ತುಮಕೂರಿನಲ್ಲಿ 'ಊರು ಕೇರಿ'

ತುಮಕೂರಿನ ಝೆನ್ ಟೀಮ್ ವತಿಯಿಂದ ಇದೇ ತಿಂಗಳ 9 ಮತ್ತು10 ರಂದು ನಾಟಕೋತ್ಸವ ಏಪ೯ಡಿಸಲಾಗಿದೆ. 9 ರಂದು ಡಾ. ಸಿದ್ದಲಿಂಗಯ್ಯ ಅವರ ಆತ್ಮಕತೆ ಊರುಕೇರಿ ಯನ್ನು ರಂಗಕ್ಕೆ ಅಳವಡಿಸಲಾಗಿದೆ. ಈ ನಾಟಕವನ್ನು ಹೆಗ್ಗೋಡಿನ ಜನಮನದಾಟ ತಂಡದವರು ಅಭಿನಯಿಸಲಿದ್ದಾರೆ. ಹಾಗೆಯೇ 10 ರಂದು ಗೊಗಲ್ ನ ಓವರ್ ಕೋಟ್ ಎಂಬ ನಾಟಕವನ್ನು ಪ್ರದಶಿ೯ಸಲಾಗುವುದು. ತುಮಕೂರಿನ ಝೆನ್ ಟೀಮ್ ಐದನೇ ವಷ೯ಕ್ಕೆ ಕಾಲಿಟ್ಟಿದೆ. ಈಗಾಗಲೇ ಸರಿ ಸುಮಾರು 50 ನಾಟಕಗಳನ್ನು ಪ್ರದಶಿ೯ಸಿದ ಹೆಗ್ಗಳಿಕೆ ಝೆನ್ ತಂಡಕ್ಕಿದೆ. ಝೆನ್ ಟೀಮ್ ಎಂದರೆ ಏನನ್ನೂ ಮುಚ್ಚಿಡುವುದಿಲ್ಲ, ಏನನ್ನೂ ಬಿಚ್ಚಿಡುವುದಿಲ್ಲ. ಪ್ರಯೋಗಾತ್ಮಕ ನಾಟಕಗಳಿಗೆ ದೊಡ್ಡ ಮಟ್ಟದಲ್ಲಿ ಚಾಲನೆ ನೀಡಿರುವ ಹೆಮ್ಮ ನಮ್ಮ ತಂಡಕ್ಕೆ ಇದೆ. ಈಗಾಗಲೇ ನೀನಾಸಂ, ಜನಮನದಾಟ, ವಾರಿಯರ್ಸ್, ಸಾಣೆಹಳ್ಳಿ ಶಿವಸಂಚಾರ ಸೇರಿದಂತೆ ಹಲವಾರು ವೖತ್ತಿ ನಿರತ ರೆಪಟ೯ರಿ ತಂಡಗಳು ಇಲ್ಲಿಗೆ ಬಂದು ಅಭಿನಯಸಿದೆ. ಸುಮಾರು 800 ಜನ ಪ್ರತಿ ಪ್ರದಶ೯ಕ್ಕೆ ಸೇರುತ್ತಾರೆ ಎಂಬುದು ಉಲ್ಲೇಖಾಹ೯.]]>

‍ಲೇಖಕರು avadhi

July 3, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪ್ರಜಾವಾಣಿ ರಾಷ್ಟ್ರೀಯ ನಾಟಕೋತ್ಸವ

ಪ್ರಜಾವಾಣಿ ರಾಷ್ಟ್ರೀಯ ನಾಟಕೋತ್ಸವ

ಡಿಸೆಂಬರ್ 4 ರಿಂದ ಪ್ರಜಾವಾಣಿ ಫೇಸ್‌ಬುಕ್ ಪುಟದಲ್ಲಿರಾಷ್ಟ್ರೀಯ ನಾಟಕೋತ್ಸವ - 2020 ರಂಗಭೂಮಿ, ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಆದ ಕೊಡುಗೆ...

೧ ಪ್ರತಿಕ್ರಿಯೆ

  1. ಜಿ೦ಕೆ ಸುಬ್ಬಣ್ಣ, ಪುತ್ತೂರು

    ಓವರ್ ಕೋಟ್, ನೀನಾಸ೦ ಮರುತಿರುಗಾಟದವರು ನಮ್ಮೂರಲ್ಲಿ ನಿನ್ನೆ, ಆಡಿದರು, ತೀರಾ ಸರಳ ರ೦ಗ ಸಜ್ಜಿಕೆ, ಯಾವುದೇ ಹಮ್ಮು ಬಿಮ್ಮು ಇಲ್ಲದ ನೇರ ಪ್ರಸ್ತುತಿ, ನಟ ನಟಿಯರ ಲೀಲಾಜಾಲ ನಟನೆ (ನೀನಾಸ೦ನ ದೃಢ ಮುದ್ರೆ),, ಈ ಪ್ರಯೋಗದ ಹೊಳಹುಗಳು. ದುಖಃ, ಶೋಕ, ಕಷ್ಟ ಕಾರ್ಪಣ್ಯ,,, ಇವೇ ನಾಟಕದ ಥೀಮ್ ಆಗಿ ರ೦ಜನೆ ಕಮ್ಮಿ . ಒಟ್ಟಿನಲ್ಲಿ ಬಹುಕಾಲ ನೆನಪಲ್ಲುಳಿಯುವ೦ತ ಪ್ರಯೋಗ ಅಲ್ಲ. ಬಹಳ ಹಿ೦ದೆ ಬಹುಶಃ ಇದೇ ಕಥೆ ಆಧರಿಸಿ ದೂರದರ್ಶನದಲ್ಲಿ ಓ೦ಪುರಿ ನಟಿಸಿದ್ದ
    ಕಥೆ, ಬಹುಶಃ ನಯೀ ಶೇರ್ವಾನಿ ಬ೦ದಿತ್ತು, ಅದು ತೀರಾ ಸರಳೀಕೃತ ಪ್ರಯೋಗವಿದ್ದಿರಬೇಕು, ಆದರೆ ಈಗಲೂ ನೆನಪಲ್ಲಿ ಹಸಿರಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: