ತಲೆಕೆಟ್ಟ ಹಾಯ್ಕುಗಳು

-ರಾಘವೇಂದ್ರ ಜೋಷಿ ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ ಮುನಿಯಬೇಡ ಅನ್ಯರಿಗೆ ಅಸಹ್ಯಪಡಬೇಡ. Perhaps, ಗಾಳಿ ಬಂದಾಗ ತೂರಿಕೋ. – ಪರಿಸರ ಮಾಲಿನ್ಯದ ಕವಿತೆ ಹೊಸೆಯುತ್ತಿದ್ದ ಯುವಕವಿ ಪ್ರಾಸ ಹೊಂದಿಸಲಾಗದೆ ತಿಣುಕಿ ಸಿಟ್ಟಾಗಿ ಅರಿವಿಲ್ಲದೇ ಕ್ಯಾಂಪಸ್ಸಿನ ಎಳೇಹುಲ್ಲು ಕೀಳುತ್ತಿದ್ದ! – ಝೆನ್ ಕಥೆಗಳೆಂದರೆ ನನಗೆ ಪ್ರಾಣ.. ಹಾಗಾಗಿ ನಾನು ಯಾವತ್ತೂ ಅವುಗಳನ್ನು ಪೂರ್ತಿ ಮುಗಿಸೋದೇ ಇಲ್ಲ! Suppose, ಅರ್ಥವಾಗಿ ಬಿಟ್ಟರೆ? – ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ ಬಂದ ಮೇಲೆ ಅನಿಸಿತು ಹಳೇಮನೆ ಚೆನ್ನಾಗಿತ್ತು. ನಡೆದೂ ನಡೆದೂ ಕಾಲು ಕೊಳೆತಿದೆ ಕೈಯಿಂದ ಮುಂದೆ ನಡೆಯಲಾಗದು ಹಿಂದೆಯೂ ನಡೆಯಲಾಗದು ಸುಮ್ಮನಿರಲಾಗದು.. – ಭೂಮಿ ಸುಂದರವಾಗಿದೆ ಅಂದರು ಗುಂಡಗಿದೆ ಅಂದರು ಚಪ್ಪಟೆಯಾಗಿದೆ ಅಂದರು ಅಲ್ಲಿ ನೀರಿದೆ ಹಸಿರಾಗಿದೆ ಬಿಸಿಯಾಗಿದೆ ಮಾಲಿನ್ಯವಾಗಿದೆ ಬಿರುಕುತ್ತಿದೆ ಸಿಡಿಯುತ್ತೆ ಅಂದರು. ಒಂದಿನ, ಅವಳು ನಾನೇ ಭೂಮಿ ಅಂದಳು. ಅದೂ ನಿಜ. –
]]>

‍ಲೇಖಕರು avadhi

June 14, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅವಳು

ಅವಳು

ಸತ್ಯಮಂಗಲ ಮಹಾದೇವ ಅವಳುಈಗ ಹೆಚ್ಚು ಮೌನಿನೆಲಕೆ ನೀರು ಹಬ್ಬಿದಂತೆ ಅವಳುಈಗ ಮಾತಿನ ಕಸುವನ್ನುದುಡಿಯುವ ಕೈಗಳಿಗೆದಾಟಿಸುತ್ತಿರುವ ಅಭಿಯಂತರೆ...

ನಂಬಿಕೆ

ನಂಬಿಕೆ

ಗೀತಾ ಜಿ ಹೆಗಡೆ ಕಲ್ಮನೆ ಹಿಂದಿಂದೇ ಬರುವ ಒಂಟಿ ನೆರಳೊಂದುಕೇಳುತ್ತಿದೆ ಅವನೆಲ್ಲಿ ಬೇಗ ಹೇಳುಗುಟ್ಟೊಂದು ಅರ್ಜೆಂಟಾಗಿ ಹೇಳಬೇಕಿದೆನನಗೂ ಈಗ...

ತ್ರಿಲೋಕ…

ತ್ರಿಲೋಕ…

ಚಂದ್ರಪ್ರಭ ಕಠಾರಿ ಮನದಾಳದಲೆಲ್ಲೋ ಹುಟ್ಟಿದಅಣು ಗಾತ್ರದ ಭಯದ ಬಿಂದುಭುವಿಯಾಚೆಆಕಾಶದಾಚೆಅನಂತತೆಯಾಚೆಭೂತಾಕಾರದೀ ಬೆಳೆದುಅಗಣಿತ...

21 ಪ್ರತಿಕ್ರಿಯೆಗಳು

 1. ಸುಘೋಷ್ ಎಸ್ ನಿಗಳೆ

  ತಲೆಕೆಟ್ಟಾಗ ರಾಘವೇಂದ್ರ ಜೋಶಿ
  ಬರೆದು ಎಸೆಯುತ್ತಾರೆ ಹಾಯ್ಕುಗಳ ರಾಶಿ
  ಅವುಗಳನ್ನು ಓದಿದಾಗ
  ನಮಗೂ ಓಂಥರಾ ಖುಶಿ
  ಮುಂದೆಯೂ ನಿಮ್ಮ ತಲೆ ಹೀಗೆ ಕೆಡುತ್ತಿರಲಿ
  ಎಂದು ನನ್ನ ಆಶಿ….

  ಪ್ರತಿಕ್ರಿಯೆ
 2. sunaath

  ಜೋಶಿಯವರೆ,
  ಹಾಯ್ಕುತ್ತಲೇ ಇರಿ. ನಿಮ್ಮ ತಲೆ ಕೆಟ್ಟಾಗಲೂ ಸಹ, ನಮ್ಮ ಮನಸ್ಸಿಗೆ ಮುದ ನೀಡುತ್ತಿದ್ದೀರಿ!

  ಪ್ರತಿಕ್ರಿಯೆ
 3. Yatheesh

  Joshi avare….
  Thumbaa prasabaddavaagi mattu arthapoornavaagive……
  Nimma lekhaniyinda masi yaavattu khaliyaagabaaradu…….
  heege bareyuttiri……….
  Dhanyavaadagalondige,
  yatish.

  ಪ್ರತಿಕ್ರಿಯೆ
 4. jyothi

  simply superb…thumbaa chennagide…naane bhoomi….great concept….keep it up…good luck…joshi sir….

  ಪ್ರತಿಕ್ರಿಯೆ
 5. Hema K

  en sir,full compliments,yuva kavige joragi compliments na surimale aagibittide.good,Keep going

  ಪ್ರತಿಕ್ರಿಯೆ
 6. Mallikarjuna Barker

  Full time age ede kelasa suru madri, Tumba tumba chennagide, hage filmge hadannu bariri
  Bye

  ಪ್ರತಿಕ್ರಿಯೆ
 7. Krishnamurthy

  ಪರಿಸರ ಮಾಲಿನ್ಯದ ಕವನ ಸುಮಾರು ೧೮ ವರ್ಶದ ಹಿಂದೆ ನಾನು ಪಿ.ಯು.ಸಿ ಯಲ್ಲಿದ್ದಾಗ ನನ್ನ ಗೆಳೆಯನೊಬ್ಬ ‘ನಾನು ಬರೆದದ್ದು’ ಎಂದು ತಂದು ತೋರಿಸಿದ್ದ. ನನಗೆ ಚೆನ್ನಾಗಿ ನೆನಪಿದೆ, ಅದೇ ಸಾಲುಗಳು. ಇಬ್ಬರು ಕವಿಗಳು ಒಂದೇ ರೀತಿ ವಿಚಾರ ಮಾಡುವುದು ಎಂತಾ ವಿಪರ್ಯಾಸ!

  ಪ್ರತಿಕ್ರಿಯೆ
  • RJ

   ಪರಿಸರ ಮಾಲಿನ್ಯದ ಚುಟುಕನ್ನು
   ನಾನೂ ಕೂಡ ಬರೆದಿದ್ದು,ಅದೇ 18 ವರ್ಷದ ಹಿಂದೆ.
   ಮತ್ತು ನಾನೂ ಕೂಡ ಅವಾಗ ಸೆಕೆಂಡ್ ಪಿಯೂ ನಲ್ಲಿದ್ದೆ.
   ಮೊನ್ನೆ ಅದನ್ನು ಈ ಹಾಯ್ಕುಗಳ ಮಧ್ಯೆ ಸೇರಿಸಿದೆ.
   ನಿಮ್ಮ ಗೆಳೆಯ ನಾನಿದ್ದ ಗದುಗಿನ JT college ನಲ್ಲಿದ್ದನೆ?
   🙂
   -RJ

   ಪ್ರತಿಕ್ರಿಯೆ
   • Krishnamurthy

    ಅದು ಆ ನನ್ನ ಗೆಳೆಯ ಬರೆದದ್ದು ಅನ್ನುವುದರ ಬಗ್ಗೆ ನನಗೆ ಸಂಶಯವಿತ್ತು. ಆತ ಎರಡು ಕವನಗಳನ್ನು ತೋರಿಸಿದ್ದ. ಒಂದು ಇದು. ಇನ್ನೊಂದು ‘ ಕನ್ನಡ ಕನ್ನಡ ಎಂದು ……………….ಆತನ ಎದೆ ಸೀಳಿದಾಗ ಪರಭಾಶೆಯ ಹುಳಗಳು ಬುಳ ಬುಳನೆ ಹೊರ ಬಿದ್ದವು” something like that..
    ನಿಮ್ಮ ಕವನ ಎಲ್ಲಾದರೂ ಪ್ರಕಟವಾಗಿತ್ತೇ??

    ಪ್ರತಿಕ್ರಿಯೆ
    • RJ

     ಆತ್ಮೀಯರೇ,
     ಇದೊಂಥರಾ ತಲೆನೋವಿನ ಕೆಲಸ.
     sslc,PUC ದಿನಗಳಲ್ಲಿ ಏನೋ ಗೀಚುವದು,
     ಲೋಕಲ್ ಪೇಪರ್ ಗಳಲ್ಲಿ ಕೊಡುವದು ನಮಗೆಲ್ಲ ಒಂಥರಾ ಮಜವಿತ್ತು.ಪ್ರಕಟವೂ ಆಗುತ್ತಿದ್ದವು.
     ಅಪರೂಪಕ್ಕೊಮ್ಮೆ ‘ತುಷಾರ’ ಅಥವಾ ‘ಮಯೂರ’ದಲ್ಲಿ ಪ್ರಕಟವಾದಾಗ ಸ್ವಲ್ಪ ಕೊಂಬು ಮೂಡುತ್ತಿತ್ತು.ಆವಾಗ ನನ್ನ ಅನೇಕ ಕವನಗಳು/ಬರಹಗಳು ನನ್ನ ಅನೇಕ ಗೆಳೆಯರ ಹೆಸರಿನಲ್ಲಿ ಪ್ರಕಟವಾಗಿದ್ದವು.ತಮಾಷೆಯೆಂದರೆ,ಆಗ ಬೇಜಾರಾಗುತ್ತಿರಲಿಲ್ಲ.ಒಟ್ಟಿನಲ್ಲಿ ಪ್ರಕಟವಾದರೆ ಸಾಕಿತ್ತು.ಅವುಗಳಲ್ಲಿ ಅನೇಕರ ಗೆಳೆಯರ ಹೆಸರೂ ಮತ್ತು ಕವನಗಳೂ ಮರೆತುಹೋಗಿವೆ.But,ಅವರೆಲ್ಲ ಒಳ್ಳೆಯ ಗೆಳೆಯರು.
     Meanwhile,ನನಗೆ ಅವುಗಳ value ಗೊತ್ತಿರಲಿಕ್ಕಿಲ್ಲ.Ofcourse,ಇವತ್ತಿಗೂ ಗೊತ್ತಾಗಿಲ್ಲ.ಸದರಿ ಪರಿಸರದ ಚುಟುಕು ಕೂಡ ಯಾವುದೋ magezene ನಲ್ಲಿ ಪ್ರಕಟವಾಗಿದ್ದ ನೆನಪು.
     ಅಥವಾ ಹೀಗೂ ಆಗಿರಬಹುದು:ನಾನೇ ಈ ಕವನವನ್ನು ಆ ಸಮಯದಲ್ಲಿ ಬೇರೆಲ್ಲೋ ಓದಿ,ಅದು ನನಗೆ ಹಿಡಿಸಿ ಅಚ್ಹೊತ್ತಿರಬೇಕು.ಇಷ್ಟು ವರ್ಷದ ಮೇಲೆ ಅದನ್ನು ಮತ್ತೆಲ್ಲೋ ಸೇರಿಸುವ ಅವಶ್ಯಕತೆ ಕಂಡಾಗ ಸದರಿ ಕವನವನ್ನು ‘ನಂದೇ’ ಎಂದು
     ಭಾವಿಸಿ ಸೇರಿಸಿರಬಹುದು..ಹಾಗಿದ್ದಲ್ಲಿ ಅದು ನನ್ನದೇ ತಪ್ಪು.
     ಪ್ರೀತಿಯಿರಲಿ,
     -RJ

     ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: