ತುಘಲಕ್

ತುಘಲಕ್ ~ ಎಸ್.ಜಿ.ಶಿವಶಂಕರ್ ಬೆಳಿಗ್ಗೆ ಏಳಕ್ಕೇ ಶುರುವಾಗುವ ಕಾಖರ್ಾನೆಯಲ್ಲಿ ಆಗಲೇ ಒಂದು ಗಂಟೆಯ ಕೆಲಸ ಮುಗಿದಿತ್ತು. ಅಲ್ಲಿ ಅಗತ್ಯವಾಗಿ ಇನ್ನೂ ಏಳು ಗಂಟೆ ಇರಬೇಕಾದುದು ಕಾಖರ್ಾನೆಯ ಕೆಲಸದ ನಿಯಮ. ಸತ್ಯಮೂತರ್ಿ ಸತ್ತು ಇಂದಿಗೆ ಮೂರು ದಿನಗಳಾಗಿದ್ದವು. ಇಂದು ಅವನ ಪುಣ್ಯತಿಥಿ. ಈ ಕಾರ್ಯಕ್ಕೆ ನಾವೆಲ್ಲರೂ ಹೋಗಲೇಬೇಕಾಗಿತ್ತು. ಸತ್ಯಮೂತರ್ಿ ನಮ್ಮೆಲ್ಲರಿಗೂ ಆತ್ಮೀಯನಾಗಿದ್ದ. ಅವನ ಸಾವಿನಿಂದ ನಮಗೆಲ್ಲ ಧಿಗ್ಭ್ರಮಯಾಗಿತ್ತು. ಡಿಪಾಟ್ಮರ್ೆಂಟಿನೊಳಕ್ಕೆ ಯಾರೋ ಬಂದಂತಾಯಿತು. ನನ್ನ ಚೇಂಬರಿನ ನೇರಕ್ಕೆ ಸರಿಯಾಗಿ ಡಿಪಾಟ್ಮರ್ೆಂಟಿನ ಬಾಗಿಲು. ನಾನು ಕುಳಿತಲ್ಲಿಂದಲೇ ಬಂದವರು ಗಾಜಿನ ಬಾಗಿಲಿನ ಮೂಲಕ ಕಾಣುತ್ತಿದ್ದರು. ಕಂಪ್ಯೂಟರಿನಲ್ಲಿ ನೆಟ್ಟಿದ್ದ ದೃಷ್ಟಿಯನ್ನು ಬಾಗಿಲ ಕಡೆ ಹರಿಸಿದೆ. ಆವನೇ…! ನಿಜಕ್ಕೂ ಅವನೇ..! ಎಂದಿನ ಹುಚ್ಚು ವೇಗದಲ್ಲಿ ಒಳಗೆ ಬಂದಿದ್ದ. ಅವನು ನಮ್ಮ ಛೀಫ್ ಎಕ್ಸಿಕ್ಯೂಟೀವ್ ಆಫೀಸರ್. ನನಗಿಂತ ನಾಲ್ಕು ಹುದ್ದೆ ಮೇಲಿನವನು. ಎದ್ದು ಹೋಗಿ ಅವನನ್ನು ಮಾತಾಡಿಸಬೇಕಾದದ್ದು ಇಲಾಖೆಯ ಮುಖ್ಯಸ್ಥನಾಗಿದ್ದ ನನ್ನ ಕರ್ತವ್ಯವಾಗಿತ್ತು. ಆದರೆ ಮೂರು ದಿನದ ಹಿಂದಿನ ಘಟನೆ ನೆನಪಿನಲ್ಲಿ ಯಕ್ಷಗಾನ ಕುಣಿಯಿತು. ತೀವ್ರ ಅಸಹ್ಯ, ತಿರಸ್ಕಾರದಿಂದ ಎದ್ದು ಹೋಗದೆ ಕುಳಿತಲ್ಲಿಂದಲೇ ಅವನನ್ನು ದಿಟ್ಟಿಸಿ ನೋಡಿದೆ. ಅವನು ದೃಷ್ಟಿಯನ್ನು ಎದುರಿಸದೆ ನನ್ನ ಸಹೋದ್ಯೋಗಿ ರಮಾ ಜೊತೆ ಸುಮಾರು ಹತ್ತು ನಿಮಿಷ ಮಾತಾಡಿ ಬಂದ ವೇಗದಲ್ಲೇ ಆಚೆ ಹೋದ. ಅವನು ಕೇವಲ ಎರಡು ತಿಂಗಳ ನಮ್ಮ ಕಾಖರ್ಾನೆಯ ಸೂತ್ರ ಹಿಡಿದಿದ್ದ. ಈ ಎರಡು ತಿಂಗಳಲ್ಲಿ ಉದ್ಯೋಗಿಗಳು ಅವನಿಗೆ ನೀಡಿದ್ದ ಅಡ್ಡ ಹೆಸರು ತುಘಲಕ್! ಅಸಲೀ ಹೆಸರಿನಿಂದ ಅವನನ್ನು ಯಾರೂ ಕರೆಯುತ್ತಿರಲಿಲ್ಲ. ಬಹಳಷ್ಟು ಜನರಿಗೆ ಅವನ ಅಸಲೀ ಹೆಸರೇ ತಿಳಿದಿರಲಿಲ್ಲ. ಅವನ ಸ್ವಭಾವ, ರೀತಿ-ನೀತಿಗಳು ತುಘಲಕನನ್ನು ನೆನಪಿಸುತ್ತಿದ್ದವು. ತುಘಲಕ್ ಇತಿಹಾಸದ ಪುಟ ಸೇರಿರುವ ಒಬ್ಬ ತಿಕ್ಕಲು ದೊರೆ! ಅವನು ಬದುಕಿರುವವರೆಗೂ ಅವನು ಯಾರಿಗೂ ಅರ್ಥವಾಗಿರಲಿಲ್ಲವಂತೆ. ಈತ ಕೂಡ ಹಾಗೆಯೇ..ಇದುವರೆಗೂ ಯಾರಿಗೂ ಅರ್ಥವಾಗಿರಲಿಲ್ಲ. ಗಂಟೆಗೊಂದು ನಿಧರ್ಾರ! ಹಿಂದಿನ ದಿನದ ಯೋಜನೆಗಳನ್ನೆಲ್ಲಾ ಮರುದಿನ ಅಮೂಲಾಗ್ರವಾಗಿ ಬದಲಾಯಿಸಿಬಿಡುತ್ತಿದ್ದ ಕಾರಣವೇ ಇಲ್ಲದೆ ಸಿಕ್ಕವರ ಮೇಲೆ ಇದ್ದಕ್ಕಿದ್ದಂತೆ ಹರಿಹಾಯ್ದುಬಿಡುತ್ತಿದ್ದ! ಮಾತೆತ್ತಿದರೆ ‘ಸಸ್ಪೆಂಡ್’, ‘ಡಿಸ್ಮಿಸ್’ ಎಂದು ಕಿರಿಚಾಡುತ್ತಿದ್ದ. ಹಿರಿಯ ಉದ್ಯೋಗಿಗಳನ್ನು ಅವಮಾನಿಸುತ್ತಿದ್ದ, ಹಂಗಿಸುತ್ತಿದ್ದ. ‘ನೀವೆಲ್ಲಾ ಕಾಖರ್ಾನೆಗೆ ಭಾರ’ ಎಂದು ಮೂದಲಿಸುತ್ತಿದ್ದ. ಎಂಟು ಗಂಟೆ ಹಿಡಿಯುವ ಕೆಲಸವನ್ನು ಚಿಟಿಕೆ ಹೊಡೆಯುವುದರಲ್ಲಿ ಮಾಡಿ ಎಂದು ಆಗ್ರಹಿಸುತ್ತಿದ್ದ. ‘ಆರು ತಿಂಗಳಿಗೆ ಹುಟ್ಟಿದವನು’ ಎಂದು ಕಾಮರ್ಿಕರು ಅವನ ಬೆನ್ನ ಹಿಂದೆ ನಗುತ್ತಿದ್ದರು. ಕಾಮರ್ಿಕರ ಹಿತ ಕಾಯುವ ಕಾನೂನು ಮತ್ತು ಕಾಮರ್ಿಕ ಸಂಘಟನೆಯ ಶಕ್ತಿಯ ಅರಿವಿದ್ದ ಆವನ ಕೋಪ, ಅಸಹನೆ, ತಿಕ್ಕಲುತನ ಎಲ್ಲವನ್ನೂ ಆಫೀಸರುಗಳ ಮೇಲೆ ಪ್ರಯೋಗಿಸುತ್ತಿದ್ದ. ಕಾನೂನಿ ರಕ್ಷಣೆಯಾಗಲೀ, ಸಂಘಟನೆಯ ಬಲವಾಗಲೀ ಇಲ್ಲದ ಆಫೀಸರುಗಳು ಅವನಿಗೆ ಹುಲಿಗೆ ಸಿಕ್ಕ ಹುಲ್ಲೆಗಳಾಗಿದ್ದರು! ‘ಏನಂತೆ ಅವನಿಗೆ ?’ ಮಯರ್ಾದೆ ಪಡೆದುಕೊಳ್ಳುವ ಯೋಗ್ಯತೆಯನ್ನವನು ಕಳೆದುಕೊಂಡಿದ್ದ. ಒಳಗೆ ಬಂದ ರಮಾಳನ್ನು ಕೇಳಿದೆ. ‘ನೋಡಿ ಸರ್, ಈ ತರಾ ಇನಫಮರ್ೇಶನ್ ಅವನಿಗೆ ಸಿಗೋ ಹಾಗೆ ಪ್ರೋಗ್ರಾಮ್ ಮಾಡಿಕೊಡಬೇಕಂತೆ’ ಆಕೆ ತೋರಿಸಿದ ಪೇಪರನ್ನು ಪರಿಶೀಲಿಸಿದೆ. ‘ಎರಡು ಆನ್ಲೈನ್ ಸೈಟು, ಮತ್ತು ನಾಲ್ಕು ಡೇಟಾಬೇಸನ್ನು ಇಂಟರ್ಫೇಸ್ ಮಾಡ್ಬೇಕು ಸಾರ್. ಎರಡು ದಿನ ಟೈಮು ಬೇಕು ಅಂದಿದ್ದಕ್ಕೆ ಒಂದು ಗಂಟೆಯಲ್ಲಿ ಬೇಕು, ಅಗ್ದಿದ್ರೆ ರಿಸೈನ್ ಮಾಡಿ ಹೋಗು ಎಂದರು ಸಾರ್..! ನನ್ನ ಹತ್ತು ವರ್ಷ ಸವರ್ೀಸಲ್ಲಿ ಯಾರೂ ಹೀಗೆ ಹೇಳಿರಲಿಲ್ಲ’ ಮಾತು ಮುಗಿಸುವಾಗ ರಮಾ ಕಣ್ಣುಗಳಲ್ಲಿ ನೀರು ತುಂಬಿದ್ದವು! ‘ಅವನ ಮಾತು ತಲೆಗೆ ಹಚ್ಕೋಬೇಡ. ಆದ್ರೆ ಒಂದ್ಸಲ ಹೇಳಿದ್ದು ಅವನು ಮರೆಯೊಲ್ಲ! ಇದು ನಿನ್ನೊಬ್ಬಳ ಕೈಲಿ ಮಾಡೋದಕ್ಕೆ ಆಗೊಲ್ಲ. ಎಲ್ಲರನ್ನೂ ಕರಿ’ ಎಂದೆ. ಎಲ್ಲ ಪ್ರೋಗ್ರಾಮರುಗಳನ್ನೂ ಕರೆದು ಕೆಲಸ ಹಂಚಿ ಅದರಲ್ಲಿ ನಾನೂ ಒಂದು ಪಾಲು ಪಡೆದು ಕಾರ್ಯಪ್ರವೃತ್ತನಾದೆ. ವಾರದ ಹಿಂದೆ ತುಘಲಕನ ಹುಚ್ಚಾಟಕ್ಕೆ ನನ್ನ ಡಿಪಾಟ್ಮರ್ೆಂಟು ಕೂಡ ಬಲಿಯಾಗಿತ್ತು. ಆರು ಜನ ಪ್ರೋಗ್ರಾಮರುಗಳು ನಿನ್ನ ಡಿಪಾಟ್ಮರ್ೆಂಟಿಗೆ ಅವಶ್ಯಕತೆಯಿಲ್ಲ ಎಂದು ಮೂರು ಜನರನ್ನು ಪ್ರೊಡಕ್ಷನ್ ವಿಭಾಗಕ್ಕೆ ಟ್ರಾನ್ಸ್ಫರ್ ಮಾಡಿದ್ದ. ಹತ್ತು ವರ್ಷ ಕಂಪ್ಯೂಟರಿನಲ್ಲಿ ಕೆಲಸ ಮಾಡಿ ಪರಿಣತಿ ಹೊಂದಿರುವವರನ್ನು ಸಂಬಂಧವಿಲ್ಲದ ಡಿಪಾಟ್ಮರ್ೆಂಟಿಗೆ ಟ್ರಾನ್ಸ್ಫರ್ ಮಾಡಿ ತನ್ನ ಹುಚ್ಚಾಟವನ್ನು ಸಾಬೀತು ಮಾಡಿದ್ದ. ನನ್ನ ಮೇಲೂ ಆತ ಕತ್ತಿ ಬೀಸಬಹುದೆಂಬ ಅನುಮಾನ ಕಾಡುತ್ತಿದ್ದು ಎಚ್ಚರಿಕೆಯಿಂದ ಪ್ರತಿಕ್ಷಣ ಅವನ ಚಯರ್ೆಯನ್ನು ಗಮನಿಸುತ್ತಿದ್ದೆ. ಮೊಬೈಲಿನಲ್ಲಿ ಮೆಸೇಜು ಬಂದ ಶಬ್ದವಾಯಿತು. ಮೊಬೈಲು ತೆಗೆದು ನೋಡಿದೆ. ಸತ್ಯಮೂತರ್ಿನ ಫೋಟೋ! ಮಧ್ಯಾನ್ಹ ಸತ್ಯಮೂತರ್ಿನ ಪುಣ್ಯತಿಥಿಗೆ ಬರಬೇಕೆಂದು ಸ್ನಾಹಿತನೊಬ್ಬ ಕಳಿಸಿದ ಆಹ್ವಾನ. ಕಣ್ಣು ಕಂಪ್ಯೂಟರಿನ ಮೇಲಿದ್ದರೂ ನೆನಪಿನಲ್ಲಿ ಸತ್ಯಮೂತರ್ಿ ಹರಡಿಕೊಂಡಿದ್ದ. ಸತ್ಯಮೂತರ್ಿ ಪಚರ್ೇಸ್ ಡಿಪಾಟ್ಮರ್ೆಂಟಿನ ಮುಖ್ಯಸ್ಥನಾಗಿದ್ದವನು. ಇಪ್ಪತ್ತು ವರ್ಷಗಳ ಅನುಭವವುಳ್ಳ ಸಮರ್ಥ ಅಧಿಕಾರಿ; ಸಜ್ಜನ, ಸರಳ ವ್ಯಕ್ತಿ. ಕಾಖರ್ಾನೆಯ ಎಲ್ಲರ ಪ್ರೀತಿ ಸಂಪಾದಿಸಿದ್ದ ಸತ್ಯಮೂತರ್ಿ ಎರಡು ದಿನಗಳ ಹಿಂದೆ ಬೆಂಗಳೂರಿನ ಹೋಟೆಲೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ! ಅವನ ಆತ್ಮಹತ್ಯೆಗೆ ಕಾರಣ ತುಘಲಕ್ ಎಂದು ಇಡೀ ಕಾಖರ್ಾನೆಯ ಜನ ಮಾತಾಡುತ್ತಿದ್ದರು! ಆದರೆ ಯಾರೂ ಏನೂ ಮಾಡುವಂತಿರಲಿಲ್ಲ! ಅದಕ್ಕೆ ಕಾರಣ ಸತ್ಯಮೂತರ್ಿನ ಮರಣ ಪತ್ರ! ಸೌಜನ್ಯತೆಯೇ ಮೂತರ್ಿವೆತ್ತ ಸತ್ಯಮೂತರ್ಿ ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಮರಣ ಪತ್ರದಲ್ಲಿ ಬರೆದಿದ್ದ! ಆ ಸಾಲು ತುಘಲಕನನ್ನು ಕಾನೂನಿನ ಉರುಳಿನಿಂದ ಉಳಿಸಿತ್ತು! ಆದರೆ ಕಾಖರ್ಾನೆಯ ಅಣುಅಣುವೂ ಹೇಳುತ್ತಿದ್ದವು ಸತ್ಯಮೂತರ್ಿ ಆತ್ಮಹತ್ಯೆ ಮಾಡಿಕ್ಕೊಳ್ಳಲು ತುಘಲಕನೇ ಕಾರಣ! ಕೇವಲ ಎರಡು ತಿಂಗಳ ಅಧಿಕಾರಾವಧಿಯಲ್ಲಿ ತುಘಲಕ್ ಕಾಖರ್ಾನೆಯ ನಕ್ಷೆಯನ್ನೇ ಬದಲಾಯಿಸಿಬಿಟ್ಟಿದ್ದ! ಅವನ ಅಧಿಕಾರ ಇತಿಹಾಸದ ಪುಟ ಸೇರಿದ ತುಘಲಕನ ಅಧಿಕಾರವನ್ನು ನೆನಪಿಸುವಂತಿತ್ತು! ಪ್ರತಿದಿನವೂ ಮೌಖಿಕವಾಗಿ ನಾಲ್ಕೈದು ವಗರ್ಾವಣೆಗಳು! ಒಂದೆರಡು ಅಮಾನತುಗಳು! ಹಿಂದೆ ಮಾಡಿದ ವಗರ್ಾವಣೆಗಳನ್ನು ಮರುಸ್ಥಿತಿಗೆ ತರುವ ಆದೇಶ! ಐದಾರು ಹೊಸ ಉತ್ಪನ್ನಗಳ ಯೋಜನೆಗಳು! ಹಿಂದಿನ ದಿನದ ಯೋಜನೆಗಳನ್ನು ಮರುದಿನ ರಂಗೋಲಿಯಂತೆ ಅಳಿಸಿ ಮತ್ತೆ ಹೊಸ ಯೋಜನೆಗಳ ಪ್ರಸ್ತಾಪಿಸುತ್ತಿದ್ದ ! ಸಾರ್ ಡೆಡ್ಲೈನಿಗೆ ಇನ್ನು ಹದಿನೈದು ನಿಮಿಷ ಬಾಕಿ ಆತಂಕದಿಂದ ರಮಾ ಹೇಳಿದಳು. ಪ್ರೋಗ್ರಾಮು ಇಂಟಿಗ್ರ್ರ್ರೇಷನ್ನು ಮುಗೀತಾ..? ಸರೋಜ್ ಮಾಡ್ತಿದ್ದಾರೆ ಸಾರ್.. ಗುಡ್.. ಹೆದ್ರೊ ಅವಶ್ಯಕತೆ ಇಲ್ಲ! ಕೀಪ್ ಗೋಯಿಂಗ್ …ಐ ವಿಲ್ ಕೀಪ್ ದ ಫೋಟರ್್ ಧೈರ್ಯ ಹೇಳಿ ಕಳಿಸಿದೆ. ಸತ್ಯಮೂತರ್ಿಯ ಪುಣ್ಯತಿಥಿಯ ಮೆಸೇಜು ಬೇರೆಬೇರೆಯವರಿಂದ ಮತ್ತೆಮತ್ತೆ ಬರುತ್ತಿತ್ತು. ಮೆಸೇಜು ನೋಡುತ್ತಿರುವಾಗ ಕಾಮರ್ಿಕ ಮುಖಂಡ ದಾಮೋದರ್ ಬಂದರು. ಸರ್, ಸತ್ಯಮೂತರ್ಿ ಅವರ ಮನೇಗೆ ಎಲ್ಲಾ ಕಾಮರ್ಿಕರೂ ಹೋಗ್ತಿದ್ದೇವೆ. ನೀವು ಆಫೀಸರುಗಳೂ ಬನ್ನಿ! ನಿಮಗೆ ತುಘಲಕ್ ಅಡ್ಡಿ ಮಾಡಬಹುದು. ಕೇರ್ ಮಾಡ್ಬೇಡಿ ಬನ್ನಿ…ಎಲ್ಲಾ ಬಂದ್ರೆ ಅವ್ನೇನೂ ಕಡಿಯೋಕೆ ಸಾಧ್ಯವಿಲ್ಲ! ಎಂದಿನಂತೆ ಏರಿದ ದನಿಯಲ್ಲಿ ಹೇಳಿದರು ದಾಮೋದರ್! ನಿಮ್ಮ ಹಾಗೆ ನಮಗೆ ರಕ್ಷಣೆ ಇಲ್ಲವಲ್ಲ ದಾಮೋದರ್ ಹೀಗಾಗೇ ನಿಮ್ಮನ್ನ ಅವ್ನು ಹೆದ್ರಿಸೋದು! ರಿಸ್ಕ್ ಏನೂ ಇಲ್ಲ ಸಾರ್.. ಸುಮ್ನೆ ಎಲ್ಲಾ ಬನ್ನಿ ನೋಡೋಣ… ಮಾತೆಳೆದೆ. ದಾಮೋದರ್ ನನ್ನ ಮಾತಿಗೆ ಟೇಬಲ್ ಮೇಲೆ ಸಣ್ಣಗೆ ಗುದ್ದುವ ಮೂಲಕ ಅಸಹನೆ ತೋರುತ್ತಾ ಆಚೆ ಹೋದ. ಸರ್, ಪ್ರೋಗ್ರಾಮು ರನ್ ಆಗ್ತಿದೆ..ಇನ್ಫಮರ್ೇಶನ್ ಕರೆಕ್ಟಾಗಿ ಬತರ್ಿದೆ.. ಆಚೆಯಿಂದ ರಮಾ ಕೂಗಿದಾಗ ಎದ್ದು ಬಂದು ರಮಾ ಪಕ್ಕದಲ್ಲಿ ನಿಂತೆ! ಅದೇ ಸಮಯಕ್ಕೆ ತುಘಲಕ್ ನಮ್ಮ ಬಳಿ ಬಂದ. ಪ್ರೋಗ್ರಾಮ್ ರನ್ ಮಾಡಿ ತೋರಿಸಿದಳು ರಮಾ. ಗುಡ್, ನೋಡಿದ್ಯಾ.. ನಿನ್ನ ಪೋಟೆನ್ಷಿಯಲ್..? ಒಂದೇ ಗಂಟೆಯಲ್ಲಿ ಯೂ ಹ್ಯಾವ್ ಅಚೀವ್ಡ್ ಇಟ್! ಪ್ರತಿಯೊಬ್ಬರಿಗೂ ಕೆಪಾಸಿಟಿ ಇದೆ, ದುರದೃಷ್ಟ ಅಂದರೆ ಉಪಯೋಗಿಸುವ ಮನಸ್ಸಿಲ್ಲ! ತುಘಲಕ್ ರಮಾ ಹೆಂಗಸೆಂಬುದನ್ನು ಮರೆತು ಭುಜ ತಟ್ಟಿದ. ಲುಕ್ ಮ್ಯಾನ್, ಆಲ್ ಆಫ್ ಅಸ್ ಕೆನ್ ಡೂ ಮಿರಾಕಲ್ಸ್ ನನ್ನತ್ತ ತಿರುಗಿ ಹೇಳಿದ. ಬಟ್ ನಾಟ್ ಅಲ್ವೇಸ್..! ಎಚ್ಚರಿಸಿದೆ. ಎಸ್..ಅಲ್ವೇಸ್! ಇಲ್ಲಾಂದ್ರೆ ಸತ್ಯಮೂತರ್ಿನ ಹಾಗೆ ಜಾಗ ಖಾಲಿ ಮಾಡ್ಬೇಕು! ಇದು ಎಲ್ಲರಿಗೂ ಅನ್ವಯಿಸುತ್ತೆ ನನಗೆ ಕೆಟ್ಟ ಧೈರ್ಯ ಬಂದಿತ್ತು. ಅವನನ್ನು ಮಾತಿನಿಂದ ಪ್ರಹರಿಸಿದೆ! ಕೋಪದಿಂದ ಬುಸುಗುಡುತ್ತಾ ಅವನು ವೇಗವಾಗಿ ಹೋದ. ತನ್ನಿಂದಾಗಿ ಒಬ್ಬ ಜೀವ ಕಳೆದುಕೊಂಡಿದ್ದಾನೆ ಎಂಬ ಪಾಪಪ್ರಜ್ಞೆ ಅವನನ್ನು ಕಿಂಚಿತ್ತೂ ಕಾಡಿದಂತಿರಲಿಲ್ಲ! ಸತ್ಯಮೂತರ್ಿಯ ಶವ ಸಂಸ್ಕಾರಕ್ಕೆ ಹೋದಾಗ ಅವನ ಮಡದಿ ಮತ್ತು ಮಕ್ಕಳು ಅತೀವ ಹತಾಶೆಯಿಂದ ತುಘಲಕ್ಗೆ ಶಾಪ ಹಾಕುತ್ತಿದ್ದರು. ಸತ್ಯಮೂತರ್ಿ ಮರಣ ಪತ್ರದಲ್ಲಿ ಅವನ ಹೆಸರನ್ನು ಉಲ್ಲೇಖಿಸಿದ್ದರೂ ಸಾಕಾಗಿತ್ತು! ಅವನ ಮೇಲೆ ಕಾನೂನಿನ ಕ್ರಮ ತೆಗೆದುಕ್ಕೊಳ್ಳಬಹುದಿತ್ತು. ಆದರೆ ಸತ್ಯಮೂತರ್ಿ ಎಲ್ಲ ಕೈ ಕಟ್ಟಿಹಾಕಿಬಿಟ್ಟಿದ್ದ! ವಾಪಸ್ಸು ಸೀಟಿಗೆ ಹಿಂತಿರುಗಿದಾಗ ಫೋನು ರಿಂಗಾಯಿತು. ಏನ್ಮಾಡ್ತಿದ್ದೀಯಾ..? ಗೋಪಿಯ ದನಿ ಪೋನಿನಲ್ಲಿ ಕೇಳಿತು. ಸತ್ಯಮೂತರ್ಿನ ಬಗ್ಗೆ ಯೋಚಿಸ್ತಾ ಇದ್ದೆ ಎದ್ದು ಈಚೆಗೆ ಬಾ. ಇಡೀ ಫ್ಯಾಕ್ಟರಿ ಜನ ಸತ್ಯಮೂತರ್ಿ ಮನೇಗೆ ಹೋಗ್ತಿದ್ದಾರೆ. ಎಲ್ಲಾ ಆಫೀಸಸರ್್ ಕೂಡ ಹೋಗೋದೂಂತ ತೀಮರ್ಾನಿಸಿದ್ದಾರೆ. ಎಲ್ಲರ ಮೇಲೂ ತುಘಲಕ್ ಆಕ್ಷನ್ ತೆಗೆದುಕ್ಕೊಳ್ಳೋಕೆ ಆಗೊಲ್ಲ. ತಕ್ಷಣ ನಿಮ್ಮ ಡಿಪಾಟ್ಮರ್ೆಂಟಿನವರನ್ನೆಲ್ಲಾ ಕಕರ್ೊಂಡು ಬಾ ಎಲ್ಲ ಆಫೀಸಸರ್ೂ ಹೋಗ್ತಿದ್ದಾರ..? ಅನುಮಾನಿಸಿದೆ. ಗೇಟ್ ಹತ್ರ ಬಂದ್ರೆ ನಿಂಗೇ ಗೊತ್ತಾಗುತ್ತೆ ಸರಿ ಎಂದು ಹೇಳಿ ರೂಮಿನಿಂದ ಈಚೆ ಬಂದೆ. ಸತ್ಯಮೂತರ್ಿನ ಮನೇಗೆ ಎಲ್ಲಾ ಹೋಗ್ತಿದ್ದಾರೆ. ಮೈನ್ ಸಿಸ್ಟಂ ಷಟ್ಡೌನ್ ಮಾಡಿ ನೀವೂ ಬನ್ನಿ ಸಹೋದ್ಯೋಗಿಗಳಿಗೆ ಹೇಳಿ ಬಿಲ್ಡಿಂಗಿನಿಂದ ಈಚೆ ಬಂದೆ. ಗೇಟಿನ ಬಳಿ ಜಾತ್ರೆ ಸೇರಿತ್ತು! ಎತ್ತರದ ಸ್ಟೂಲೊಂದರ ಮೇಲೆ ಸತ್ಯಮೂತರ್ಿಯ ಫೋಟೋ ಇಟ್ಟು, ಹಾರ ಹಾಕಿ, ಊದುಗಡ್ಡಿ ಹಚ್ಚಿದ್ದರು. ಭದ್ರತಾ ಸಿಬ್ಬಂದಿಯ ಜೊತೆ ಕಾಮರ್ಿಕ ಮುಖಂಡರು ತಾರಕ ಸ್ವರದಲ್ಲಿ ವಾಗ್ವಾದ ನಡೆಸುತ್ತಿದ್ದರು. ಗುಂಪನ್ನು ಹೋಗಿ ಸೇರಿಕ್ಕೊಂಡ ನಂತರ ಕಾರಣ ಗೊತ್ತಾಯಿತು. ಶಿಫ್ಟ್ ಸಮಯಕ್ಕೆ ಮುಂಚೆ ಯಾರನ್ನೂ ಕಾಖರ್ಾನೆಯಿಂದ ಆಚೆ ಬಿಡಬಾರದೆಂದು ಭದ್ರತಾ ಸಿಬ್ಬಂದಿಗೆ ತುಘಲಕ್ ಆರ್ಡರ್ ಮಾಡಿದ್ದನಂತೆ. ಆ ವಿಷಯಕ್ಕೆ ಅಲ್ಲಿ ವಾದ ವಿವಾದ ನಡೆಯುತ್ತಿತ್ತು. ನಮಗೆ ಕೊಟ್ಟಿರೋ ಆರ್ಡರನ್ನು ನಾವು ಪಾಲಿಸ್ತಿದ್ದೇವೆ. ಸಿಇಒ ಎಲ್ಲಾರನ್ನೂ ಬಿಡಿ ಎಂದರೆ ಬಿಡ್ತೇವೆ..ನಮ್ಮದೇನಿದೆ ಸಾರ್..? ಭದ್ರತಾ ಇಲಾಖೆಯ ಮುಖ್ಯಸ್ಥ ಜೋಸೆಫ್ ಕಾಮರ್ಿಕರಿಗೆ ವಿವರಿಸುತ್ತಿದ್ದ. ಕಾಮರ್ಿಕ ನಾಯಕರುಗಳು ತಿರುಗಿ ತುಘಲಕನ ಆಫೀಸಿನತ್ತ ಹೊರಟರು-ವಿಷಯ ಇತ್ಯರ್ಥ ಮಾಡಿಕೊಂಡು ಬರಲು. ಇದು ಇಷ್ಟಕ್ಕೇ ಮುಗಿಯೊಲ್ಲ ಎಂದು ನಿಟ್ಟುಸಿರಿಟ್ಟ ನಿಗೋಪಿಯ ಮಾತಿನಲ್ಲಿ ಭಯ ಕಂಡಿತು. ಗೋಪಿ, ನಾನು, ಅಕೌಂಟ್ಸನ ಜಯರಾಜ್ ಮತ್ತಿನ್ನೂ ಐದಾರು ಜನರು ಗುಂಪಿನಿಂದ ಸ್ವಲ್ಪ ದೂರದಲ್ಲಿ ನಿಂತಿದ್ದೆವು. ಅಲ್ಲಾ ಈ ಸತ್ಯಮೂತರ್ಿ ಎಂತಾ ಹುಚ್ಚ? ಈ ತುಘಲಕ್ ಏನೋ ಅಂದಾ ಅಂತ ಜೀವಾನೇ ಕಳ್ಕೊಳ್ಳಾದಾ..? ಜಯರಾಜ್ ವಿಷಾದದಿಂದ ಹೇಳಿದ. ಅವನು ಎಷ್ಟು ಕೆಟ್ಟಾದಾಗಿ ಹೇಳಿದ್ದ ಗೊತ್ತಾ..? ನಾನೂ ಆ ಮೀಟಿಂಗಿನಲ್ಲಿದ್ದೆ. ನಿನ್ನಿಂದಲೇ ಪ್ರೊಡಕ್ಷನ್ ನಿಂತು ಹೋಗಿದೆ. ಸಪ್ಲೈಯಸರ್್ ಸರಿಯಾಗಿ ಪಾಟ್ಸರ್್ ಕಳಿಸ್ತಾ ಇಲ್ಲ. ಎರಡು ಪಾಟ್ಸರ್್ಗೋಸ್ಕರ ಮೂರು ದಿನದಿಂದ ಒಂದು ಪ್ರಾಡಕ್ಟೂ ಆಚೆ ಹೋಗಿಲ್ಲ. ನಾಳೆ ಸಂಜೆಯೊಳಗೆ ಈ ಪಾಟ್ಸರ್ು ನೀನೇ ಹೋಗಿ ತರಬೇಕು! ತರದಿದ್ದರೆ ವಾಪಸ್ಸು ಬರೋ ಅವಶ್ಯಕತೆ ಇಲ್ಲ ಅಂತ! ಅದೇ ಕೊನೆ ಸಲ ನಾನು ಸತ್ಯಮೂತರ್ಿಯನ್ನು ನೋಡಿದ್ದು! ಮನೇಗೆ ಕೂಡ ಹೋಗದೆ ಇಲ್ಲಿಂದಾನೇ ಸತ್ಯಮೂತರ್ಿ ನೇರವಾಗಿ ಬೆಂಗ್ಳೂರಿಗೆ ಹೋದ! ಮನೇಗೆ ಫೋನು ಮಾಡಿದ್ದಷ್ಟೇ ಅಂತೆ! ಬೆಂಗ್ಳೂರಿನ ಇಂಡಸ್ಟ್ರಿಯಲ್ ಎಸ್ಟೇಟ್ ಎಲ್ಲಾ ಸುತ್ತಿ ಸುಣ್ಣವಾದರೂ ಪಾಟ್ಸರ್ು ಸಿಕ್ಕಿರಲಿಲ್ಲವಂತೆ! ಸಂಜೆ ಹೋಟೆಲ್ಲಿಗೆ ಬಂದ ಮೇಲೆ ಮನೇಗೆ ಫೋನು ಮಾಡಿದನಂತೆ. ಆಮೇಲೆ ತುಘಲಕನಿಗೆ ಫೋನು ಮಾಡಿದನಂತೆ. ತುಘಲಕ್ ಏನು ಹೇಳಿದನೋ..? ಬೆಳಿಗ್ಗೆ ಹತ್ತು ಗಂಟೆಗೆ ಪೋಲೀಸಿನವರು ಫ್ಯಾಕ್ಟರಿಗೆ ಫೋನು ಮಾಡಿ ಸತ್ಯಮೂತರ್ಿ ಆತ್ಮಹತ್ಯೆ ಮಾಡ್ಕೊಂಡಿರೋದು ಹೇಳಿದನಂತೆ! ಆ ಫೋನು ರಿಸೀವ್ ಮಾಡಿದವನೂ ತುಘಲಕನೇ! ಅವನ ಅತ್ಮಹತ್ಯೆಗೂ ಫ್ಯಾಕ್ಟರಿಗೂ ಸಂಬಂಧವಿಲ್ಲ, ಮನೇಗೆ ಫೋನು ಮಾಡಿ ಎಂದನಂತೆ! ಇದನ್ನ ಕದ್ದು ಕೇಳಿದ ತುಘಲಕ್ ಪಿ.ಎ ಮಣಿ ಮನೇಗೆ ಮತ್ತು ಫ್ಯಾಕ್ಟರೀಲಿ ಎಲ್ಲರಿಗೂ ತಿಳಿಸಿದ್ದು ಬೇರೆ ಇನ್ಯಾರಾದ್ರೂ ಹೀಗ್ಮಾಡಿಕೊಂಡಿದ್ರೆ ಇಷ್ಟೊಂದು ಬೇಜಾರಾಗ್ತಿರಲಿಲ್ಲ…ಆದ್ರೆ ಸತ್ಯಮೂತರ್ಿ..ಛೆ! ಚಿನ್ನದಂತಾ ಮನುಷ್ಯ! ಯಾರ ಮೇಲೂ ಯಾವತ್ತೂ ಕೋಪ ಮಾಡಿಕೊಂಡವನಲ್ಲ, ದ್ವೇಶ ಸಾಧಿಸಿದವನಲ್ಲ! ಅವನಿಗೆ ಹೀಗಾಗಬಾರದಿತ್ತು! ಎಷ್ಟೇ ಚಿಕ್ಕ ಕೆಲಸದವರನ್ನೂ ಪ್ರೀತಿಯಿಂದ ಮಾತಾಡಿಸ್ತಿದ್ದ. ಕೊನೆಗೂ ಈ ತುಘಲಕ್ ಮೇಲೂ ಬೇಜಾರು ಮಾಡ್ಕೊಳ್ಳಲಿಲ್ಲ! ಜಯರಾಜನ ಮಾತು ಅವನೊಬ್ಬನದೇ ಆಲ್ಲ… ಇಡೀ ಕಾಖರ್ಾನೆಯ ಜನರದ್ದು ಎನ್ನಿಸಿತು! ಕಾಮರ್ಿಕ ಮುಖಂಡರು ತುಘಲಕನ ಜೊತೆ ಮಾತು ಮುಗಿಸಿ ಗೇಟಿನ ಕಡೆ ಬರುತ್ತಿದ್ದಂತಿತ್ತು. ಆಫೀಸಸರ್್ ಬಿಟ್ಟು ಉಳಿದವರೆಲ್ಲಾ ಆಚೆ ಹೋಗಬಹುದು. ಹೋಗೋಕೆ ಮುಂಚೆ ಪಂಚ್ ಔಟ್ ಮಾಡಿ, ಸಚರ್್ ಮಾಡಿಸಿಕೊಂಡು ಹೋಗಬಹುದು.. ಭದ್ರತಾ ಸಿಬ್ಬಂದಿಯ ಜೋಸೆಫ್ ಕಾಮರ್ಿಕರನ್ನುದ್ದೇಶಿಸಿ ಹೇಳಿದರು. ನಾವು ಹೋಗೋ ಹಾಗಿಲ್ಲವಂತೆ! ನೋಡಿದ್ರಾ… ತುಘಲಕ್ ನ್ಯಾಯ? ಆಫೀಸರ್ ಒಬ್ಬ ಜೋರಾಗಿ ಹೇಳಿದ. ಕಾಮರ್ಿಕ ನಾಯಕರು ತಮ್ಮ ಸಹೋದ್ಯೋಗಿಗಳಿಗೆ ಸೂಚನೆಗಳನ್ನಿತ್ತು, ಆಫೀಸರುಗಳ ಗುಂಪಿನ ಬಳಿ ಬಂದರು. ನೋಡಿ, ನೀವು ಹೀಗೇ ಅವನ ಮಾತಿಗೆ ಹೆದತರ್ಾ ಇದ್ದರೆ ಅವನು ಸತ್ಯಮೂತರ್ಿಯವರನ್ನು ಮುಗಿಸಿದ ಹಾಗೆ ನಿಮ್ಮನ್ನೂ ಮುಗಿಸಿಬಿಡ್ತಾನೆ! ಹೋಗಿ ಅವನ್ನನ್ನ ಕೇಳಿ ಸಾರ್..ಅದು ಹೇಗೆ ಬಿಡೋದಿಲ್ಲವೊ..? ಹತ್ತಿಪ್ಪತ್ತು ವರ್ಷದಿಂದ ಈ ಕಾಖರ್ಾನೆಯನ್ನ ಬೆಳೆಸಿರೋರು ನೀವು! ಅವನಲ್ಲ! ಎರಡು ತಿಂಗಳ ಹಿಂದೆ ಬಂದ ಅವನಿಗೆ ಯಾಕ್ಸಾರ್ ಹೆದ್ರೋದು..? ಕಾಮರ್ಿಕ ಸಂಘದ ಅಧ್ಯಕ್ಷ ರಾಮುಲು ಮಾತಿಗೆ ಅಧಿಕಾರಿಗಳ ಗುಂಪಿನಿಂದ ಯಾವ ಪ್ರತಿಕ್ರಿಯೆಯೂ ಬರಲಿಲ್ಲ! ಆತ ಅದನ್ನು ನಿರೀಕ್ಷಿಸಿಯೂ ಇಲ್ಲದಂತೆ ಸಹೋದ್ಯೋಗಿಗಳ ಜೊತೆ ಗೇಟಿನಿಂದಾಚೆ ಹೋದ. ಸತ್ಯಮೂತರ್ಿನ ಬದಲಿಗೆ ಈ ತುಘಲಕನೇ ಸಾಯಬಾರದಿತ್ತಾ..? ಯಾರೋ ಗುಂಪಿನಿಂದ ಮಾತಾಡಿದರು. ಪಾಪಿ ಚಿರಾಯು ಅಂತಾರೆ! ಇಂತವರು ಬೇಗ ಸಾಯೊಲ್ಲ! ಇನ್ನಷ್ಟು ಜನರನ್ನ ಸಾಯಿಸುತ್ತಾರೆ! ಇನ್ಯಾರೋ ಹೇಳಿದರು. ಇಲ್ಲಿ ಯಾರೂ ನಿಲ್ಲಬಾರದು! ಎಲ್ಲ ಡಿಪಾಟ್ಮರ್ೆಂಟುಗಳಿಗೆ ಹೋಗಬೇಕಂತೆ! ಕ್ಯಾಂಟೀನಿನಲ್ಲಿ ಇವತ್ತು ಸ್ಪೆಷಲ್ ಲಂಚಂತೆ! ಎಲ್ಲಾ ಖಡ್ಡಾಯವಾಗಿ ಲಂಚ್ ತೆಗೆದುಕ್ಕೊಳ್ಳಲೇಬೇಕಂತೆ. ಇದು ಸಿಇಓ ಆರ್ಡಸರ್್! ಭದ್ರತಾ ಮುಖ್ಯಸ್ಥ ಜೋಸೆಫ್ ನಮ್ಮನ್ನುದ್ದೇಶಿಸಿ ಹೇಳಿದ. ಇವನು ಮನುಷ್ಯನಲ್ಲ! ಮೃಗ! ರಾಕ್ಷಸ! ಇವನನ್ನು ಹೀಗೇ ಬಿಡಬಾರದು! ಸಾಯೋ ಹಾಗೆ ಮಾಡ್ಬೇಕು. ಗುಂಪಿನಿಂದ ದ್ವನಿಯೊಂದು ಬೆಂಕಿಯುಗುಳಿತು! ಹುಷ್…! ಅವನ ಏಜೆಂಟ್ಸ್ ಇತರ್ಾರೆ! ಅವನಿಗೆ ಸುದ್ದಿ ಮುಟ್ಟಿಸಿದರೆ ನಮ್ಮ ಕತೆ ಮುಗೀತು.. ಇನ್ಯಾರೋ ಎಚ್ಚರಿಸಿದರು! ಅಸಹಾಯಕರಂತೆ ಅಧಿಕಾರವರ್ಗದವರು ಕಾಖರ್ಾನೆಯ ತಮ್ಮ ಇಲಾಖೆಗಳತ್ತ ಹೆಜ್ಜೆ ಹಾಕತೊಡಗಿದರು. ಮೌನದಿಂದ ನಾನು ಅವರನ್ನು ಹಿಂಬಾಲಿಸಿದೆ.    ]]>

‍ಲೇಖಕರು G

July 13, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಡಲಂತರಾಳವ ಬಲ್ಲವರಾರು?

ಕಡಲಂತರಾಳವ ಬಲ್ಲವರಾರು?

ಶಿವಲೀಲಾ ಹುಣಸಗಿ ಯಲ್ಲಾಪುರ ಪ್ರತಿ ದಿನವೂ ಪ್ರೀತಿಯ ಹುಚ್ಚ ಹಿಡಿಸಿದವ ಒಮ್ಮಿಂದೊ ಮ್ಮೆಲೆ ಮೌನವಾಗಿದ್ದು, ಕೊನೆಗವನು ನನಗರಿವಿಲ್ಲದೆ ಮಂಪರು...

ಆರನೇ ಬೆರಳು

ಆರನೇ ಬೆರಳು

ಬಸವಣ್ಣೆಪ್ಪ ಕಂಬಾರ ಸುಂಕದ ಕಟ್ಟೇಲಿ ಚಿನ್ನವ್ವ ತುಂಬ ಅದೃಷ್ಟದ ಹೆಂಗಸು ಎಂದು ಮನೆಮಾತಾಗಿದ್ದಳು. ಮನೆ ಗುದ್ದಲಿ ಪೂಜೆ, ಬಾಣಂತನಕ್ಕೆ, ಮಗಳನ್ನು...

ಹಬ್ಬಿದಾ ಬಲೆ ಮಧ್ಯದೊಳಗೆ…

ಹಬ್ಬಿದಾ ಬಲೆ ಮಧ್ಯದೊಳಗೆ…

ರಾಜು ಎಂ ಎಸ್ ಸಾಲಿಗುಡಿ ಬಿಟ್ ಕೂಡ್ಲೇ ನಿಂಗಿ, ಗುಡ್ಲು ಕಡಿಕ್ ಹೊಂಟವ್ಳು... ತಾರ್ಸಿ ಮನೆ ಗುರ್ಲಿಂಗಪ್ಪನ್  ಮಗ್ಳು ಪರಿಮಳ ತನ್...

2 ಪ್ರತಿಕ್ರಿಯೆಗಳು

 1. vishveswara

  ಇಂತಾ ಕ್ರೂರಿಗಳನ್ನು ಹೊಂದಿರುವ ದಟ್ಟ ಕಾಡು ಕಾರ್ಖಾನೆಗಳು ಎನ್ನುವುದು ನನ್ನ ಅನುಭವದಲ್ಲಿಯೂ ಇದೆ.
  ಮನ ಮುಟ್ಟಿದೆ ಕತೆ.
  ಧನ್ಯವಾದಗಳು-ಶಿವಶಂಕರ್

  ಪ್ರತಿಕ್ರಿಯೆ
 2. vimala g

  ಬಲ್ಲವೇ ಬಲ್ಲರು ಬೆಲ್ಲದ ಸವಿಯ ಎನ್ನುವಂತೆ, ಇಂತವರನ್ನು ಹತ್ತಿರದಿಂದ ಕಂಡವರಿಗೆ, ಅವರ ತಿಕ್ಕಲುತನ, ಕ್ರೂರತೆ ಗೊತ್ತಾಗುತ್ತದೆ.
  ತುಂಬಾ ಚೆನ್ನಾಗಿದೆ
  ವಿಮಲ ಜಿ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: