"ತುಳಸಿವನ"-"ಸುಪ್ತದೀಪ್ತಿ"


ಕನ್ನಡ ಸಾಹಿತ್ಯ ವಲಯದಲ್ಲಿ ಸದಾ ಓಡಾಡುವ-ಓದಾಡುವ ಎಲ್ಲರಿಗೂ ಪರಿಚಿತ ಹೆಸರುಗಳೆರಡು ತಮ್ಮ ಮುಖಗಳನ್ನು ನಿಮ್ಮೆಲ್ಲರೆದುರು ತೋರಲಿವೆ.
ಜುಲೈ ತಿಂಗಳ ಕೊನೆಯ ಭಾನುವಾರ (೨೭ನೇ ತಾರೀಖು) ಬೆಳಗ್ಗೆ ೧೦ ಗಂಟೆಗೆ ಸುಚಿತ್ರ ಫಿಲ್ಮ್ ಸೊಸೈಟಿಯ ಸಭಾಂಗಣದಲ್ಲಿ ಅವರಿಬ್ಬರೂ ನಿಮ್ಮನ್ನೆಲ್ಲ ಎದುರುಗೊಳ್ಳಲಿದ್ದಾರೆ.
ನೀವೆಲ್ಲ ಅಲ್ಲಿಗೆ ಬರಬೇಕು- ಇವರಿಬ್ಬರ ಬೆನ್ನು ತಟ್ಟಲು, ಕೈ ಕುಲುಕಲು, ನೆತ್ತಿ ಸವರಿ ಹರಸಲು. ಯಾಕೇಂದ್ರೆ…
ಆದಿನ, ಇವರಿಬ್ಬರೂ ಆಸಕ್ತ ಓದುಗರ ಸಂಗ್ರಹಕ್ಕೆ ಸೇರಿಸಲು, ತಮ್ಮ ಹೊಸ ಕೃತಿಗಳ ಪೊರೆ ಕಳಚುವ ಹಂಚಿಕೆಯಲ್ಲಿದ್ದಾರೆ…
ಅವರಿಬ್ಬರು ಯಾರ್‍ಯಾರೆಂಬ ಕುತೂಹಲವೆ?
“ತುಳಸಿಯಮ್ಮ” ಖ್ಯಾತಿಯ ತ್ರಿವೇಣಿ ಶ್ರೀನಿವಾಸರಾಯರು “ತುಳಸಿವನ”ದ ಘಮಲು ಹಬ್ಬಿಸುವ ಹಂಬಲ ಹೊತ್ತಿದ್ದಾರೆ.
“ಸುಪ್ತದೀಪ್ತಿ” ಕಾವ್ಯನಾಮದ ಜ್ಯೋತಿ ಮಹಾದೇವ್ ತನ್ನ “ಭಾವಬಿಂಬ”ಕ್ಕೆ ಕನ್ನಡಿ ಹಿಡಿಯಲಿದ್ದಾರೆ.
ಒಂದೇ ವೇದಿಕೆಯಲ್ಲಿ ಇಬ್ಬರು ಸಾಹಿತ್ಯ ಸೋದರಿಯರ ಕಲ್ಪನೆಯ ನೌಕೆಗಳು ಓದುಗಭಿಯಾನ ಹೊರಡಲಿವೆ..
ಅಂದು ಇನ್ನೂ ಯಾರ್‍ಯಾರಿರುತ್ತಾರೆ? ಆ ವಿವರಗಳಿಗೆ ನಿಮ್ಮ ಕೌತುಕದ ಮರಿ ಗರಿಗೆದರಿ ಕಾದಿರಲಿ.

‍ಲೇಖಕರು avadhi

June 23, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಮೃತಾ ಪ್ರೀತಮ್ ರ ‘ಪಿಂಜರ್’

ಅಮೃತಾ ಪ್ರೀತಮ್ ರ ‘ಪಿಂಜರ್’

ಪಿಂಜರ್ ಅಂದರೆ ಕನ್ನಡದಲ್ಲಿ ಪಂಜರ ಅಥವಾ ಮಾನವನ ಅಸ್ಥಿಪಂಜರ ಎಂದು ಹೇಳಬಹುದು. ಏನು ಈ ಕಾದಂಬರಿಯ ಹೆಸರು ಹೀಗಿದೆ? ಇದು ಸತ್ತವರ ಕತೆಯನ್ನು...

ಅಭಿನಂದನೆಗಳು ಎಚ್ಚೆಸ್ವಿ, ಇದು ನಿಮ್ಮ ಮ್ಯಾಗನಂ ಓಪಸ್!

ಅಭಿನಂದನೆಗಳು ಎಚ್ಚೆಸ್ವಿ, ಇದು ನಿಮ್ಮ ಮ್ಯಾಗನಂ ಓಪಸ್!

ಜಿ.ಎನ್.ರಂಗನಾಥರಾವ್ ಪ್ರಿಯ ಎಚ್ಚೆಸ್ವಿ,ನಿಮ್ಮ 'ಬುದ್ಧಚರಣ'ಮಹಾಕಾವ್ಯವನ್ನುಸಾವಧಾನದಿಂದ ಓದಿ ಸುಖಿಸುತ್ತಾ ಹೋದಂತೆ, "ಹುತ್ತಗಟ್ಟದೆ ಚಿತ್ತ...

ಕೂಡ್ಲಿ ಗುರುರಾಜ ಹೊಸ ಕೃತಿಯೊಂದಿಗೆ..

ಕೂಡ್ಲಿ ಗುರುರಾಜ ಹೊಸ ಕೃತಿಯೊಂದಿಗೆ..

ಕೂಡ್ಲಿ ಗುರುರಾಜ ಆತ್ಮೀಯ ಸ್ನೇಹಿತರೇ, ನಾನು ಬರೆದಿರುವ ಸುದ್ದಿ ಬರಹ ಮತ್ತು ವರದಿಗಾರಿಕೆ ಎಂಬ ಪಸ್ತಕ ಈಗ ಬಿಡುಗಡೆಗೆ ಸಿದ್ದವಾಗಿದೆ....

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This