ಥೂ ಪೋಲಿ..!

ಸ್ತನ ಕಂಪನ!!! ಮೋಟುಗೋಡೆಯಾಚೆ ಇಣುಕಿ.. ಜಗತ್ತಿನ ಜನಕ್ಕೆ ಹೆಂಗೆಗೆಲ್ಲ ಆಗಿ ಬಿಡತ್ತಪಾ ಅಂದ್ರೆ, ಅಂದ್ರಿಂದಾಗಿ ಮತ್ತೆ ಇನ್ ಹೆಂಗೆಗೋ ಆಗೋಗತ್ತೆ!. ಮೊನ್ ಮೊನ್ನೆ, ಇರಾನಿನ ಧಾರ್ಮಿಕ ಮುಖಂಡನೊಬ್ಬನಿಗೆ, ಬೆಳಗ್ಗೆ ಏಳುತ್ತಲೇ ಹೊಸದೊಂದು ಜ್ಞಾನೋದಯವಾಗಿ ಬಿಟ್ಟಿತು. ಜಗತ್ತಿನಲ್ಲಾಗುವ ಭೂಕಂಪಗಳಿಗೆ, ಎದೆಗಾರಿಕೆ ತೋರಿಸಿಕೊಂಡು ಓಡಾಡುವ ಹೆಂಗಳೆಯರೇ ಕಾರಣರಂತೆ ಎಂಬೊಂದು ಆಘಾತಕಾರೀ ಹೇಳಿಕೆ ಕೊಟ್ಟುಬಿಟ್ಟ. ಇಂತಹ “ಅಧಾರ್ಮಿಕ” ನಡವಳಿಕೆಯಿಂದಾಗಿಯೇ ಭೂಮಿಯಲ್ಲಿ ಭೂಕಂಪನಗಳು ಸಂಭವಿಸುತ್ತಿದೆ ಅನ್ನೋದು ಈ ಪುಣ್ಯಾತ್ಮನ ಕಟ್ಟಾ ನಂಬಿಕೆ!. ಧರ್ಮಕ್ಕೆ ಕೂಡಲೇ ಶರಣಾಗಿ, ಸರಿಯಾದ ವಸ್ತ್ರ ಸಂಹಿತೆ ಪಾಲಿಸದಿದ್ದರೆ, ಈ ಅನಾಹುತಗಳನ್ನ ತಪ್ಪಿಸೋಕೆ ಸಾಧ್ಯವೇ ಇಲ್ಲವಂತೆ. ಆತನೇನೋ ಈ ಮಾತುಗಳನ್ನಾಡಿ ಸುಮ್ಮನಾಗಿಬಿಟ್ಟ. ಆದರೆ ಈತನ ಹೇಳಿಕೆಗಳಿಂದ ರೊಚ್ಚಿಗೆದ್ದ ಹೆಂಗಳೆಯರು, ಆತನ ವಿರುದ್ದ ಹೋರಾಟಕ್ಕಿಳಿದರು! ವಿಜ್ಞಾನಕ್ಕೇ ಸವಾಲೆಸೆವ ಮಾತಾಡಿರೋ ಧಾರ್ಮಿಕ ಮುಖಂಡನ ಅಜ್ಞಾನಕ್ಕೆ ಧಿಕ್ಕಾರ ಅಂದ ಇವರುಗಳು, ಸ್ತನ ಕಂಪನ- boob equake- ಆಂದೋಲನ ಮಾಡಿಬಿಟ್ಟರು! ಯಥಾಸಾಧ್ಯ ಎದೆಗಾರಿಕೆ ಪ್ರದರ್ಶಿಸೋ ಬಟ್ಟೆ ತೊಟ್ಟುಕೊಂಡು ಓಡಾಡಿ ತೋರಿಸುತ್ತೇವೆ, ಭೂಕಂಪ ಆಗ್ಲಿ ನೋಡೋಣ ಅಂತ ಸವಾಲು ಹಾಕಿದ್ರು. ಜಾಥಾ ಗೀಥಾ ಎಲ್ಲ ಮಾಡಿ, ಯೂ ಟ್ಯೂಬಿಗೆ ವೀಡಿಯೋ ಹಾಕಿ ಜೈ ಅಂದ್ರು. ಮೊನ್ನೆ ಇಪ್ಪತ್ತಾರಂದು ಮಾಡಿದ ವಿಶ್ವವ್ಯಾಪೀ ಸ್ತನಕಂಪನದ ಫಲಿತಾಂಶ ಹೊರಬಿದ್ದಿದ್ದು, ಎದೆ ಪ್ರದರ್ಶನದಿಂದ ಎಲ್ಲೂ ಭೂಕಂಪ ಆಗಿಲ್ಲ ಅಂತ ಸಂಘಟಕಿಯೊಬ್ಬಳು ಆಧಾರ ಸಮೇತ ಹೇಳಿಕೊಂಡಿದ್ದಾಳೆ. ಅಲ್ಲಿ ಯಾರೋ ಚಂದದ ಕಮೆಂಟೂ ಬರೆದಿದ್ದಾರೆ, I do believe breasts doesn’t cause earthquakes — in fact, I think it can feed and nourish people (e.g: haiti) ಅಂತ! ಇರ್ಲಿ, ಆವತ್ತು ಭೂಕಂಪ ಆಗಿರ್ಲಿಲ್ಲ ನಿಜ, ಆದ್ರೆ ಹುಡುಗೀರ ಸಡನ್ನಾದ ಎದೆಗಾರಿಕೆಯಿಂದಾಗಿ ಎಷ್ಟು ಜನರೊಳಗೆ ಕಂಪನವಾಗಿದೆ ಅನ್ನುವ ಲೆಕ್ಕ ಸಿಗುವುದು ಕಷ್ಟ.]]>

‍ಲೇಖಕರು G

April 13, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: