ಡಬ್ಬಿಂಗ್ ಹಾಗೂ ಪುರೋಹಿತಶಾಹಿ ಮನಸ್ಸು

ಹೇಳಿಕೇಳಿ ‘ಜುಗಾರಿ ಕ್ರಾಸ್’ ಚರ್ಚೆ, ವಾದ, ವಿವಾದಕ್ಕಾಗಿಯೇ ಇರುವ ವೇದಿಕೆ. ಎಸ್ ಸಿ ದಿನೇಶ್ ಕುಮಾರ್  ’ಡಬ್ಬಿಂಗ್ ನಿಷೇಧ ಎಂಬ ಹುಚ್ಚಾಟದ ಸುತ್ತ….’ ಲೇಖನ ಬರೆದು ಡಬ್ಬಿಂಗ್ ಆಗಬೇಕಾದರ ಔಚಿತ್ಯದ ಬಗ್ಗೆ ಗಮನ ಸೆಳೆದಿದ್ದರು. ಆ ಲೇಖನ ಇಲ್ಲಿದೆ. ಅಮೀರ್ ಖಾನ್ ಅವರ ‘ಸತ್ಯಮೇವ ಜಯತೆ’ ಕನ್ನಡಕ್ಕೆ ಡಬ್ ಆಗಬಾರದು ಎಂದು ದನಿ ಎತ್ತಿರುವ ಸಂದರ್ಭದಲ್ಲಿ ದಿನೇಶ್ ತಮ್ಮ ನೋಟವನ್ನು ಹಂಚಿಕೊಂಡಿದ್ದಾರೆ. ಈಗ ರಂಗ ಹಾಗೂ ಚಿತ್ರನಟ ಅಚ್ಯುತಕುಮಾರ್ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದ ಅಭಿಪ್ರಾಯವನ್ನು ಚರ್ಚೆಯ ಮುಂದುವರಿಕೆಯಾಗಿ ಇಲ್ಲಿ ನೀಡುತ್ತಿದ್ದೇವೆ. ಚರ್ಚೆಗೆ ಸ್ವಾಗತ. ನೀವೂ ಭಾಗವಹಿಸಿ.

ಡಬ್ಬಿಂಗ್ ಗೆ ಒತ್ತಾಯಿಸುವ, ಕನ್ನಡದಲ್ಲೇ ಎಲ್ಲಾ ಬೇಕು ಎನ್ನುವ ಮನಸ್ಥಿತಿಯ ಹಿಂದೆ ಒಂದು ಪುರೋಹಿತಶಾಹಿ ಮನಸ್ಸು ಇದೆ. ಬೇರೆ ಯಾವುದನ್ನೂ  ಕನ್ನಡಿಗರು, ಅದರಲ್ಲೂ ಹಳ್ಳಿಗಾಡಿನ ಜನ, ದಲಿತರು, ಬಡವರು, ಕೆಳಜಾತಿಯವರು ಕಲಿಯಬಾರದೆಂಬ ಬ್ರಾಹ್ಮಣರ  ಹುನ್ನಾರ..      ]]>

‍ಲೇಖಕರು G

May 1, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಡಿ ಎಸ್ ರಾಮಸ್ವಾಮಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೂ ಕರೆಯುವುದು ವಾಡಿಕೆ. ಕನ್ನಡ ಭಾಷೆಯು ಕೊಡ ಮಾಡಿದ...

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

13 ಪ್ರತಿಕ್ರಿಯೆಗಳು

 1. ಆನಂದ್

  ಅಂತೂ ಇದಕ್ಕೆ ಜಾತಿ ಬಣ್ಣ ಹಚ್ಚೋದೊಂದು ಬಾಕಿಯಿತ್ತು. ಅದೂ ಆಯ್ತು. ಆದರೆ ಶ್ರೀಮಾನ್ ಅಚ್ಯುತಕುಮಾರರು ಅರಿಯಬೇಕಾದ್ದು ಏನೆಂದರೆ ಡಬ್ಬಿಂಗ್‌ಪರರು ಎಲ್ಲೂ ಮೂಲಭಾಷೆಯ ಸಿನಿಮಾ ಬಿಡುಗಡೆಯಾಗಬಾರದು ಎಂದಿಲ್ಲ! ಹಾಗಾಗಿ ಅಚ್ಯುತಕುಮಾರರ ಈ ಹುನ್ನಾರ ಆರಂಭದಲ್ಲೇ ಎಡವಿಬಿದ್ದಿದೆ. ನೋಡುಗರಿಗೆ ಮೂಲಭಾಷೆಯಲ್ಲಿಯೂ, ಕನ್ನಡದಲ್ಲಿಯೂ ಸಿನಿಮಾಗಳನ್ನು ನೋಡುವ ಅವಕಾಶವನ್ನು ಕೊಡಬೇಕು ಹಾಗೂ ಯಾವ ಅವಕಾಶವನ್ನೂ ಕಿತ್ತುಕೊಳ್ಳಬಾರದು ಎನ್ನುವುದು ಡಬ್ಬಿಂಗ್ ಪರರ ನಿಲುವು!! ಈಗ ನಿಜಕ್ಕೂ ತಮ್ಮದೇ ನುಡಿಯಲ್ಲಿ ಪ್ರಪಂಚದ ಆಗುಹೋಗುಗಳನ್ನು, ಜ್ಞಾನ ವಿಜ್ಞಾನಗಳನ್ನು ನೋಡಿ ಆ ಮೂಲಕ ಏಳಿಗೆಹೊಂದುವ ಅವಕಾಶವನ್ನು ಕನ್ನಡನಾಡಿನ ಹಳ್ಳಿಗಾಡಿನ ಬಡವರು ದಲಿತರಿಂದ ಕಿತ್ತುಕೊಳ್ಳುತ್ತಿರುವ ಪುರೋಹಿತಶಾಹಿ ಮನಸ್ಸಿರುವುದು ಡಬ್ಬಿಂಗ್ ವಿರೋಧಿಗಳಿಗೇ ಹೊರತು ಪರರಿಗಲ್ಲ!!

  ಪ್ರತಿಕ್ರಿಯೆ
 2. shreenidhids

  I Pity Achyutha Kumar. ಒಬ್ಬ ಕಲಾವಿದನಾಗಿ ಅವರ ಬಗ್ಗೆ ನನಗೆ ಗೌರವವಿತ್ತು! ಯಾಕ್ರೀ ಎಲ್ಲ ಚರ್ಚೆಗಳಲ್ಲಿ ಬ್ರಾಹ್ಮಣರನ್ನ ಎಳೆದುಕೊಂಡು ಬರ್ತೀರಿ?!! ಬ್ರಾಹ್ಮಣರಂತೆ, ಹುನ್ನಾರವಂತೆ! Please wake up Achyutha Kumar! ಯಾವ ಕಾಲದಲ್ಲಿದೀರಿ ನೀವು?!

  ಪ್ರತಿಕ್ರಿಯೆ
 3. Prashanth

  ಕೆಲವೆ ಕೆಲವು ಜನರ ಹಿತಾಸಕ್ತಿಗೊಸ್ಕರ ಡುಬ್ಬಿಂಗ ನಿಷೇಧ ಒಳ್ಳೇಯದೆ?!! ಇದು ಕನ್ನಡಕ್ಕೆ ಮಾರಕ..
  ಅಚ್ಯುತರಾವ ಅವರೆ.. ಹಳ್ಳಿಗಾಡಿನ ಜನ, ದಲಿತರು, ಬಡವರು, ಕೆಳಜಾತಿಯವರು ಏನು ಕಲಿಯಬಾರದೆಂಬದು ನಿಮ್ಮ ಹುನ್ನಾರ ಅದಕ್ಕೆ ದಬ್ಬಿಂಗ ನಿಷೇಧ ಬೆಕು ಏನ್ನುತ್ತಿದ್ದಿರಿ… ಯಾಕಂದರೆ ಅವರಿಗೆ ಗೊತ್ತಿರುವ ಭಾಷೆ ಕನ್ನಡ ಒಂದೆ! ಡಬ್ಬಿಂಗ ನಿಂದ ಇಡೀ ಜಗತ್ತಿನ ಆಗುಹೊಗುಗಳನ್ನು ಅವರು ತಿಳಿದುಕೊಳ್ಳಬಹುದು ಅದು ಅವರಿಗೆ ಗೊತ್ತಿರುವ ಭಾಷೆಯೆಲ್ಲಿಯೆ!

  ಪ್ರತಿಕ್ರಿಯೆ
 4. Sukhesh

  “ಪುರೋಹಿತಶಾಹಿ ಮನಸ್ಸು” ಅನ್ನೋ term ತುಂಬಾನೇ versatile. ಅದನ್ನ ಯಾವ ಸಂದರ್ಭದಲ್ಲಿ ಬೇಕಾದರೂ, ಹೇಗೆ ಬೇಕಾದರೂ ತೂರಿಸಿಬಿಡಬಹುದು. ಅದು ಮಾಡಬೇಕಾದ ಕೆಲಸವನ್ನ ಖಂಡಿತಾ ಮಾಡುತ್ತೆ.
  ಅಚ್ಯುತಕುಮಾರ್ ವಾದ ನಂಗೆ ಅರ್ಥ ಆಗ್ಲಿಲ್ಲ. ಅವರು ಹೇಳಿರೋದು ಏನಂತ? ಈಗ ಹಳ್ಳಿಗಾಡಿನ ಜನ, ದಲಿತರು, ಬಡವರು, ಕೆಳಜಾತಿಯವರು ಬೇರೆ ಭಾಷೆ ಚಿತ್ರಗಳನ್ನ ಅದೇ ಭಾಷೆಯಲ್ಲಿ ನೋಡಿ ಆ ಭಾಷೆಗಳನ್ನ ಕಲೀತಾ ಇದಾರೆ ಅಂತಲಾ? ಟೈಟಾನಿಕ್ ಅಂತಾ ಚಿತ್ರಗಳನ್ನ ಇಂಗ್ಲಿಶ್ ಭಾಷೆಯಲ್ಲೇ ನೋಡಿ ಆನಂದಿಸ್ತಾ ಇದಾರೆ ಅಂತಲೇ?

  ಪ್ರತಿಕ್ರಿಯೆ
 5. ಕನ್ನಡಿಗ....

  ಹುಚ್ಚಾಪಟ್ಟೆ ಸಿಟ್ಟು ಬಂದಾಗ, ಯಾವದರ ವಿರುದ್ಧ ಏನಾದರೂ ಎತ್ತಿಕಟ್ಟಬೇಕಾಗಿ ಬಂದಾಗ ಆಕ್ರೋಶ ವ್ಯಕ್ತಪಡಿಸುವ ಮಾರ್ಗವೊಂದು ಸೃಷ್ಟಿಯಾಗಿಬಿಟ್ಟಿದೆ. ಮನೆಭಾಷೆ, ಬೀದಿಭಾಷೆ,ಅಟ್ಟದಭಾಷೆ ಎಂಬವು ಮೂಗು ತೂರಿಸೋದು ಇಲ್ಲಿಯೇ… ಅಲ್ಲಾ ಸಾರ್… ದಲಿತರು, ಬಡವರು, ಕೆಳಜಾತಿಯವರಿಗೆ ಚಾಪ್ಲಿನ್ ಮೂಕಿ ಚಿತ್ರಗಳನ್ನ ತೋರಿಸಿದರೂ ಅರ್ಥವಾಗುತ್ತೆ, ಬಿದ್ದುಬಿದ್ದು ನಗಾಡ್ತಾರೆ. ಈಗಿನ ಸೆನೆಮಾ ಭಾಷೆ ಯಾವದು ಅನ್ನೋ ಗೊಂದಲದಲ್ಲಿರುವಾಗ ಚಿತ್ರರಂಗದವರು ತಾವು ಸೃಷ್ಟಿಸುತ್ತಿರುವ ಸಾಮಾಜಿಕ ಪ್ರತಿಮೆಗಳ ಬಗ್ಗೆ ಚಿಂತಿಸೋದು, ಕ್ರಿಯಾಶೀಲವಾಗಿ ತೊಡಗಿಕೊಳ್ಳೋದು ಬಿಟ್ಟು- ಡಬ್ಬ ಮಾಡೋದರ ಹಿಂದೆ ಪುರೋಹಿತಶಾಹಿ ಹುನ್ನಾರ ಇದೆ ಅಂತ ಆರೋಪಿಸೋದು ಸರಿನಾ? ಕನ್ನಡ ಭಾಷೆ ಎಲ್ಲವನ್ನೂ ಒಳಗೊಳ್ಳುವಂತಾದರೆ ಒಳ್ಳೆಯದಲ್ಲವೆ? ಈ ಮಧ್ಯಮವರ್ಗೀಯ ಜನ ಹಚ್ಚಿಕೊಡೋದು ಇದೆ ಥರ ಇರುತ್ತೆ ಅನ್ನಿಸುತ್ತೆ.

  ಪ್ರತಿಕ್ರಿಯೆ
 6. ಹುಲಿಕುಂಟೆ ಮೂರ್ತಿ

  ಮಾನವೀಯ ವಿಚಾರಗಳನ್ನು ಯೋಚಿಸುವವರಿಗೆ ಭಾಷೆ ಅಡ್ಡವಾಗಬೇಕೆ..? ಅಚ್ಯುತ್ ಮಾತಿನಲ್ಲಿನ ಪದಗಳನ್ನು ಹಿಡಿದುಕೊಂಡು ಶತಮಾನಗಳಿಂದ ಭಾರತಕ್ಕೆ ಆಗಿರುವ ಅನ್ಯಾಯವನ್ನು ಮುಚ್ಚಿಹಾಕಲು ಸಾಧ್ಯವಿಲ್ಲ; ಻ವರ ಮಾತಿನಲ್ಲಿ ಸತ್ಯಾಂಶವಿಲ್ಲ ಎಂದು ಹೇಳುವ ಧೈರ್ಯವಿಲ್ಲದವರು ತುಂಬಾ ಹಾರ್ಷ್ ಆಗಿ ಪ್ರತಿಕ್ರಿಯಿಸಬಲ್ಲರು.. ಇಷ್ಟಕ್ಕೂ ಡಬ್ಬಿಂಗ್ ಭಾಷೆಯ ಸಮಸ್ಯೆ ಅಲ್ಲ.

  ಪ್ರತಿಕ್ರಿಯೆ
 7. ಸಂದೀಪ್ ಕಾಮತ್

  ಅಚ್ಯುತರವರು ಸಿನೆಮಾದಲ್ಲದೆ ನಿಜ ಜೀವನದಲ್ಲೂ ಕಾಮಿಡಿ ಮಾಡಲು ಶುರು ಮಾಡಿದ್ದಾರೆ!
  ಇಂಗ್ಲೀಶ್ ನಲ್ಲಿ ಒಂದು ಹೇಳಿಕೆ ಇದೆ. “You can lead a horse to water, but you can’t make it drink” ಅದನ್ನು ಕನ್ನಡಕ್ಕೆ ‘ಡಬ್ಬಿಂಗ್’ ಮಾಡಿದಾಗ ಹೀಗೆ ಅರ್ಥ ಬರುತ್ತೆ ” ನೀವು ಕುದುರೆಯನ್ನು ನೀರಿನವರೆಗೆ ಕರೆದುಕೊಂಡು ಹೋಗಬಲ್ಲಿರಿ ಆದರೆ ಅದು ನೀರು ಕುಡಿಯುವಂತೆ ಮಾಡಲಾರಿರಿ “. ಕನ್ನಡ ಚಿತ್ರೋದ್ಯಮಕ್ಕೆ ಇದನ್ನು ಅನ್ವಯಿಸುವುದಾದರೆ “ನೀವು ಪ್ರೇಕ್ಷಕರನ್ನು ಥಿಯೇಟರ್ ವರೆಗೆ ಎಳೆದುಕೊಂಡು ಹೋಗಬಲ್ಲಿರಿ ಆದರೆ ಚಿತ್ರ ನೋಡುವಂತೆ ಮಾಡಲಾರಿರಿ!”
  ನಾನು ಡಬ್ಬಿಂಗ್ ನ ಪರವಾಗಿಯೂ ಇಲ್ಲ ವಿರೋಧವಾಗಿಯೂ ಇಲ್ಲ. ಯಾಕಂದರೆ ನನಗೆ ಇಂಗ್ಲೀಷ್ ಅರ್ಥ ಆಗುತ್ತೆ ಹಿಂದಿಯೂ ಅರ್ಥ ಆಗುತ್ತೆ. ಹಾಗಾಗಿ ನಾನು ಯಾವುದೇ ಚಿತ್ರವನ್ನು ಮೂಲ ಭಾಷೆಯಲ್ಲಿ ನೋಡಲು ಬಯಸುತ್ತೇನೆ. ಹೀಗಾಗಿ ನನಗೆ ಡಬ್ಬಿಂಗ್ ಬೇಕು ಅನ್ನೋ ಅಗತ್ಯ ಸಧ್ಯಕ್ಕಿಲ್ಲ.
  ಆದರೆ ಬೇಸರ ತರೋ ವಿಷಯ ಅಂದ್ರೆ ಚಿತ್ರೋದ್ಯಮ ಅನ್ನೋದು ಒಂದು ಪಕ್ಕಾ ವ್ಯವಹಾರ. ಏನೆ ಕ್ರಿಯೇಟಿವಿಟಿ ಅದು ಇದು ಅಂತ ಸಮಜಾಯಿಶಿ ನೀಡಿದರೂ ದಿನದ ಕೊನೆಗೆ ಅದು ವ್ಯವಹಾರ. ಥಿಯೇಟರ್ ಬಾಡಿಗೆ ನೀಡಿದವನಿಂದ ಹಿಡಿದು ನಟಿಸಿದ ನಟ ನಟಿಯರು, ನಿರ್ದೇಶಕ, ನಿರ್ಮಾಪಕ ಎಲ್ಲರ ಮೊದಲ ಆದ್ಯತೆ ಹಣ ಗಳಿಸೋದು(ಅಲ್ಲ ಅಂತ ಪ್ರಾಮಾಣಿಕವಾಗಿ ಹೇಳಿ ಪ್ಲೀಸ್!). ಇದು ಬಹುತೇಕ ಎಲ್ಲ ರಂಗಕ್ಕೂ ಅನ್ವಯವಾಗುತ್ತೆ.
  ಆದರೆ ಎಲ್ಲರೂ ಸಂಕಟ ಬಂದಾಗ ವೆಂಕಟರಮಣ ಅನ್ನೋ ಬದಲು, ಉದ್ಯಮ ಸಂಕಷ್ಟದಲ್ಲಿ ಸಿಲುಕಿದಾಗ ನಾಡು ನುಡಿಯ ಬಗ್ಗೆ ಭಾಷಣ ನೀಡಲು ಪ್ರಾರಂಭಿಸುತ್ತಾರೆ. ಕನ್ನಡದ ಆಸ್ತಿ ಮಾಸ್ತಿ ಯ ಹೆಸರು ರೌಡಿಸಂ ಬಗೆಗಿನ ಚಿತ್ರಕ್ಕೆ ಇಡಬೇಡ್ರಪ್ಪಾ ಅಂತ ಪರಿ ಪರಿಯಾಗಿ ಕೇಳಿದ್ರೂ ನಿರ್ಮಾಪಕರಿಗೆ ಅರ್ಥ ಆಗಲ್ಲ. ವೀರ ಮದಕರಿಯ ಹೆಸರು ಕಮರ್ಷಿಯಲ್ ಚಿತ್ರಕ್ಕೆ ಇಡಬೇಡ್ರಪ್ಪಾ ಅಂತ ಬೇಡಿದ್ರೂ ಯಾರೊಬ್ರೂ ತುಟಿಕ್ ಪಿಟಿಕ್ ಅನ್ನಲ್ಲ! ಆದರೆ ತಮ್ಮ ‘ಬಿಸಿನೆಸ್’ ಗೆ ಪೆಟ್ಟಾಗುತ್ತೆ ಅಂತ ಗೊತ್ತಾದಾಗ ಮಾತ್ರ ಅವರಿಗೆಲ್ಲಾ ನಾಡು ನುಡಿಯ ಬಗ್ಗೆ ಎಲ್ಲಿಲ್ಲದ ಪ್ರೀತಿ ಉಕ್ಕಿ ಬರುತ್ತೆ.
  ನಾಳೆ ಕಾಲ್ ಶೀಟ್ ಸಿಗುತ್ತೆ ಅನ್ನೋದಾದ್ರೆ ಇದೇ ಆಮೀರ್ ಖಾನ್ ನ ಕರೆಸಿ ಕನ್ನಡದಲ್ಲೆ ‘ಸತ್ಯಮೇವ ಜಯತೆ’ ಅನ್ನೋ ಸಿನೆಮಾ ಮಾಡ್ತಾರೆ ಈ ನಿರ್ಮಾಪಕರು. ಆಗ ಅವರಿಗೆ ನಮ್ಮ ದರ್ಶನ್, ಉಪೇಂದ್ರ, ಸುದೀಪ್ ರಂಥ ಕನ್ನಡಿಗರ ಕೆಲಸಕ್ಕೆ ಕುತ್ತು ಬರುತ್ತೆ ಅಂತ ಅನಿಸಲ್ಲ. ಶ್ರೇಯಾ ಘೋಶಾಲ್, ಸೋನು ನಿಗಮ್ ರ ಕೈಯಲ್ಲಿ(actually ಬಾಯಲ್ಲಿ!) ಹಾಡಿಸಿದಾಗ ನಮ್ಮವರೆ ಆದ ರಾಜೇಶ್ ಕೃಷ್ಣನ್, ನಂದಿತಾ ಬಗ್ಗೆ ಏನೂ ಅನಿಸಲ್ಲ! ಎಲ್ಲೋ ಲಂಡನ್ ನಲ್ಲಿ ಕೂತ ರಹಮಾನ್ ಕೈಯಲ್ಲಿ ಸಂಗೀತ ನಿರ್ದೇಶನ ಮಾಡಿಸುವಾಗ ನಮ್ಮ ಹರಿಕೃಷ್ಣ, ಹಂಸಲೇಖ ನೆನಪಾಗಲ್ಲ! ಪರಭಾಷಾ ನಟಿಯರಾದ ಕಾಜಲ್ ಅಗರ್ವಾಲ್ ಮುಂತಾದವರನ್ನು ಕರೆಸಿ ನಟಿಸಲು ಹೇಳಿದಾಗ ‘ನಮ್ಮ ಶುಭಾ ಪೂಂಜಾ, ರಾಧಿಕಾ ಪಂಡಿತ್ ಗೆ ಕೆಲಸ ಸಿಗಲ್ವಲ್ಲಪ್ಪ’ ಅಂತ ಅನಿಸೋದೇ ಇಲ್ಲ!
  ತಮ್ಮ ಬುಡಕ್ಕೆ ಬಂದಾಗ ಮಾತ್ರ ನೋವಾಗುತ್ತೆ.
  ನಾಳೆ ಕನ್ನಡ ಲೇಖಕರ ಉಳಿವಿಗಾಗಿ ಅನುವಾದ ನಿಷೇಧಿಸಲಾಗುತ್ತೆ ಅಂತ ಹೇಳಿದ್ರೆ ಬಹಳಷ್ಟು ಲೇಖಕರಿಗೆ ನಡುಕ ಉಂಟಾಗೋದು ನಿಜ! ಯಾರೋ ಬೇರೆ ಭಾಷೆಯಲ್ಲಿ ಬರೆದ ಪುಸ್ತಕಗಳನ್ನು ದಂಡಿಯಾಗಿ ಕನ್ನಡಕ್ಕೆ ಅನುವಾದಿಸಿದಾಗ ಕನ್ನಡದಲ್ಲೇ ಸ್ವಂತ ಬರೆವವರ ನೋವು ಯಾರಿಗೂ ಅರ್ಥವಾಗಿಲ್ಲ. ಕನ್ನಡ ಲೇಖಕರದ್ದೂ ಸೀಮಿತ ಮಾರುಕಟ್ಟೆ ಅನ್ನೋದು ಆಗ ಯಾರಿಗೂ ಅನಿಸಲೇ ಇಲ್ಲ.
  ನಿನ್ನೆಯ ವಿಜಯ ಕರ್ನಾಟಕದಲ್ಲಿ ಕನ್ನಡ ಚಳುವಳಿಯ ಬಗ್ಗೆ ಓದುತ್ತಿದ್ದವನಿಗೆ ಆಶ್ಚರ್ಯವಾಯಿತು. ೧೯೬೨ ರ ಕನ್ನಡ ಚಳುವಳಿಯ ಆರಂಭವಾಗಿದ್ದು ರಾಮ ಸೇವಾ ಮಂಡಳಿ ಅಂದಿನ ಕಾಲದಲ್ಲಿ ಪರಪ್ರಾಂತ್ಯದವರಿಗೆ ಮನ್ನಣೆ ನೀಡುತ್ತಿದ್ದರ ಬಗ್ಗೆ ಆಗಿತ್ತು ಅಂತ ಲೇಖನದಲ್ಲಿ ಪ್ರಸ್ತಾವಿಸಲಾಗಿತ್ತು. ಇಂದಿನ ವಿಜಯ ಕರ್ನಾಟಕ ತೆರೆದು ನೋಡಿದಾಗ ಮತ್ತೆ ಅಚ್ಚರಿ! ಇಂದಿನ ಕಾರ್ಯಕ್ರಮದಲ್ಲಿ ಅದೇ ರಾಮ ಸೇವಾ ಮಂಡಳಿಯ ಕಾರ್ಯಕ್ರಮದ ವಿವರ. ಕಲಾವಿದರು ತಮಿಳುನಾಡಿನ ಬಾಂಬೆ ಜಯಶ್ರೀ, ದೆಹಲಿಯ ಸಾಯಿರಾಂ ಮತ್ತೆ ಇನ್ಯಾರ್ಯಾರೋ!!!
  ಹೌ ಕಣ್ರಿ ! Art has no boundary!!! *
  *Provided you are not an artist!

  ಪ್ರತಿಕ್ರಿಯೆ
 8. Sharadhi

  The response from Sandeep Kamat makes perfect sense and depicts the actual scenario.

  ಪ್ರತಿಕ್ರಿಯೆ
 9. ಪ್ರಶಾಂತ

  ಅಚ್ಯುತ ಕುಮಾರ್ ಬಗೆಗಿ ನ ಗೌರವ ಕಡಿಮೆಯಾಯ್ತು.
  ಅಲ್ಲಾ ಸಾರ್. ನಿಮ್ ಮಾತಿನ ಅರ್ಥ ಇಂಗ್ಲೀಷ್ ಬ್ರಾಹ್ಮಣ ಭಾಷೆ ಅಂತಾನೇ?

  ಪ್ರತಿಕ್ರಿಯೆ
 10. Suresha

  ಕನ್ನಡವು ಕೂಡ ಜಾಗತೀಕರಣ ಪ್ರಕ್ರಿಯೆಗೆ ಒಳಗಾಗಿದೆ. ಜಗತ್ತಿಗೆ ಎಲ್ಲವನ್ನು ಕೊಡುವ ಹಾಗೂ ತೆಗೆದು ಕೊಳ್ಳುವ ಹಕ್ಕು ತಾಕತ್ತು ಕನ್ನಡ ಭಾಷೆಗೆ ಇದೆ. ಕನ್ನಡ ಸಿನೆಮಾಗೆ ಸಂಬಂಧಿಸಿದಂತೆ ಈಗಿನ ಕಾಲಘಟ್ಟಕ್ಕೆ ಡಬ್ಬಿಂಗ್ ಬೇಕೇ ಬೇಕು. ಎಲ್ಲ ವಿಷಯ ವಿಚಾರ ವಿಮರ್ಶೆ ಮನರಂಜನೆ ಯಾವುದೇ ಬೇಧ ಭಾವ ವಿಲ್ಲದೆ ಎಲ್ಲರಿಗೂ ಬೇಕಾಗಿದೆ. ಕನ್ನಡದ ಕಣ್ಣಿನಿಂದ ಎಲ್ಲವನ್ನು ನೋಡೋಣ. ಕನ್ನಡವನ್ನೂ ಎಲ್ಲದಕ್ಕಿಂತಲೂ ಸಮರ್ಥ, ಸರ್ವಶ್ರೇಷ್ಠ, ಬಲಾಡ್ಯವನ್ನಾಗಿಸೋಣ. ಸ್ದರ್ಧೆಯನ್ನೇ ಮಾಡದೇ ಗೆಲುವುದಾದರೂ ಹೇಗೆ? ಸ್ಪರ್ಧಿಸದೇ ನಾವು ಏನೆಂದೂ ಗೊತ್ತು ಮಾಡುವುದಾದರೂ ಹೇಗೆ?

  ಪ್ರತಿಕ್ರಿಯೆ
 11. Harsha

  ಅಚ್ಯುತಕುಮಾರ್ ಅವರೇ, ಮಂಥನ ಧಾರಾವಾಹಿಯಲ್ಲಿ ತನ್ನ ಬಗ್ಗೆಯೇ ಅನುಮಾನಗಳಿರುವ ಭ್ರಷ್ಟ ಅಧಿಕಾರಿಯಾಗಿ ಬಹಳ ಚೆನ್ನಾಗಿ ಅಭಿನಯಿಸಿದ್ದೀರ. ನೀವು ನೀನಾಸಂನಲ್ಲಿ ಇದ್ದಾಗಲೂ ನಾಟಕಗಳಲ್ಲಿ ನಿಮ್ಮ ಪ್ರತಿಭೆಯನ್ನ ನೋಡಿ ಬಹಳ ಮೆಚ್ಚಿದವನು ನಾನು. ಗೃಹಭಂಗ ಧಾರಾವಾಹಿಯಲ್ಲಿ ಆ ಪಾತ್ರಕ್ಕೆ ನಿಮ್ಮನ್ನ ಬಿಟ್ಟರೆ ಬೇರೆ ಯಾರೂ ಒಪ್ಪುತ್ತಿರಲಿಲ್ಲ, ಮೂಲ ಕಾದಂಬರಿಯನ್ನ ಓದಿದಾಗ ನಾನು ಆ ಪಾತ್ರವನ್ನ ಹೇಗೆ ಕಲ್ಪಿಸಿಕೊಂಡಿದ್ದೆನೋ, ಅದೇ ರೀತಿ ಅದ್ಭುತವಾಗಿ ಅಭಿನಯಿಸಿದ್ದಿರಿ. ನಿಮ್ಮ ಪ್ರತಿಭೆ ಈಗ ಬೇರೆ ಭಾಷೆಗಳಿಗೂ ಸಿಗುವಂತಾದದ್ದು ಬಹಳ ಹೆಮ್ಮೆಯ ವಿಷಯ. ಅಭಿನಂದನೆಗಳು.
  ಜ್ಞಾನ ಕೇವಲ elite ವರ್ಗದ ಸ್ವತ್ತಾಗಬಾರದು, ಜ್ಞಾನ ಎಲ್ಲರಿಗೂ ಸೇರಿದ್ದು ಎಂಬ ಕಾರಣಕ್ಕೇ ನಾನು ಡಬ್ಬಿಂಗ್ ಬೇಕು ಎಂದು ವಾದ ಮಾಡುತ್ತಿರುವವನಾಗಿರುವುದರಿಂದ ಮತ್ತು ಅದೇ ಕಾರಣಕ್ಕೆ ಪುರೋಹಿತಶಾಹಿಯನ್ನ ವಿರೋಧಿಸುವವನಾಗಿರುವುದರಿಂದ, ನಿಮ್ಮ ಮಾತು ಸ್ವಲ್ಪ ಎಡಬಿಡಂಗಿತನದಿಂದ ಕೂಡಿದೆ ಅನಿಸಿತು. ಕನ್ನಡದ ಸಾಮಾನ್ಯ ಜನರಿಗೆ ಜ್ಞಾನ ಕನ್ನಡದಲ್ಲಿ ತಲುಪಬೇಕು ಎಂದು ಹಂಬಲಿಸುವುದರಲ್ಲಿ ಪುರೋಹಿತಶಾಹಿ ಹೇಗೆ ಅಡಗಿದೆ? ಬದಲಾಗಿ ಸಾಮಾನ್ಯ ಜನರನ್ನ ಜ್ನಾನವಂಚಿತರಾಗಿ ಮಾಡುವುದರಲ್ಲೇ ಪುರೋಹಿತಶಾಹಿ ಮನಸ್ಸು ಕೆಲಸ ಮಾಡುತ್ತಿದೆ ಎಂದು ನಿಮಗೆ ಅನಿಸುತ್ತಿಲ್ಲವೇ? ಕನ್ನಡಿಗರಿಗೆ ಜಗತ್ತಿನ ಜ್ಞಾನವೆಲ್ಲ ಬೇಕು, ಹಾಗಾದಾಗ ಮಾತ್ರ ನಾವು ಸಂಕುಚಿತ ಮನಸ್ಸನ ಕಳಚಿ ವಿಶ್ವದ ಜೊತೆ ಸಮಕಾಲೀನರಾಗಿ ಸಾಗಲು ಸಾಧ್ಯ. ಅದರ ಬದಲು ಭಾರತದಲ್ಲಿ elite ಭಾಷೆಯಾಗಿಯೇ ಉಳಿದಿರುವ ಇಂಗ್ಲಿಷ್ ನಲ್ಲೆ ನೀವು ವಿಷಯವನ್ನ ಹೇಳುತ್ತೀನಿ ಅಂತ ಹೊರಟರೆ ಎಷ್ಟು ಪರ್ಸೆಂಟ್ ಜನ ನಿಜವಾಗಿ ಅರ್ಥ ಮಾಡಿಕೊಳ್ಳಬಲ್ಲರು? ನಿಮ್ಮ ತಿಪಟೂರಿನಲ್ಲಿ ಜನರೆಲ್ಲಾ ಇಂಗ್ಲಿಷ್ ನಲ್ಲೇ ಮಾತನಾಡುತ್ತಾರೆಯೇ? ಪ್ರತಿಯೊಬ್ಬ ಕನ್ನಡಿಗನೂ ಇಂಗ್ಲಿಷ್ ಕಲಿತು ಇಂಗ್ಲಿಷ್ ತನ್ನ ಆಡುಭಾಷೆಯಂತೆ ಮಾತನಾಡುವವರಾಗಿ ತಯಾರಾದರೆ ನಮಗೂ ಸಂತೋಷವೇ. ಆದರೆ ಹಾಗೆ ಆಗಲಿಕ್ಕೆ (ಅಕಸ್ಮಾತ್ ಆದರೂ) ಇನ್ನು ೬ ತಲೆಮಾರುಗಳಾದರೂ ಬೇಕು. ಅಲ್ಲೀ ತನಕ ಪ್ರಪಂಚದ ಅರಿವೇ ಇಲ್ಲದೆ ಉಸಿರು ಕಟ್ಟಿಕೊಂಡೇ ಇರೋಣ ಅಂತೀರಾ? ಬುದ್ದಿಜೀವಿಗಳ ಪ್ರಕಾರ ಇಷ್ಟು ದಿನ ಸಂಸ್ಕೃತ ಪುರೋಹಿತಶಾಹಿ ಧೋರಣೆಯಾಗಿತ್ತು ಮತ್ತು ಕನ್ನಡ ಎಲ್ಲರನ್ನೂ ತಲುಪುವ ಮಾರ್ಗ ಆಗಿತ್ತು. ಈಗ ಡಬ್ಬಿಂಗ್ ಬೇಕು ಅಂದ ಕೂಡಲೇ, ಕನ್ನಡ ಪುರೋಹಿತಶಾಹಿ ಆಗಿಬಿಡೋದೇ? ಪುರೋಹಿತಶಾಹಿಗಳಿಂದ ಕನ್ನಡಿಗರ ಮೇಲೆ ಕನ್ನಡದ ಹೇರಿಕೆ! ಹ್ಹ ಹ್ಹ, ಬಹಳ ತಮಾಷೆಯಾಗಿದೆ ಕೇಳೋದಕ್ಕೆ.

  ಪ್ರತಿಕ್ರಿಯೆ
 12. Neeta S Rao

  Don’t give too much importance to what Achyutkumar said. Who is he? First time today I came to know his name. Of course I have seen him in cinemas and serials. But please don’t think that these people will be very smart or intelligent. Poor Achyutkumar may not be knowing the meaning of ‘purohitshahi’. Nowadays if you blame brahmins you become popular overnight. So some people, writers are unnecessarily targeting brahmins and purohitshahi. God knows what bad experiences they have had due to purohitshahi. Someone has told us to go out of this country itself.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: