‘ಡಾನ್ ಆಪ್ ಪಾವರ್ಟಿ’

-ಎಂ ಬಿ ಶ್ರೀನಿವಾಸ ಗೌಡ, ಖಾಸಗಿ ಡೈರಿ

ನೋಡಿ ಈ ಪತ್ರಕರ್ತರಿಂದಾಗಿ ಕಳೆದ ಹತ್ತು ದಿನಗಳಿಂದ ನನ್ನ ಶಾಂತಿ ಕಳೆದು ಹೋಗಿದೆ ಅಂದರು ದೀಪ್ ಜೋಶಿ. ನಾವೂ ಹೌದು ಬಿಡಿ ಸಾರ್ ಅದೆಲ್ಲಾ ಸಾಮಾನ್ಯ, ಪ್ರಶಸ್ತಿ ಬಂದಾಗ ಜನ ಜಾಸ್ತಿ ಮುತ್ತಿಕೊಳ್ತಾರೆ ಅಂತ ಹೇಳಿ ಅವರಿಗೆ ಸಾಥ್ ಆದೆವು. ಯಾಕ್ರೀ ಹಾಗಂತೀರಿ ನಿಮಗೆ ಪ್ರಚಾರ ಕೊಡೋಕೆ ನಾವು ಐವತ್ತು ಕಿಲೋ ಮೀಟರ್ ಸುತ್ತಿ ಬಂದೆವು, ಇಲ್ಲೆಲ್ಲೋ ಮೂಲೆಯಲ್ಲಿರುವ ನಿಮ್ಮ ಮನೆ ತಡಕಿ, ತಡಕಿ ಸಾಕಾಗಿ ಬಂದ್ದಿದ್ದೇವೆ ಅಂತ ಹೇಳೋ ಧೈರ್ಯ ಆಗಲಿ, ಮನಸಾಗಲಿ ಇರಲಿಲ್ಲ. ಬೇರೆ ಯಾರಾದರೂ ರಾಜಕಾರಣಿ ಆಗಿದ್ದಿದ್ದರೆ ಅನ್ನಬಹುದಿತ್ತೇನೋ..!

deep joshiಯಾಕಂದರೆ ದೀಪಕ್ ಜೋಶಿ ಮೊನ್ನೆ ಮೊನ್ನೆ ತಾನೆ ಎಷ್ಯಾದ ನೊಬೆಲ್ ಅಂತ ಕರೆಸಿಕೊಳ್ಳುವ ರೋಮನ್ ಮ್ಯಾಗ್ಸಸೆ ಪ್ರಶಸ್ತಿಗೆ ಬಾಜನರಾದವರು. ಉತ್ತರ ಭಾರತದ 7 ರಾಜ್ಯಗಳಲ್ಲಿ ತಮ್ಮ ಪರಿದಿಗೆ ಬಂದ ಬಡವರನ್ನೆಲ್ಲಾ ಆತ್ಮಗೌರವದಿಂದ, ಸ್ವಂತ ಶಕ್ತಿಯಿಂದ ಬದುಕುವುದು ಹೇಗೆ ಅಂತ ಅಕ್ಷರಸಹ ಕಲಿಸಿಕೊಟ್ಟವರು. ತಾವು ಕಟ್ಟಿದ ಸಂಸ್ಥೆ ಪ್ರಧಾನ್ ಮೂಲಕ ಈಗಲೂ ಸರಿಸುಮಾರು 1 ಲಕ್ಷ ಎಪ್ಪತ್ತು ಸಾವಿರ ಕುಟುಂಭಗಳಿಗೆ ನೆರವಾದವರು. ಇಂತಹ ದೀಪ್ ಜೋಶಿ ಅವರನ್ನು ಭೇಟಿ ಮಾಡಬೇಕೆಂಬ ನನ್ನ ಹಂಬಲಕ್ಕೆ ಜೊತೆಯಾದ ನನ್ನ ಸಹೋದ್ಯೋಗಿ ದೀಪಕ್ ಪ್ರಯತ್ನದಿಂದ ಅವರ ಸಂದರ್ಶನ ಲಭ್ಯವಾಯಿತು ಅವರ ಸಂದರ್ಶನ ಇಲ್ಲಿ ಹಾಕಿಲ್ಲ. ಆಸಕ್ತಿ ಹುಟ್ಟಿಸುವ ಮಾಹಿತಿ ಅಷ್ಟೇ ಬರೆದಿದ್ದೇನೆ.

ದೀಪಕ್ ಜೋಶಿ ಕೂಡ ನಮ್ಮಂತೆ ಹಳ್ಳಿಯಿಂದ ಬಂದವರೇ, ಹಿಮಾಲಯಕ್ಕೆ ಹೊಂದಿಕೊಂಡಂತಿರುವ ಜಾರ್ಕಂಡಿನ ಗಡಿತಿರ್ ಎಂಬ ಹಳ್ಳಿಯೊದರಿಂದ ಬಂದವರು, ಕಲಿತಿದ್ದು ಇಂಜಿನಿಯರಿಂಗ್, ವಿದೇಶದಲ್ಲಿ ಮಾಸ್ಟರ್ ಡಿಗ್ರಿ ಮಾಡಿ ವಾಪಸ್ಸು ಬಂದಮೇಲೆ ಅಲ್ಲಿ ಇಲ್ಲಿ ಕೆಲಸಮಾಡಿ ಬಂದ ಮೇಲೆ, ಆಯ್ಕೆ ಮಾಡಿಕೊಂಡದ್ದು ಬಡ ಹಳ್ಳಿಗಳನ್ನು ಉದ್ದಾರ ಮಾಡುವ ಕೆಲಸ..! ಕೇಳಲಿಕ್ಕೆ ಅಷ್ಟೇನೂ ರುಚಿಸದ ಕಾರ್ಯಕ್ಕೆ ಕೈ ಹಾಕಿದ ದೀಪ್ ಅವರದು ಈಗ ದೊಡ್ಡ ಸಕ್ಸಸ್ಸು.. ಕಡಿಮೆ ಅಲ್ಲ ಕನಿಷ್ಠ 1 ಲಕ್ಷ ಕುಟುಂಭಗಳಿದೆ ಸ್ವಾವಲಂಭನೆ ಒದಗಿಸಿದ ಸಾರ್ಥಕ ಕೆಲಸ.

ನೀವು ಬಡವರಿಗೆ ಅದು ಹೇಗೆ ಕೊಟ್ಟರು ಸ್ವಾವಲಂಭನೆ ಅಂತ ಕೇಳಿದರೂ ಉತ್ತರಕೊಡುವುದು ಸುಲಭವಲ್ಲ ಬಿಡಿ. ಅದೂ ಕೂಡ ಬೇರೆಯದೇ ತರದ್ದು ಅನ್ನಬೇಕು. ಅದಕ್ಕೆ ದೀಪ್ ಅವರಿಗೆ ಸಂದ ಪ್ರಶಸ್ತಿಯ ಸೈಟೇಷನ್ನಿನಲ್ಲಿ ಹೀಗೆ ಹೇಳಲಾಗಿದೆ. ಅದು ಅವರ ಹೊಸ ತರದ ಐಡಿಯಾಗೆ, ನಾಯಕತ್ವಕ್ಕೆ ಸಿಕ್ಕದ್ದು. ‘For his vision and leadership in bringing professionalism to the NGO movement in India, by effectively combining ‘head’ and ‘heart’ in the transformative development of rural communities.’ ಅಂಥ.

ದೀಪ್ ಅವರ ಪ್ರದಾನ್ ನಲ್ಲಿ ಯಾರೂ ಸ್ವಯಂ ಸೇವಕರಲ್ಲ, ಅಲ್ಲಿ ಎಲ್ಲರೂ ನೌಕರರೇ… ಯೂನಿವರ್ಸಿಟಿಗಳಲ್ಲಿ ಕಲಿತ ಪ್ರತಿಭಾವಂತರನ್ನ ಪ್ರಧಾನ್ ಕ್ಯಾಂಪಾಸ್ ಸೆಲಕ್ಷನ್ ಮಾಡಿಕೊಳ್ಳುತ್ತದೆ. ಐಐಟಿ ಮತ್ತು ಐಐಟಿಗಳಲ್ಲಿ ಕಲಿತ ಮಂದಿ ಹಳ್ಳಿಗರ ಬಡತನವನ್ನು ನಿರ್ಮೂಲನೆ ಮಾಡಲಿಕ್ಕೆ ಮತ್ತು ಅದಕ್ಕಾಗೆ ಹೊಸ ಹೊಸ ಐಡಿಯಾ ಕಂಡುಹಿಡಿಯಲು ನೇಮಿಸಿಕೊಳ್ಳುತ್ತದೆ ಸದ್ಯಕ್ಕೆ ಒಂದು ಸಾವಿರ ಮಂದಿ ಇಂತಹ ಕೆಲಸದಲ್ಲಿ ತೊಡಗಿಸಿದ್ದಾರೆ. ಕನಿಷ್ಠ ಹತ್ತು ಸಾವಿರ ಸಂಬಳ ಕೊಡುತ್ತಾರೆ ಅಂದರೆ ನಂಬಲಾಗುತ್ತಿದೆಯೇ.

ನಂಬಬೇಕು, ಯಾಕಂದರೆ ದೀಪ್ ಅವರ ಪ್ರದಾನ್ ಸಂಸ್ಥೆ 1983 ರಿಂದ ಅದನ್ನೇ ಮಾಡಿಕೊಂಡು ಬಂದಿದೆ. ಉತ್ತರ ಭಾರತದ ಜಾರ್ಕಂಡ್,ಮದ್ಯಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಸೇರಿದಂತೆ 7 ರಾಜ್ಯಗಳಲ್ಲಿ ಪ್ರಧಾನ್ ಕಾರ್ಯ ಚಟುವಟಿಕೆಗಳಿವೆ. ಇದೆಲ್ಲ ಹೇಳಿದ ಮೇಲೆ ಪ್ರದಾನ ಮಾಡೋ ಕೆಲಸ ಅಂತ ಹೇಳಿದರೆ ಸುಲಭವಾಗಬಹುದು. ಹಳ್ಳಿಗರು ಮಾಡುವ ಕೆಲಸವನ್ನೇ ಸೈಟಿಪಿಕ್ ಆಗಿ ಮಾಡಿಸುವುದು ಅದರ ಕೆಲಸ. ಕೋಳಿ ಸಾಕಾಣೆ ಇರಬಹುದು, ಕುರಿ ಸಾಕಣೆ, ಹೈನುಗಾರಿಕೆ,ರೇಷ್ಮೆ ಸಾಕಣೆ ಇರಬಹುದು, ಕಾಡಿನ ವಸ್ತುಗಳ ಸಂಗ್ರಹಣೆ ಇರಬಹುದು ಇಂತವೇ ಸಣ್ಣ ಸಣ್ಣ ಬಡವರ ಕೆಲಸಗಳಿಗೆ ದೀಪ್ ಕೈಜೋಡಿಸಿದ್ದಾರೆ. ಅವರಿಗೆ ಬೇಕಾದ ಮಾಹಿತಿ, ಮಾರುಕಟ್ಟೆ, ಹೊಸ ತಂತ್ರಜ್ಞಾನ. ಔಷದಿ, ಸಣ್ಣ ಸಾಲ, ರೈತರು ಇಡಬೇಕಾದ ಲೆಕ್ಕ ಪತ್ರ, ಸಾಮೂಹಿಕ ಕೃಷಿ. ಸ್ವಸಹಾಯ ಗುಂಪುಳ ರಚನೆ ಎಲ್ಲಕ್ಕೂ ಪ್ರಧಾನ್ ನೇಮಿಸಿರುವ ಕಲಿತ ಯುವಕರು ಸಹಾಯ ಮಾಡುತ್ತಾರೆ. ಬಿಸಿನೆಸ್ ಸ್ಕೂಲ್ ಮತ್ತು ಲ್ಯಾಬೋರೇಟರಿಗಳಲ್ಲಿ ಕಲಿತದ್ದನ್ನು ಉಪಯೋಗಿಸುತ್ತಾರೆ.

ಪ್ರದಾನ್ ಕೂಡ ಸ್ವಯಂ ಸೇವಾಸಂಸ್ಥೆ. ತನ್ನೆಲ್ಲಾ ಕಾರ್ಯಚಟುವಟಿಕೆಗಳಿಗೆ ಅವಲಂಭಿಸಿದ್ದು ದಾನಿಗಳನ್ನೆ ಆದರೆ ಇಂಡಿಯಾದ ಬಡತನದ ಹೆಸರಲ್ಲಿ ವಿದೇಶಗಳಲ್ಲಿ ಬಿಕ್ಷೆ ಎತ್ತೊದನ್ನ ಜೋಶಿ ವಿರೋದಿಸುತ್ತಾರೆ. ನಿಜವಾದ ಸಹಾಯ ಮಾಡಲು ಬಯಸಿದವರಿಂದ ಹಣ ಸಂಗ್ರಹಿಸುತ್ತದೆ, ಪ್ರದಾನ್ ನ ಕೆಲಸವನ್ನು ಮೆಚ್ಚಿರುವ ಟಾಟಾ. ರತನ್ ಟಾಟ ಟ್ರಸ್ಟ್, ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ. ಪೋರ್ಡ್, ಐಸಿಐಸಿಐ ಯಂತ ಅನೇಕ ಸಂಸ್ಥೆಗೆಳು ದಾರಾಳ ಹಣ ನೀಡುತ್ತಿವೆ ಪ್ರದಾನ್ ಸಂಸ್ಥೆ ಸೂಚಿಸಿದವರಿಗೆ ಸಾಲ ನೀಡುತ್ತಿವೆ. ಜೊತೆಗೆ ಕೇಂದ್ರ ಸರ್ಕಾರದ ಯೋಜನೆಗಳ ಸಂಪೂರ್ಣ ಬಳಕೆ ಮಾಡಿಕೊಳ್ಳುತ್ತದೆ. ದೀಪ್ ಹೇಳುವಂತೆ ಪ್ರದಾನ್ ಸದ್ಯ 100 ಕೋಟಿ ರೂಪಾಯಿಯ ಗ್ರಾಮೀಣ ವ್ಯವಹಾರ ನಡೆಸುತ್ತಿದೆ.

ಪ್ರಶಸ್ತಿ ಬಂದ ನಿಮಿಶಕ್ಕೆ ಪಡೆದವರನ್ನು ಸಿಕ್ಕಾಪಟ್ಟೆ ಹೊಗಳುವುದು ನಮ್ಮ ಸಾಮಾನ್ಯ ಸ್ವಭಾವ ಆದರೂ ಜೋಶಿ ಅವರ ಹತ್ತಿರ ಮಾತಾಡಿದಾಗ ಅವರ ಬಗ್ಗೆ ಜಾಹಿರು ಮಾಡೋದು ನಮ್ಮ ಜವಾಬ್ಧಾರಿ ಅಂತ ನನಗೂ ಅನ್ನಿಸಿತ್ತು. ಯಾಕಂದರೆ ಜೋಶಿ ಎಷ್ಠು ಪ್ರೊಫೆಷನಲ್ ಆಗಿ ಸಂಸ್ಥೆ ಬೆಳೆಸಿ ಈಗ ಕೈಬಿಟ್ಟಿದ್ದಾರೆ ಅಂದರೆ. ಅವರು ಪ್ರಧಾನ್ ಸಂಸ್ಥೆಯಿಂದ ನಿವೃತ್ತಿಯಾಗಿ ಆಗಲೇ 2 ವರ್ಷ ಕಳೆದಿದೆ. ಯಾಕಂದರೆ ಎಲ್ಲರೂ ಸರಿಯಾದ ವಯಸ್ಸಿಗೆ ನಿವೃತ್ತಿ ಪಡೆದು ಹೊಸ ಮನಸುಗಳಿಗೆ ಅವಕಾಶಕೊಡಬೇಕೆನ್ನುವುದು ಅವರದೇ ನಿಯಮ ಅಂತೆ. ಈಗ ಪ್ರದಾನ್ ಸಂಸ್ಥೆ ಜೋಶಿ ಸಲಹೆಗಾರರು ಮಾತ್ರ.

ದೀಪ್ ಜೋಶಿ ಅವರ ಬಳಿ ಮಾತಾಡುವಾಗ ಅವರು ಹೇಳಿದ ಮಾತೊಂದು ಮೀಡಿಯಾಗೆ ಸಂಭಂದಿಸಿತ್ತು , ಒಂದೆರಡು ನಿಮಿಷ ಯೋಚನೆಗೂ ಈಡು ಮಾಡಬುಹುದು.

ನಮ್ಮ ಸಂದರ್ಶನ ಎಲ್ಲಾ ಮುಗಿದ ಮೇಲೆ ಅವರು ಹೇಳಿದರು ನೋಡಿ ನಾವು ಮಾಡಿದ ಕೆಲಸವನ್ನ ಇಲ್ಲಿನ ಸರ್ಕಾರ ಆಗಲಿ ಮೀಡಿಯಾದವರಾಗಲಿ ಗುರುತಿಸೋದೇ ಇಲ್ಲ ನನ್ನ ಪ್ರಕರಣದಲ್ಲೇ ನೋಡಿ ನಾವು ಮಾಡಿದ ಕೆಲಸವನ್ನು ಬೇರೆ ದೇಶದ ಮಂದಿ ಇಲ್ಲಿಗೆ ಬಂದು ಅಭ್ಯಾಸ ಮಾಡಿ ಗುರುತಿಸುತ್ತಾರೆ. ಆದರೆ ನಮ್ಮ ಮೀಡಿಯಾದ ಮಂದಿ ಬೇರೆ ಬೇರೆ ಇಶ್ಯುಗಳ ನಡುವೆ ಸದಾ ಬ್ಯುಸಿ ಇರುತ್ತಾರೆ ಅಂತ ನಕ್ಕರು..ನನಗೆ ಅವರ ನಗುವಿನಲ್ಲಿ ಏನೇನೂ ಅರ್ಥಗಳು ಕಾಣಿಸಿದೆವು..

ನನಗೂ ಹಾಗೆ ಅನ್ನಿಸಿತು ಮೊನ್ನೆ ಆಗಸ್ಟ್ 3 ರಂದು ಅವರಿಗೆ ಪ್ರಶಸ್ತಿ ಬಂದಾಗ ಯಾವ ಪತ್ರಿಕೆಯಲ್ಲಾ ಗಲಿ ಟಿವಿಯಲ್ಲಾಗಲಿ ಅವರ ಬಗ್ಗೆ ಸಮಗ್ರ ಮಾಹಿತಿ ಉಳ್ಳ ಲೇಖನಗಳು ಬರದೇ ಹೋದವು, ಇಂಟರ್ನೆಟ್ ನಲ್ಲಿ ಹುಡುಕಾಡಿದೆ ಅಲ್ಲೂ ಮಾಹಿತಿ ಇರಲಿಲ್ಲ. ಕೌಲಾಲಾಂಪುರದಿಂದ ಬಂದ ಒಂದೇ ಸುದ್ದಿಯನ್ನ ಎಲ್ಲಾ ಪತ್ರಿಕೆಗಳು ತಿರುಗಾಮುರುಗಾ ಬರೆದಿದ್ದವು. ಕಡೆಗೆ ವೈಕೀಪೀಡಿಯೂದವರೂ ಅವರಿಗೆ ರೋಮನ್ ಮ್ಯಾಗ್ಸೆಸೆ ಬಂದ ಮೇಲೆ ಪತ್ರಿಕೆಗಳಲ್ಲಿ ಬಂದಿದ್ದ ಮಾಹಿತಿಯನ್ನೇ ಅಪ್ ಡೇಟ್ ಮಾಡಿದ್ದರು. ಎಲ್ಲೂ ಅವರ ಬಗ್ಗೆ ಪ್ರಚಾರ ಆದಂತೆ ಕಾಣಲಿಲ್ಲ. ಅಷ್ಟೇ ಏಕೆ ಅವರಿಗೆ ಪ್ರಶಸ್ತಿ ಬಂದ ಮೇಲೆ ಪ್ರದಾನಿ ಮನಮೋಹನ್ ಸಿಂಗ್ ಮತ್ತು ರಾಷ್ಠ್ರಪತಿ ಪ್ರತಿಬಾಪಾಟೇಲ್ ಒಂದೆರಡು ಸರ್ಕಾರಿ ಹೇಳಿಕೆ ಮತ್ತೊಂದು ಶಹಬಾಶ್ ಹೇಳಿದ್ದಾರೆ.

ಕಟ್ಟ ಕಡೆಗೆ ನಾನು ಸಂದರ್ಷನದಲ್ಲಿ ಕೇಳಲು ಆಗದೇ ಹೋಗಿದ್ದ ಮತ್ತು ನನ್ನನ್ನು ಯಾವತ್ತೂ ಕಾಡುತ್ತಿದ್ದ ಪ್ರಶ್ನೆಯೊಂದನ್ನ ಅವರಿಗೂ ಕೇಳಿದೆ ಅಲ್ಲಾ ಸಾರ್ ಈ ರೋಮನ್ ಮ್ಯಾಗ್ಸಸೆ, ನೋಬಲ್,ಅಂತ ಪ್ರಶಸ್ತಿ ತಗೋಳೋ ಮಂದಿ ಎಲ್ಲಾ ನಿಮ್ಮದೇ ರೀತಿ ಬೆಳ್ಳಗೆ ಗಡ್ಡ ಬಿಟ್ಟಿರುತ್ತಾರಲ್ಲಾ ಯಾಕೆ ಅಂದೆ. ಅಲ್ಲಾರಿ ನನ್ನ ಗಡ್ಡ ನೋಡಿದರೆ ಒಳ್ಳೆ ಚಂಬಲ್ ಕಣಿವೆ ಡಾನ್ ತರಾ ಕಾಣ್ತೀನಿ ಅಂದ್ರು. ನಾನು ತಕ್ಷಣ ಪ್ರತಿಕ್ರಿಯಿಸಿ, ಅಲ್ಲಾಲ್ಲಾ ನೀವು ‘ಡಾನ್ ಆಪ್ ಪ್ರಾವರ್ಟಿ’ ಅಂದೆ. ಅವರು ನಕ್ಕರು.

ನಿಮಗೆ ಜೋಶಿ ಮತ್ತು ಪ್ರದಾನ್ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಅನಿಸಿದರೆ ಇಲ್ಲಿಗೆ ಭೇಟಿಕೊಡಿ.

‍ಲೇಖಕರು avadhi

August 13, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

2 ಪ್ರತಿಕ್ರಿಯೆಗಳು

  1. ಶಾರದಾ

    ಅವರಿವರನ್ನ ದೂರೋದು ಬಿಟ್ಟು ನಮ್ಮನಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರೆ ಅಷ್ಟರ ಮಟ್ಟಿಗೆ ಒಳ್ಳೇದನ್ನು ಮಾಡಿದಂತಾಗುತ್ತದೆ.ದೀಪ್ ಜೋಶಿ ಬದುಕು ಅರ್ಥಪೂರ್ಣ.ಪತ್ರಕರ್ತರಾಗಿ ನೀವು ಒಳ್ಳೇ ಕೆಲಸ ಮಾಡಿದ್ದೀರಿ.ಇಂಥಹ ಲೇಖನಗಳು ಹೆಚ್ಚೆಚ್ಚು ಬರಲಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: