ತೊಕ್ ಮತ್ತು ಸೂಪರ್ ಬರ್ಗರ್

ಅವಧಿಯಲ್ಲಿ ಪ್ರತಿ ವಾರ ವೆಂಕಿ ಬರ್ಗರ್ ಟೇಸ್ಟ್ ನೋಡಿದ್ದೀರಿ. ಆದರೆ ಮತ್ತೆರಡು ಹೊಸ ಬಗೆಯ ಬರ್ಗರ್ ಬಗ್ಗೆ ನಮಗೆ ಇತ್ತೀಚೆಗೆ ಗೊತ್ತಾಯಿತು. ಅಮೆರಿಕೆಯಲ್ಲಿರುವ ಮತ್ತೋರ್ವ ಕನ್ನಡಿಗ ನಾಗ ಐತಾಳ ಅವರು ತಮ್ಮ “ಅಮೆರಿಕನ್ನಡಿಗನೊಬ್ಬನ ದಿನಚರಿಯಿಂದ” (ಪ್ರಕಾಶಕರು: ವಸಂತ ಪ್ರಕಾಸನ, ನಂ. ೧೦, ತುಳಸಿವನಂ, ಬೆಂಗಳೂರು – ೫೬೦೦೫೩) ಕೃತಿಯಲ್ಲಿ ಅಮೆರಿಕೆಯಲ್ಲಿನ ತಮ್ಮ ಅಪರೂಪವೆನ್ನಿಸುವ ಅನುಭವಗಳ ಬಗ್ಗೆ ಬರೆದುಕೊಂಡಿದ್ದಾರೆ. ಅದರಲ್ಲಿ ಈ ವಿಭಿನ್ನ ಬಗೆ ಬರ್ಗರ್ ವಿಚಾರವೂ ಒಂದು. ರುಚಿ ನೋಡಿ.

*

ತ್ತೀಚೆಗೆ ನಮಗೆ ಖಾರ ತಿನ್ನುವುದು ತುಂಬ ಕಷ್ಟವಾಗುತ್ತದೆ. ಆದರೆ ಭಾರತದಿಂದ ಬಂದ ಹೊಸದರಲ್ಲಿ ಬಹಳಷ್ಟು ಖಾರ ತಿನ್ನುತ್ತಿದ್ದೆವು. ಮೊದಲಿಗೆ ಸ್ಯಾಂಡ್ ವಿಚ್ ಅಂದರೆ ತುಂಬ ಇಷ್ಟವಾಗುತ್ತಿತ್ತು. ಆದರೆ ಈಗ ಅದನ್ನು ನೆನೆಸಿಕೊಂಡರೇ ವಾಕರಿಕೆ ಬರುವಂತಾಗುತ್ತದೆ. ನನ್ನವಳು ಬೇರೆ ಬೇರೆ ರುಚಿಯ ಸ್ಯಾಂಡ್ ವಿಚ್ ಮಾಡಲು ತುಂಬ ಪ್ರಯತ್ನಪಡುತ್ತಿದ್ದಳು. ಒಮ್ಮೆ ಮನೆಯಲ್ಲಿ ಅರವಿಂದ ಆಂಧ್ರದ “ತೊಕ್ಕು” ಲೇಪಿಸಿ, ಎರಡು ತುಣುಕು ಚೀಸ್ ಮತ್ತು ಕೆಲವು ತರಕಾರಿ ತುಣುಕು ಸೇರಿಸಿ ಒಂದು ಸ್ಯಾಂಡ್ ವಿಚ್ ಮಾಡಿಕೊಂಡ. ಅದಕ್ಕೆ ಆಗ “ತೊಕ್ ಬರ್ಗರ್” ಎಂಬ ನಾಮಕರಣ ಮಾಡಿದ, ಇಲ್ಲಿಯ “ಹ್ಯಾಮ್ ಬರ್ಗರ್” ಇದ್ದಂತೆ. ಆದರೆ ಆ ತೊಕ್ ಬರ್ಗರ್ ಮಾತ್ರ ತುಂಬ ಖಾರವಾಗಿ ಕೊನೆಯಲ್ಲಿ ಅದಕ್ಕೆ ಜಾಮ್, ದ್ರಾಕ್ಷಿ, ಪೀನಟ್, ಬೆಣ್ಣೆ, ಜೇನುತುಪ್ಪ, ವಿನೆಗರ್ ನಲ್ಲಿ ಸೋಸಿಟ್ಟ ಸೌತೆಕಾಯಿ ತುಣುಕುಗಳು, ಕೊನೆಗೆ ನಮ್ಮ ಮಲೆನಾಡಿನ ಉಪ್ಪಿನಕಾಯಿ ಎಲ್ಲವನ್ನೂ ಸೇರಿಸಿ “ಸೂಪರ್ ಬರ್ಗರ್” ಎಂದು ಕರೆದುಕೊಂಡು ಒಂದು ವಿಶೇಷ ಸ್ಯಾಂಡ್ ವಿಚ್ ಮಾಡಿಕೊಂಡು ತಿಂದ. ಅದು ತುಂಬ ರುಚಿಯಾಗಿತ್ತಂತೆ.

boo.gifಅದನ್ನು ನೋಡಿ, ನಾನೂ ನನ್ನವಳೂ ಇಂತಹ ತಿಂಡಿ ತಿನ್ನುವವರೂ ಇದ್ದಾರೆಯೇ ಎಂದು ಸೋಜಿಗಪಟ್ಟೆವು. ಅರವಿಂದನು ಮುಂದೆ ಬಹಳ ದಿನಗಳವರೆಗೂ ಆ ಸೂಪರ್ ಬರ್ಗರ್ ಮಾಡಿಕೊಂಡು ತಿನ್ನುತ್ತಿದ್ದ. “ಲೋಕೋ ಭಿನ್ನರುಚಿ!” ಆದರೆ ನನ್ನವಳು ಇದರಿಂದ ರುಚಿ ಬದಲಾಯಿಸುವಂತಹ ಸ್ಯಾಂಡ್ ವಿಚ್ ಮಾಡಲು ಕಲಿತು, ಒಮ್ಮೊಮ್ಮೆ ನಮ್ಮ ಅರವಿಂದನ “ತೊಕ್ ಬರ್ಗರ”ನ್ನೂ ನನ್ನ ಲಂಚ್ ಗೆ ಒದಗಿಸುತ್ತಿದ್ದಳು!

‍ಲೇಖಕರು avadhi

August 26, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಲಂಕೇಶ್ Interviews ಕುವೆಂಪು

ಲಂಕೇಶ್ Interviews ಕುವೆಂಪು

1974 ರಲ್ಲಿ ಲಂಕೇಶ್ ರ ಸಂಪಾದಕತ್ವದಲ್ಲಿ ಪ್ರಕಟವಾದ `ಪಾಂಚಾಲಿ' ಸಂಚಿಕೆಯನ್ನು ಕನ್ನಡ ಸಾಹಿತ್ಯದ ಹಲವು ಮಹತ್ವದ ಬರವಣಿಗೆಗಳ ಕಣಜ ಎನ್ನಬಹುದು....

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This