ದಯವಿಟ್ಟು ಫೋನ್ ಮಾಡಿ

ಈಗ್ಗೆ ಅರ್ಧಗಂಟೆಯ ಹಿಂದೆ ಮತ್ತೆರಡು ಹೆಣ ಬಿದ್ದಿವೆ, ಹುಬ್ಬಳ್ಳಿಯ ಚಾಣಕ್ಯಪುರ ಬಡಾವಣೆಯೊಂದರಲ್ಲಿ ಮಲದಗುಂಡಿ ಸ್ವಚ್ಛತೆಗೆ ತೆರಳಿದ್ದ ಸಂತೋಷ್ ಮತ್ತು ರಮೇಶ್ ಎಂಬ ಯುವಕರಿಬ್ಬರಿರು ವಿಷಾನಿಲ ಸೇವನೆಯಿಂದ ಸ್ಥಳದಲ್ಲೇ ಜೀವಬಿಟ್ಟಿದ್ದಾರೆ. ಮತ್ತೊಬ್ಬರು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದು ಮಲದಗುಂಡಿಯ ಸಾವುಗಳ ಸಂಖ್ಯೆಗೆ ಮತ್ತೆರಡು ಜೀವಗಳು ಸೇರ್ಪಡೆಯಾಗಿವೆ. ಹುಬ್ಬಳ್ಳಿಯ ಗೆಳೆಯರು ಯಾರಾದರೂ ಆನ್ ಲೈನ್ ಲಿ ಇದ್ದಲ್ಲಿ ಈ ನಂಬರಿಗೆ ಕೊಂಚ ತುರ್ತಾಗಿ ಫೋನ್ ಮಾಡಿದರೆ ಮತ್ತಷ್ಟು ಮಾಹಿತಿ ನೀಡಿದರೆ, ನಾವು ಹುಬ್ಬಳ್ಳಿಗೆ ಹೊರಡಲು ಅನುಕೂಲವಾಗುತ್ತದೆ.

ದಯವಿಟ್ಟು ಫೋನ್ ಮಾಡಿ ದಯಾನಂದ : 9535158102

File Photo Courtesy: The Hindu

ಈ ದೇಶದ 13ನೇ ರಾಷ್ಟ್ರಪತಿಯಾಗಿ ಪ್ರಣವ್ ಅಧಿಕಾರ ಗೆದ್ದು ಖುಷಿ ಪಡುತ್ತಿದ್ದರೆ ಹುಬ್ಬಳ್ಳಿಯಲ್ಲಿ ಮ್ಯಾನ್ ಹೋಲ್ ಕ್ಲೀನ್ ಮಾಡಲು ಇಳಿದ ಮೂವರಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಉಳಿದ ಒಬ್ಬರು ಬದುಕು-ಸಾವಿನ ಮಧ್ಯೆ ಹೋರಾಡುತ್ತಿದ್ದಾರೆ.

ರೋಣ ತಾಲ್ಲೂಕಿನ ನೆಲ್ಲೂರು ಗ್ರಾಮದಿಂದ ಕೂಲಿಗೆ ಬಂದಿದ್ದ ಕಾರ್ಮಿಕರು ಈಗಲ್ ಕಟ್ಟಡ ನಿರ್ಮಾಣ ಸಂಸ್ಥೆಯ ಯು.ಜಿ.ಡಿಯನ್ನು ಸರಿ ಮಾಡಲು ಹೋಗಿ ಸಾವನ್ನಪ್ಪಿದ್ದಾರೆ.

ಈ ದೇಶದ ಅತ್ಯೂನ್ನತ ಹುದ್ದೆಗೆ ಏರುವ ಖುಷಿಯಲ್ಲಿ ರಾಷ್ಟ್ರಪತಿಯಾಗುವರು ಇದ್ದಾರೆ, ಆದರೆ ಈ ದೇಶದ ಪ್ರಜೆಗಳು ಮಾತ್ರ ಮಲದ ಗುಂಡಿಯಲ್ಲಿ ಬಿದ್ದು ಸಾವನ್ನುಪ್ಪುದಿದ್ದಾರೆ. ಇದಕ್ಕಿಂತಲೂ ಈ ದೇಶಕ್ಕೆ ನಾಚಿಕೆ ವಿಷಯ ಇದೆಯೆ?

 

ಚಂದ್ರಶೇಖರ ಅತ್ತಿಬೆಲೆ

]]>

‍ಲೇಖಕರು G

July 22, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

2 ಪ್ರತಿಕ್ರಿಯೆಗಳು

  1. D.RAVI VARMA

    sir, nimma concern ge ondu namaskaara ,naanu irodu hosapeteyalli ii vishayadalli naanu ella sahayakku nimma jote iddene 9902596614

    ಪ್ರತಿಕ್ರಿಯೆ
  2. jagadishkoppa

    ಗೆಳೆಯರೇ, ಇದು ಮಲದ ಗುಂಡಿಗೆಯ ಸ್ವಚ್ಛತೆಗಾಗಿ ಇಳಿದಾಗ ಸಂಭವಿಸಿದ ಘಟನೆಯಲ್ಲ. ಹುಬ್ಬಳ್ಳಿಯ ಹಳೆಯ ಮ್ಯಾನ್ ಹೋಲ್ ಗಳನ್ನು ಮತ್ತಷ್ಟು ಆಳ ಮಾಡಿ, ಹೊಸತಂತ್ರಜ್ಙಾನದಿಂದ ದುರಸ್ತಿಗೊಳಿಸುವ ಗುತ್ತಿಗೆಯನ್ನು ಮುಂಬೈ ಕಂಪನಿಗೆ ಕೊಡಲಾಗಿತ್ತು. ಸಿದ್ಧವಾಗಿರುವ ಇವುಗಳನ್ನು ಮಹಾನಗರಪಾಲಿಕೆಗೆ ವಹಿಸುವ ಮುನ್ನ ಒಳಗೆ ತುಂಬಿದ್ದ ಕಸ ತೆಗೆಯಲು ಇಳಿದಾಗ ದುರಂತ ಸಂಭವಿಸಿತು. 20 ಅಡಿ ಗಿಂತ ಹೆಚ್ಚಿಗೆ ಆಳವಿರುವ ಗುಂಡಿಗಳಿಗೆ ಕಾರ್ಮಿಕರನ್ನ ಇಳಿಸುವಾಗ ಕಂಪನಿ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಂಡಿರಲಿಲ್ಲ. ನಿನ್ನೆ ಸಾವು ಸಂಭವಿಸಿದಾಗ ಮಹಾನಗರ ಪಾಲಿಕೆ ಅಧಿಕಾರಿಗಳಾಗಲಿ. ಕಂಪನಿಯ ಅಧಿಕಾರಿಗಳಾಗಲಿ ಅಲ್ಲಿರಲಿಲ್ಲ. ಸತ್ತವರಿಬ್ಬರೂ ಗದಗ ಜಿಲ್ಲೆಯ ರೋಣ ತಾಲೋಕಿನ, ನೆಲ್ಲೂರು ಗ್ರಾಮದ ರಮೇಶ ಮತ್ತು ಸಂತೋಷ ಎಂಬ ಸಹೋದರರು. ಕೇವಲ 21 ಮತ್ತು 19 ವಯಸ್ಸಿನವರು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: