ತ-ಗಾದೆ ನೋ ಟೀಸು…

-ಸೂತ್ರಧಾರ ರಾಮಯ್ಯ

ಮಂತ್ರಿಗಿರಿ ಕೊಟ್ಟೆಯೋ “ನೀ ಹೇಳಿದಂಗೆ” ; ಕೊಡಲಿಲ್ಲವೋ “ಏಳು ದಂಗೆ”
ಕಮಲ ಕೀಳೋಕೆ ಹೋಗಿ; ಕೆಸರಲ್ಲಿ ಸಿಕ್ಕಿಕೊಂಡರಂತೆ!
ಭಿನ್ನಮತ ಬಹುಮತದ ಶತ್ರು ;ಪಕ್ಷಾಂತರಿ ಜನತೆಯ ಶತ್ರು.
ಕಮಲಕ್ಕನ ಆಪರೇಶನ್ ಅಂದ್ರೆ; ಕೈ ಯಾಕೋ ಮುಚ್ಚಿಕೊಂಡು ಕೂತ್ರಂತೆ,
(ಕವನ ಬರೀತಾ) ಯಾರೋ ಅಳುತ್ತಿದ್ದಾರೆ..,ಕೋಯಿ ರೋ ರಹಾ ಹೈ! ಅಂತ ವಾಜಪೇಯಿ ಅಂದ್ರೆ ; ಅದು  ನಾನಲ್ಲ ಅಂದರಂತೆ ಸೀಯಮ್ಮು .
ಗುಣಶೀಲ ಹೈ ಕಮಾಂಡ್ ಅಂದ್ರೆ ; ಹಣಚೀಲ “ಐ  ಕಮ್ಯಾಂಡ್ ” ಅಂದನಂತೆ.
ರಾಜಕಾರಣೀನ ‘ಅನರ್ಹ’ ಅನ್ನೋಕೆ; ಡಿಸ್ಕ್ವಾಲಿಫಿಕೇಶನ್ ಆಕ್ಟ್ ಹುಡುಕಾಡಿದ್ರಂತೆ!
ಮ್ಯಾಡರ್ನ್ ಭಾರತದಲ್ಲಿ ಕುರ್ಚಿ ಏರಿದವ ಕೌರವ ; ಪಟ್ಟ ಕಳಕೊಂಡವ ಪಾಂಡವ.
ಧನತಂತ್ರ ಜನತಂತ್ರನ ಕೆಡಿಸ್ತು ;ದುಡ್ಡಿನವರ ಧಿಮಾಕ್ ಕ್ರಸಿ ಡೆಮಾಕ್ ಕ್ರಸಿ  ಕೆಡಿಸ್ತು.
ಪಾಪ.., ನಾಯಕರ ಪಾಡು!
ಪಕ್ಷ ಪರದಾಡಲಿ, ಜನತೆ ಜರೆದಾಡಲಿ ,ನಿನ್ನ ನೆಮ್ಮದಿಗೆ ಭಂಗವಿಲ್ಲ. ಎಮ್ಮೆಲ್ಯೇ ನಿನಗೆ ಸಾಟಿಯಿಲ್ಲ.
(ಲಾಸ್ಟ್) ರೆಸಾರ್ಟ್’ ನಿಂದ ಘನ ಕೋರ್ಟವರೆಗೆ ನೀ
ಅಳುಕದೆ ಮುಂದೇ ಸಾಗುವೆ! ಅರೆ ಹೊಯ್ ಅರೆ ಹೊಯ್!
 

‍ಲೇಖಕರು avadhi

October 24, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This