ಡೋರ್ ನಂ ೧೪೨: ಇವು ಶಬ್ದಚಿತ್ರಗಳು

ಉದಯಕುಮಾರ್ ಹಬ್ಬು

‘ಡೋರ್ ನಂ 142’ ಈ ಕೃತಿ ನಮ್ಮೆಲ್ಲರ ಮನೆ ಮನದ ಡೋರ್ ನಂ ಆಗಿಬಿಟ್ಟಿದೆ. ನಮೆಲ್ಲರ ಬಾಲ್ಯದ ನೆನಪುಗಳು, ಹದಿಹರೆಯದ ಬಿಸಿ, ಬಿಸಿ ಹಸಿಬಿಸಿ ಮೈಮನದ ನವಿರುಗಳು, ತಲ್ಲಣಗಳು, ನೋವು, ನಲಿವು, ಸಂಘರ್ಷಗಳು, ವಿಷಾದಗಳ ಶಬ್ದಚಿತ್ರಣಗಳು ಅವಿಸ್ಮರಣೀಯವಾಗಿವೆ. ಇತ್ತೀಚಿಗೆ ನಾನು ಓದಿದ ಅಪರೂಪದ ಕೃತಿ ಎಂದು ಮುಕ್ತವಾಗಿ ಹೇಳಬಹುದಲ್ಲದೆ, ಇದನ್ನು ಅಬಾಲವೃದ್ಧರಾದಿಯಾಗಿ ಎಲ್ಲರೂ ಕುಳಿತು ನೋಡಬಹುದಾದ, ಓದಬಹುದಾದ ನುಡಿಚಿತ್ರಣವಾಗಿದೆ.
‘ಅಂದುಕೊಂಡ ಎಲ್ಲವೂ ಅಂದುಕೊಂಡ ಹಾಗೆ ಆಗಿದಿದ್ದರೆ ಬಹುಶಃ ನಾವು ಕಾಮು, ಕಾಫ್ಕಾ ಕತೆಗಳ ನಾಯಕರಾಗಿಬಿಡುತ್ತಿದ್ದೆವೊ ಏನೊ? ಬದುಕು ಎಂಬ ಗುಂಡುಕಲ್ಲನ್ನು ಕಟ್ಟಿಕೊಂಡು ರೇಸ್  ಗೆ ನಿಂತ ಹಾಗೆ” ಇವು ಶಬ್ದಚಿತ್ರಗಳ ಕೆಲವು ಸ್ಯಾಂಪಲ್ ಗಳಷ್ಟೆ! ಅವುಗಳನ್ನು ಚಪ್ಪರಿಸಿ ಚೀಪಿ ಸವಿಯಬೇಕಿದ್ದರೆ ಡೋರ್ ನಂ 142 ಓದಿ.

ನೆನಪುಗಳ ಆಗರ ಈ ಕೃತಿ. ಬಾಲ್ಯ ಎಲ್ಲರನ್ನೂ ಕಾಡುತ್ತೆ. 50 ವರ್ಷದವರಿಗೂ, 70ರ ಪ್ರಾಯದವರಿಗೂ.’ಹಿಡಿ ಮಣ್ಣ ನೀಡಿದವನು’ ಲೇಖನದಲ್ಲಿ ಜನಕರಾಜ ಸೀತೆಗೆ ಗಂಡನ ಮನೆಗೆ ಹೋಗುವಾಗ ಮಗಳ ಕೈಗೆ ಒಂದು ಪುಟಾಣಿ ವಸ್ತು ಇಡ್ತಾನೆ. ಅದೊಂದು ಡಬ್ಬಿ. ಸೀತೆ ಅದೇನಪ್ಪಾ ಎಂದು ತೆಗೆದು ನೋಡಿದರೆ ಅದರಲ್ಲೇನಿದೆ? ಮಣ್ಣು! ಗಳ, ಗಳ ಅಂತ ಅಳೋಕೆ ಶುರು ಮಾಡ್ತಾಳೆ. ಜನಕ ಇದಕ್ಕಿಂತ ಇನ್ನೇನು ಬೆಸ್ಟ್ ಪ್ರಸಂಟ್ ಕೊಡಬಹುದಿತ್ತು? ಅವನು ಸೀತೆಗೆ ತನ್ನೂರಿನ ಮಣ್ಣನ್ನೇ ಕೊಟ್ಟಿದ್ದಾನೆ. ಮಣ್ಣು ಅಂದರೆ ಅದೇನು ಮಣ್ಣಾ? ನೊ! ಅದು ತಾನು ಓಡಾಡಿದ, ಕುಣಿದ, ಕುಪ್ಪಳಿಸಿದ, ದೊಡ್ಡವಳಾದ, ಕಾಡಿದ, ಬೇಡಿದ ಎಲ್ಲ ನೆನಪುಗಳ ಮೊತ್ತ! ಅಪ್ಪ ಕೊಟ್ಟಿದ್ದು ಒಂದು ಹಿಡಿ ಮಣ್ಣಲ್ಲ. ಆತ ಒಂದು ಪುಟಾಣಿ ಡಬ್ಬಿಯಲ್ಲಿಇಡೀ ಬಾಲ್ಯಾನೇ ತುಂಬಿಕೊಟ್ಟಿದ್ದಾನೆ.’ ಹೀಗೆ ಕವಿ ನೊಸ್ಟಾಲ್ಜಿಕ್ ಆಗಿಬಿಡುವ ವಿಸ್ಮಯ ನಮ್ಮನ್ನು ಆವರಿಸಿಕೊಂಡುಬಿಡುತ್ತದೆ. ತನ್ನ ಬಾಲ್ಯದ ನೆನಪಿನಿಂದ ಅನರ್ಘ್ಯ ರತ್ನವನ್ನೆ ನಮ್ಮ ಕೊರಳಿಗೆ ಹಾಕಿಬಿಟ್ಟಿದ್ದಾರೆ.
ಈ ಗ್ರಂಥವನ್ನು ಕಾದಂಬರಿ ಎನ್ನಬೇಕೆ ಅಥವಾ ನೆನಪಿನ ಹಾಯಿದೋಣಿ ಎನ್ನಬೇಕೆ? ಅನುಭವದ ತುಣುಕುಗಳು. ಒಂದಥರ ಹೊಸರೀತಿಯ ಅಭಿವ್ಯಕ್ತಿ. ಭಾವಗೀತಾತ್ಮಕತೆ ಇದರ ಧನಾತ್ಮಕ ಗುಣ. ಮತ್ತೆ, ಮತ್ತೆ ಓದಿಸಿಕೊಳ್ಳುವ ಗುಣ. ಓದಿದಷ್ಟೂ ಹೊಸ, ಹೊಸ ಅರ್ಥವನ್ನು ಹೊಳೆಯಿಸುವ, ನಿರೂಪಕನ ಬಾಲ್ಯದ ನೆನಪುಗಳು ನಮ್ಮ ಬಾಲ್ಯವನ್ನು ಮರುಕಳಿಸುವಂತೆ ಮಾಡುವ, ನಮ್ಮನ್ನು ಕೆರಳಿಸುವ ವಯಾಗ್ರಾ. ಧ್ಯಾನಸ್ಥ ಸ್ಥಿತಿಯಲ್ಲಿ ಬಾಲ್ಯವನ್ನು ವರ್ತಮಾನದ ದೃಷ್ಟಿಯಿಂದ ಸಿಂಹಾವಲೋಕನ ಮಾಡಿದಂತಿದೆ. ಕೆಲವೊಮ್ಮೆ    ಕೆ. ಎಸ್. ನರಸಿಂಹ ಸ್ವಾಮಿಯವರ ‘ಮೈಸೂರು ಮಮಲ್ಲಿಗೆ’ ನೆನಪಾಗುತ್ತೆ. ನೆನಪುಗಳು, ಮಾನವ ಸಂಬಂಧಗಳು, ಒಡನಾಟ, ತಾಕಲಾಟ, ಸಂಘರ್ಷ, ವಿರಹ, ಮಿಲನ, ಪ್ರೇಮ, ಪ್ರೀತಿ, ಸಾವು, ಹದಿಹರೆಯ, ಬೆನ್ನಿಗೆ ಚೂರಿ, ಮೋಸ, ವಂಚನೆ, ಧಗಾ, ಎಲ್ಲ ಮಾನವೀಯ ಸಂಬಂಧಗಳ ಗಾಢ ಅನುಭವಗಳ ನುಡಿಚಿತ್ರಣಗಳು. ಶಿಲ್ಪಿ ಕಡೆದಿಟ್ಟಷ್ಟೆ ಸ್ಪಷ್ಟ, ಸ್ಪುಟ, ಭಾವಪೂರ್ಣ ಸಂಕ್ಷಿಪ್ತತೆ, ಅನುಭವದ ತೀವ್ರತೆ. ಎಲ್ಲಯೂ ಶಬ್ದಗಳ ದುಂದುಗಾರಿಕೆಯಿಲ್ಲ. ನವಿರಾದ ನೋವು ಹಾಗೂ ವಿಷಾದ ನಮ್ಮನ್ನು ಆವರಿಸಿಕೊಂಡುಬಿಡುತ್ತದೆ. ಇಲ್ಲಿ ಎಲ್ಲವೂ ಇದೆ. ಇಲ್ಲಿ ಇಲ್ಲದ್ದು ಬೇರೆ ಎಲ್ಲಿಯೂ ಇಲ್ಲ. ಮೋಹನ್ ನಮ್ಮನ್ನು  ಗಾಢವಾಗಿ ಮೀಂಟುತ್ತಾರೆ. ನಮ್ಮನ್ನು ತಟ್ಟುತ್ತಾರೆ, ಮುಟ್ಟುತ್ತಾರೆ.
‘ಒಂದೇ ಒಂದು ‘ಸಾರಿ’ ಎಷ್ಟೊಂದು ಪರಿಣಾಮ ಬೀರುತ್ತೆ? ಆದರೆ ತೊಳೆದರೂ ಹೋಗದ ಪಾಪಪ್ರಜ್ಞೆಯಿಂದ ವಿಲಿ, ವಿಲಿ ಒದ್ದಾಡುತ್ತಿರುವ ಲೇಡಿ ಮ್ಯಾಕ್ಬೆತ್ ನಮ್ಮಲ್ಲಿಯೂ ಅಡಗಿಕೊಂಡು ಇದ್ದಾಳೆ ಅದನ್ನು ಈ ಪುಸ್ತಕ ನಮಗೆ ತೋರಿಸಿಕೊಡುತ್ತದೆ.
ಟೀನ್ ಏಜ್ ಮಕ್ಕಳ ಚಿತ್ರಣ ನೋಡಿ ಹೇಗಿದೆ:” ದೇಹದಲ್ಲಿ ಏನೋ ಬದಲಾವಣೆ ಆಗುತೆ. ಎಲ್ಲೆಲ್ಲೊ ಕೂದಲು ಮೂಡೋದಕ್ಕೆ ಆರಂಭವಾಗುತ್ತೆ. ರಾತ್ರಿ ಇದ್ದಕ್ಕಿದ್ದ ಹಾಗೆ ಮೈ’ ಜುಂ’ ಎಂದುಬಿಡುತ್ತೆ. ಕನಸಲ್ಲಿ ಏನೇನೋ ಆಗಿ ಹೋಗುತ್ತೆ. ಗೊತ್ತಿಲ್ಲ ಏನೋ ಬೇಕು, ಏನೋ ಬೇಕು ಅನಿಸ್ತಾ ಇರುತ್ತೆ. ಏನ್ ಬೇಕೆಂದು ಗೊತ್ತುಮಾಡಿಕೊಳ್ಳೋದು ಒಳ್ಳೇದೆ. ಆದರೆ ಯಾವಾಗ ಬೇಕು ಅನ್ನೋದು ತಿಳ್ಕೊಳ್ಳೋದು ಒಳ್ಳೇದಲ್ವಾ?
ಟೀನ್ ಏಜ್ ಅಂದ್ರೆ ಸುಮ್ನೇನಾ? ನರನಾಡಿ, ಎಲ್ಲಾದ್ರಲೂ ಮಿಂಚು, ಮಿಂಚು ಹರಿಸುತ್ತೆ. ಕನ್ನಂಬಾಡಿ ಆಣೆಕಟ್ಟೇನಲ್ಲಿ ನೀರ್ ಬೀಳ್ತಾ ಇದ್ದಾಗ ಅಬ್ಬಾ! ಅನಿಸುತ್ತಲ್ಲಾ? ಆ ರೀತಿ ಅನ್ಸುತ್ತೆ ನನಗೆ. ಹುಚ್ಚು, ಹುಚ್ಚು ಶಕ್ತಿ ಅದು. ಸರಿ ದಾರೀಲಿ ಹೋಗೋ ಥರ ಕಾಲ್ವೆ ಕಟ್ಬಿಟ್ರಾ ಬಚಾವ್. ಇಲ್ಲಾಂದ್ರೆ ಸಿಕ್, ಸಿಕ್ಕ ಕಡೆಗೆ ನುಗ್ಗುತ್ತೆ. ಎದುರಿಗೆ ಬಂದದ್ದನ್ನೆಲ್ಲಾ ಕೊಚ್ಚಿ ಬಿಸಾಡುತ್ತೆ.” ಹದಿಹರೆಯದ ಕುರಿತಾಗಿ ಇದಕ್ಕಿಂತ ಚೆನ್ನಾಗಿ ಹೇಗ್ತಾನೆ ಬರೆಯೋದು?
‘ಒಂದು ದಶಕವೇ ಉರುಳಿತೇನೋ. ಎದೆಯೊಳಗೆ ಜುಳು, ಜುಳು ನಾದವಿದೆಯೇ ಇನ್ನೂ ಎಂದು ಕೇಳಿಸಿಕೊಳ್ಳಲೆಂದೇ ಬಂದಳೇನೋ ಎಂಬಂತೆ ಅದೇಕಾಡಿನ ನಡುವಿದ್ದ ನನ್ನ ಮನೆಗೆ ಬಂದು ಬಿಟ್ಟಳು.’ ಈ ಸಾಲು ಯಾವುದೋ ಕವನದ ಸಾಲಿನಂತೆ ಅನಿಸಿದರೆ ಅದು ಯಾರ ತಪ್ಪು? ಹ್ಯಾಟ್ಸ್ ಆಫ್ ಮೋಹನ್!

‍ಲೇಖಕರು G

March 13, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಊರೆಂಬ ಉದರ’ದ ಕರ್ತೃವಿಗೆ ನುಡಿನಮನ

‘ಊರೆಂಬ ಉದರ’ದ ಕರ್ತೃವಿಗೆ ನುಡಿನಮನ

ನಮ್ಮ ಸಂತೇಕಡೂರು ಶಿವಮೊಗ್ಗ ಸಮೀಪ ತುಂಗಾ ತೀರದ ಬಲಗಡೆಯಲ್ಲಿರುವ ಸಂಸ್ಕೃತ ಗ್ರಾಮಕ್ಕೆ ಕೇವಲ ನಾಲ್ಕು ಕಿಲೋಮೀಟರುಗಳ ಅಂತರದಲ್ಲಿರುವ ಹಳ್ಳಿ. ಆ...

ಮರೆಯಲಾಗದ ಜಿಮ್ ಕಾರ್ಬೆಟ್!

ಮರೆಯಲಾಗದ ಜಿಮ್ ಕಾರ್ಬೆಟ್!

ರೇಷ್ಮಾ ಗುಳೇದಗುಡ್ಡಾಕರ್ ಜಿಮ್ ಕಾರ್ಬೆಟ್ ಅವರ ಪುಸ್ತಕಗಳು ಎಷ್ಟು ಓದಿದರು ಮುಗಿಯದ ಕುತೂಹಲ ಭರಿತ ಪುಸ್ತಕಗಳು. ಈ ಪುಸ್ತಕ ಕಾರ್ಬೆಟ್ ಅವರ...

2 ಪ್ರತಿಕ್ರಿಯೆಗಳು

 1. D.Ravivarma

  ಟೀನ್ ಏಜ್ ಅಂದ್ರೆ ಸುಮ್ನೇನಾ? ನರನಾಡಿ, ಎಲ್ಲಾದ್ರಲೂ ಮಿಂಚು, ಮಿಂಚು ಹರಿಸುತ್ತೆ. ಕನ್ನಂಬಾಡಿ ಆಣೆಕಟ್ಟೇನಲ್ಲಿ ನೀರ್ ಬೀಳ್ತಾ ಇದ್ದಾಗ ಅಬ್ಬಾ! ಅನಿಸುತ್ತಲ್ಲಾ? ಆ ರೀತಿ ಅನ್ಸುತ್ತೆ ನನಗೆ. ಹುಚ್ಚು, ಹುಚ್ಚು ಶಕ್ತಿ ಅದು. ಸರಿ ದಾರೀಲಿ ಹೋಗೋ ಥರ ಕಾಲ್ವೆ ಕಟ್ಬಿಟ್ರಾ ಬಚಾವ್. ಇಲ್ಲಾಂದ್ರೆ ಸಿಕ್, ಸಿಕ್ಕ ಕಡೆಗೆ ನುಗ್ಗುತ್ತೆ. ಎದುರಿಗೆ ಬಂದದ್ದನ್ನೆಲ್ಲಾ ಕೊಚ್ಚಿ ಬಿಸಾಡುತ್ತೆ.” ಹದಿಹರೆಯದ ಕುರಿತಾಗಿ ಇದಕ್ಕಿಂತ ಚೆನ್ನಾಗಿ ಹೇಗ್ತಾನೆ ಬರೆಯೋದು?
  ‘ಒಂದು ದಶಕವೇ ಉರುಳಿತೇನೋ. ಎದೆಯೊಳಗೆ ಜುಳು, ಜುಳು ನಾದವಿದೆಯೇ ಇನ್ನೂ ಎಂದು ಕೇಳಿಸಿಕೊಳ್ಳಲೆಂದೇ ಬಂದಳೇನೋ ಎಂಬಂತೆ ಅದೇಕಾಡಿನ ನಡುವಿದ್ದ ನನ್ನ ಮನೆಗೆ ಬಂದು ಬಿಟ್ಟಳು.’ ಈ ಸಾಲು ಯಾವುದೋ ಕವನದ ಸಾಲಿನಂತೆ ಅನಿಸಿದರೆ ಅದು ಯಾರ ತಪ್ಪು? ಹ್ಯಾಟ್ಸ್ ಆಫ್ ಮೋಹನ್!
  haudu….ii pustike nannannu ghaadavaagi kaadide.. ಮಾನವ ಸಂಬಂಧಗಳು, ಒಡನಾಟ, ತಾಕಲಾಟ, ಸಂಘರ್ಷ, ವಿರಹ, ಮಿಲನ, ಪ್ರೇಮ, ಪ್ರೀತಿ, ಸಾವು, ಹದಿಹರೆಯ, ಬೆನ್ನಿಗೆ ಚೂರಿ, ಮೋಸ, ವಂಚನೆ, ಧಗಾ, ಎಲ್ಲ ಮಾನವೀಯ ಸಂಬಂಧಗಳ ಗಾಢ ಅನುಭವಗಳ ನುಡಿಚಿತ್ರಣಗಳು. ಶಿಲ್ಪಿ ಕಡೆದಿಟ್ಟಷ್ಟೆ ಸ್ಪಷ್ಟ, ಸ್ಪುಟ, ಭಾವಪೂರ್ಣ ಸಂಕ್ಷಿಪ್ತತೆ, ಅನುಭವದ ತೀವ್ರತೆ. ಎಲ್ಲಯೂ ಶಬ್ದಗಳ ದುಂದುಗಾರಿಕೆಯಿಲ್ಲ. ನವಿರಾದ ನೋವು ಹಾಗೂ ವಿಷಾದ ನಮ್ಮನ್ನು ಆವರಿಸಿಕೊಂಡುಬಿಡುತ್ತದೆ. ಇಲ್ಲಿ ಎಲ್ಲವೂ ಇದೆ. ಇಲ್ಲಿ ಇಲ್ಲದ್ದು ಬೇರೆ ಎಲ್ಲಿಯೂ ಇಲ್ಲ. ಮೋಹನ್ ನಮ್ಮನ್ನು ಗಾಢವಾಗಿ ಮೀಂಟುತ್ತಾರೆ. ನಮ್ಮನ್ನು ತಟ್ಟುತ್ತಾರೆ, ಮುಟ್ಟುತ್ತಾರೆ.
  nanna alochanegalannu niivu baraharupakke ilisiddiri…nimage vandanegalu…..

  ಪ್ರತಿಕ್ರಿಯೆ
 2. ಸುಧಾ ಚಿದಾನಂದಗೌಡ

  “ಬಾಲ್ಯಕಾಲಸಖಿ” ತುಂಬ ಚೆನ್ನಾಗಿದೆ.
  ಅದರಲ್ಲೂ ಹುಳಿ ಪೆಪ್ಪರಮೆಂಟು ಎಲ್ಲರಿಗೂ ಕೊಟ್ಟು,
  ಅವರು ಮಿನಿಮಂ ನಲ್ವತ್ತು ವರ್ಷ ಹಿಂದಕ್ಕೆ ಹೋದ ವಿವರಣೆ ಆಪ್ತವೆನಿಸಿತು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: