
ನವೀನ್ ಕುಮಾರ್
ಎರಡು ದಿನಗಳು ಮೂಡಿಗೆರೆಯ ಕೊಟ್ಟಿಗೆಹಾರದಲ್ಲಿರುವ ಕೆ ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಕೋಶ ಓದು ದೇಶ ನೋಡು ಬಳಗದಿಂದ ತೇಜಸ್ವಿ ಓದು ಅಭಿಯಾನದ ಸಮಾರೋಪ ಸಮಾರಂಭ ನಿಜವಾದ ಅರ್ಥದಲ್ಲಿ “ತೇಜಸ್ವಿ ಜೊತೆಗೆ ಯುವಜನರ ಸಾಂಸ್ಕೃತಿಕ ಪಯಣ”ವೇ ಆಗಿತ್ತು.
ಒಬ್ಬ ಲೇಖಕನ ಹಲವು ಕೃತಿಗಳನ್ನು ಆಯ್ಕೆ ಮಾಡಿಕೊಂಡು ಅವುಗಳನ್ನು ಓದಿ, ಅವುಗಳ ವಿವಿಧ ಆಯಾಮಗಳನ್ನು ಚರ್ಚಿಸುವ ಈ ಪ್ರಯೋಗವನ್ನು ಓದು ಅಭಿಯಾನ ಮೊದಲಿಂದಲೂ ನಡೆಸಿಕೊಂಡು ಬಂದಿದೆ. ಇದು ಒಂದು ಅಭಿಯಾನದಿಂದ ಮತ್ತೊಂದು ಅಭಿಯಾನಕ್ಕೆ ಸಾಕಷ್ಟು ಉತ್ತಮಗೊಳ್ಳುತ್ತ… ಹೊಸಬರನ್ನು ಒಳಗೊಳ್ಳುತ್ತಾ ಸಾಗುತ್ತಿದೆ.
ಎರಡು ದಿನಗಳು ವೈಯಕ್ತಿಕವಾಗಿಯಂತೂ ಸಾರ್ಥಕವಾಗಿದೆ. ಪುಸ್ತಕಗಳ ಹೊರಗೂ ತೇಜಸ್ವಿಯವರ ಒಡನಾಡಿಗಳ ಜೀವಂತ ಅನುಭವಗಳು ನಮ್ಮ ತಿಳುಚಳಿಕೆಯನ್ನು ವಿಸ್ತರಿಸಿದೆ. #ತೇಜಸ್ವಿಓದುಅಭಿಯಾನ #ಕೋಶಓದುದೇಶನೋಡು #ಅರಿವಿನಪಯಣ













0 ಪ್ರತಿಕ್ರಿಯೆಗಳು