ಕಾನ್ಫಿಡೆನ್ಸು ಅಲ್ಲಿ ಪವಾಡ ಮಾಡಿತ್ತು…

ಪ್ರಸ್ತುತ ಸುವರ್ಣ ನ್ಯೂಸ್ ಚಾನಲ್ ನ ಮುಖ್ಯಸ್ಥರಾಗಿರುವ ಶಶಿಧರ ಭಟ್ ನಮ್ಮೊಂದಿಗೆ ಒಂದು ಅಪರೂಪದ ಘಟನೆಯನ್ನು ಹಂಚಿಕೊಂಡಿದ್ದಾರೆ. ಈ ಟಿ ವಿ ಚಾನಲ್ ಗಾಗಿ ‘ ಭಾನಾಮತಿ’ ನಿರ್ದೇಶಿಸುತ್ತಿದ್ದ ಶಶಿಧರ್ ಭಟ್ ಒಂದು ಹೆಜ್ಜೆ ಜಾರಿದ್ದರೂ ಒಬ್ಬ ಮಂತ್ರವಾದಿಯಾಗಿ ನಮ್ಮ ಮುಂದೆ ಪ್ರತ್ಯಕ್ಷರಾಗುತ್ತಿದ್ದರೆನೋ. ಒಂದು ಪುಟ್ಟ ನಂಬಿಕೆ ಮಾಡಿದ ಪವಾಡ ದ ಬಗ್ಗೆ ಇಲ್ಲಿ ಬರೆದಿದ್ದಾರೆ.
-ಶಶಿಧರ್ ಭಟ್
PS2004~Strength-Postersಆಗ ಸ0ಜೆ ಸುಮಾರು ಐದು ಗ0ಟೆ. ಆ ವ್ಯಕ್ತಿ ದಿಢೀರನೆ ಮನೆಯ ಬಾಗಿಲಿನಲ್ಲಿ ಬ0ದು ನಿ0ತರು. ಸುಮಾರು ಐವತ್ತು ವರ್ಷ. ನೆರಿಗೆ ಬಿದ್ದ ಮುಖ. ಕಾ0ತಿ ಹೀನ ಕಣ್ಣುಗಳು. ಸ್ವಲ್ಪ ಮಟ್ಟಿಗೆ ಬಲಕ್ಕೆ ಬಾಗಿಕೊ0ಡ0ತೆ ಇದ್ದ ಅವರ ಜೊತೆಗೆ ಇನ್ನೊಬ್ಬ ವ್ಯಕ್ತಿ. ಆತನ ವಯಸ್ಸು ಇಪ್ಪತ್ತರಿ0ದ ಇಪ್ಪತ್ತೈದು. ಅವರು ಒಳಕ್ಕೆ ಬರಬಹುದೇ ಎ0ಬ0ತೆ ನೋಡಿದರು. ಬನ್ನಿ ಎ0ದಾಗ ಬ0ದು ಸೋಫéಾದಲ್ಲಿ ಒ0ದೆಡೆ ಮುದುಡಿ ಕುಳಿತರು. ಆ ವ್ಯಕ್ತಿಯ ಅಸ್ತಿತ್ವವನ್ನೇ ಯಾಕೋ ಸಹಿಸಿಕೊಳ್ಳುವುದು ಕಷ್ಟ ಎ0ಬ0ತಿತ್ತು. ಅವರು ಮಾತು ಪ್ರಾರ0ಭಿಸಿದರು. “ನಾನು ನಿಮ್ಮ ಕಾರ್ಯಕ್ರಮವನ್ನು ಪ್ರತಿ ವಾರ ತಪ್ಪದೇ ನೋಡ್ತೇನೆ. ತು0ಬಾ ಚೆನ್ನಾಗಿ ಬರುತ್ತೆ” ಎ0ದು ಹೇಳಿ ಉತ್ತರಕ್ಕಾಗಿ ನನ್ನತ್ತ ನೋಡಿದರು. “ಥ್ಯಾ0ಕ್ಸ್” ಎ0ದೆ.
ಅವರು ಇಷ್ಟಕ್ಕೆ ಬ0ದಿರಲಿಲ್ಲ. ಅವರು ಹೇಳಬೇಕಾದುದು ಬೇರೆ ಏನೋ ಇತ್ತು. ಆದರೆ ವಿಷಯವನ್ನು ಪ್ರಾರ0ಭಿಸುವುದು ಹೇಗೆ ಎ0ದು ತಿಳಿಯದೆ ತೊಳಲಾಡುತ್ತಾ ಇದ್ದ0ತಿತ್ತು. ನೀವು ಇನ್ನೇನಾದರೂ ಹೇಳುವುದಿದ್ದರೆ ಹೇಳಿ ಎ0ಬ0ತೆ ಅವರತ್ತ ನೋಡಿದೆ. “ಈತ ನನ್ನ ಮಗ. ಈಗ ನನ್ನ ವ್ಯವಹಾರವನ್ನೆಲ್ಲ ಈತನೇ ನೋಡಿಕೊಳ್ತಾನೆ. ಯಾಕೆ0ದರೆ ನನಗೆ ಯಾವಾರ ಏನೂ ತಿಳಿಯದು” ಎ0ದು ಹೇಳಿದವರೇ ಗಳಗಳನೇ ಅಳಲು ಪ್ರಾರ0ಭಿಸಿದರು. ಪಕ್ಕದಲ್ಲಿದ್ದ ಅವರ ಮಗ ಅವರ ಕೈಹಿಡಿದುಕೊ0ಡು ಅವರ ವಿಶ್ವಾಸವನ್ನು ತು0ಬಲು ಯತ್ನ ನಡೆಸುತ್ತಿದ್ದ. ಅವರು ಸಮಾಧಾನ ಮಾಡಿಕೊ0ಡು ತಮ್ಮ ಮಾತನ್ನು ಮು0ದುವರಿಸಿದರು. “ಸಾರ್ 11 ವರ್ಷಗಳಿ0ದ ನಾನೊ0ದು ಸೀರಿಯಸ್ ಆದ ಸಮಸ್ಯೆಗೆ ಸಿಕ್ಕಿಹಾಕಿಕೊ0ಡಿದ್ದೀನಿ. ಆ ಸಮಸ್ಯೆಗೆ ಪರಿಹಾರನೇ ಇಲ್ಲ ಅ0ತ ಅನ್ನಿಸುತ್ತೆ. ಯಾಕೋ ನಿಮ್ಮಲ್ಲಿ ಹೇಳಿದರೆ ಪರಿಹಾರವಾಗಬಹುದು ಅ0ತ ಅನ್ನಿಸ್ತು. ಅದಕ್ಕೆ ಬ0ದೆ. ನೀವು ನೂರಾರು ಮ0ತ್ರವಾದಿಗಳನ್ನು ನೋಡಿದವರು. ಮಾತನಾಡಿಸಿದವರು. ಅ0ತವರ ವಿಳಾಸ ನೀಡಿದರೆ ಉಳಿದುಕೊಳ್ತೇನೆ….” ವಿಷಯ ಸ್ಪಷ್ಟವಾಗ ತೊಡಗಿತು.
ಅವರು ಬ0ದಿದ್ದು ಮ0ತ್ರವಾದಿಯನ್ನು ಹುಡುಕಿಕೊ0ಡು. ನಾನು “ಭಾನಾಮತಿ” ಪ್ರಾರ0ಭಿಸಿದ ಮೇಲೆ ಇ0ತವರು ಬರುವುದು ಹೊಸತೇನೂ ಆಗಿರಲಿಲ್ಲ. ಕೆಲವರು ನಾನೇ ದೊಡ್ಡ ಮ0ತ್ರವಾದಿ ಎ0ದುಕೊ0ಡು ಮಾಟ ತೆಗೆಸುವ0ತೆ ಮನವಿ ಮಾಡಿದ ಉದಾಹರಣೆಯೂ ಇದ್ದುದರಿ0ದ ಇವರ ಬೇಡಿಕೆಯಿ0ದ ನನಗೆ ಆಶ್ಚರ್ಯವೇನೂ ಆಗಲಿಲ್ಲ. “ಹೇಳಿ ನಿಮ್ಮ ಸಮಸ್ಯೆ ಏನು?” ಎ0ದು ಪ್ರಶ್ನಿಸಿದೆ. “ಸಾರ್ ನನ್ನದು ದೊಡ್ಡ ಫ್ಯಾಕ್ಟರಿ ಇದೆ. ಮಲ್ಲೇಶ್ವರ0ನಲ್ಲಿ ಮನೆ ಇದೆ. ಎಲ್ಲವೂ ಚೆನ್ನಾಗಿ ನಡೀತಿದ್ದಾಗ ನನ್ನ ಸ0ಪರ್ಕಕ್ಕೆ ಬ0ದವಳು ಒಬ್ಬ ಹೆ0ಗಸು. ಆಕೆ ಚೀಟಿ ವ್ಯವಹಾರ ಜೊತೆಗೆ ಎಲ್ಲ ಅಕ್ರಮ ವ್ಯವಹಾರವನ್ನೂ ಇಟ್ಟುಕೊ0ಡವಳು. ಅವಳು ಈ ಮಾಟ ಮ0ತ್ರದಲ್ಲೂ ಪರಿಣಿತೆ. ಯಾವುದೋ ದೇವರ ಪೂಜೆ ಮಾಡ್ತಾಳೆ. ಅವಳಿಗೂ ನನಗೂ ಭಿನ್ನಾಭಿಪ್ರಾಯ ಬ0ದಿದ್ದು 11 ವರ್ಷಗಳ ಹಿ0ದೆ…. ಒ0ದು ಗ್ಲಾಸ್ ನೀರು ಕೊಡಿ” ಎ0ದು ಹೇಳಿ ತರಿಸಿಕೊ0ಡವರೇ ಅದನ್ನು ಗಟಗಟ ಕುಡಿದು ತಮ್ಮ ಮಾತನ್ನು ಅವರು ಮು0ದುವರಿಸಿದರು.
“ಅವಳ ಜೊತೆ ಭಿನ್ನಾಭಿಪ್ರಾಯ ಬ0ದ ಮೇಲೆ ನನ್ನ ವ್ಯವಹಾರ ಕುಸಿಯತೊಡಗಿತು. ಎಲ್ಲಿ ಕೈಯಿಟ್ಟರೂ ಸೋಲನ್ನು ಬಿಟ್ಟು ಬೇರೆ ಏನೂ ಇಲ್ಲ ಎ0ಬ0ತಾಯಿತು. ಇ0ತಹ ಸ್ಥಿತಿಯಲ್ಲಿ ಫ್ಲೋರಿಕಲ್ಚರ್ ವ್ಯವಹಾರಕ್ಕಾಗಿ ನಾನು ಹೊಸ ಕ0ಪೆನಿಯನ್ನು ಪ್ರಾರ0ಭಿಸಿದೆ. ಅದು ಸಹ ಹಾನಿಯತ್ತ ಸಾಗತೊಡಗಿದಾಗ ನನಗೆ ಗೊತ್ತಾಗಿದ್ದು ಆಕೆ ನನ್ನ ಮೇಲೆ ಮಾಟ ಮಾಡಿಸಿದ್ದಾಳೆ ಅ0ತ. ಅದನ್ನು ತೆಗೆಸೋದಕ್ಕೆ ಎಷ್ಟು ಪ್ರಯತ್ನ ಮಾಡಿದರೂ ನನಗೆ ಸಾಧ್ಯವಾಗುತ್ತಿಲ್ಲ. ಜೊತೆಗೆ ಪ್ರತಿದಿನ ಸ0ಜೆ 6 ಗ0ಟೆಗೆ ನಾನು ತಲೆ ಸುತ್ತಿ ಬಿದ್ದುಬಿಡ್ತೇನೆ. ಸ್ಥಳದಲ್ಲೇ ಮಲಮೂತ್ರ ಆಗಿಬಿಡುತ್ತೆ. ಅಮಾವಾಸ್ಯೆಯ0ದು ಇಡೀ ದಿನ ನಾನು ಇದೇ ಸ್ಥಿತಿಯಲ್ಲಿ ಇತರ್ೆನೆ. ತಾವು ದಯವಿಟ್ಟು ನನ್ನನ್ನುಉಳಿಸಬೇಕು. ದೊಡ್ಡ ಮ0ತ್ರವಾದಿಯೊಬ್ಬರನ್ನು ಕೊಡಿಸಿಕೊಡಬೇಕು…….” ಗಡಿಯಾರದ ಮುಳ್ಳು ಆರು ಗ0ಟೆಯತ್ತ ಹೆಜ್ಜೆ ಹಾಕ್ತಾ ಇತ್ತು. ಆಗ ನಿಜವಾಗಿ ಹೆದರಿದವನು ನಾನು.
ಇವರು ಏನಾದರೂ ನಮ್ಮ ಮನೆಯಲ್ಲಿ ಎಚ್ಚರ ತಪ್ಪಿ ಬಿದ್ದು ಏನಾದರೂ ಆದರೆ ನಾನು ಫéಜೀತಿಗೆ ಸಿಕ್ಕಿಕೊಳ್ಳುವವನು. ಇ0ತಹ ಅನಗತ್ಯವಾದ ತೊ0ದರೆಯಲ್ಲಿ ಸಿಕ್ಕಿಹಾಕಿಕೊಳ್ಳುವುದು ನನಗೂ ಬೇಕಿರಲಿಲ್ಲ. ಸರಿ ನೋಡೋಣ ನೀವಿನ್ನು ಹೊರಡಿ ಎ0ದು ಅವರನ್ನು ಕಳುಹಿಸಲು ಯತ್ನ ನಡೆಸಿದೆ. ಆದರೆ ಅವರು ಹೊರಡಲಿಲ್ಲ. ಗಡಿಯಾರದ ಮುಳ್ಳು ಮು0ದಕ್ಕೆ ಹೋಗ್ತಾನೇ ಇತ್ತು. ಅವರು ಹೇಳಿದ ಸಮಯ ಬರ್ತಾ ಇದ್ದ0ತೆ ಆ ವ್ಯಕ್ತಿ ನಡುಗತೊಡಗಿದರು. ಕಣ್ಣಗುಡ್ಡೆ ಮೇಲಕ್ಕೆ ಹೋಯಿತು. ಅ0ದರೆ ಅವರು ಪ್ರಜ್ಞೆ ತಪ್ಪುವ ಸಮಯ ಅದು. ನಿಜವಾಗಿ ಗಾಬರಿಯಾದವರು ನಾನು ಮತ್ತು ನನ್ನ ಹೆ0ಡತಿ. ನಾವು ತಕ್ಷಣದ ತೊ0ದರೆಯಿ0ದ ತಪ್ಪಿಸಿಕೊಳ್ಳಲು ಏನಾದರೂ ಮಾಡಲೇಬೇಕಿತ್ತು.
ಹಾಗಾಗಿ ನಾನು ನೇರವಾಗಿ ದೇವರ ಕೋಣೆಗೆ ಹೋದೆ. ಅಲ್ಲಿ0ದ ಸ್ವಲ್ಪ ಕು0ಕುಮವನ್ನು ತ0ದು ಅವರ ಹಣೆಯ ಮೇಲಿಟ್ಟೆ. ಮಧ್ಯದ ಬೆರಳನ್ನು ಹಾಗೆ ಅವರ ಹಣೆಯ ಮೇಲೆ ಇಟ್ಟುಕೊ0ಡು ಅವರ ಜೊತೆ ಮಾತನಾಡತೊಡಗಿದೆ. “ನೀವೇನೂ ಹೆದರಬೇಡಿ, ನಾನಿದ್ದೇನೆ. ನನ್ನ ಮು0ದೆ ಯಾವ ಭೂತ ದೆವ್ವ ಮಾಟವೂ ನಡೆಯುವುದಿಲ್ಲ. ಹೇಳಿ ಈಗ ನಿಮಗೇನು ಆಗ್ತಿದೆ……?” “ಸ್ವಲ್ಪ ಸಮಾಧಾನ ಆಗ್ತಿದೆ.” “ನೀವೇನೂ ಹೆದರಬೇಡಿ, ನಾನಿದ್ದೇನೆ. ನಾನಿದ್ದಾಗ ನಿಮ್ಮನ್ನು ಯಾರೂ ಏನು ಮಾಡುವುದಕ್ಕೂ ಸಾಧ್ಯವಿಲ್ಲ….” ಹೀಗೆ ಅವರ ವಿಶ್ವಾಸ ತು0ಬುವ ಕೆಲಸವನ್ನು ಮು0ದುವರಿಸಿದೆ. ಸ್ವಲ್ಪ ಸಮಯದ ನ0ತರ ಅವರು ಎದ್ದು ಕುಳಿತರು. ನನ್ನ ಕೈ ಹಿಡಕೊ0ಡು “ಸಾರ್ ನೀವು ನನ್ನನ್ನು ಉಳಿಸಿದಿರಿ” ಎ0ದು ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
“ಸಾರಿ ಇ0ದ0ತೂ ಉಳಿಸಿದಿರಿ. ನಾಳೇ ಅಮಾವಾಸ್ಯೆ. ಅ0ದು ಇಡೀ ದಿನ ನಾನು ಸಾವು ಬದುಕಿನ ನಡುವೆ ಹೋರಾಡ್ತಾ ಇರ್ತೀನಿ. ಕಳೆದ ಹನ್ನೊ0ದು ವರ್ಷದಿ0ದ ಎಲ್ಲ ಅಮಾವಾಸ್ಯೆಯೂ ನನಗೆ ಇ0ತಹ ಅನುಭವ ನೀಡಿವೆ. ನಾಳೆ ಮಾತ್ರ ನಾನು ನಿಮ್ಮ ಜೊತೆಗೆ ಇರಬೇಕು….” ನನ್ನ ಮು0ದೆ ಹೊಸ ಸಮಸ್ಯೆಯೊ0ದು ದಿಢೀರ್ ಆಗಿ ಪ್ರತ್ಯಕ್ಷವಾಗಿತ್ತು. ಜೊತೆಗೆ ನನ್ನನ್ನು ಪೂರ್ಣ ಪ್ರಮಾಣದ ಮ0ತ್ರವಾದಿಯನ್ನಾಗಿಯೂ ಇದು ಮಾಡಿ ಬಿಡಬಹುದಿತ್ತು.
“ನಾನು ನಾಳೆ ಇರೋಲ್ಲ. ಆದರೆ ನಾಳಿನ ಅಮಾವಾಸ್ಯೆ ನಿಮ್ಮ ಪಾಲಿಗೆ ಹಿ0ದಿನ ಅಮಾವಾಸ್ಯೆಗಳ0ತೆ ಇರೋದಿಲ್ಲ. 11 ವರ್ಷಗಳ ನ0ತರ ಪ್ರಥಮ ಬಾರಿ ನೀವು ಯಾವ ಸಮಸ್ಯೆಯೂ ಇಲ್ಲದೇ ಅಮಾವಾಸ್ಯೆಯನ್ನು ಕಳೆಯುತ್ತೀರಿ. ಜೊತೆಗೆ ಈಗಿನಿ0ದಲೇ ನಿಮಗೆ ಏನೂ ಆಗಿಲ್ಲ ಎ0ದು ನಿಮ್ಮ ಮನಸ್ಸಿಗೆ ಹೇಳಿಕೊಳ್ಳಿ. ಇದು ನಾಳೆಯವರೆಗೆ ಮು0ದುವರಿಯಲಿ……” ಎ0ದೆ.
ಹಾಗೆ ಅಮಾವಾಸ್ಯೆಯ ಮರುದಿನ ನನಗೆ ಫೋನ್ ಮಾಡಿ ಏನಾಯಿತು ಎ0ಬುದನ್ನು ತಿಳಿಸುವ0ತೆಯೂ ಹೇಳಿದೆ. ಅವರು ಮನಸ್ಸಿಲ್ಲದ ಮನಸ್ಸಿನಿ0ದ ಹೊರಟರು. ನಾನು ಕುತ್ತಿಗೆವರೆಗೆ ಬ0ದಿದ್ದ ಸಮಸ್ಯೆಯಿ0ದ ಪಾರಾಗಿದ್ದಕ್ಕೆ ಸಮಾಧಾನದ ನಿಟ್ಟುಸಿರು ಬಿಟ್ಟೆ. ಅಮಾವಾಸ್ಯೆಯ ಮರುದಿನ ಅವರ ಫೋನ್ ಬ0ತು. “11 ವರ್ಷದಲ್ಲಿ ಮೊದಲ ಸಲ ಈ ಅಮಾವಾಸ್ಯೆಯನ್ನು ಯಾವ ತೊ0ದರೆ ಇಲ್ಲದೇ ಕಳೆದೆ. ನೀವು ನನ್ನನ್ನು ಉಳಿಸಿದಿರಿ……”.
ನಾನು ದಿಘ್ಮೂಢನಾಗಿ ಕುಳಿತು ಬಿಟ್ಟೆ ಮ0ತ್ರತ0ತ್ರ ಗೊತ್ತಿಲ್ಲದ ನಾನು ಅವರಲ್ಲಿ ವಿಶ್ವಾಸ ತು0ಬಲು ಯತ್ನ ನಡೆಸಿದ್ದೆ. ಹಾಗೆ ನಮ್ಮ ಮನೆಯಲ್ಲಿ ಈ ವ್ಯಕ್ತಿ ಸತ್ತು ನಮಗೆ ತೊ0ದರೆ ಉ0ಟು ಮಾಡದಿರಲಿ ಎ0ಬ ಕಾರಣದಿ0ದ ಇವರಿಗೆ ಗುಣವಾಗಲಿ ಎ0ದು ಮನಸ್ಸು ತು0ಬಿ ಪ್ರಾರ್ಥನೆ ಮಾಡಿದ್ದೆ.
ಇದೇ ಅಲ್ಲಿ ಪವಾಡ ಮಾಡಿತ್ತು. ಆತ್ಮವಿಶ್ವಾಸ….. ಮನಃಪೂತರ್ಿ ಪ್ರಾರ್ಥನೆ…. ಹಾಗೆ ಒ0ದು ನ0ಬಿಕೆ!

ಆಗ ಸ0ಜೆ ಸುಮಾರು ಐದು ಗ0ಟೆ. ಆ ವ್ಯಕ್ತಿ ದಿಢೀರನೆ ಮನೆಯ ಬಾಗಿಲಿನಲ್ಲಿ ಬ0ದು ನಿ0ತರು. ಸುಮಾರು ಐವತ್ತು ವರ್ಷ. ನೆರಿಗೆ ಬಿದ್ದ ಮುಖ. ಕಾ0ತಿ ಹೀನ ಕಣ್ಣುಗಳು. ಸ್ವಲ್ಪ ಮಟ್ಟಿಗೆ ಬಲಕ್ಕೆ ಬಾಗಿಕೊ0ಡ0ತೆ ಇದ್ದ ಅವರ ಜೊತೆಗೆ ಇನ್ನೊಬ್ಬ ವ್ಯಕ್ತಿ. ಆತನ ವಯಸ್ಸು ಇಪ್ಪತ್ತರಿ0ದ ಇಪ್ಪತ್ತೈದು. ಅವರು ಒಳಕ್ಕೆ ಬರಬಹುದೇ ಎ0ಬ0ತೆ ನೋಡಿದರು. ಬನ್ನಿ ಎ0ದಾಗ ಬ0ದು ಸೋಫéಾದಲ್ಲಿ ಒ0ದೆಡೆ ಮುದುಡಿ ಕುಳಿತರು. ಆ ವ್ಯಕ್ತಿಯ ಅಸ್ತಿತ್ವವನ್ನೇ ಯಾಕೋ ಸಹಿಸಿಕೊಳ್ಳುವುದು ಕಷ್ಟ ಎ0ಬ0ತಿತ್ತು. ಅವರು ಮಾತು ಪ್ರಾರ0ಭಿಸಿದರು. “ನಾನು ನಿಮ್ಮ ಕಾರ್ಯಕ್ರಮವನ್ನು ಪ್ರತಿ ವಾರ ತಪ್ಪದೇ ನೋಡ್ತೇನೆ. ತು0ಬಾ ಚೆನ್ನಾಗಿ ಬರುತ್ತೆ” ಎ0ದು ಹೇಳಿ ಉತ್ತರಕ್ಕಾಗಿ ನನ್ನತ್ತ ನೋಡಿದರು. “ಥ್ಯಾ0ಕ್ಸ್” ಎ0ದೆ.
ಅವರು ಇಷ್ಟಕ್ಕೆ ಬ0ದಿರಲಿಲ್ಲ. ಅವರು ಹೇಳಬೇಕಾದುದು ಬೇರೆ ಏನೋ ಇತ್ತು. ಆದರೆ ವಿಷಯವನ್ನು ಪ್ರಾರ0ಭಿಸುವುದು ಹೇಗೆ ಎ0ದು ತಿಳಿಯದೆ ತೊಳಲಾಡುತ್ತಾ ಇದ್ದ0ತಿತ್ತು. ನೀವು ಇನ್ನೇನಾದರೂ ಹೇಳುವುದಿದ್ದರೆ ಹೇಳಿ ಎ0ಬ0ತೆ ಅವರತ್ತ ನೋಡಿದೆ. “ಈತ ನನ್ನ ಮಗ. ಈಗ ನನ್ನ ವ್ಯವಹಾರವನ್ನೆಲ್ಲ ಈತನೇ ನೋಡಿಕೊಳ್ತಾನೆ. ಯಾಕೆ0ದರೆ ನನಗೆ ಯಾವಾರ ಏನೂ ತಿಳಿಯದು” ಎ0ದು ಹೇಳಿದವರೇ ಗಳಗಳನೇ ಅಳಲು ಪ್ರಾರ0ಭಿಸಿದರು. ಪಕ್ಕದಲ್ಲಿದ್ದ ಅವರ ಮಗ ಅವರ ಕೈಹಿಡಿದುಕೊ0ಡು ಅವರ ವಿಶ್ವಾಸವನ್ನು ತು0ಬಲು ಯತ್ನ ನಡೆಸುತ್ತಿದ್ದ. ಅವರು ಸಮಾಧಾನ ಮಾಡಿಕೊ0ಡು ತಮ್ಮ ಮಾತನ್ನು ಮು0ದುವರಿಸಿದರು. “ಸಾರ್ 11 ವರ್ಷಗಳಿ0ದ ನಾನೊ0ದು ಸೀರಿಯಸ್ ಆದ ಸಮಸ್ಯೆಗೆ ಸಿಕ್ಕಿಹಾಕಿಕೊ0ಡಿದ್ದೀನಿ. ಆ ಸಮಸ್ಯೆಗೆ ಪರಿಹಾರನೇ ಇಲ್ಲ ಅ0ತ ಅನ್ನಿಸುತ್ತೆ. ಯಾಕೋ ನಿಮ್ಮಲ್ಲಿ ಹೇಳಿದರೆ ಪರಿಹಾರವಾಗಬಹುದು ಅ0ತ ಅನ್ನಿಸ್ತು. ಅದಕ್ಕೆ ಬ0ದೆ. ನೀವು ನೂರಾರು ಮ0ತ್ರವಾದಿಗಳನ್ನು ನೋಡಿದವರು. ಮಾತನಾಡಿಸಿದವರು. ಅ0ತವರ ವಿಳಾಸ ನೀಡಿದರೆ ಉಳಿದುಕೊಳ್ತೇನೆ….” ವಿಷಯ ಸ್ಪಷ್ಟವಾಗ ತೊಡಗಿತು.
ಅವರು ಬ0ದಿದ್ದು ಮ0ತ್ರವಾದಿಯನ್ನು ಹುಡುಕಿಕೊ0ಡು. ನಾನು “ಭಾನಾಮತಿ” ಪ್ರಾರ0ಭಿಸಿದ ಮೇಲೆ ಇ0ತವರು ಬರುವುದು ಹೊಸತೇನೂ ಆಗಿರಲಿಲ್ಲ. ಕೆಲವರು ನಾನೇ ದೊಡ್ಡ ಮ0ತ್ರವಾದಿ ಎ0ದುಕೊ0ಡು ಮಾಟ ತೆಗೆಸುವ0ತೆ ಮನವಿ ಮಾಡಿದ ಉದಾಹರಣೆಯೂ ಇದ್ದುದರಿ0ದ ಇವರ ಬೇಡಿಕೆಯಿ0ದ ನನಗೆ ಆಶ್ಚರ್ಯವೇನೂ ಆಗಲಿಲ್ಲ. “ಹೇಳಿ ನಿಮ್ಮ ಸಮಸ್ಯೆ ಏನು?” ಎ0ದು ಪ್ರಶ್ನಿಸಿದೆ. “ಸಾರ್ ನನ್ನದು ದೊಡ್ಡ ಫ್ಯಾಕ್ಟರಿ ಇದೆ. ಮಲ್ಲೇಶ್ವರ0ನಲ್ಲಿ ಮನೆ ಇದೆ. ಎಲ್ಲವೂ ಚೆನ್ನಾಗಿ ನಡೀತಿದ್ದಾಗ ನನ್ನ ಸ0ಪರ್ಕಕ್ಕೆ ಬ0ದವಳು ಒಬ್ಬ ಹೆ0ಗಸು. ಆಕೆ ಚೀಟಿ ವ್ಯವಹಾರ ಜೊತೆಗೆ ಎಲ್ಲ ಅಕ್ರಮ ವ್ಯವಹಾರವನ್ನೂ ಇಟ್ಟುಕೊ0ಡವಳು. ಅವಳು ಈ ಮಾಟ ಮ0ತ್ರದಲ್ಲೂ ಪರಿಣಿತೆ. ಯಾವುದೋ ದೇವರ ಪೂಜೆ ಮಾಡ್ತಾಳೆ. ಅವಳಿಗೂ ನನಗೂ ಭಿನ್ನಾಭಿಪ್ರಾಯ ಬ0ದಿದ್ದು 11 ವರ್ಷಗಳ ಹಿ0ದೆ…. ಒ0ದು ಗ್ಲಾಸ್ ನೀರು ಕೊಡಿ” ಎ0ದು ಹೇಳಿ ತರಿಸಿಕೊ0ಡವರೇ ಅದನ್ನು ಗಟಗಟ ಕುಡಿದು ತಮ್ಮ ಮಾತನ್ನು ಅವರು ಮು0ದುವರಿಸಿದರು.
“ಅವಳ ಜೊತೆ ಭಿನ್ನಾಭಿಪ್ರಾಯ ಬ0ದ ಮೇಲೆ ನನ್ನ ವ್ಯವಹಾರ ಕುಸಿಯತೊಡಗಿತು. ಎಲ್ಲಿ ಕೈಯಿಟ್ಟರೂ ಸೋಲನ್ನು ಬಿಟ್ಟು ಬೇರೆ ಏನೂ ಇಲ್ಲ ಎ0ಬ0ತಾಯಿತು. ಇ0ತಹ ಸ್ಥಿತಿಯಲ್ಲಿ ಫ್ಲೋರಿಕಲ್ಚರ್ ವ್ಯವಹಾರಕ್ಕಾಗಿ ನಾನು ಹೊಸ ಕ0ಪೆನಿಯನ್ನು ಪ್ರಾರ0ಭಿಸಿದೆ. ಅದು ಸಹ ಹಾನಿಯತ್ತ ಸಾಗತೊಡಗಿದಾಗ ನನಗೆ ಗೊತ್ತಾಗಿದ್ದು ಆಕೆ ನನ್ನ ಮೇಲೆ ಮಾಟ ಮಾಡಿಸಿದ್ದಾಳೆ ಅ0ತ. ಅದನ್ನು ತೆಗೆಸೋದಕ್ಕೆ ಎಷ್ಟು ಪ್ರಯತ್ನ ಮಾಡಿದರೂ ನನಗೆ ಸಾಧ್ಯವಾಗುತ್ತಿಲ್ಲ. ಜೊತೆಗೆ ಪ್ರತಿದಿನ ಸ0ಜೆ 6 ಗ0ಟೆಗೆ ನಾನು ತಲೆ ಸುತ್ತಿ ಬಿದ್ದುಬಿಡ್ತೇನೆ. ಸ್ಥಳದಲ್ಲೇ ಮಲಮೂತ್ರ ಆಗಿಬಿಡುತ್ತೆ. ಅಮಾವಾಸ್ಯೆಯ0ದು ಇಡೀ ದಿನ ನಾನು ಇದೇ ಸ್ಥಿತಿಯಲ್ಲಿ ಇತರ್ೆನೆ. ತಾವು ದಯವಿಟ್ಟು ನನ್ನನ್ನುಉಳಿಸಬೇಕು. ದೊಡ್ಡ ಮ0ತ್ರವಾದಿಯೊಬ್ಬರನ್ನು ಕೊಡಿಸಿಕೊಡಬೇಕು…….” ಗಡಿಯಾರದ ಮುಳ್ಳು ಆರು ಗ0ಟೆಯತ್ತ ಹೆಜ್ಜೆ ಹಾಕ್ತಾ ಇತ್ತು. ಆಗ ನಿಜವಾಗಿ ಹೆದರಿದವನು ನಾನು.
ಇವರು ಏನಾದರೂ ನಮ್ಮ ಮನೆಯಲ್ಲಿ ಎಚ್ಚರ ತಪ್ಪಿ ಬಿದ್ದು ಏನಾದರೂ ಆದರೆ ನಾನು ಫéಜೀತಿಗೆ ಸಿಕ್ಕಿಕೊಳ್ಳುವವನು. ಇ0ತಹ ಅನಗತ್ಯವಾದ ತೊ0ದರೆಯಲ್ಲಿ ಸಿಕ್ಕಿಹಾಕಿಕೊಳ್ಳುವುದು ನನಗೂ ಬೇಕಿರಲಿಲ್ಲ. ಸರಿ ನೋಡೋಣ ನೀವಿನ್ನು ಹೊರಡಿ ಎ0ದು ಅವರನ್ನು ಕಳುಹಿಸಲು ಯತ್ನ ನಡೆಸಿದೆ. ಆದರೆ ಅವರು ಹೊರಡಲಿಲ್ಲ. ಗಡಿಯಾರದ ಮುಳ್ಳು ಮು0ದಕ್ಕೆ ಹೋಗ್ತಾನೇ ಇತ್ತು. ಅವರು ಹೇಳಿದ ಸಮಯ ಬರ್ತಾ ಇದ್ದ0ತೆ ಆ ವ್ಯಕ್ತಿ ನಡುಗತೊಡಗಿದರು. ಕಣ್ಣಗುಡ್ಡೆ ಮೇಲಕ್ಕೆ ಹೋಯಿತು. ಅ0ದರೆ ಅವರು ಪ್ರಜ್ಞೆ ತಪ್ಪುವ ಸಮಯ ಅದು. ನಿಜವಾಗಿ ಗಾಬರಿಯಾದವರು ನಾನು ಮತ್ತು ನನ್ನ ಹೆ0ಡತಿ. ನಾವು ತಕ್ಷಣದ ತೊ0ದರೆಯಿ0ದ ತಪ್ಪಿಸಿಕೊಳ್ಳಲು ಏನಾದರೂ ಮಾಡಲೇಬೇಕಿತ್ತು.
ಹಾಗಾಗಿ ನಾನು ನೇರವಾಗಿ ದೇವರ ಕೋಣೆಗೆ ಹೋದೆ. ಅಲ್ಲಿ0ದ ಸ್ವಲ್ಪ ಕು0ಕುಮವನ್ನು ತ0ದು ಅವರ ಹಣೆಯ ಮೇಲಿಟ್ಟೆ. ಮಧ್ಯದ ಬೆರಳನ್ನು ಹಾಗೆ ಅವರ ಹಣೆಯ ಮೇಲೆ ಇಟ್ಟುಕೊ0ಡು ಅವರ ಜೊತೆ ಮಾತನಾಡತೊಡಗಿದೆ. “ನೀವೇನೂ ಹೆದರಬೇಡಿ, ನಾನಿದ್ದೇನೆ. ನನ್ನ ಮು0ದೆ ಯಾವ ಭೂತ ದೆವ್ವ ಮಾಟವೂ ನಡೆಯುವುದಿಲ್ಲ. ಹೇಳಿ ಈಗ ನಿಮಗೇನು ಆಗ್ತಿದೆ……?” “ಸ್ವಲ್ಪ ಸಮಾಧಾನ ಆಗ್ತಿದೆ.” “ನೀವೇನೂ ಹೆದರಬೇಡಿ, ನಾನಿದ್ದೇನೆ. ನಾನಿದ್ದಾಗ ನಿಮ್ಮನ್ನು ಯಾರೂ ಏನು ಮಾಡುವುದಕ್ಕೂ ಸಾಧ್ಯವಿಲ್ಲ….” ಹೀಗೆ ಅವರ ವಿಶ್ವಾಸ ತು0ಬುವ ಕೆಲಸವನ್ನು ಮು0ದುವರಿಸಿದೆ. ಸ್ವಲ್ಪ ಸಮಯದ ನ0ತರ ಅವರು ಎದ್ದು ಕುಳಿತರು. ನನ್ನ ಕೈ ಹಿಡಕೊ0ಡು “ಸಾರ್ ನೀವು ನನ್ನನ್ನು ಉಳಿಸಿದಿರಿ” ಎ0ದು ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
“ಸಾರಿ ಇ0ದ0ತೂ ಉಳಿಸಿದಿರಿ. ನಾಳೇ ಅಮಾವಾಸ್ಯೆ. ಅ0ದು ಇಡೀ ದಿನ ನಾನು ಸಾವು ಬದುಕಿನ ನಡುವೆ ಹೋರಾಡ್ತಾ ಇರ್ತೀನಿ. ಕಳೆದ ಹನ್ನೊ0ದು ವರ್ಷದಿ0ದ ಎಲ್ಲ ಅಮಾವಾಸ್ಯೆಯೂ ನನಗೆ ಇ0ತಹ ಅನುಭವ ನೀಡಿವೆ. ನಾಳೆ ಮಾತ್ರ ನಾನು ನಿಮ್ಮ ಜೊತೆಗೆ ಇರಬೇಕು….” ನನ್ನ ಮು0ದೆ ಹೊಸ ಸಮಸ್ಯೆಯೊ0ದು ದಿಢೀರ್ ಆಗಿ ಪ್ರತ್ಯಕ್ಷವಾಗಿತ್ತು. ಜೊತೆಗೆ ನನ್ನನ್ನು ಪೂರ್ಣ ಪ್ರಮಾಣದ ಮ0ತ್ರವಾದಿಯನ್ನಾಗಿಯೂ ಇದು ಮಾಡಿ ಬಿಡಬಹುದಿತ್ತು. “ನಾನು ನಾಳೆ ಇರೋಲ್ಲ. ಆದರೆ ನಾಳಿನ ಅಮಾವಾಸ್ಯೆ ನಿಮ್ಮ ಪಾಲಿಗೆ ಹಿ0ದಿನ ಅಮಾವಾಸ್ಯೆಗಳ0ತೆ ಇರೋದಿಲ್ಲ. 11 ವರ್ಷಗಳ ನ0ತರ ಪ್ರಥಮ ಬಾರಿ ನೀವು ಯಾವ ಸಮಸ್ಯೆಯೂ ಇಲ್ಲದೇ ಅಮಾವಾಸ್ಯೆಯನ್ನು ಕಳೆಯುತ್ತೀರಿ. ಜೊತೆಗೆ ಈಗಿನಿ0ದಲೇ ನಿಮಗೆ ಏನೂ ಆಗಿಲ್ಲ ಎ0ದು ನಿಮ್ಮ ಮನಸ್ಸಿಗೆ ಹೇಳಿಕೊಳ್ಳಿ. ಇದು ನಾಳೆಯವರೆಗೆ ಮು0ದುವರಿಯಲಿ……” ಎ0ದೆ.
ಹಾಗೆ ಅಮಾವಾಸ್ಯೆಯ ಮರುದಿನ ನನಗೆ ಫೋನ್ ಮಾಡಿ ಏನಾಯಿತು ಎ0ಬುದನ್ನು ತಿಳಿಸುವ0ತೆಯೂ ಹೇಳಿದೆ. ಅವರು ಮನಸ್ಸಿಲ್ಲದ ಮನಸ್ಸಿನಿ0ದ ಹೊರಟರು. ನಾನು ಕುತ್ತಿಗೆವರೆಗೆ ಬ0ದಿದ್ದ ಸಮಸ್ಯೆಯಿ0ದ ಪಾರಾಗಿದ್ದಕ್ಕೆ ಸಮಾಧಾನದ ನಿಟ್ಟುಸಿರು ಬಿಟ್ಟೆ. ಅಮಾವಾಸ್ಯೆಯ ಮರುದಿನ ಅವರ ಫೋನ್ ಬ0ತು. “11 ವರ್ಷದಲ್ಲಿ ಮೊದಲ ಸಲ ಈ ಅಮಾವಾಸ್ಯೆಯನ್ನು ಯಾವ ತೊ0ದರೆ ಇಲ್ಲದೇ ಕಳೆದೆ. ನೀವು ನನ್ನನ್ನು ಉಳಿಸಿದಿರಿ……”. ನಾನು ದಿಘ್ಮೂಢನಾಗಿ ಕುಳಿತು ಬಿಟ್ಟೆ ಮ0ತ್ರತ0ತ್ರ ಗೊತ್ತಿಲ್ಲದ ನಾನು ಅವರಲ್ಲಿ ವಿಶ್ವಾಸ ತು0ಬಲು ಯತ್ನ ನಡೆಸಿದ್ದೆ. ಹಾಗೆ ನಮ್ಮ ಮನೆಯಲ್ಲಿ ಈ ವ್ಯಕ್ತಿ ಸತ್ತು ನಮಗೆ ತೊ0ದರೆ ಉ0ಟು ಮಾಡದಿರಲಿ ಎ0ಬ ಕಾರಣದಿ0ದ ಇವರಿಗೆ ಗುಣವಾಗಲಿ ಎ0ದು ಮನಸ್ಸು ತು0ಬಿ ಪ್ರಾರ್ಥನೆ ಮಾಡಿದ್ದೆ. ಇದೇ ಅಲ್ಲಿ ಪವಾಡ ಮಾಡಿತ್ತು. ಆತ್ಮವಿಶ್ವಾಸ….. ಮನಃಪೂತರ್ಿ ಪ್ರಾರ್ಥನೆ…. ಹಾಗೆ ಒ0ದು ನ0ಬಿಕೆ!
ಶಶಿಧರ್ ಭಟ್

‍ಲೇಖಕರು avadhi

May 16, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

3 ಪ್ರತಿಕ್ರಿಯೆಗಳು

 1. GuruPrasad

  ಚೆನ್ನಾಗಿದೆ ಮಂತ್ರವಾದಿ ಆದ ಕತೆ…… ಇದೆಲ್ಲದಕ್ಕೂ ಮೂಲ ಕಾರಣ ಮನಸ್ಸು,,, ಅದು ನಮ್ಮ ಹಿಡಿತ ದಲ್ಲಿ ಇದ್ದಾರೆ ಎಲ್ಲ ಸರಿ ಇರುತ್ತೆ.

  ಪ್ರತಿಕ್ರಿಯೆ
 2. ದತ್ತಾತ್ರಿ

  ನೀವನ್ನೋದು ನಿಜ. ಎಲ್ಲ ಮನಸ್ಸಿನ ಮಹಾತ್ಮೆ. ಆದರೆ ಮನಸ್ಸಿಗೆ ಹಾಗನ್ನಿಸೊಲ್ವೆ!
  ಒಂದು ಸುಂದರ ಬರಹಕ್ಕಾಗಿ ಧನ್ಯವಾದಗಳು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: