ತೇಜಸ್ವಿ ಕಥನ: ತೇಜಸ್ವಿ ಇನ್ನಿಲ್ಲ..

ಪ್ರಸಾದ್ ರಕ್ಷಿದಿ

2007 ರ ಜನೆವರಿಯಲ್ಲಿ ಒಂದು ಕಲಾಶಿಬಿರ, ಸಂಸ್ಕೃತಿಶಿಬಿರ ಮತ್ತು ನಾಟಕೋತ್ಸವವನ್ನು ಜೊತೆಯಾಗಿ ಮಾಡಿದ್ದೆವು. ಕಲಾವಿದ ಮೋಹನಸೋನ ಅವರ ನೇತೃತ್ವದಲ್ಲಿ ಬೇರೆ ಬೇರೆ ಊರುಗಳಿಂದ ಬಂದ ಅನೇಕ ಯುವಕಲಾವಿದರು ನಮ್ಮೂರಿನ ಹಲವು ಆಸಕ್ತ ಮಕ್ಕಳನ್ನೂ ದೊಡ್ಡವರನ್ನೂ ಜೊತೆಗೂಡಿಸಿಕೊಂಡು ಊರತುಂಬೆಲ್ಲ ಚಿತ್ರಗಳನ್ನು ರಚಿಸುವುದರೊಂದಿಗೆ ತರಬೇತಿಯನ್ನೂ ನೀಡಿದ್ದರು. ಸಾವಯವ ಕೃಷಿ, ಪರಿಸರ ರಕ್ಷಣೆ, ನಕ್ಷತ್ರವೀಕ್ಷಣೆ, ಚಲನಚಿತ್ರ ಪ್ರದರ್ಶನಗಳಲ್ಲದೆ, ಮಕ್ಕಳಿಗೆ ಮತ್ತು ದೊಡ್ಡವರಿಗೆ ರಂಗತರಬೇತಿ, ನಾಟಕ ಪ್ರದರ್ಶನಗಳೂ ಇದ್ದವು. ಮುಕ್ತಾಯ ಸಮಾರಂಭಕ್ಕೆ ಅತಿಥಿಯಾಗಿ ಬರುವಂತೆ ತೇಜಸ್ವಿಯವರನ್ನು ಆಹ್ವಾನಿಸಲು ನಾವು ಕೆಲವರು ಮೂಡಿಗೆರೆಗೆ ಹೋದೆವು, ಜೊತೆಯಲ್ಲಿ ಖ್ಯಾತ ಮಕ್ಕಳ ರಂಗನಿದರ್ೇಶಕ ಮೂತರ್ಿ ದೇರಾಜೆಯವರೂ ಇದ್ದರು. ತೇಜಸ್ವಿಯವರು ಅನಾರೋಗ್ಯಕ್ಕೊಳಗಾಗಿ ಮೈಸೂರಿನಲ್ಲಿ ಚಿಕಿತ್ಸೆ ಪಡೆದು ಬಂದು ಕೆಲವು ದಿನಗಳಾಗಿದ್ದುವಷ್ಟೆ. ನಾವು ಹೋದಾಗ ಅವರಿನ್ನೂ ಜ್ವರದಿಂದ ನರಳುತ್ತಿದ್ದರು. ಮನೆಯಂಗಳಕ್ಕೆ ನಾವು ತಲಪಿದಾಗ ಹೊರಗೆ ಬಂದು ನಮ್ಮನ್ನು ನೋಡಿ ಯಾಕ್ರಯ್ಯ ಈಗ ಬಂದ್ರಿ ಬೇರೆ ಕೆಲ್ಸ ಇಲ್ಲ ನಿಮ್ಗೆ ಎಂದು ಗದರುತ್ತಾ ಮನೆಯೊಳಗೆ ಹೋದರು. ನಾನು ಮೂತರ್ಿಯವರಿಗೆ ನನ್ನನ್ನು ಹಿಂಬಾಲಿಸುವಂತೆ ಕಣ್ಣಿನಲ್ಲೇ ಸೂಚಿಸಿ ಅವರ ಹಿಂದೆಯೇ ಮನೆಯೊಳಕ್ಕೆ ಹೋದೆ. ಅವರು ಮೆಲ್ಲನೆ ಕುಚರ್ಿಯಲ್ಲಿ ಕುಳಿತು. ಅಲ್ಲಾ ಇದು ವೈರಲ್ ಫಿವರ್ ಕಣ್ರಯ್ಯ, ನಿಮ್ಗೆ ಅಂಟಿಕೊಂಡ್ರೆ ಏನ್ಮಾಡ್ತೀರಾ? ಸಿಕ್ಕಾಬಟ್ಟೆ ಮೈಕೈ ನೋವು ಬರುತ್ತೆ ಈಗ ನಾನು ಅನುಭವಿಸ್ತಾ ಇದ್ದೀನಿ, ಆಮೇಲ್ ನೀವೂ ಅನುಭವಿಸ್ಬೇಕಾ? ಎಂದರು!. ಹೀಗೇ ಮಾತು ಮುಂದುವರಿಯಿತು. ಮಾತು ಕಂಪ್ಯೂಟರ್ನತ್ತ ಹೊರಳಿತು. ನಾವಿನ್ನೂ ಕಂಪ್ಯೂಟರ್ನ ಸರಿಯಾಗಿ ಉಪಯೋಗ ಮಾಡೋದೇ ಕಲ್ತಿಲ್ಲ ಕಣ್ರಿ. ನೋಡಿ ಈ ಮಕ್ಕಳ ಕಥೆಗಳನ್ನೂ ಅಷ್ಟೂ ಚಿತ್ರ ಕಥೆಗಳನ್ನಾಗಿ ಮಾಡಿ ಪುಸ್ತಕ ತರ್ಬೋದು, ಹಾಗೇ ಎನಿಮೇಷನ್ನಲ್ಲಿ ಎಂತಾ ಕೆಲ್ಸ ಮಾಡ್ಬೋದು, ಇವೆಲ್ಲ ಮಾಡ್ಬೇಕು. ಇಂಗ್ಲಿಷ್ನಲ್ಲಿ ಏನೇನ್ ಮಾಡಿದ್ದಾರೆ ಆ ಥರಾ ನಾವೂ ಮಾಡದೇ ಹೋದ್ರೆ ಉಳಿಯೋಲ್ಲ ಕಣ್ರಿ… ಎಂದು ಮುಂದುವರೆದು…  ಕವಿಶೈಲದಲ್ಲೊಂದು ನಾಟ್ಕ ಮಾಡ್ರೀ ಎಂದರು. ಮಾತುಕಥೆ ಹೀಗೇ ಅರ್ಧಗಂಟೆ ಮುಂದುವರಿಯಿತು. ಜ್ವರ ಕಮ್ಮಿಯಾದ್ರೆ ಖಂಡಿತ ಕಾರ್ಯಕ್ರಮಕ್ಕೆ ಬರ್ತೀನಿ ಎಂದರು. ಅಲ್ಲಿಂದ ಹೊರಡುವಾಗ ಅಂತೂ ಒಟ್ಟೂ ನಿಮ್ಮ ಆರೋಗ್ಯ ಹೇಗಿದೆ ಸಾರ್ ಈಗ, ಪರವಾಗಿಲ್ವೆ?’ಎಂದೆ. ಹೋಗೋಕೊಂದು ಕಾರಣ ಬೇಕಲ್ಲಪ್ಪಾ ಏನೇನೋ ಬರ್ತಾ ಇದೆ ಎಂದರು ನಗುತ್ತಾ. ನಮ್ಮ ಕಾರ್ಯಕ್ರಮಗಳ ಮುಕ್ತಾಯದ ದಿನ ತೇಜಸ್ವಿಯವರ ಹಲವು ವರ್ಷಗಳ ಒಡನಾಡಿ ರಾಘವೇಂದ್ರರಿಗೆ ಫೋನ್ ಮಾಡಿ ನೆನಪಿಸಿದೆ. ಕಾರ್ಯಕ್ರಮಕ್ಕೆ ಅವರೂ ಬರುವವರಿದ್ದರು. ಆದರೆ ತೇಜಸ್ವಿಯವರ ಆರೋಗ್ಯ ಸ್ವಲ್ಪ ಮಾತ್ರವೇ ಸುಧಾರಿಸಿದೆಯೆಂದೂ ಅಲ್ಲದೆ ಅಂದು ಅವರ ಮಗಳು ಮನೆಗೆ ಬರುವವಳಿದ್ದಾಳೆಂದೂ ಆ ಕಾರಣದಿಂದ ಇಂದು ಬರಲಾಗುತ್ತಿಲ್ಲವೆಂದು ರಾಘವೇಂದ್ರ ತಿಳಿಸಿದರು. ತೇಜಸ್ವಿಯವರು ಹೋದರೆಂದು ನಮ್ಮ ತಂಡದ ನಟ ಸತೀಶ್ ಬೆಳ್ಳೇಕೆರೆ ಫೋನ್ ಮಾಡಿ ತಿಳಿಸಿದಾಗ ಟಿ.ವಿ. ನೋಡಲು ನಮ್ಮಲ್ಲಿ ಕರೆಂಟಿರಲಿಲ್ಲ. ಮಾರನೇದಿನ ಬೆಳಗ್ಗೆ ಸಕಲೇಶಪುರದಲ್ಲಿ ನಾವೊಂದಷ್ಟು ಜನರು ಹೊರಟು ಮೊದಲು ಮೂಡಿಗೆರೆಗೆ ನಂತರ ಕುಪ್ಪಳ್ಳಿಗೆ ಹೋಗುವ ಯೋಜನೆ ಹಾಕಿದೆವು.  ಎಲ್ಲರೂ ಹೊರಟು ಸಿದ್ಧರಾದಾಗ ಸಕಲೇಶಪುರದ ಗೆಳೆಯರೊಬ್ಬರು “ನಾವು ಹೋಗೋದು ಬೇಡ ತೇಜಸ್ವಿಯವರನ್ನು ಇದುವರೆಗೆ ಹೇಗೆ ನೋಡಿದ್ದೆವೋ ಆ ನೆನಪು ನಮ್ಮಲ್ಲಿ ಹಾಗೇ ಉಳೀಲಿ” ಎಂದರು. ಹೆಚ್ಚಿನವರೆಲ್ಲರ ಮನಸ್ಸಿನಲ್ಲೂ ಅದೇ ಭಾವನೆ ಇತ್ತು. ಪ್ರಯಾಣ ರದ್ದು ಮಾಡಿದೆವು. “ಕವಿಶೈಲದಲ್ಲಿ ಒಂದು ನಾಟಕ ಮಾಡಿ” ಎಂದಿದ್ದರು ತೇಜಸ್ವಿ. ನಮ್ಮ ನಾಟಕ ತಂಡ ಅಲ್ಲಿಗೆ ತಲಪುವ ಮೊದಲೇ ಕವಿಶೈಲದಲ್ಲಿ ಲೀನವಾಗಿ ಹೋಗಿದ್ದರು. ++++++ ಇದರೊಂದಿಗೆ ಒಂದೆರಡು ವಿಷಯಗಳನ್ನು ಇಲ್ಲಿ ನೆನಪಿಸಿಕೊಳ್ಳುವುದು ಉಚಿತವೆಂದು ನನ್ನ ಭಾವನೆ. 2009 ರಲ್ಲಿ ತೇಜಸ್ವಿಯವರ ನೆನಪಿನಲ್ಲಿ ಒಂದು ನಾಟಕೋತ್ಸವವನ್ನು ಮಾಡಿದೆವು. ನಾಲ್ಕುದಿನಗಳ ಕಾಲ ನಡೆದ ನಾಟಕೋತ್ಸವದಲ್ಲಿ,     ತೇಜಸ್ವಿಯವರ ‘ಪಾಕಕ್ರಾಂತಿ’ಯನ್ನು ರಂಗ ಅಳವಡಿಸಿ ಪ್ರದರ್ಶನವನ್ನು ನೀಡಿದ್ದೆವು. ನಾಲ್ಕು ದಿನಗಳ ಅಡಿಗೆ ಮತ್ತು ಊಟದ ವ್ಯವಸ್ಥೆಯನ್ನು ಬಿರಿಯಾನಿ ಕರಿಯಪ್ಪ ವಹಿಸಿಕೊಂಡಿದ್ದರು. ನಾಟಕೋತ್ಸವದ ಕೊನೆಯ ದಿನ ವೇದಿಕೆಯಲ್ಲಿ ಕರಿಯಪ್ಪನವರನ್ನು ಸನ್ಮಾನಿಸಲಾಯಿತು. ನಮ್ಮೂರಲ್ಲಿ ಕಟ್ಟುತ್ತಿರುವ ರಂಗಮಂದಿರ, ಗ್ರಂಥಾಲಯ, ವಾಚನಾಲಯ, ಮತ್ತು ಅತಿಥಿಗೃಹಗಳ ಸಂಕೀರ್ಣಕ್ಕೆ ಪೂರ್ಣಚಂದ್ರ ತೇಜಸ್ವಿ ರಂಗಮಂದಿರ ಸಂಕೀರ್ಣವೆಂದು ಹೆಸರಿಡಲಾಗಿದೆ.]]>

‍ಲೇಖಕರು G

April 5, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ತೇಜಸ್ವಿ ಜೀಪು

ತೇಜಸ್ವಿ ಜೀಪಿನಲ್ಲಿ ಸವಾರಿ ಚಿನ್ನಸ್ವಾಮಿ ವಡ್ಡಗೆರೆ  ಇದು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ಬಳಸುತ್ತಿದ್ದ ಜೀಪು. ಈಗ ಆ ಜೀಪು ತೇಜಸ್ವಿ...

ಅನಂತಮೂರ್ತಿಯ ತೇಜಸ್ವಿ

ಯು ಆರ್ ಅನಂತಮೂರ್ತಿ ತೇಜಸ್ವಿ, ಅವರ ಕಾಲೇಜು ದಿನಗಳಿಂದಲೂ ನನಗೆ ಪರಿಚಯ, ನಾನಾಗ ಶಿವಮೊಗ್ಗದಲ್ಲಿ ಮೇಷ್ಟ್ರು, ವಯಸ್ಸು ಇಪ್ಪತ್ತಮೂರೋ,...

7 ಪ್ರತಿಕ್ರಿಯೆಗಳು

 1. prasadraxidi

  mohan
  eradu dinagala hindaste rajeswari avara “nanna tejsvi” odi mugisidde, ivattu ee photo nodi manassu bhaaravayitu

  ಪ್ರತಿಕ್ರಿಯೆ
 2. c.a.indiramma.

  tejaswiyavarannu namma manadalli odanaadisuttiruv eee sangatigalige vandanegalu.

  ಪ್ರತಿಕ್ರಿಯೆ
 3. ಬೇಳೂರು ಸುದರ್ಶನ

  ಪ್ರಿಯ ಬ್ಲಾಗಿಗರೆ,
  ಕಣಜ ಜಾಲತಾಣ (www.kanaja.in) ಕರ್ನಾಟಕ ಜ್ಞಾನ ಆಯೋಗದ ಮಹತ್ವದ ಕನ್ನಡ ಅಂತರಜಾಲ ಜ್ಞಾನಕೋಶ ಯೋಜನೆ. ಈ ಯೋಜನೆಯು ಕನ್ನಡಿಗರಿಗಾಗಿಯೇ ರೂಪುಗೊಳ್ಳುತ್ತಿರುವ ಜಾಲತಾಣ. ಈ ಜಾಲತಾಣದ ಬಗ್ಗೆ ನಿಮ್ಮ ಬ್ಲಾಗಿನಲ್ಲೂ ಸೂಕ್ತ ಪ್ರಚಾರ ಸಿಗಬೇಕೆಂಬುದು ನಮ್ಮ ವಿನಂತಿ. ದಯಮಾಡಿ (http://kanaja.in/?page_id=10877) ಈ ಕೊಂಡಿಯಲ್ಲಿ ಇರುವ `ಕಣಜ’ ಬ್ಯಾನರುಗಳನ್ನು ನಿಮ್ಮ ಬ್ಲಾಗಿನಲ್ಲಿ ಪ್ರಕಟಿಸಬೇಕೆಂದು ಕೋರಿಕೆ. ಇಲ್ಲಿ ಕೊಟ್ಟಿರುವ ಚಿತ್ರದ ಕೆಳಗೆ ಇರುವ ಸಂಕೇತ ವಾಕ್ಯವನ್ನು ನಿಮ್ಮ ಬ್ಲಾಗಿನ ಹೊಸ ಬ್ಲಾಗ್ ಪ್ರಕಟಣೆ ಜಾಗದಲ್ಲಿ ಪೇಸ್ಟ್ ಮಾಡಿದರೆ ಕಣಜದ ಬ್ಯಾನರ್ ನಿಮ್ಮಲ್ಲಿ ಪ್ರಕಟವಾಗುತ್ತದೆ. ಎಂಬೆಡ್ ಮಾಡುವ ಬಗೆ ಹೇಗೆಂದು ತಿಳಿಯಬೇಕಿದ್ದರೆ ದಯಮಾಡಿ ([email protected]) ಈ ಮೈಲಿಗೆ ಕಾಗದ ಬರೆಯಿರಿ.
  ಕಣಜ ಜಾಲತಾಣದಲ್ಲಿ ನಿಮ್ಮ ಬ್ಲಾಗುಗಳನ್ನೂ ಪಟ್ಟೀಕರಿಸಲಾಗಿದೆ, ಗಮನಿಸಿ. ಬ್ಲಾಗ್ ಲೋಕದ ಮಾಹಿತಿ ಲೇಖನಗಳು ಕನ್ನಡಕ್ಕೆ ಕೊಡುಗೆ ನೀಡುತ್ತಿರುವುದನ್ನು ಸ್ವಾಗತಿಸುತ್ತ `ಕಣಜ’ವನ್ನೂ ನಿಮ್ಮ ಸಹ-ಬ್ಲಾಗ್ ಎಂದೇ ಪರಿಗಣಿಸಿ ಬೆಂಬಲ ನೀಡಿ, ಪ್ರಚಾರ ನೀಡಿ ಎಂದು ವಿನಂತಿಸಿಕೊಳ್ಳುವೆವು.
  ತಮ್ಮ ವಿಶ್ವಾಸಿ
  ಬೇಳೂರು ಸುದರ್ಶನ
  ಸಲಹಾ ಸಮನ್ವಯಕಾರ, ಕಣಜ ಯೋಜನೆ
  (ಕರ್ನಾಟಕ ಜ್ಞಾನ ಆಯೋಗದ ಯೋಜನೆ)
  ಈ ಮೈಲ್: [email protected]
  http://www.kanaja.in
  ವಿಳಾಸ: ಇಂಟರ್ ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ ಬೆಂಗಳೂರು
  ನಂ 26/ಸಿ, ಎಲೆಕ್ಟ್ರಾನಿಕ್ಸ್ ಸಿಟಿ, ಹೊಸೂರು ರಸ್ತೆ
  ಬೆಂಗಳೂರು – 560100
  ದೂರವಾಣಿ: ೯೭೪೧೯೭೬೭೮೯

  ಪ್ರತಿಕ್ರಿಯೆ
 4. ವೀರೇಂದ್ರ

  ಪ್ರಸಾದ್ ರಕ್ಷಿದಿಯವರ “ತೇಜಸ್ವಿ ಕಥನ”ವನ್ನು ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಪ್ರಸಾರಾಂಗವು ತನ್ನ ಮಂಟಪ ಮಾಲೆಯಲ್ಲಿ ಪ್ರಕಟಿಸಿದೆ. ಪುಸ್ತಕದ ಹೆಸರು “ನಮ್ಮ ನಡುವಿನ ತೇಜಸ್ವಿ”, ಬೆಲೆ: ರೂ. ಇಪ್ಪತ್ತು. ಈ ಮಾಹಿತಿ ಆಸಕ್ತ ಪುಸ್ತಕ ಪ್ರೇಮಿಗಳಿಗೆ………..

  ಪ್ರತಿಕ್ರಿಯೆ
 5. Dr.B.R.Satyanarayana

  ಅವಧಿಯಲ್ಲಿ ರಕ್ಷಿದಿ ಅವರ ತೇಜಸ್ವಿ ಕಥನ ಚೆನ್ನಾಗಿ ಮೂಡಿ ಬಂತು. ಎರಡನೆಯ ಬಾರಿಗಾದರೂ ತುಂಬಾ ಚೆನ್ನಾಗಿ ಓದಿಸಿಕೊಂಡು ಹೋಯಿತು. ತೇಜಸ್ವಿ ಹೆಸರಿನ ಮಾಂತ್ರಿಕತೆಯೇ ಅಂತಹದ್ದು! ನಿರೂಪಣೆಯ ದೃಷ್ಟಿಯಿಂದಲೂ, ಕಂತುಗಳ ದೃಷ್ಟಿಯಿಂದಲೂ ಸಂಕ್ಷಿಪ್ತತೆಯ ಸೊಗಸು ಬರಹಕ್ಕಿತ್ತು. ನಿಮಗೂ ಲೇಖಕರಿಬ್ಬರಿಗೂ ಅಭಿನಂದನೆಗಳು.

  ಪ್ರತಿಕ್ರಿಯೆ
 6. chandru

  naanu tejaswiyavara bagge kelidde but naanu avara bagge tiliyuva modale avaru nammannella bittu hogiddaru avaru hegiddaru ennuvudakke neevu e pustaka namma kalpaneyanu innastu uttamavaagiside.
  thank u veru much respected sir

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ಬೇಳೂರು ಸುದರ್ಶನCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: