೆ ಯಾವುದಾದರು ಉದಾಹರಣೆ ಇದೆಯೇ?
  ಸ್ಪರ್ಧಾತ್ಮಕ ವಾತಾವರಣ ಇರುವುದರಿಂದ ಒಬ್ಬ ಒಳ್ಳೆಯ ಕವಿ ಹುಟ್ಟಿಕೊಂಡಿದ್ದು ಸುಳ್ಳಾಗಿರಬಹುದು ಆದರೆ ಒಳ್ಳೆಯ ಚಿತ್ರ ತಯಾರಾಗಿರುವ ಸಂಧರ್ಭ ಸಾಕಷ್ಟಿವೆ. ನನ್ನ ಮನವಿ ಇಷ್ಟೇ. ಇಂದಿನ ಸಿನೆಮ ಕೇವಲ ಕಲೆಯ ಮಾಧ್ಯಮ ಎನ್ನುವ ಭ್ರಮೆಯನ್ನ ಬಿಟ್ಟುಬಿಡಿ. ನೀವು ಕೇವಲ ಕಾಸರವಳ್ಳಿಯವರ ಸಿನೆಮಾದ ಬಗ್ಗೆ ಮಾತಾಡುತ್ತಿದ್ದರೆ ಬಹುಷಃ ಅದು ಕಲೆ ಎಂಬ ವಾದ ಒಪ್ಪಿಕೊಳ್ಳಬಹುದಿತ್ತೇನೋ. ಆದರೆ ಲಾಂಗು, ಮಚ್ಚು, ಡವ್ವು, ಐಟಂ, ಇವೆಲ್ಲಾ ಕೇವಲ ಕಲೆಗಾಗಿ ಮಾಡಿದ ಪ್ರಯತ್ನಗಳಲ್ಲ. ಸಿನೆಮಾ ಎಂದರೆ ದುಡ್ಡು ಕೂಡ, ದುಡ್ಡು ಎಂದರೆ ಸ್ಪರ್ಧೆ ಕೂಡ, ಸ್ಪರ್ಧೆ ಎಂದರೆ ಗುಣಮಟ್ಟ ಕೂಡ. ಕಲೆಯ ಪ್ರಸ್ತುತಿಗೂ, ಕಮರ್ಷಿಯಲ್ ಸಿನೆಮಾಗೂ ಸಂಭಂದವೇ ಇಲ್ಲ.
  3) ಒಳ್ಳೆಯ ಚಿತ್ರಗಳನ್ನು ಮಾಡುವವನು ಸುಮ್ಮನೇ ತನ್ನ ಕೆಲಸವನ್ನು ತಾನು ಶೃದ್ಧೆಯಿಂದ ಮಾಡುತ್ತಾನೆ
  ಬಹಳ ಸಂತೋಷ. ಕನ್ನಡದಲ್ಲಿ ಒಳ್ಳೆಯ ಚಿತ್ರಗಳು ಯಾವಾಗಲೂ ಬರುತ್ತಿರಲಿ.
  ಬೇರೆ ಭಾಷೆ ಕಲಿಯದಿರುವುದು ಸೋಮಾರಿತನವಾ? ಅಂದರೆ ಈ ಸೋಮಾರಿತನವನ್ನ ನಿವಾರಿಸುವುದಕ್ಕೆ ಸರಿಯಾಗಿ ಎಷ್ಟು ಭಾಷೆಗಳನ್ನ ಕಲಿಯಬೇಕು ನಾವು? ಹಾಗಾದರೆ ಬೇರೆ ಇನ್ಯಾವ ಭಾಷೆಯೂ ಬಾರದ monolingual ಆದ ಅಮೆರಿಕನ್ನರು, ಜಪಾನೀಯರು, ಇಂಗ್ಲಿಷರು, ಫ್ರೆಂಚರು ಸೋಮಾರಿಗಳ? ಈ ವಾದ ನಾನು ಇನ್ನೆಲ್ಲೂ ಕೇಳಿರಲಿಲ್ಲ ಬಿಡಿ ಸರ್. ಭಾಷೆಗಳ ಕಲಿಕೆ ಬಿಸಿಕಡುಬು ತುರುಕಿದಂತೆ ಮಾಡುವುದು ಖಂಡಿತ ಬೇಡ. ಇಷ್ಟವಿದ್ದವರು ಕಲಿಯುತ್ತಾರೆ, ಬೇಡದವರು ಬಿಡುತ್ತಾರೆ. ದಯವಿಟ್ಟು ಸೋಮಾರಿತನಕ್ಕೂ, ಆಸಕ್ತಿಗಳಿಗೂ ತಳುಕು ಹಾಕಬೇಡಿ.
  ವೈಯಕ್ತಿಕವಾಗಿ ನಿಮಗೆ ಹಿಂದಿಯ ಕರೋಡಪತಿ ಕಾರ್ಯಕ್ರಮವೇ ಇಷ್ಟವಾಗಿದ್ದರೆ ನನ್ನ ಅಭ್ಯಂತರವಿಲ್ಲ. ಏಕೆಂದರೆ ನನಗೆ ಪುನೀತ್ ಕಾರ್ಯಕ್ರಮವನ್ನ ನಡೆಸಿಕೊಡೊ ರೀತಿಯೇ ಹೆಚ್ಚು ಇಷ್ಟವಾಗಿದ್ದು. ರೀಜಿಸ್ ನಡೆಸಿಕೊಡುವ Who wants to be a millionaire ಕೂಡ ನನಗೆ ಬಹಳ ಇಷ್ಟವಾಗುತ್ತೆ. ಆದರೆ ಎಷ್ಟೆಂದರೂ ಅದರಲ್ಲಿ native touch ಇಲ್ಲವಲ್ಲ. ನಮ್ಮ ವಾದವೂ ಇದೇ. ಕಾರ್ಯಕ್ರಮ ಜನರಿಗೆ ಮುಟ್ಟುವಂತೆ ಇದ್ದರೆ ಯಾವುದೇ ಸ್ಪರ್ಧೆಯಿದ್ದರೂ ಕಾರ್ಯಕ್ರಮ ಗೆಲ್ಲುತ್ತದೆ. ಅದಕ್ಕೆ ಯಾವುದೇ ಡಬ್ಬಿಂಗ್ ನಿಷೇದದ ಊರುಗೋಲು ಬೇಕಿಲ್ಲ.
  ಡಬ್ಬಿಂಗ್ ವಿರೋಧಿಗಳು ಸಂಸ್ಕೃತಿ, ನಾಶ, ರಾಜ್ಕುಮಾರ್, ಅನಕೃ ಇವೆ ಮುಂತಾದ ನಾಲ್ಕಾರು ಪದಗಳನ್ನ ಬಿಟ್ಟು ಡಬ್ಬಿಂಗ್ ಸಮರ್ಥಿಸಿಕೊಳ್ಳೋದಕ್ಕೆ
  ಹೊಸ ಪದಗಳನ್ನ ಹುಡುಕಬೇಕಾದ ಸಮಯ ಈಗ ಬಂದಿದೆ. ಡಬ್ಬಿಂಗ್ ಸರಿಯಾ ಅಥವಾ ತಪ್ಪಾ ಅನ್ನುವ ವಾದ ಇನ್ನು ನೂರು ವರ್ಷ ಬೇಕಾದರೆ ನಡೆಯಲಿ. ಆದರೆ unconstitutional ಆದ ಡಬ್ಬಿಂಗ್ ನಿಷೇದವನ್ನ ತಕ್ಷಣ ಹಿಂಪಡೆಯಬೇಕು.
  ನ್ಯೂ ಜೆರ್ಸಿಯಲ್ಲಿ ಇದ್ದೀರಿ ಅಂತ ಕೇಳಿದೆ. ಸಾಮರ್ಸೆಟ್ ನಲ್ಲಿರುವ ಹೊಯ್ಸಳಕ್ಕೆ ಭೇಟಿ ಕೊಟ್ಟಿದ್ದೀರಿ ಅಂತ ಭಾವಿಸಿದ್ದೇನೆ. ಅಚ್ಚ ಕನ್ನಡದವರ ರೆಸ್ಟುರಾಂಟ್. ಮತ್ತೊಮ್ಮೆ ಭೇಟಿ ಕೊಟ್ಟಲ್ಲಿ ರಮೇಶ್ ಗೆ ಹರ್ಷ ವಿಚಾರಿಸಿದ ಅಂತ ಹೇಳಿ. ಗೊತ್ತಾಗುತ್ತೆ ಅವರಿಗೆ.

  ಪ್ರತಿಕ್ರಿಯೆ
 7. murali hathwar

  Hi Vikram,
  Some good points and a balanced argument.
  I think it is better to view dubbing TV programmes and movies as two separate entities. Movie dubbing is an established norm all over the world. This phenomenon has benefited the commercial movie makers (including our own Rajni in Japan) all over the world. A ‘state sponsored’ ban on movie dubbing is against the market principles and is unlikely to withstand the test of time. Unfortunately, neither the government or the movie industry in Karnataka took steps to make the best use of the ban over all these years to explore innovative ways to make ‘sandalwood’ more competitive and to increase its reach. It is likely to be more and more difficult to keep the dubbing away for long whether we like it or not as movie production is getting more corporatized. The producers are more market savvy and would like to increase their market capture. Unless the kannada movie market expands, it will cease to be viable for them to remake that movie in kannada. Dubbing becomes a more cost effective option to capture the small kannada-only spectator market. In other words, movie industry needs to nurture a market and maintain a long term relationship with the market to be successful. If this does not happen, any amount of subsidy or other ‘fights’ will not sustain the industry.
  TV field on the other hand is entirely different. Dubbing is a new concept here as the norm so for, at least in India, is to remake the serials in their respective language based on licensing arrangements with the original producers. This rule applied for both popular national and international programmes. The market forces that have helped this phenomenon is the corporate nature of the TV channels and the wider reach of the TV channels. The TRP and the associated advertising revenues determine the success and failure of the programmes and as a result, the respective channels. An unsuccessful programme will die even if it is original. Dubbing in TV channels does not pose a big risk as they are guided by the market forces; the canvas of the TV channels is lot bigger than that of cinema industry.
  You mentioned about KBC. You may recollect that KBC copies in Zee and other channels were big flops even though the money on offer was a lot higher. Similarly, if one channel airs the dubbed version and another comes with an original idea, it will be the market forces that determine the success of the programmes. In other words, the life of a TV programme is determined on a weekly basis.
  I would view Amir Khan’s programme on the same lines as Discovery and National Geographic. It is not a chat show, but a well researched documentary that focuses on raising awareness at a national level. The dubbing here would have a wider reach in Karnataka. This may encourage the local TV channels to produce similar programmes focusing on local issues ( for example mining industry, flouride problems etc) or to give a local focus to the problems highlighted in the national programme.
  In summary, Dubbing has to be viewed separately for cinema and TV. Dubbing will certainly enhance the value for the viewers at least in certain TV shows. It is best for the market forces to decide what can be profitably dubbed. A ban is artificial and unlikely to be sustained for long.
  Murali Hathwar

  ಪ್ರತಿಕ್ರಿಯೆ
 8. Vikram Hathwar

  Ban is artificial and it should be removed. I completely agree. But, lets keep our argument only to that. Let us not provide childish and fragile reasons to support dubbing. Otherwise, there would be no difference between us and people who are framing arguments to ban dubbing.
  This is what I wrote in response to Dattatri and Geeta:
  @Geeta, I agree with you. My question is why are we making our arguments in support of Dubbing to oppose such elements? Instead of impulsive reactions, do we really foresee and understand what would be the implications of Dubbing? Are we equipped enough to come to a conclusion? I would welcome if one decides to Dub Amir Khan’s show. I would demand for having History and discovery channel in Kannada. Agreeing to that, how can we stop Rakhi Sawant’s show? If you form a committee for that. I have this question- WHO ARE YOU TO DECIDE WHAT TO DUB AND WAHT NOT? I demand you also dub Raakhi Sawant’s Show and Amitab’s Crorepati. I find it more entertaining, knowledgable. etc., India is a free country and we are Indian’s first. Moreover Art should not have any fence. So, My demand is plz allow all kind of programs to be dubbed in Kannada. Do not stop anybody. Do not form any comittee. I am matured enough to decide what I should watch. And, If a channel head thinks that hundred other dubbed high quality programs are better than our serials (including Seetaram Sir’s and other young talents with even higher potential) and provides them hot time slots, then nobody should have any objection to that.
  @Dattatri Sir- Plz do not frame this argument on the basis of Literary translations. There is a difference between Inspiration and Competition. We should also understand that Cinema and T.V have space and time constraint. Books do not have that.
  I have couple of simple points:
  1) Allow Dubbing of any movies and release them in DVDs only. (Plz don’t tell me how I can expect everybody to have DVD players at house). If the only concern is opening ourselves globaly, then it is served.
  2) Allow channel dubbing. Instead of occupying space in kannada why dont they create their own space in kannada? Ask them to telecast all their programs in kannada.
  I know that Amir has nothing to do with it. He is just selling his product to various TV channels. But, do you think it is hard for Mr. Amir khan to create such shows in selective local languages to discuss with the people of that land? Am not questioning Amir’s social concerns. If he really wanted to reach people and create awareness countrywide, he would have thought about it in a bigger canvas than simply dubbing it to other languages.
  If somebody is stopping dubbing with goondagiri, I oppose it. If somebody tells I want to enlighten my people so I support dubbing and form a committee to judge what people should see, I can’t buy it.
  It is simple. I oppose any kind of ban. FULL STOP.

  ಪ್ರತಿಕ್ರಿಯೆ
  • murali hathwar

   I was neither arguing for or against dubbing. My attempt was to emphasise that, the success and failure of a movie/tv programme is decided by market forces and cannot be influenced for long by ‘fragile’ artificial barriers like dubbing ban etc. It is childish to think otherwise.

   ಪ್ರತಿಕ್ರಿಯೆ
 9. Vikram Hathwar

  Dear Harsha – Place I live is close to New York. Planning to go that hotel in june. Discount enaadru siguttaa swaami? 🙂

  ಪ್ರತಿಕ್ರಿಯೆ
 10. Vikram Hathwar

  There is only one VALID and sensible point in the favor of dubbing – CONSTITUTION OF OUR COUNTRY. We all should go by this and not any crappy sentimental statements.

  ಪ್ರತಿಕ್ರಿಯೆ
 11. SunilHH

  ಡಬ್ಬಿಂಗ್ ಬೇಡ ಅನ್ನೋರ ವಾದ ಏನು ?
  ೧.ಡಬ್ಬಿಂಗ್ ಬಂದ್ರೆ ೫೦೦೦ ಸಾವಿರ ಮಂದಿ ಕೆಲಸ ಕಳೆದುಕೊಳ್ಳುತ್ತಾರೆ
  ಡಬ್ಬಿಂಗ್ ಕಲಾವಿದರಿಗೆ ಕೆಲಸ ಸಿಗೋಲ್ವ ? ಚಿತ್ರ ನಿರ್ಮಾಣ ಮಾಡೋದು ನಿಲ್ಸಿ ಅಂತ ಯಾರು ಹೇಳೋದು?
  ೨.ನಮ್ಮ ಸಂಸ್ಕೃತಿ ಚಿತ್ರಗಳು ಬರೋಲ್ಲ
  ನಮ್ಮ ಸಂಸ್ಕೃತಿ ಅಂದರೆ ಏನು? ಎಷ್ಟು ಸಿನಿಮಗಳು, ವರ್ಷಕೆ ನಮ್ಮ ಸಂಸ್ಕೃತಿ ಬಿಂಬಿಸುತ್ತಿವೆ? ಇಷ್ಟಕು ಸಿನಿಮಾ ನೋಡೆ ಸಂಸ್ಕೃತಿ ಕಲಿತಿರೋವರು ಎಷ್ಟು ಮಂದಿ ಇದ್ದಾರೆ?
  ೩. ನಮ್ಮ ಮಾರುಕಟ್ಟೆ ಚಿಕ್ಕದು.
  ಚಿಕ್ಕದ ಮಾಡಿಕೊಂಡಿರೋದು ಯಾರು? ಬೇರೆ ರಾಜ್ಯದಲಿ ಪ್ರದರ್ಶಿಸಿ, ಇವಾಗ ನೋಡಿ ತೆಲುಗು ಸಿನೆಮಗಳು ಕರ್ನಾಟಕದ ಮೂಲೆ ಮೂಲೆಗಳಿಗೆ ಪ್ರದರ್ಶನಗೊಳುತಿವೆ.
  http://timesofindia.indiatimes.com/city/hyderabad/Tollywood-strikes-it-rich-in-Karnataka/articleshow/13114291.cms
  ೪. ಜನರಿಗೆ ಬೇಕಿರೋದು ಮನರಂಜನೆ, ಅದು ಯಾವುದೇ ಭಾಷೆ ಇದ್ದರು ನೋಡುತ್ತಾರೆ
  ನಮ್ಮವರು ಬೇರೆ ಭಾಷೆ ಕಲಿತಷ್ಟು ಬೇರೆ ರಾಜ್ಯದವರು ನಮ್ಮ ಭಾಷೆ ಕಲಿಯೋದು ಬೇಕಿಲ್ಲ, ಹೇಗಿದ್ದರೂ ನಮವರು ಅವರ ಭಾಷೆ ನಲೆ ವ್ಯವಹಾರ ಮಾಡುತ್ತಾರೆ ಇನ್ ಯಾಕ್ಕೆ ಹೊರ ರಾಜ್ಯದವರು ನಮ್ಮ ಭಾಷೆ ಕಲಿತ್ತಾರೆ?
  ಇದು ಹೀಗೆ ಮುಂದುವರೆದಲ್ಲಿ ಬೆಂಗಳೊರಿನಲ್ಲಿ ಆಗಿರೋ ಪರಿಸ್ಥಿತಿ ರಾಜ್ಯದ ಮೂಲೆ ಮೂಲೆಗಳಲು ಆಗುತ್ತೆ..
  ಡಬ್ಬಿಂಗ್ ಬೇಕಿರೋದು ಕನ್ನಡ ಭಾಷೆ ಉಳಿವಿಗಾಗಿ, ಡಬ್ಬಿಂಗ್ ಬಂದಾದರೂ ಪರ ಭಾಷೆ ಸಿನಿಮಾಗಳು ರಾಜ್ಯದ ಇತರಕಡೆ ಪ್ರದರ್ಶನಗೊಳೋದು ನಿಲಿಸಬಹುದು.
  ಪರಭಾಷೆ ನಿರ್ಮಾಪಕರಿಗೆ ಬೇಕಿರೋದು ಹಣ್ಣ, ಅವರಿಗೆ ಅವರ ಸಿನಿಮಾ ಆಗೇ ಬಿಡುಗಡೆಗೊಂಡರು ಸರಿನೆ ಡಬ್ಬಿಂಗ್ ನಲಾದರು ಸರಿನೆ.
  ತೆಲುಗು ಚಿತ್ರರಂಗದಲಿ ಡಬ್ಬಿಂಗ್ ಇದೆ, ಹಿಂದಿಯ Dabbang ಸಿನಿಮವನ್ನು ಡಬ್ಬ ಮಾಡಬಹುದಿತು, ಮಾಡಿದ್ರ ? ಇಲ್ಲ, ರೀಮೇಕ್ ಮಾದ್ಕೊಂಡರು ಗಬ್ಬರ್ ಸಿಂಗ್ ಅಂತ…. ಇದನ್ನೇ ನಮ್ಮ ಚಿತ್ರ ರಂಗ ಮಾಡಬಹುದು ಅಲ್ವ?
  ನಮ್ಮ ಜನಕ್ಕೆ ಕನ್ನಡ ಚಿತ್ರರಂಗ ಕೊಡದೇ ಇರೂ ಮನರಂಜನೆ ಪರ ಭಾಷೆ ಸಿನಿಮಾಗಳು ಕೊಡುವಾಗ, ಅದು ನಮ್ಮ ಭಾಷೆ ನಲೆ ಕೊಟ್ಟರೆ ಒಳ್ಳೆದಲವೇ?
  When NGC ,History ,discovery ,cartoon channels are ready to offer their channels in our own language why not take it?

  ಪ್ರತಿಕ್ರಿಯೆ
 12. ಆದಿ ಜೀವರತ್ನ

  Valid comments by Murali. Apparently, dubbing ceases the act of remaking or recreation, which is another big issue in KFI.
  And please do not use the word sandalwood for Karantaka Film Industry (KFI), it doesn’t deserve the status, sandalwood,yet. Also it’s an insult to the family Santalaceae.
  Looks like the writer was in dilemma when he posted this but by 6:47pm he is very much clear. A committee to monitor dubbing is definitely a laughable stuff.
  By allowing dubbing Karnataka creates an level playing field for all, and is definitely a wake-up call to the so far pampered and paralyzed KFI.
  Dubbing makes quality entertainment and knowledge easily accessible to Kannadigas staying in nooks and crannies.
  It is democratic.
  By lifting restrictions on dubbing, a community respects people’s right to choose and there by remains a healthy and respectable culture.
  Lifting restrictions on dubbing can be described as beginning of a new era to Kannada and its community, or it can also be looked as set of hypocrites coming out of their shells.
  KFI also needs to look at dubbing Kannada movies into Kodava, Tulu and Konkani and try to gain their trust and respect by respecting their language and culture which are existing in Karnataka since thousands or at least hundreds of years.
  Well said Harsha, a man need not learn more than one language, except it’s his hobby to learn languages. In Karnataka’s context we had to learn English for the sake of our jobs and is the only language which is pulling jobs and Hindi is force fed.

  ಪ್ರತಿಕ್ರಿಯೆ
 13. Harsha

  ವಿಕ್ರಂ, ಡಿಸ್ಕೌಂಟ್ ಸಿಗೋದಿಲ್ಲ. 😀 ಆದರೆ ಅಚ್ಚ ಕನ್ನಡದ ಹೆಸರುಗಳಿರುವ ಮೆನು ನೋಡಿ, ರೆಸ್ಟುರಾಂಟ್ ನಲ್ಲಿ ಎಲ್ಲೆಲ್ಲೂ ಕಾಣುವ ಬೇಲೂರು, ಹಳೆಬೀಡಿನ ಶಿಲ್ಪಕಲೆಯ ಸೌಂದರ್ಯವನ್ನ ನೋಡಿ ಕಣ್ಣು ತಂಪು ಮಾಡಿಕೋಬಹುದು. ಕನ್ನಡದ ಹಾಡುಗಳನ್ನ ಕೇಳಿ ಕಿವಿ ತಂಪು ಮಾಡಿಕೋಬಹುದು. ಕನ್ನಡದಲ್ಲಿ ಎಲ್ಲರೊಡನೆ ಮಾತಾಡಿ ಸಂತೋಷಪಡಬಹುದು. ಇನ್ನು ಆಹಾರದ ರುಚಿ ಅಂತೂ ಅದ್ಭುತ. ಗೂಗಲ್ ಮಾಡಿ reviews ನೋಡಿ. 5 stars ಇವೆ. Best in New Jersey ಅಂತ ವೋಟ್ ಆಗಿದೆ. 30 ಕ್ಕೂ ಹೆಚ್ಚಿನ ರಾಜ್ಯಗಳಲ್ಲಿ ಇಂಡಿಯನ್ ಆಹಾರ try ಮಾಡಿರುವ ನನ್ನ ಪ್ರಕಾರ (ಕನ್ಸಲ್ಟೆಂಟ್ ಆಗಿ ಕೆಲಸ ಮಾಡಿದುದರ ಫಲ!) US ನಲ್ಲೇ ಅತ್ಯುತ್ತಮ ಇಂಡಿಯನ್ ರೆಸ್ಟುರಾಂಟ್ ಇದು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: