ಡಾ: ಪುಂಡ ಲೀಕ್ಸ್ ‘ಮೇಯೋ ಬಜಾರ್’ ಪ್ರೆಸ್ ತಾಪವು

-ಸೂತ್ರಧಾರ ರಾಮಯ್ಯ

ಬೆಂಗಳೂರಿಂದ ‘ಮೇಯೋಬಜಾರ್’ ಗೀತೆಯನ್ನು ಕೇಳಬೇಕಂತೆ ಪುರಾಣ್, ಪ್ರಸಿದ್ದ್, ಕಳಂಕ್. ವಿಶಾಕ ಪಟ್ಟಣದಿಂದ ಶೀತಲ್, ಸಮರ್,ಬಯ್ಯಪ್ಪನ ಹಳ್ಳಿಯ ಆಶೀರ್ವಾದ್, ರಾಜಾನುಕುಂಟೆಯ ಕಣ್ಣೀರ್ ಸೆಲ್ ವನ್ ಮತ್ತು ರಾಜ( ಟೂಜಿ) ಸೇವಾಸಕ್ತರು

ಭಲಾರೆ ಭೋಜನವಿದು; ಭೂ ಭ್ರಷ್ಟ ಭಕ್ಷಗಳಿವು,

(ಸ್ವ) ಜನತಂತ್ರ ಜಾತ್ರೆಯಲ್ಲಿ; ದೊರಕೊಂಡಿತೆಮಗೆ ಬಂದು. ಅಹಹ್ಹ ಅಹಹ್ಹ   ಸ್ಪೆಕ್ಟ್ರಂ ಸ್ಪೆಕ್ಟರ್ ಲಾಡು; ಆದರ್ಶ-ಹೋಳಿಗೆಗಳು,

ಸಿಡಬ್ಲ್ಯುಜಿ ಜಿಲೇಬಿ..ಇವೆಲ್ಲ ನಮ್ಮ ಪಾಲು. ಭಳಾರೆ ಭೋಜನವಿದು ಬಿಡಿಯೇ ಮೈಸೂರ್ಪಾಕು; ಹ್ಯಾಪಿ ಬರ್ತ್ಡೆ earth ಉ ಕೇಕು. ಕೆಐಎಡೀಬಿ ಚಿರೋಟಿ ; ಅಲ್ಲೆಲ್ಲ ನಮದೆ ಲೂಟಿ! ಭಳಾರೆ ಭೋಜನವಿದು…ಅಹಾರೆ ಟ್ರ್ಯಾನ್ ಫರ್ ಡೀಲೇ; ಡಿನೋಟಿಫಿಕೆಶನ್ ಸಾಲೆ.ಬಕಾಸುರರ ಲೀಲೆ; ತಕೋ ಲಂಚದೆ ಶಾ ಮೀಲೆ. ಭಳಾರೆ ಭೋಜನನವಿದು …ನೀವು ಕೇಳ್ತಾ ಇದ್ದೀರಿ ಎಫ್ ಎಂ ೮೪೦ ಬೈಟೂ, ರಾಡಿಯಾ ಮಿರ್ಚಿ..,ಸಖತ್ ಹಾತ್ ಮಗಾ.

ಉ ಭಾ: ಹೇಗಿತ್ತು ಹಾಡು, ಸಿಚುಯೇಶನ್?

ಪುಪುನ್: ರಿಯಲಿ ಆಡ್ ಸಿಚುಏಶನ್! ಹಾಗೆ ನೋಡಿದ್ರೆ, ಎಲ್ಲೋ ಒಂದ್ಕಡೆ, ಅಟ್ ದ ಎಂಡ್ ಆಫ್ ದ ಡೇ..

ಉಭಾ: ಹ್ಯಾಗೆ ನೋಡಿದ್ರೆ? ಎಲ್ಲಿ ಯಾವ ಕಡೇ? ಅಟ್ ದ ಎಂಡ್ ಆಫ್ ದ ಡೇ ಅಂದ್ರೆ

ಸಂಜೆಯೋ ಅಥ್ವ ‘ಮದ್ಯ’ ರಾತ್ರಿಯೋ ಡಾಗಟ್ರೇ?

ಪುಪುನ್: ಸಾವದಾನ ಮಾಡ್ರಲ್ಲ. ಮೇಯೋ ಬಜಾರ್ ಹಾಡ್ ಕೇಳಿ ನನಗಾ ವಿಶ್ರಮ್ ಬೆಕನ್ನಸ್ತದ! ನೋಡ್ರಿ ಬರ್ತಾ ಬರ್ತಾ ನಮ್ಮ ಗಾಂಧಿ ಬಜಾರ್, ಅಂದ್ರ ರಾಜಕಾರಣಾನು ಗಾಂಧಿ ನಗರದ ಥರಾನೇ ಆಗೇದ. ಅವನು ಮಾಡ್ದಾ, ಅದನ್ನೇ ನಾನೂ ಮಾಡ್ತೀನ್ ಅನ್ನೋ ರಿಮೇಕ್ ಹಾವಳಿ. ನಾವು ಅಧಿಕಾರದಲ್ಲಿದ್ದಾಗ ಎಲ್ಲೋ ಒಂದರ್ಧ ತಾಸು ಲಂಚವರ್ಸ್ ಇತ್ತು. ಈಗ ೨೪/೭ ಪ್ರಜಾ ಶೇವೇನೆ ಆಗೇದ. ಎಲ್ಲಿಂದ ಕ್ಲೀನಿಂಗ್ ಶುರು ಮಾಡ್ಬೇಕು; ಇಲ್ಲಿನ್ದಲ್ಲಿಗೋ ಅಲ್ಲಿಂದ್ ದಿಲ್ಲಿಗೋ ಒಂದು ಅರ್ಥವಾಗ್ತಿಲ್ಲಾ. ಅಷ್ಟು ಅನರ್ತ್ ಆಗ್ತಿವೆ ನೋಡ್ರಿ ಸ್ಕ್ಯಾಮ್ಗಳು! ಹಾಂಗ್ ನೋಡಿದ್ರಾ, ನಮ್ದೇ ತಪ್ಪು: ಭ್ರಷ್ಟತೆಗೆ ಅಚಾರಾ

ಅಂತ ಕರೆದದ್ದು! ಅದಕ್ಕಾ ಭ್ರಷ್ಟಾಚಾರವೂ ಒಂದ್ ಅಚಾರ ಅಂತ ತಿಳಿದಾರ ನಮ್ಮ ನಾಯಕರು. ಹಂಗ ಗಾದೇನು ವೇದ ಅಂತ ತಿಳಕೊಂಡು ‘ಕೈ ಕೆಸರಾದರೆ ಬಾಯ್ ಮೊಸರು’ ಅಂತ ಕೈ ಬಾಯ್ ಕೆಸರು ಮಾಡ್ಕೊಂಡು ಕುಂತಾರ. ರಕ್ಷಕರನ್ನೋ ಇವರ ಕೈಯೂ ಕೆಸರಾ: ಭಕ್ಷಕರನ್ನೋ ಅವರ ಕಾಲು ಬುಡಕ್ಕೂ ಕೆಸರಾ. ಒಟ್ಟಾ ಎಲ್ಲೆಲ್ಲೂ ಕೆಸರಾ ಕೆಸರು, ರಾಡಿಯಾ ರಾಡಿ!

ಉಭಾ: ಪುಂಡಲೀಕ ಅವರೇ,ತಮ್ಮನ್ನು ಪಕ್ಷಾಂತರದ ಪಕ್ಷಿ. ಪಕ್ಷಕ್ಕೊಂದು ಪಾರ್ಟಿ; ಮಾಸಕ್ಕೊಂದು ಪಕ್ಷ ಅಂತ ಪಕ್ಷಾಂತರ ಮಾಡೋದ್ರಲ್ಲಿ ಗಿನ್ನಿಸ್ ಬುಕ್ ದಾಖಲೆಗೆ ಹತ್ತಿರವಾಗಿದ್ದಾರೆ ಅನ್ನೋ ಆರೋಪ ಇದೆಯಲ್ಲಾ; ಉತ್ತರ ಕುಮಾರರಾದ ಬನ್ಸಿ-ಭಜನ್ಗಳನ್ನೂ ಮೀರಿಸಿ.

ಪುಪುನ್: ನನ್ನ ವಿರೋಧಿಗಳ ಗಿಮ್ಮಿಕ್ಸ್ ಬುಕ್ನಲ್ಲಿ ಒಂದು ಅಂಶ ಬಿಟ್ಟು ಹೋಗಿದೆ. ಬರಿ ಪಕ್ಷಾನ್ತರವೇ ಅಲ್ಲ, ಭಾಷಣಗಳಲ್ಲಿ ಅತಿ ಹೆಚ್ಚು ಬಾರಿ ‘ಗರೀಬಿ ಹಟಾವ್’ ಪದವನ್ನು ಬಳಸಿರುವ ದಾಖಲೆಯೂ ನನ್ನದೇ. ಇಷ್ಟಾದರೂ ನಾವು ಪಕ್ಷಾಂತರ ಮಾಡೋದು ಯಾಕೆ? ಜನಕ್ಕೆ ‘ಸ್ಟೇಬಲ್ ಗವರ್ನಮೆಂಟ್’ ಕೊಡೋ ಸಲುವಾಗಿ. ಲಾಯಕ್ಕೇ ಅಲ್ಲದ ಕುದುರೆಗಳ ಜತೆಗೆ ಕತ್ತೆಗಳ ಕಾಲನ್ನೂ ಕಟ್ಟಬೇಕಾಗ್ತದ. ರಾಜಕಾರಣದಲ್ಲಿ ಸಮಯ ನೋಡಿ ಸಾಧಿಸಬೇಕು ನೋಡ್ರಿ. ಪರಿಸ್ತಿತಿಗೆ ಅನುಗುಣವಾಗಿ ನಾವೂ ಚೇಂಜ್ ಆಗಬೇಕ್ರಿ.

ಉಭಾ: ಅಂದರೆ ಸಮಯಸಾಧಕರಾಗಬೇಕು. ‘ಚೇಂಜ್’ ಅಂದರೆ,ಚಿಲ್ಲರೆಗಳಾದ್ರು ಸರಿ, ಅಂತಲೇ? ಆಯಿತು. ಪ್ರಿಯ ಶ್ರೋತ್ರುಗಳೇ ಈಗ ನೀವು ಕೇಳಲಿರುವ ಗೀತೆ ‘ಸತ್ಯ ಹರಿಶ್ಚಂದ್ರ …ಕ್ಷಮಿಸಿ,,ಸತ್ಯಕ್ಕೇ ಅರ್ಧ ಚಂದ್ರ’ ಚಿತ್ರದ್ದು. ಕೆಲಬೇಕಂತೆ; ಸಾತನೂರಿನ ಸಮಯ್, ಸಾಧಿಕ್. ಆಲಹಳ್ಳಿಯ A ವಿಶ್ವಾಸ್, ನಿರ್ಣಯ್ ಮೇಲುಕೋಟೆಯ ನಾಮಾಮೃತ್, ಅನೆಕಲ್ಲಿನ ಅನುಕೂಲ್ ಮತ್ತು ತಂಗಿ ಸಿಂಧು.

ಜನತಂತ್ರ ಹಳಾಯಿತೋ ಹುಚ್ಚಪ್ಪ;

ಬದುಕೆಲ್ಲ ಗೋಳಾಯಿತೋ.

ಓಟು ಓ ಟೆನ್ದು ಸಾಯೋ ಪಾರ್ಟಿ ಪಾರ್ಟಿಯ ಮಧ್ಯೆ

ಜಗಳಬಂಧಿ ಜೋರಾಯಿತೋ. ಥೈಯ್ಯಕ್ಕು ಥಾ ತರಿಕಿಟ ತೈಯ್ಯಕ್ಕುತಾ ಕಿಟಥೈ

ಓಹೋ ಬಿದ್ದಿರಿ ಅಹ ಎದ್ದಿರಿ, ಎದ್ದಿರಿ ಬಿದ್ದಿರಿ ಬಿದ್ದಿರಿ ಎದ್ದಿರಿ.

ಆರು ಕೊಟ್ಟರೆ ಅತ್ತೆಗೆ ಓಟು;

ಮೂರೂ ಕೊಡಲು ತಕೋ ಸೊಸೆಗೆ ತಿಕೀಟು.

ಕೊಟ್ಟ ಟೀವಿ ಪಂಚೇ ಸೀರೆ,

ಭ್ರಷ್ಟ ಜನಕೆ ರಾಜ್ಯ ಪರಭಾರೆ!…. ಜನತಂತ್ರ

ಕಲಿತ ಮಂದಿ ಮತಗಟ್ಟೆಗೆ ಬರರು;

ಯೋಗ್ಯವನ್ತರೆಲೆಕ್ಷನ್ನಿಗೆ ನಿಲ್ಲರು.

ಕಪ್ಪು ಹಣದ ಆಮಿಶ ಒಡ್ಡಿ ಬರುವ

ಕಾಳ ಸಂತೆ ಜನ ಕುರ್ಚಿ ಏರತಾರೋ !..ಜನತಂತ್ರ

ಉಭಾ: ಉಳಿದಂತೆ ದೇಶಕ್ಕೆ ತಮ್ಮ ಸಂದೇಶ ಏನು ಅಂತ ಕೇಳಬಹುದೇ?

ಪುಪುನ್: ಅಹ್ಹಹ್ಹಾ…, ಉಳಿದಂತೆ ದೇಶಕ್ಕೆ! ಒಹ್ಹೊಹ್ಹೋ…, ಒಳ್ಳೆ ಜೋಕ್ ಬಿಡ್ರಿ. ಇದಾ ಹಾಳುವಿಕೆ ಕ್ಷಮ್ಸಿ, ಆಳುವಿಕೆ ಇದ್ದರಾ ದೇಶ ಎಲ್ಲಿ ಉಳಿತದಾ ಅಂತಾ? ಇಷ್ಟ್ ಆದರು ನನ್ನ ಸಂದೇಶ ಅಂದ್ರಾ: ಸನ್ ಅಂದ್ರೇನು- ಮಗಾ. ಅವನದಾಗಬೇಕು ಈ ದೇಶ.

ವಂಶ ಪಾರಮ್ಪರಿಯ ಹಾಳ್ವಿಕೆ. ಈ ಸಂಬಂಧಾ ಸುರಾ..,ಅಲ್ಲಾ ಸೂರಾ ವಚನ ಕೇಳ್ರಿ:

ನಮ್ಮ ನಾಯಕರಿಗೆ ರಾಷ್ಟ್ರ ಪ್ರೇಮವೆಂದರೆ;

ಥೇಟು ಧೃತರಾಷ್ಟ್ರ ಪ್ರೇಮವೇ.

ರಾಜಕಾರನವೆಂಬ ಪಾಟಲಿ ಪುತ್ರರ ಬೆಳೆ ಸುತ;

ಕುಟಿಲತೆಯ ಮೆರೆವ ಮಗ-ದ ದೇಶವೇ.

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ;

ಪಂಜಾಬಿನಿಂದ ಒರಿಸ್ಸದವರೆಗೆ

ಬರದೆಳೆದ ಮಗಾ-ಭಾರತ ಕಥಾ!

ಜೈ ಮೇರಾ ಭಾರತ ಮಗಾ ನ್.

ಉಭಾ: ಕಾರ್ಯಕ್ರಮದ ಕಡೆಯ ಗೀತೆ ಭೂ-ನರಕ ಚಿತ್ರದ್ದು.ಕೇಳಲು ಬಯಸಿದ್ದಾರೆ: ಅಗ್ರಹಾರದ ಪರಪ್ಪ, ಗುಟ್ಟಹಳ್ಳಿಯ ಗುಪ್ತ, ಚೊಮ್ಬೂರಿನ ದಾಸಯ್ಯ, ನಿತ್ಯಾನಂದ ಪುರಿಯ ಹಲ್ಕಾ ಯಾಜ್ಞಿಕ್, ಕಲ್ಪನಾ,ವಿಲಾಸ್, ರಾಜಸ್, ಥಾಮಸ್, ಸಾತ್ವಿಕ್.ಕೈಲಂಚದ ಮೇದಿನಿ ಮತ್ತವರ ಯಜಮಾನರಾದ ಮುಕ್ಕಣ್ಣ ಕಂಡಾಬಟ್ಟೆ!

ಈ ಚೇರು ಮೂರು ದಿನ ಅಲ್ಲವೇನೋ;

ರಾಜಿನಾಮೆ ಪತ್ರ ಪತ್ರ ಬೆನ್ನ ಹಿಂದೆ ಬಲ್ಲೆಯೇನೋ!

ಭ್ರಷ್ಟ ಧನವ ಮೆಲ್ಲುತ; ರಣ ಹದ್ದುಗಳಿಗೆ ಚೆಲ್ಲುತ.

ಕುಖ್ಯಾತನಾಗಿ ನೂರು ವರುಷ ಬಾಳಲೇಕೋ?….ಈ ಚೇರು

ಕಬಳಿಸಲು ಬಡರೈತರ ಭೂಮಿ ಬೇಕೇ?

ಕಡು ಬಡವರಾ ಸೇವೆ ಗೈಯೆ ಲಂಚ ಯಾಕೆ?

ಸಾಯೊವರೆಗೂ ಅಧಿಕಾರದ ಆಸೆ ಏಕೋ;

ಪ್ರತಿಪಕ್ಷದವರು ಕಾಯುತಿಹರು ಕಾಣೆ ಏಕೋ!…ಈ ಚೇರು ಮೂರು ದಿನ

ನೀವು ಕೇಳುತಿದ್ದಿರಿ ಎಫ್ ಎಂ ೮೪೦ ಬೈಟೂ, ರಾಡಿಯಾ ಮಿರ್ಚಿ, ಸಖತ್ ಫ್ಯಾಟ್ ಮಗಾಇಲ್ಲಿಗೆ ಮೆಚ್ಚಿನ ವಿಚಿತ್ರಗೀತೆಗಳ ಕಾರ್ಯಕರ್ಮ ಮುಗಿಯಿತು.ಗುಂಡ್ ನೈಟ್; ಇತಿ ತಮ್ಮ UB ಅರ್ಥಾತ್ ಉತ್ತರಾ ಭಾದ್ರ.

-ಸುರ…,ಅಲ್ಲಲ್ಲ ಸೂರಾ.

 

‍ಲೇಖಕರು avadhi

December 27, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This