ದಲಿತ ಲೇಖಕರು ಅದಕ್ಕೆ ‘ಕ್ಯಾರೇ’ ಅನ್ನಲಿಲ್ಲ..

ಕನ್ನಡಪ್ರಭದ ವರ್ಷದ ವ್ಯಕ್ತಿಯಾಗಿ ಆಯ್ಕೆಯಾದ ಭೀಮರಾವ್ ಗಸ್ತಿ ಅವರ ಆತ್ಮಕಥನ ‘ವಾಲ್ಮೀಕಿ’ಗೆ ಸರಜೂ ಕಾಟ್ಕರ್ ಬರೆದ ಮುನ್ನುಡಿ. ಸೃಷ್ಟಿ ಪ್ರಕಾಶನ ಈ ಪುಸ್ತಕ ಪ್ರಕಟಿಸಿದೆ 

media ಸರೂಜ್ ಕಾಟ್ಕರ್

ಮರಾಠಿ ಸಾಹಿತ್ಯದಲ್ಲಿ ಆತ್ಮಕಥೆಗಳಿಗೆ ಅನನ್ಯವಾದ ಸ್ಥಾನವಿದೆ. ಮರಾಠಿಯಲ್ಲಿ ದಲಿತ ಸಾಹಿತ್ಯ ಪ್ರಕಾರ ಆರಂಭವಾದಾಗ ದಲಿತರ ಪ್ರತಿಯೊಂದು ಕಥೆ, ಕವಿತೆಗಳು ಆತ್ಮಕಥೆಯ ಆಕಾರ ಪಡೆದು ಕೊಂಡವು. ಅವರು ಪಟ್ಟ ಕಷ್ಟನಷ್ಟಗಳು, ಸಹಿಸಿದ ಅವಮಾನ ಹಾಗೂ ಸಮಾಜ ಅವರನ್ನು ನಡೆಸಿ ಕೊಂಡ ರೀತಿನೀತಿಗಳಿಗೆ ಅಕ್ಷರದ ರೂಪ ಪ್ರಾಪ್ತವಾಯಿತು. ಪ್ರತಿಯೊಬ್ಬ ದಲಿತ ಲೇಖಕನ ಕಥೆ, ಕಾವ್ಯಗಳು ಆಯಾ ಲೇಖಕನ ಮತ್ತು ಆತ ಹುಟ್ಟಿದ ಸಮಾಜದ ಆತ್ಮಕಥೆಗಳಾದವು.

ಐದು ಸಾವಿರ ವರ್ಷಗಳು ಹೆಪ್ಪುಗಟ್ಟಿದ ರೋಷ ಅವಮಾನಗಳು ಒಮ್ಮಿಂದೊಮ್ಮಲೇ ಸ್ಫೋಟಗೊಂಡು ದಲಿತ ಲೇಖಕರ ಬರವಣಿಗೆಗಳು ಕಲಾತ್ಮಕವಾಗಿಲ್ಲವೆಂದು ವಿಮರ್ಶಕರು ಅಭಿಪ್ರಾಯಪಟ್ಟರೂ, ದಲಿತ ಲೇಖಕರು ಅದಕ್ಕೆ ಕ್ಯಾರೇಅನ್ನಲಿಲ್ಲ. ಮರಾಠಿಯಲ್ಲಿ, ಇಪ್ಪತ್ತು ವರ್ಷಗಳ ಅವಧಿಯಲ್ಲಿ ದಲಿತರ 400 ಆತ್ಮಕಥೆಗಳು ಪ್ರಕಟವಾದವು. ಅತ್ಯಂತ ಸಾಮಾನ್ಯ ಹಮಾಲಿಯಿಂದ ಹಿಡಿದು ಐಎಎಸ್ ಆದ ದಲಿತರು ಆತ್ಮಕಥೆಗಳನ್ನು ಬರೆದಿದ್ದಾರೆ. ಒಬ್ಬ ವೇಶ್ಯೆಯೂ ತನ್ನ ಆತ್ಮಕಥೆಯನ್ನಯ ಬರೆದ (ಬರೆಸಿದ) ಖ್ಯಾತಿ ಮರಾಠಿ ದಲಿತ ಸಾಹಿತ್ಯಕ್ಕಿದೆ. ಈ ಎಲ್ಲ ಆತ್ಮಕಥೆಗಳ ಸ್ಥಾಯೀಭಾವ ಆಕ್ರೋಶವಿದ್ದರೂ, ಅವೆಲ್ಲವುಗಳು ಪ್ರಮಾಣಿಕವಾಗಿವೆ ಎಂಬ ಹೆಗ್ಗಳಿಕೆಗಳಿಗೂ ಪ್ರಾಪ್ತವಾದವು. ದಲಿತ ಲೇಖಕರು ತಮ್ಮ ಜೀವನವನ್ನು ಹೇಳುವಾಗ ಯಾವುದನ್ನೂ ಮುಚ್ಚಿಟ್ಟುಕೊಳ್ಳಲಿಲ್ಲ. ಇಂತಹ ರಹಸ್ಯ ಸ್ಫೋಟದಿಂದಾಗಿ, ನಾಳೆ ಸಮಾಜದಲ್ಲಿ ತಮ್ಮ ಸ್ಥಾನಕ್ಕೆ ಕುಂದುಂಟಾಗಬಹುದೆಂದು ಯಾರೂ ಯೋಚಿಸಲಿಲ್ಲ. ತಮಗಾದ ಅವಮಾನವನ್ನು ಅತ್ಯಂತ ಪ್ರಮಾಣಿಕರಾಗಿ ಈ ಲೇಖಕರು ದಾಖಲಿಸುತ್ತ ಹೋಗಿದ್ದಾರೆ. ಕೆಲವು ಲೇಖಕರು ಏನನ್ನೂ ಬರೆಯದಿದ್ದರೂ ಆತ್ಮಕಥೆಗಳನ್ನು ಬರೆದ ಉದಾಹರಣೆಗಳೂ ಮರಾಠಿ ಸಾಹಿತ್ಯದಲ್ಲಿದೆ ಅನೇಕ ಆತ್ಮಕಥೆಗಳು ನಾಲ್ಕಾರು ಆವೃತಿಗಳು ಭಾಗ್ಯವನ್ನು ಕಂಡಿವೆ.

ಬೆಳಗಾವಿ ಹತ್ತಿರದ ಊರು ಯಮನಾಪೂರ. ಇಲ್ಲಿ ಬೇಡರ ವಸ್ತಿ ಜಾಸ್ತಿ. ಈ ಹಿಂದೆ ಬ್ರಿಟಿಷ್ ಸಕರ್ಾರದ  ಬೇಡರನ್ನು ಅಪರಾಧಿಗಳೆಂದು ಪರಿಗಣಿಸುತ್ತು. ದರೋಡೆ ಅಥವಾ ಕಳ್ಳತನಗಳು ಎಲ್ಲಯೇ ನಡೆದರೂ ಅವುಗಳಿಗೆ ಬೇಡರನ್ನೇ ಜವಾಬ್ದಾರಿಯನ್ನಾಗಿಸುತ್ತಿತ್ತು. ಅವರ ವಸ್ತಿಯ ಮೇಲೆ ದಾಳಿ ಮಾಡಿ ಅವರನ್ನು ಹಿಡಿದುಕೊಂಡು ಹೀಗುತ್ತಿದ್ದರು. ಅಪರಾಧ ಮಾಡಲಿ ಅಥವಾ ಬಿಡಲಿ, ಹಿಡಿದುಕೊಂಡು ಹೋದ ಬೇಡರನ್ನು ಸಾಯುವಂತೆ ಬಡಿಯುತ್ತಿದ್ದರು; ಅಮಾನುಷವಾಗಿ ದಂಡಿಸುತ್ತಿದ್ದರು. ಪೋಲಿಸರ ಈ ಅತ್ಯಾಚಾರಗಳಲ್ಲಿ ಅನೇಕ ಬೇಡರು ಸತ್ತ ಉದಾಹರಣೆಗಳೂ ಇವೆ.

ಈ ಬೇಡರ ವಸ್ತಿಯಲ್ಲಿಂದ ಹುಟ್ಟಿ ಬಂದವರೇ ಭೀಮರಾವ್ ಗಸ್ತಿ. ಅತ್ಯಂತ ದಾರುಣವಾದ ಬಡತನ, ದೈನೇಸಿ ಪರಿಸ್ಥಿತಿಯಲ್ಲಿ ಹುಟ್ಟಿದ  ಭೀಮರಾವ್ ಗಸ್ತಿ ಕಷ್ಟದಿಂದ ವಿದ್ಯೆ ಕಲಿತರು. ಒಬ್ಬ ಬೇಡರ ಹುಡುಗ ಶಾಲೆ ಕಲಿಯುವುದು ಅಸಾಧ್ಯವಾಗಿದ್ದ ಪರಿಸ್ಥಿತಿಯಲ್ಲಿ ಭೀಮರಾವ್ ಗಸ್ತಿ ಎಂ. ಎಸ್ಸಿ ಕಲಿತು, ಮುಂದೆ ಪಿಎಚ್ಡಿ ಡಿಗ್ರಿ ಪಡೆದರು. ಕಾಲೇಜು ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಕಲಿಸಿ ತಮ್ಮ ಜನರ ದಾರುಣವಾದ ಪರಿಸ್ಥಿತಿ ನೋಡಿ ಸಮಾಜ ಸೇವೆಯತ್ತ ಆಕಷರ್ಿಕರಾದರು. ಹೊಟ್ಟೆಪಾಡಿಗಾಗಿ ಬೇಡರ ಕಂಟ್ರಿ ಶೆರೆ ತಯಾರಿಸುತ್ತಿದ್ದರು; ಕಳುವು ಮಾಡುತ್ತಿದ್ದರು; ದರೋಡೆ ಮಾಡುತ್ತಿದ್ದರು. ಇವರನ್ನು ಸುಧಾರಿಸಬೇಕಾದರೆ ಪಯರ್ಾಯವಾದ ಉದ್ಯೋಗಗಳನ್ನು ಅವರಿಗೆ ದೊರಕಿಸಬೇಕೆಂಬ ಉದ್ದೇಶದಿಂದ ಅನೇಕ ಉದ್ಯೋಗಗಳನ್ನು ಆರಂಭಿಸಿದರು. ಬೇಡರಲ್ಲಿ ದೇವದಾಸಿ ಪದ್ಧತಿಯೂ ಜಾರಿಯಲ್ಲಿತ್ತು. ಗಸ್ತಿಯವರ ಮನೆಯಲ್ಲಿಯೇ ದೇವದಾಸಿಗಳಾಗಿದ್ದವರು. ಅವರ ಅಂತ್ಯವನ್ನು ಕಣ್ಣಾರೆ ಕಂಡ ಡಾ. ಗಸ್ತಿ ಆ ಪದ್ಧತಿಯ ವಿರುದ್ಧವೂ ಯುದ್ಧ ಘೋಷಿಸಿದರು. ಈ ಕಾರ್ಯ ಮಾಡುತ್ತಿದ್ದಾಗ ಅವರು ಅನೇಕ ಪರೀಕ್ಷೆಗಳಿಗೆ ತಮ್ಮನ್ನು ತಾವು ಒಡ್ಡಿಕೊಳ್ಳಬೇಕಾಯಿತು.ಸ್ವಕೀಯರಿಂದ, ಪರಕೀಯರಿಂದ, ಪೋಲಿಸರಿಂದ, ಅಧಿಕಾರಿಗಳಿಂದ ನಿಂದನೆಗೊಳಪಡಬೇಕಾಯಿತು. ಇದಾವುದನ್ನೂ ಲೆಕ್ಕಿಸದೆ ಗಸ್ತಿ ತಮ್ಮ ಕೆಲಸವನ್ನು ಮುಂದುವರೆಸಿದರು. ನಿಂದಿಸಿದವರೇ ಮುಂದೆ ಅವರ ಕೆಲಸ ಕಾರ್ಯ, ಪ್ರಮಾಣಿಕತೆ ಕಂಡು ಅವರನ್ನು ಬೆಂಬಲಿಸಿದರು. ಈಗ ಡಾ. ಗಸ್ತಿಯಮನಾಪೂರ ಗ್ರಾಮದಲ್ಲಿ ಬೇಡರ ಸುಧಾರಣಾ ಕೇಂದ್ರ, ದೇವದಾಸಿ ನಿಮರ್ೂಲನಾ ಸಮಿತಿಗಳ ಮೂಲಕ ಜನಜಾಗೃತಿಯನ್ನು ತಂದಿದ್ದಾರೆ.

 ತಾವು ನಡೆದು ಬಂದ ಹಾದಿ, ಕಷ್ಟನಷ್ಟಗಳನ್ನು ಬರೆದು ದಾಖಲಿಸಬೇಕೆಂಬ ಇಚ್ಛೆಯಿಂದ ಅವರು ಬರವಣಿಗೆಯನ್ನು ಆರಂಭಿಸಿದರು. ಡಾ. ಗಸ್ತಿಯವರ ಮಾತೃ ಭಾಷೆ ಕನ್ನಡ. ಆದರೆ ಕಲಿತದ್ದು ಮರಾಠಿ. ಅವರು ಮರಾಠಿಯಲ್ಲಿಯೇ ಬರೆದರು. ಅವರ ಬರವಣಿಗೆ ತುಂಬ ಸೀದಾ ಸಾದಾ; ಅದರಲ್ಲಿ ಯಾವ ಆಡಂಬರವೂ ಇಲ್ಲ. ಅವರ ಬರವಣಿಗೆ ಓದಿದ ಮರಾಠಿ ಓದುಗರು ಶಾಕ್ ಒಳಗಾದರು. ಮರಾಠಿಯ ದೊಡ್ಡ ದೊಡ್ಡ ಲೇಖಕರು ಡಾ. ಗಸ್ತಿಯವರಿಗೆ ಆತ್ಮಕಥೆಯನ್ನು  ಬರೆಯಲು ಹೇಳಿದರು. ಡಾ. ಗಸ್ತಿ ಬೇರಡಎಂಬ ಹೆಸರಿನ ಆತ್ಮಕಥೆ ಬರೆದರು. ಅದರಲ್ಲಿ ಅವರು ತಮ್ಮ ಸಮಾಜದ ನೋವುಗಳನ್ನು, ಅವಮಾನಗಳನ್ನು ವಿಶದವಾಗಿ ಬಿಚ್ಚಿಟ್ಟರು. ಬೇರಡಮರಾಠಿ ಸಾಹಿತ್ಯದಲ್ಲಿ ಅಲೋಲ್ಲ ಕಲ್ಲೋಲವನ್ನುಂಟು ಮಾಡಿತು. ಈಗಾಗಲೇ ಬೇರಡನಾಲ್ಕು ಆವೃತ್ತಿಗಳನ್ನು ಕಂಡಿದೆ. ಹಿಂದಿ, ತೆಲುಗು, ಗುಜರಾತಿ ಭಾಷೆಗಳಲ್ಲಿ ಅನುವಾದಗೊಂಡಿದೆ. ಮಹಾರಾಷ್ಟ್ರದ ಅನೇಕ ಬಹುಮಾನ. ಅವಾಡ್ಸರ್್ಗಳನ್ನು ಬೇರಡಪಡೆದಿದೆ.

  ಜೀವನದಲ್ಲಿ ತಾವು ಅನುಭವಿಸಿದ್ದನ್ನೇ ಬೇರಡದಲ್ಲಿ ದಾಖಲಿಸಿದ್ದೇನೆಂದು ಡಾ. ಗಸ್ತಿ ಹೇಳುತ್ತಾರೆ. ತಾವೊಬ್ಬ ಲೇಖಕನೆಂದು ಡಾ. ಗಸ್ತಿಯವರಿಗೆ ಯಾವ ಗರ್ವವೂ ಇಲ್ಲ. ನಾನೊಬ್ಬ ಸಾಮಾಜಿಕ ಕಾರ್ಯಕರ್ತನೆಂದೇ ಅವರು ಹೇಳುತ್ತಾರೆ. ಬೇರಡ ನಮ್ಮ ಸಮಾಜದ ಜನರು ಪಡುತ್ತಿರುವ ಕಷ್ಟ ಕೋಟಲೆಗಳನ್ನು ಸಾರ್ವಜನಿಕರಿಗೆ ಮುಟ್ಟಿಸಿತು. ಅದರ ಪರಿಣಾಮವಾಗಿ ಸಾರ್ವಜನಿಕರು ನಮ್ಮ ಬೆನ್ನ ಹಿಂದೆ ನಿಂತರುಎಂದು ಅವರು ಹೇಳುತ್ತಾರೆ. ಬೇರಡಆತ್ಮಕಥೆಯಾಗಿದ್ದರೂ ಅದು ಉಪೇಕ್ಷಿತ ಸಮಾಜದ ಕಥೆಯೆಂದು ವಿಮರ್ಶಕರು ಗುರುತಿಸಿದ್ದಾರೆ.

ಡಾ. ಭೀಮರಾವ್ ಗಸ್ತಿಯವರಿಗೆ ಕನ್ನಡಪ್ರಭವು ವರ್ಷದ ವ್ಯಕ್ತಿಯೆಂದು ಗುರುತಿಸಿದೆ. ಕನ್ನಡಪ್ರಭದ ಈ ಗೌರವವು, ಡಾ. ಗಸ್ತಿ ಕನರ್ಾಟಕದಿಂದ ಪಡೆದ ಮೊದಲ ಗೌರವವಾಗಿದೆ. ಇಲ್ಲಿಯವರೆಗೆ ಮಹಾರಾಷ್ಟ್ರ ಹಾಗೂ ಬೇರೆ ರಾಜ್ಯಗಳಿಂದ ಮಾತ್ರ ಗೌರವ, ಅವಾಡ್ಸರ್್ಗಳನ್ನು ಪಡೆದಿದ್ದೆ. ಕನ್ನಡಪ್ರಭವು ನೀಡಿದ ವರ್ಷದ ವ್ಯಕ್ತಿಯ ಗೌರವವು ನಾನು ಪಡೆದ ಮೊಟ್ಟಮೊದಲ ಕನರ್ಾಟಕದ ಗೌರವವಾಗಿದೆಎಂದು ಡಾ. ಗಸ್ತಿ ಹೇಳುತ್ತಾರೆ.

ಮರಾಠಿಯ ಬೇರಡವು ಕನ್ನಡದಲ್ಲಿ ವಾಲ್ಮೀಕಿಆಗಿದೆ. ಬೇಡರನ್ನು ಬೇರಡ, ವಾಲ್ಮೀಲಿ, ನಾಯಿಕರೆಂದೂ ಗುರುತಿಸುತ್ತಾರೆ. ಮಹಾ ಧೈರ್ಯಶಾಲಿಗಳೆಂದು ಇತಿಹಾಸದಲ್ಲಿ ಗುರುತಿಸಲ್ಪಟ್ಟಿದ್ದ ಈ ಜನಾಂಗದ ಅನೇಕರು ರಾಜರಾಗಿ, ಸಾಮ್ರಾಜ್ಯಗಳನ್ನು ಕಟ್ಟಿದರೂ ಅವರ ಮುಂದಿನ ಜನಾಂಗವು ಪೋಲಿಸರಿಂದ ತಪ್ಪಿಸಿಕೊಳ್ಳುವುದರಲ್ಲಿಯೇ ವೇಳೆಯನ್ನು ಕಳೆಯಬೇಕಾಯಿತು. ಈ ಎಲ್ಲ ವಿವರಗಳನ್ನು ಡಾ. ಗಸ್ತಿ ತಮ್ಮ ಆತ್ಮಕಥೆಯಲ್ಲಿ ತೆರೆದು ಇಟ್ಟಿದ್ದಾರೆ.

 

                            

 

 

 

‍ಲೇಖಕರು avadhi

March 28, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು...

ಸಂಗೀತ ಲೋಕದ ಸಂತ

ಸಂಗೀತ ಲೋಕದ ಸಂತ

ಡಾ.ಎನ್. ಜಗದೀಶ್ ಕೊಪ್ಪ ಸಂಗೀತ ಲೋಕದ ಸಂತಬಿಸ್ಮಿಲ್ಲಾ ಖಾನ್(ಜೀವನ ಚರಿತ್ರೆ)ಲೇಖಕರು: ಡಾ. ಎನ್ ಜಗದೀಶ್ ಕೊಪ್ಪಪ್ರಕಾಶಕರು: ಮನೋಹರ ಗ್ರಂಥಾಲಯ,...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: