ತೇಜಸ್ವಿ ಎಂಬ ವಿಸ್ಮಯ

tejaswi-papu (1)ತೇಜಸ್ವಿ ಎಂಬ ವಿಸ್ಮಯವನ್ನು ಬೊಗಸೆಯಲ್ಲಿ ಹಿಡಿದುಕೊಡುವ ಒಂದು ಪ್ರಯತ್ನ ಆರಂಭವಾಗಿದೆ. ವಿಸ್ಮಯ ಪ್ರತಿಷ್ಠಾನ ತೇಜಸ್ವಿ ಕುರಿತ ಎಲ್ಲವನ್ನೂ ಅಂದರೆ ಎಲ್ಲವನ್ನೂ ಒಂದೆಡೆ ಕಲೆ ಹಾಕಿ ಆಸಕ್ತರ ಮುಂದೆ ಇಡುವ ಕೆಲಸಕ್ಕೆ ಕೈ ಹಾಕಿದೆ. ಅದರ ಅಂಗವಾಗಿಯೇ ತೇಜಸ್ವಿ ವಿಸ್ಮಯ ಎಂಬ ವೆಬ್ ಸೈಟ್ ಆರಂಭವಾಗಿದೆ. ತೇಜಸ್ವಿ ಕುರಿತ ಚಿತ್ರಗಳು, ವಿಡಿಯೋ ಇದೆ. ಜೊತೆಗೆ ತೇಜಸ್ವಿ ಕುರಿತು ಬ್ಲಾಗ್, ವೆಬ್ ಸೈಟ್ ಗಳಲ್ಲಿ ಬಂದಿರುವ ಎಲ್ಲಾ ಲೇಖನಗಳನ್ನೂ ಒಟ್ಟು ಮಾಡಿದೆ.

ಮಕ್ಕಳಿಗೆ, ಯುವ ಜನಾಂಗಕ್ಕೆ ಸಂಶೋಧಕರತ್ತಲೂ ಈ ಪ್ರತಿಷ್ಠಾನ ಮುಖ ಮಾಡಿ ನಿಂತಿರುವುದು ತೇಜಸ್ವಿ ಎಂದಿಗೂ ನಿಲ್ಲುವ ನೀರಲ್ಲ, ಸದಾ ಹರಿಯುತ್ತಲೇ ಇರುವವರು ಎಂಬುದನ್ನು ನಿರೂಪಿಸಿದೆ. ಮೂಡಿಗೆರೆಯ ಮಡಿಲಿಂದ ಮೂಡಿರುವ ಈ ಯೋಜನೆ ತೇಜಸ್ವಿ ಅವರ ಸಾಹಿತ್ಯವನ್ನೂ ಮೀರಿ ಮುನ್ನಡೆಯಲು ನಿರ್ಧರಿಸಿರುವುದು ನಾಳೆಗೂ ತೇಜಸ್ವಿಯವರನ್ನು ಜೀವಂತವಾಗಿಡುವ ಪ್ರಯತ್ನ.

ಈ ಪ್ರಯತ್ನಕ್ಕೆ ‘ಅವಧಿ’ಯ ಶುಭ ಹಾರೈಕೆಗಳು.

tejaswi-kvpಚಿತ್ರಕೃಪೆ: ವಿಸ್ಮಯ ಪ್ರತಿಷ್ಠಾನ

ವಿಸ್ಮಯ ಪ್ರತಿಷ್ಠಾನದ ಯೋಜನೆ ಇಲ್ಲಿದೆ

ಶ್ರೀ ಪೂರ್ಣಚಂದ್ರ ತೇಜಸ್ವಿ ಅವರ ಬದುಕು-ಬರಹ ಹಾಗೂ ಚಿಂತನೆಗಳ ಸಾಕಾರಕ್ಕಾಗಿ ವಿಸ್ಮಯ ಪ್ರತಿಷ್ಠಾನವು ಹಲವಾರು ಕಾರ್ಯಕ್ರಮಗಳನ್ನು ಯೋಜಿಸಿದ್ದು, ಈ ಕುರಿತು ಹಾಗೂ ತೇಜಸ್ವಿಯವರ ಅಸಂಖ್ಯಾತ ಕೊಡುಗೆಗಳ ಮಾಹಿತಿಯನ್ನು ಆಸಕ್ತರಿಗೆ ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಮತ್ತು ಯುವ ಜನತೆಗೆ ತಲುಪಿಸಲು ವಿಸ್ಮಯ ಪ್ರತಿಷ್ಠಾನದ ವೆಬ್ ಸೈಟ್ ರೂಪುಗೊಂಡಿದೆ.

ಕಲಾ ಮಾಧ್ಯಮ, ಸಾಹಿತ್ಯ,ಗ್ರಾಮೀಣ ಆರ್ಥಿಕ ವ್ಯವಸ್ಥೆ, ಜಾಗತೀಕರಣ, ಸಹಜ ಕೃಷಿ, ಸಾವಯವ ಕೃಷಿ, ಉನ್ನತ ತಂತ್ರಜ್ಞಾನ, ಕನ್ನಡ ಭಾಷೆಯ ಬೆಳವಣಿಗೆ ಮತ್ತು ಪ್ರಚಲಿತ ವಿದ್ಯಮಾನಗಳ ಕುರಿತು ಚರ್ಚೆ, ಸಂವಾದಗಳಿಗೆ ಅವಕಾಶ. ಜಗತ್ತಿನ ಅದ್ಭುತ ರಮ್ಯಗಳು ಮತ್ತು ಬಾಹ್ಯಾಕಾಶದ ಕೌತುಕಗಳ ಅನಾವರಣ, ಜೈವಿಕ ಇತಿಹಾಸದ ಬಗ್ಗೆ ಸಮಗ್ರ ಚಿತ್ರಣ, ವನ್ಯಜೀವಿಗಳ ಜೀವನ ಕ್ರಮ, ಮಾಲಿನ್ಯ ನಿಯಂತ್ರಣ, ಜಲಚರಗಳು, ಕೀಟಗಳು, ಪಕ್ಷಿಸಂಕುಲದ ಮಾಹಿತಿ. ಕನ್ನಡದಲ್ಲಿ ತಂತ್ರಾಂಶ ಬಳಕೆ, ಜಾಗತೀಕರಣದ ಪ್ರಭಾವಗಳು, ಸಹಜಕೃಷಿ, ಇ-ಗವರ್ನೆಂಸ್, ಜಲಮೂಲಗಳ ರಕ್ಷಣೆ, ಔಷಧೀಯ ಸಸ್ಯಗಳು..ಇತ್ಯಾದಿ ಮಾಹಿತಿಗಳ ಆಕರವಾಗಿ ಈ ತಾಣ ಬೆಳೆಯಬೇಕಿದೆ.

ತೇಜಸ್ವಿಯವರ ವ್ಯಕ್ತಿಚಿತ್ರ, ಬದುಕು-ಬರಹ, ಆಸಕ್ತಿ, ಚಿಂತನೆ, ಫೋಟೋಗ್ರಾಫಿ, ಹೋರಾಟಗಳ ಮಾಹಿತಿಯ ಆಗರವಾಗಿ ಈ ತಾಣವನ್ನು ನಿರ್ಮಿಸುವ ಯೋಜನೆಯಿದೆ. ಆಸಕ್ತರು ಯಾವುದೇ ಪೂರ್ವಾಗ್ರಹವಿಲ್ಲದೆ ಕೈ ಜೋಡಿಸಬಹುದು

ಉದ್ದೇಶ ಹಾಗೂ ಆಶಯ:
ಪೂರ್ಣಚಂದ್ರ ತೇಜಸ್ಚಿಯವರ ಕಲೆ, ಸಾಹಿತ್ಯ, ವೈಚಾರಿಕ ದೃಷ್ಟಿಕೋನ, ಸರಳ ನೇರ ನಡವಳಿಕೆ , ಬಹುಮುಖಿ ಸಾಧನೆಯ ಜೀವನ ನಮ್ಮಗೆಲ್ಲ ಅನುಕರಣೀಯ ಹಾಗೂ ಆದರ್ಶಪ್ರಾಯವಾಗಿದೆ.ಅವರ ಚಿಂತನೆಗಳಿಗೆ ಸ್ಮಾರಕದ ರೂಪಕೊಟ್ಟು ಸೀಮತಗೊಳಿಸದೆ ಅವರು ನಡೆದ ಹಾದಿಯ ಮಾರ್ಗದಲ್ಲಿ ನಾವು ನಡೆಯುತ್ತಾ, ನಮ್ಮ ಮುಂದಿನ ಪೀಳಿಗೆಗೂ ತೇಜಸ್ವಿಯ ವಿಸ್ಮ್ಯಯ ಲೋಕದ ಪರಿಚಯ ಮಾಡಿಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ಮೂಡಿಗೆರೆಯ ಸಮೀಪದಲ್ಲಿ ಸುಸಜ್ಜಿತವಾದ ಜೈವಿಕ ಸಂಶೋಧನಾ ಕೇಂದ್ರ ಹಾಗೂ ಅಧ್ಯಯನ ಕೇಂದ್ರ ಸ್ಥಾಪನೆಗೆ ನೇಚರ್ ಕ್ಲಬ್ ಮುಂದಾಗಿದೆ. ಪರಿಸರ ಸಂವೇದಿ ಸಂಸ್ಥೆಯಾದ ನೇಚರ್ ಕ್ಲಬ್ ನಲ್ಲಿ ತೇಜಸ್ವಿಯವರು ತಮ್ಮ ಆಶಯಗಳು ಕಾರ್ಯ ರೂಪವಾಗುವ ಕನಸು ಹೊತ್ತು ಸಾಗಿದ್ದರು.ಅವರ ಆಶಯದಂತೆ ವಿವಿಧ ಸ್ತರದ ಸಮುದಾಯಕ್ಕೆ ವಿಜ್ಞಾನ, ತಂತ್ರಜ್ಞಾನ ಬೋಧನೆಯ ಜೊತೆಗೆ, ಪರಿಸರದ ಜೊತೆಗಿನ ಬಾಂಧವ್ಯ ಬೆಸೆಯುವ ಕಾಯಕವನ್ನು ಪೂರೈಸುವ ಹೊಣೆಯನ್ನು ವಿಸ್ಮಯಾ ಟ್ರಸ್ಟ್ ಹೊಂದಿದೆ.

ಆಶಯಗಳು:
ಮಕ್ಕಳಿಗಾಗಿ: ಜೀವ ಜಗತ್ತಿನ ಅದ್ಭುತ ರಮ್ಯಗಳನ್ನು,ಬಾಹ್ಯಾಕಾಶದ ಕೌತುಕಗಳನ್ನು ಪ್ರದರ್ಶಿಸುವ ಥಿಯೇಟರ್ ಗಳು.
ಯುವ ಸಮುದಾಯಕ್ಕೆ: ಕೀಟಗಳ ವಿಸ್ಮಯ ಲೋಕವನ್ನು ಅನಾವರಣಗೊಳಿಸುವ ಕೀಟ ಸಂಗ್ರಹಾಲಯ, ಸೀತೆ ಹೂಗಳ ಆರ್ಕಿಡೊರಿಯಂ, ಪಶ್ಚಿಮ ಘಟ್ಟದ ಕಾನನಗಳಲ್ಲಿ ಟ್ರೆಕ್ಕಿಂಗ್, ಡಿಜಿಟಲ್ ಗ್ರಂಥಾಲಯ, ಪರಿಸರ ಸಂರಕ್ಷಣೆಯ ಹೊಣೆ.ಕಲೆ ,ಸಾಹಿತ್ಯ ಕೃಷಿಗೆ ಪ್ರೋತ್ಸಾಹ.
ಸಂಶೋಧಕರಿಗೆ: ಕನ್ನಡ ತಂತ್ರಾಂಶ ಬಳಕೆ, ಜಾಗತೀಕರಣದ ಪ್ರಭಾವಗಳು, ಸಹಜ ಕೃಷಿ ಮುಂತಾದ ವಿಷಯಗಳ ಬಗ್ಗೆ ಚರ್ಚೆ ಹಾಗೂ ಸಂಶೋಧನೆ


‍ಲೇಖಕರು avadhi

April 5, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

2 ಪ್ರತಿಕ್ರಿಯೆಗಳು

 1. Berlinder

  I wis the project a great success. It was overdue. Such noble ideas should have stared along with the beginning of IT, even during the lifetime of Mr Tejasvi in the interest of the progress of Kannada and Karnataka as a whole.
  – Vijayasheela, Berlin, 11.09.09

  ಪ್ರತಿಕ್ರಿಯೆ
 2. arundati

  ತೇಜಸ್ವಿ ಎಂಬ ಅದ್ಭುತವನ್ನು, ಅಪರೂಪವನ್ನು, ವಿಸ್ಮಯವನ್ನು
  ಎಲ್ಲರೊಳಗಿನ ತೇಜಸ್ವಿಯನ್ನು, ತೆಜಸ್ವಿಯೋಳಗಿನ ಎಲ್ಲರನ್ನು
  ಬಿಂಬಿಸುವ, ತುಂಬಿಸುವ ಕಾರ್ಯ-ಕರ್ತೃತ್ವ , ಕ್ರಿಯಾಶೀಲತೆಗೆ
  ನನ್ನ ಮನಸು ಸೇರಿದೆ..

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: