ತಂಪೆರೆವ ಕಥೆಗಳಿಗಾಗಿ ಬೆಂಕಿಯ ದಾರಿಯಲ್ಲಿ…

burger.jpg

vnew3.jpg“ವೆಂಕಿ ಬರ್ಗರ್”

 

 

 

 

ವೆಂಕಿ

ನ್ಯೂಯಾರ್ಕ್ ಬೀದಿಗಳಲ್ಲಿ ಎಲ್ಲೆಲ್ಲೂ ಕಾಣುವ ದೃಶ್ಯವೆಂದರೆ ಗಾಳಿಯಲ್ಲಾಡುವ ಕೈಗಳು. ಟ್ಯಾಕ್ಸಿ ಡ್ರೈವರ್ ಗಳ ಗಮನ ಸೆಳೆಯಲು ನಡೆಸುವ ಈ ಕಸರತ್ತು ನ್ಯೂಯಾರ್ಕ್ ನ ಅವಿಭಾಜ್ಯ ಅಂಗ.

ನ್ಯೂಯಾರ್ಕ್ ನ ಬೀದಿಗಳಲ್ಲಿ ಈ ಕೈಗಳನ್ನು ಅರಸಿ ಹದಿಮೂರು ಸಾವಿರ ಟ್ಯಾಕ್ಸಿಗಳು ಸಂಚರಿಸುತ್ತವೆ. ಈ ವಾರವಂತೂ ಎಲ್ಲೆಲ್ಲೂ ಟ್ಯಾಕ್ಸಿಯನ್ನು ಹುಡುಕುವ ಕೈಗಳೇ ಎದ್ದು ಕಾಣುತ್ತಿದ್ದವು. ಟ್ಯಾಕ್ಸಿ ಡ್ರೈವರ್ ಗಳು ಮುಷ್ಕರಕ್ಕಿಳಿದಿದ್ದರು. ನ್ಯೂಯಾರ್ಕ್ ನಲ್ಲಿ ಟ್ಯಾಕ್ಸಿ ಮತ್ತು ಲಿಮೋಸಿನ್ ಎಂಬ ಐಷಾರಾಮಿ ಕಾರುಗಳನ್ನು ನಿಯಂತ್ರಿಸುವ ಆಯೋಗವಿದೆ. ಈ ಆಯೋಗ ತನ್ನ ಕಾನೂನುಗಳನ್ನು ಇನ್ನಷ್ಟು ಬಿಗಿ ಮಾಡಲು ಮುಂದಾಗಿತ್ತು. ಟ್ಯಾಕ್ಸಿ ಚಾಲಕರ ಕಣ್ಣು ಕೆಂಪಗಾಯಿತು. ಎರಡು ದಿನ ಟ್ಯಾಕ್ಸಿಗಳು ಬೀದಿಗಿಳಿಯಲಿಲ್ಲ.

ನ್ಯೂಯಾರ್ಕ್ ಹಾಗೂ ಹಳದಿ ಟ್ಯಾಕ್ಸಿಗಳದ್ದು ಯಾವಾಗಲೂ ಲವ್ ಅಂಡ್ ಷೇಕ್ ಸಂಬಂಧ. ಟ್ರಾಫಿಕ್ ಜಾಮುಗಳಲ್ಲಿ ಸದಾ ಕೆಂಗಣ್ಣಿಗೆ ಗುರಿಯಾಗುವುದು ಈ ಟ್ಯಾಕ್ಸಿಗಳೇ. ಆದರೆ ಸುತ್ತಾಡಬೇಕಾಗಿ ಬಂದಾಗ, ಅದರಲ್ಲೂ ಬಸ್, ರೈಲು ಸಂಚಾರವಿಲ್ಲದ ಪ್ರದೇಶಗಳಿಗೆ ಹೋಗಬೇಕಾದಾಗ ಮಾತ್ರ ಎಲ್ಲರಿಗೂ ಈ ಟ್ಯಾಕ್ಸಿಗಳು ಪ್ರೀತಿಪಾತ್ರ. ಎರಡು ದಿನಗಳ ಕಾಲ ಟ್ಯಾಕ್ಸಿಗಳು ರಸ್ತೆಯಿಂದ ಹೊರನಡೆದಿದ್ದೇ ತಡ, ನ್ಯೂಯಾರ್ಕ್ ನ ದಿನಚರಿಯೇ ಅಸ್ತವ್ಯಸ್ತವಾಗಿ ಹೋಯಿತು. ಆದರೆ ಅತ್ಯಂತ ಜನನಿಬಿಡ ರಸ್ತೆಗಳು ಮಾತ್ರ ಒಂದಿಷ್ಟು ಕಾಲ ನೆಮ್ಮದಿಯ ಉಸಿರು ಬಿಟ್ಟವು.

nykk.jpg

ಯಾರು ಈ ಬಿಕ್ಕಟ್ಟು ಸೃಷ್ಟಿ ಮಾಡಿದವರು? ಯಾರು ನ್ಯೂಯಾರ್ಕ್ ನ ಉಸಿರನ್ನು ಕ್ಷಣಕಾಲವಾದರೂ ನಿಲ್ಲಿಸಿದವರು? ಯಾರು ಟ್ಯಾಕ್ಸಿ ಡ್ರೈವರ್ ಗಳ ದನಿಯನ್ನು ಒಟ್ಟುಗೂಡಿಸಿದವರು? ಆಶ್ಚರ್ಯವಾಗಬಹುದು. ಅವರೇ ಭಾರತದ ಭೈರವಿ ದೇಸಾಯಿ. ಭಾರತೀಯರಾದ ಈಕೆ ತನ್ನ ಆರನೇ ವರ್ಷದಲ್ಲೇ ಗುಜರಾತ್ ನಿಂದ ನ್ಯೂಯಾರ್ಕ್ ಗೆ ಜಿಗಿದವರು. ನ್ಯೂಯಾರ್ಕ್ ಟ್ಯಾಕ್ಸಿ ವರ್ಕರ್ಸ್ ಅಲೈಯನ್ಸ್ ರೂಪಿಸುವುದರ ಮೂಲಕ ಬಹುತೇಕ ವಲಸಿಗರೇ ಇರುವ ಟ್ಯಾಕ್ಸಿ ಡ್ರೈವರ್ ಗಳಿಗೆ ದನಿ ಕೊಟ್ಟವರು. “ನಾವು ಹಲವಾರು ಭಾಷೆ ಮಾತಾಡುತ್ತೇವೆ. ಆದರೆ ನಮ್ಮೆಲ್ಲರ ಮೇಲಿನ ಶೋಷಣೆಯ ಭಾಷೆ ಮಾತ್ರ ಒಂದೇ” ಎನ್ನುತ್ತಾರೆ ಭೈರವಿ. ಭಾರತ, ಪಾಕಿಸ್ತಾನ, ಬಾಂಗ್ಲಾದೇಶಗಳ ಡ್ರೈವರ್ ಗಳೇ ಹೆಚ್ಚಾಗಿರುವ ದಕ್ಷಿಣ ಏಷ್ಯಾದ ಟ್ಯಾಕ್ಸಿ ಡ್ರೈವರ್ ಗಳನ್ನು ಸಂಘಟಿಸುವುದು ಸುಲಭದ ಕೆಲಸವಲ್ಲ. ನ್ಯೂಯಾರ್ಕ್ ಟ್ಯಾಕ್ಸಿಗಳ ಸಂಖ್ಯೆಯಲ್ಲಿ ಅರ್ಧದಷ್ಟು ಪಾಲು ಈ ಮೂರೂ ದೇಶಗಳಿಂದ ಬಂದವರದ್ದು. ಈ ಮೂರೂ ದೇಶಗಳವರನ್ನು ಒಟ್ಟುಗೂಡಿಸುವುದು ಸಂಘಟನೆಯನ್ನು ಒಗ್ಗಟ್ಟಾಗಿಡಲು ಅನಿವಾರ್ಯ. ಮೇಯರ್ ಕಚೇರಿ ಇವರ ಬೇಡಿಕೆಗಳಿಗೆ ಮಣೆ ಹಾಕುತ್ತದೆಯೆ ಇಲ್ಲವೆ ಎಂಬುದು  ಇನ್ನೂ ನಿಖರವಾಗಿಲ್ಲ. ಆದರೆ ಇಷ್ಟು ಮಾತ್ರ ನಿಜ. ಈ ಎಲ್ಲರ ಒಗ್ಗಟ್ಟಿನ ದನಿಯಂತೂ ಬಲವಾಗಿದೆ, ಎಲ್ಲರಿಗೂ ಕೇಳಿಸುವಂತಿದೆ. ಥ್ಯಾಂಕ್ಸ್ ಟು ಭೈರವಿ.

ನ್ಯೂಯಾರ್ಕ್ ನ ಮನಃಸ್ಥಿತಿಯನ್ನೇ ಒಡೆದುಹಾಕಿದ ಮತ್ತೊಬ್ಬ ಮಹಿಳೆಯಿದ್ದಾರೆ. ಸಲ್ವಾರ್ ಕಮೀಸ್ ತೊಟ್ಟ ಮರಿಯಾ ಸಿಂಗ್ ಬೆಳಗಿನ ಜಾವ ೭ಕ್ಕೆ ಕಾರು ಏರಿ ಡ್ರೈವಿಂಗ್ ವ್ಹೀಲ್ ಹಿಡಿದರೆ ಮತ್ತೆ ಕೆಳಗಿಳಿಯುವುದು ಸತತ ೧೨ ಗಂಟೆಗಳ ನಂತರ. ತನಗೆ ಪ್ರಿಯವಾದದ್ದನ್ನು ಮಾಡಲು ಆರಾಮ್ ಆಫೀಸ್ ಕೆಲಸವನ್ನೇ ಒದ್ದು ಬಂದಾಕೆ ಮರಿಯಾ ಸಿಂಗ್. ನ್ಯೂಯಾರ್ಕ್ ನಲ್ಲಿ ಹುಟ್ಟಿದ, ಇಟಲಿ ಮೂಲದ ಮರಿಯಾ ಸಿಂಗ್ ಆತುಕೊಂಡದ್ದು ಮಾತ್ರ ಸಿಖ್ ಧರ್ಮವನ್ನು. ಈಕೆಯ ವಿಚಾರದಲ್ಲಂತೂ ಎಲ್ಲವೂ ಉಲ್ಟಾಪಲ್ಟಾ. ಅಲೆಯ ವಿರುದ್ಧ ಈಜುವುದು, ಸಿದ್ಧ ಮಾದರಿಯನ್ನು ಬಿಟ್ಟುಕೊಡುವುದು ಈಕೆಯ ಪ್ರೀತಿಯ ಹವ್ಯಾಸ.

ಗಂಡು ತನಗೆ ಬೇಕಾದ ಹೆಣ್ಣು ಹುಡುಕುತ್ತ ಭಾರತಕ್ಕೆ ಬರುವುದು ಸಂಪ್ರದಾಯ. ಆದರೆ ಈಕೆ ಮಾತ್ರ ತದ್ವಿರುದ್ಧ. ಗಂಡು ಹುಡುಕುತ್ತ ಪಂಜಾಬಿಗೆ ಬಂದು ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಂಡರು. ಭೈರವಿ ಮತ್ತು ಮರಿಯಾ ಇಬ್ಬರೂ ನ್ಯೂಯಾರ್ಕ್ ಎಂಬ ದಟ್ಟ ಕಾಂಕ್ರೀಟ್ ನಗರಿಯಲ್ಲಿ ತಮ್ಮದೇ ದಾರಿ ಹುಡುಕಿಕೊಂಡವರು. ಬೆಂಕಿಯ ಹಾದಿಯಲ್ಲಿ ನಡೆದು ಹೃದಯವನ್ನು ತಂಪಾಗಿಸಿಕೊಂಡವರು. 

ಛಾಯಾಚಿತ್ರ: ಜಿ ಎನ್ ಮೋಹನ್

‍ಲೇಖಕರು avadhi

September 11, 2007

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This