ದಿನೇಶ್ ಅಮೀನ್ ಮಟ್ಟು ಫ್ರಂ ಡೆಲ್ಲಿ …


ದಿನೇಶ್ ಅಮೀನ್ ಮಟ್ಟು ಬರೆಯುತ್ತಿರುವ ಅಂಕಣ ‘ದೆಹಲಿ ನೋಟ’ವನ್ನು ನೀವೆಲ್ಲಾ ಓದುತ್ತಲೇ ಬಂದಿದ್ದೀರಿ. ಇತ್ತೀಚಿಗೆ ಕನ್ನಡ ಪುಸ್ತಕ ಪ್ರಾಧಿಕಾರ ಈ ಅಂಕಣಗಳ ಸಂಕಲನವನ್ನು ಹೊರತಂದಿದೆ.

ದಿನೇಶ್ ವಡ್ಡರ್ಸೆ ರಘುರಾಮ ಶೆಟ್ಟರ ‘ಮುಂಗಾರು’ ಗರಡಿಯಲ್ಲಿ ಪಳಗಿದವರು. ಸದಾ ತಮ್ಮ ನೋಟವನ್ನು ಹರಿತಗೊಳಿಸಿಕೊಂಡೇ ಬಂದವರು. ‘ಸುದ್ದಿಮಾತು‘ ಅವರ ಬಗ್ಗೆ ಒಂದು ಪುಟ್ಟ ಟಿಪ್ಪಣಿ ಬರೆದಿದೆ.

ಅಂಡು ಸುಟ್ಟ ಬೆಕ್ಕಿನಂತೆ ಅಡ್ಡಾಡುತ್ತಿರುವ ಯಡಿಯೂರಪ್ಪ ಅವರನ್ನು ಕುರಿತು “ಸುದ್ದಿ ಮಾತು” ಬರೆಯಬೇಕೆನ್ನುವಷ್ಟರಲ್ಲಿ ಪ್ರಜಾವಾಣಿ ಪತ್ರಿಕೆಯ ದೆಹಲಿ ಪ್ರತಿನಿಧಿ ದಿನೇಶ್ ಅಮೀನಮಟ್ಟು ಈ ವಾರದ ತಮ್ಮ “ದೆಹಲಿನೋಟ” ಅಂಕಣದಲ್ಲಿ ನಮ್ಮ ಅನಿಸಿಕೆಗಳನ್ನು ಬರೆದಿದ್ದಾರೆ.
ಸುದ್ದಿಮಾತಿನ ಮಿತಿ ಚಿಕ್ಕದು. ನಾವು, ಹೆಚ್ಚೆಂದರೆ ಏಳೆಂಟು ಪ್ಯಾರಾ ಬರೆಯುತ್ತಿದ್ದೆವು. ಕೇವಲ ಅದರಲ್ಲೂ ಕೇವಲ ಯಡಿಯೂರಪ್ಪ ಸುತ್ತಲೇ ಗಿರಕಿ ಹೊಡೆಯುತ್ತಿದ್ದೆವು. ಆದರೆ ದಿನೇಶ್ ಸಮಗ್ರವಾದ ಲೇಖನವೊಂದನ್ನು ಮುಂದಿಟ್ಟಿದ್ದಾರೆ.
ಹಾಗಾಗಿ ಇಂದಿನ ಸುದ್ದಿ ಮಾತು ದಿನೇಶ್ ಅಮೀನಮಟ್ಟು ಅವರ ಕುರಿತು. ಮಾತಿಗೆ ಮುನ್ನ ನೀವೊಮ್ಮೆ ದೆಹಲಿ ನೋಟದ ಇವತ್ತಿನ ಲೇಖನ “ಮುಖ್ಯಮಂತ್ರಿಗಳೇ, ಅಧಿಕಾರ ನಿಮ್ಮ ಕೈಯಲ್ಲೇ ಇರಲಿ’ ಓದಿ.
ದಿನೇಶ್ ಅಮೀನ್ ಮಟ್ಟು ಬಲು ಅಪರೂಪದ ಪತ್ರಕರ್ತ. ಸದಾ ಸಮಾಜಮುಖಿ ಆಲೋಚನೆಯನ್ನೇ ಧ್ಯಾನಿಸುವ ಬರಹಗಾರ. ಕನ್ನಡ ಪತ್ರಿಕೆಗೆ ದೆಹಲಿ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಇಡೀ ರಾಷ್ಟ್ರದ ಸಮಗ್ರ ಪರಿಕಲ್ಪನೆಯನ್ನು, ಚಿತ್ರಣವನ್ನು ಸ್ಪಷ್ಟವಾಗಿ ಹೇಳುವ ಸಾಮರ್ಥ್ಯ ಇರುವ ಏಕೈಕ ಪತ್ರಕರ್ತ.
ದಿನೇಶ್ ತಮ್ಮ ಇಂದಿನ ಲೇಖನದಲ್ಲಿ ಯಡಿಯೂರಪ್ಪ ಯಾವ ಮಾದರಿಯನ್ನು ಅನುಸರಿಸಿ ರಾಜ್ಯವಾಳುತ್ತಿದ್ದಾರೆ ಎಂಬುದನ್ನು ಚರ್ಚಿಸಿದ್ದಾರೆ. ಈ ಮೊದಲು ಯಡಿಯೂರಪ್ಪ ಅವರೇ ಪಠಿಸಿದ “ಮೋದಿ ಮಾದರಿ”, “ವಾಜಪೇಯಿ ಮಾದರಿ”ಗಳನ್ನು ತಿಳಿಸಿದ್ದಾರೆ. ಹಾಗೆಯೇ ಗಾಂಧೀ, ಬಸವಣ್ಣನ ಮಾದರಿಗಳ ಬಗ್ಗೆಯೂ ಮಾತನಾಡಿದ್ದಾರೆ. ಎಲ್ಲಕ್ಕಿಂತಲೂ ಮಿಗಿಲಾಗಿ ಜನಪರ ಮಾದರಿಯಾದರೆ ಎಲ್ಲವನ್ನೂ ಸಾಧಿಸಬಹುದು ಎಂದಿದ್ದಾರೆ. ಈ ಮೂಲಕ ದಿನೇಶ್ ಅಮೀನಮಟ್ಟು ಅವರು ಯಡಿಯೂರಪ್ಪ ಅವರಿಗೆ ಜನಪರ ಮಾದರಿ ಹೇಳಿಕೊಟ್ಟಿದ್ದಾರೆ.
ಅದೇ ರೀತಿ ಅವರೂ ಕೂಡ ಇದನ್ನೇ ಪ್ರತಿಪಾದಿಸುವಂಥವರು. ಇತ್ತೀಚೆಗೆ ಜಮ್ಮು ಕಾಶ್ಮೀರ ವಿಚಾರವನ್ನು ಚರ್ಚಿಸಿದ್ದ ದಿನೇಶ್ ಆ ಲೇಖನದಲ್ಲೂ ಜಮ್ಮು-ಕಾಶ್ಮೀರದಲ್ಲಿ ಜನಮತ ಗಣನೆ ಆಗಲಿ ಎಂದು ಪ್ರತಿಪಾದಿಸಿದ್ದರು. ಹಾಗಾಗಿಯೇ ಅವರು ಜನಪರ ಮಾದರಿಯನ್ನು ಮುಂದಿಟ್ಟಿದ್ದಾರೆ. ಈಗಲಾದರೂ ಯಡಿಯೂರಪ್ಪನವರಿಗೆ ಜನಪರ ಮಾದರಿ ನೆನಪಾಗುವುದೆ?

‍ಲೇಖಕರು avadhi

October 8, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

5 ಪ್ರತಿಕ್ರಿಯೆಗಳು

 1. ಪಂಡಿತಾರಾಧ್ಯ

  ದಿನೇಶ್ ಅಮ್ಮಿನಮಟ್ಟು ಅವರ ಅಂಕಣಗಳು ಓದಿ ಮರೆಯುವಂಥವಲ್ಲ.
  ಅವು ಈಗ ಪುಸ್ತಕ ರೂಪದಲ್ಲಿ ಓದುಗರಿಗೆ ಸಿಗುತ್ತಿರುವುದು ಸಂತೋಷದ ಸಂಗತಿ.
  ಅವರ ಬಗ್ಗೆ ನೀವು ಹೇಳಿರುವ ಮಾತುಗಳನ್ನು ನಾನು ಅನುಮೋದಿಸುತ್ತೇನೆ.
  ಡಾ ಪಂಡಿತಾರಾಧ್ಯ ಮೈಸೂರು

  ಪ್ರತಿಕ್ರಿಯೆ
 2. Purushottam K.V.

  I am a regular reader of Dehalinnota. Frist
  time in Kannada, a kannada journalist analysing
  National politics so beautifully,in kannada.
  His depth of political knowledge,commitment to
  the common people whether they are from bihar,
  UP or gujarath is loudable. His writings are
  model of good journalism
  -Purushottam K.V.

  ಪ್ರತಿಕ್ರಿಯೆ
 3. naveedahamedkhan

  athyantha niraashadaayaka kaalaghattadalli paya
  nisuthiruva namage ‘dinesh amin mattu’avara ankana
  chaitanyadayaka. Naalina namma nireekshe amin
  ravaru.
  Tumkur naveed

  ಪ್ರತಿಕ್ರಿಯೆ
 4. nishant

  Nishturathana,Nispaksyapath mattu
  janaparakalaji-ivu dinesh avara
  barahagala vaishistya. eevattina
  patrakartharige mattu odugarige
  begagiruvudu kooda ade alve?
  Nishanth N.

  ಪ್ರತಿಕ್ರಿಯೆ
 5. ಎಂ.ನಾಗಾರ್ಜುನ

  ಸ್ವಂತ ಪತ್ರಿಕೆ ಇದ್ದರೆ ಲಂಕೇಶ್ ತರ ಬರೆಯುವ ತಾಕತ್ತುಳ್ಳ ದಿನೇಶ್ ರವರ ರಾಜಕಾರಣದ
  ಒಳನೋಟಗಳು ಲಂಕೇಶ್ ರವರನ್ನ್ನೂ ಮೀರಿಸುವಂತಹದ್ದು.ಲಾಬಿಯ ಲಾಭಕ್ಕೆ ಬಲಿಯಾಗಿ
  ಬರೆಯುವವರ ಮಧ್ಯೆ ಸ್ವಚ್ಚ,ಚೆತೋಹಾರಿ ವಿಶ್ಲೇಷಣೆ ಅವರದ್ದು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: