ದಾಂಪತ್ಯದ ಬೆಳ್ಳಿ ಹಬ್ಬದ ಹಾಡು

ಸುಧಾ ಆಡುಕಳ

ಮದುವೆಯಾಗಿ ಕಳೆಯಿತು ವರ್ಷ ಇಪ್ಪತ್ತೈದು
ಯಾರಿಗಿದೆ ವ್ಯವಧಾನ ಪೂರ್ತಿ ಕೇಳಿಸಿಕೊಳ್ಳುವಷ್ಟು?
ಒಮ್ಮೆ ಮೊದಲನೆಯ ಪದ, ಇನ್ನೊಮ್ಮೆ ಕೊನೆಯದು
ಕೇಳಿಸಿಕೊಳ್ಳುತ್ತಲೇ ಸಾಗುತ್ತದೆ ಸಂಭಾಷಣೆ ಇಬ್ಬರದೂ

ಅವನು ಹೇಳಿದ, “ನಿನಗೀಗ ನಲವತ್ತೇಳು”
ಅವಳೆಂದಳು, “ಹಾಂ, ಸ್ವಾತಂತ್ರ್ಯ ಸಿಕ್ಕಿತು”
“ಆರೋಗ್ಯ ಸರಿಯಿಲ್ಲ, ಒಮ್ಮೆ ಪರೀಕ್ಷಿಸಬೇಕು”
“ವ್ಯವಸ್ಥೆ ಹದಗೆಟ್ಟಿದೆ, ಸರಿಪಡಿಸಲಾರದಷ್ಟು”
“ಸುಖಾಸುಮ್ಮನೆ ಕೋಪಿಸಿಕೊಳ್ಳುವೆ” ಆರೋಪಿಸಿದ
“ಅಂಥದ್ದೇ ನಡೆಯುತ್ತಿದೆ, ಏನು ಮಾಡಲಾಗುತ್ತದೆ?”

“ಬಿ. ಪಿ., ಶುಗರು ಎಲ್ಲವೂ ಹೆಚ್ಚಾಗಿರಬೇಕು”

“ಹೌದೌದು, ಎಲ್ಲ ದಿನಸಿಯ ಬೆಲೆ ಗಗನಮುಖಿಯೆ”
“ಕಷ್ಟದಲ್ಲಿರುವಂತಿದೆ, ಮನೆಗೆಲಸಕ್ಕೂ ಏದುಸಿರು ಬಿಡುವೆ”
“ಹೌದಪ್ಪ, ಯಾರಿಗೂ ಇಲ್ಲ ಲೋಕದ ಕಷ್ಟದ ಗೊಡವೆ”
“ದೇಹದ ತೂಕ ಬೇರೆ ಒಂದೇ ಸಮ ಇಳಿಯುತ್ತಿದೆ”
“ಸದ್ಯ ಇಳಿಮುಖವಾಗುತ್ತಿದೆಯಲ್ಲ ರೋಗಿಗಳ ಸಂಖ್ಯೆ”

“ಏನೇನೋ ಹೇಳುವುದೂ ಖಾಯಿಲೆಯ ಲಕ್ಷಣವೆ”
“ಬಾಯಿಪಾಠದ ಭಾಷಣ ಇರುವುದೇ ಹಾಗೆ”
“ಆಸ್ಪತ್ರೆಗೆ ಯಾವಾಗ ಹೋಗುವುದು ಅಂತ?”
“ಹೊಸವರ್ಷದಲ್ಲಿಯಾದರೂ ಕೊರೊನಾ ಹೋದರೆ ಸಾಕಪ್ಪ”

ಅವನ ಮಾತುಗಳೆಲ್ಲ ಅವಳ ಆರೋಗ್ಯದತ್ತ
ಅವಳು ಸುತ್ತುವುದು ಪ್ರಚಲಿತ ವಿದ್ಯಮಾನದತ್ತ

‍ಲೇಖಕರು Avadhi

January 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬೊಗಸೆಗೆ ಸಿಗದ ಮಳೆಯಂತೆ…

ಬೊಗಸೆಗೆ ಸಿಗದ ಮಳೆಯಂತೆ…

ಅಶ್ಫಾಕ್ ಪೀರಜಾದೆ ತುಳಿದಿದ್ದು ಸಾಕಷ್ಟು ದಾರಿಕ್ರಮಿಸಿದ್ದು ಸಾವಿರಾರು ಮೈಲಿಹಿಂದಿರುಗಿ ನೋಡಿದರೆ ಅನಾಥಮಕ್ಕಳಂತೆ ಮರಳಿನ ಮೇಲೆಮಲಗಿದ ಅನಾಮಿಕ...

ಬಿದಲೋಟಿ ರಂಗನಾಥ್ ಹೊಸ ಕವಿತೆ- ಒಂದೇ ಒಂದು ಕರೆಗಂಟೆ ಸದ್ದಿಗಾಗಿ…

ಬಿದಲೋಟಿ ರಂಗನಾಥ್ ಹೊಸ ಕವಿತೆ- ಒಂದೇ ಒಂದು ಕರೆಗಂಟೆ ಸದ್ದಿಗಾಗಿ…

ಬಿದಲೋಟಿ ರಂಗನಾಥ್ ಮನಸ ಮಲ್ಲಿಗಂಟಿಯ ಮೇಲೆಗುಬ್ಬಿಯೊಂದು ಗೂಡುಕಟ್ಟಿಗುಲಗಂಜಿ ಗಾತ್ರದ ಪ್ರೀತಿ ಹರಸಿಮೊಗದ ಕನ್ನಡಿಯ ಮೌನವಾಗಿಸಿನೆಲ ತಬ್ಬಿದ...

ಕೇಳಿದ್ದೇನೆ..

ಕೇಳಿದ್ದೇನೆ..

ವಿಜಯ ವಾಮನ್ ಕೇಳಿದ್ದೇನೆಊರಲ್ಲಿ ಜನ ಅವಳನ್ನು ಕಣ್ತುಂಬ ತುಂಬಿಕೊಂಡು ನೋಡುತ್ತಾ ರಂತೆಹಾಗಾದರೆ ನಡಿ ಅಲ್ಲಿಗೆ ಎರಡು ದಿನ ಇದ್ದು ನೋಡೋಣಂತೆ....

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This