ತ್ರೈಮಾಶಿಕ ಲೆಕ್ಕ

-ರಾಘವೇಂದ್ರ ಜೋಶಿ

ಎಷ್ಟೊಂದು ಕೋಳಿಗಳು
ಕೂಗುತ್ತವೆ
ಒಂದೇ ಒಂದು ಸೂರ್ಯನ
ಆಗಮನ ಸಾರಲು

ಎಷ್ಟೊಂದು ಮರಗಳು
ಉರುಳುತ್ತವೆ
ಒಂದೇ ಒಂದು
ಕವನ ಬರೆಯಲು

ಎಷ್ಟೊಂದು ಕಣ್ಣುಗಳು
ಹರಿದಾಡುತ್ತವೆ
ಒಂದೇ ಒಂದು
ಮುಗ್ಧೆ ತತ್ತರಿಸಲು

ಎಷ್ಟೊಂದು ಕೈಗಳು
ಬೇಡುತ್ತವೆ
ಒಂದೇ ಒಂದು
ಪರೀಕ್ಷೆ ಪಾಸಾಗಲು

ಎಷ್ಟೊಂದು ಕಾಲುಗಳು
ನೆಲಕ್ಕೊರಗುತ್ತವೆ
ಒಂದೇ ಒಂದು
ಗಮ್ಯ ತಲುಪಲು

ಎಷ್ಟೊಂದು ನಾಲಿಗೆಗಳು
ಜೊಲ್ಲಿಸುತ್ತವೆ
ಒಂದೇ ಒಂದು
ಕ್ಲಿಪ್ಪಿಂಗ್ ನೋಡಲು

ಎಷ್ಟೊಂದು ಸೀಶೆಗಳು
ಬರಿದಾಗುತ್ತವೆ
ಒಂದೇ ಒಂದು
ನೋವ ನೀಗಿಸಲು

ಎಷ್ಟೊಂದು ವೀರ್ಯಾಣು
ಕದನಕ್ಕಿಳಿಯುತ್ತವೆ
ಒಂದೇ ಒಂದು
ಕಂದನ ಸೃಷ್ಟಿಸಲು

ಎಷ್ಟೊಂದು?
ಎಷ್ಟೊಂದು?
ಚಿಕ್ಕಂದಿನಲ್ಲಿ ಅಕ್ಕ
ಹೇಳುತ್ತಿದ್ದ
ತ್ರೈಮಾಶಿಕ ಲೆಕ್ಕದ ನೆನಪು:
ಇಷ್ಟಕ್ಕೆ ಅಷ್ಟಾದರೆ
ಅಷ್ಟಕ್ಕೆ ಎಷ್ಟು??

‍ಲೇಖಕರು avadhi

May 15, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಮ್ಮನಾಗುವುದೆಷ್ಟೊಂದು ಕಷ್ಟ!

ಅಮ್ಮನಾಗುವುದೆಷ್ಟೊಂದು ಕಷ್ಟ!

ರೂಪ ಹಾಸನ ಅದೋ ಕಿವಿಗೊಟ್ಟು ಕೇಳುದೂರದಲ್ಲೆಲ್ಲೋ ಕಂದ'ಅಮ್ಮಾ' ಎಂದು ಆರ್ತವಾಗಿಚೀರುತಿರುವ ಸಂಕಟದ ದನಿ… ತೆರೆತೆರೆಯಾಗಿ...

ಹೋಗೋದ್ ಹ್ಯಾಂಗ ಟಾವೊ ಗುಡಿಯೊಳಗೆ..

ಹೋಗೋದ್ ಹ್ಯಾಂಗ ಟಾವೊ ಗುಡಿಯೊಳಗೆ..

ಮೂಲ: ಕೆ ಸಚ್ಚಿದಾನಂದನ್ಕನ್ನಡಕ್ಕೆ: ರಾಜು ಎಂ ಎಸ್ ಹೋಗೋದ್ ಹ್ಯಾಂಗ ಟಾವೊ ಗುಡಿಯೊಳಗೆ ಬಾಗ್ಲ ಚೀಲ್ಕ ಹಾಕ್ಬ್ಯಾಡ ಮುಂಜಾನಿ ಕಾಣಿವ್ಯಾಗ,...

ಅವಳು

ಅವಳು

ಸತ್ಯಮಂಗಲ ಮಹಾದೇವ ಅವಳುಈಗ ಹೆಚ್ಚು ಮೌನಿನೆಲಕೆ ನೀರು ಹಬ್ಬಿದಂತೆ ಅವಳುಈಗ ಮಾತಿನ ಕಸುವನ್ನುದುಡಿಯುವ ಕೈಗಳಿಗೆದಾಟಿಸುತ್ತಿರುವ ಅಭಿಯಂತರೆ...

16 ಪ್ರತಿಕ್ರಿಯೆಗಳು

 1. Yatheesh G S

  Jishiji……..Nimma kavana thumbaa chennagide…..Nimma sahityada kadegina olavu heege munduvareyali…ollolle kavanagalannu innu hechchu bareyari…..
  Yaheesh

  ಪ್ರತಿಕ್ರಿಯೆ
 2. Yatheesh

  Joshiji, Nimma kavana thumbaa chennagide….heege ollolle kavanagalannu bareyuttiri……Nimma sahitya krushi swalpa vega padedare chennagiruttade ennuvudu nanna bhavane……
  Yatheesh

  ಪ್ರತಿಕ್ರಿಯೆ
 3. Mallikarjuna Barker

  Estondu jeevagalu kayuitteve
  ninna maduve madalu
  tirise bedu adondu aseyanu
  adastu bgaane

  ಪ್ರತಿಕ್ರಿಯೆ
 4. siddu devaramani

  ನಿಮ್ಮ ಕವನ ನನ್ನ ಎದೆಯ ಕವಾಟಿನಲ್ಲಿಟ್ಟು ಕೊಂಡಿದ್ದೇನೆ. ಕವನ ಮುಗಿಸುವ ನಿಮ್ಮ ಜಾಣ್ಮೆ ನನಗಿಷ್ಟ ಆತೂ..

  ಪ್ರತಿಕ್ರಿಯೆ
 5. RJ

  ವ್ಹಾವ್..ಇಷ್ಟಪಟ್ಟು ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದ.
  🙂
  -RJ

  ಪ್ರತಿಕ್ರಿಯೆ
 6. sunaath

  ಎಷ್ಟೊಂದು ಪದಗಳು ಬೇಕು
  ಒಂದು ಚೆಲುವಾದ ಕವನದ ಸೃಷ್ಟಿಗೆ!

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: