ದಿಸ್ ಈಸ್ ಮೈ ಬಾಡಿ- ಐ ಎಂಜಿನೀರ್ ಇಟ್!

ಡೋರ್ ನಂ 142

ಬಹುರೂಪಿ
 
`ಥೂತ್ತೇರಿಕಿ, ಇದ್ಯಾಕಿಂಗಾಯ್ತು’ ಅಂತ ತಲೆ ಮೇಲೆ ಕೈ ಹೊತ್ತು ಕೂತ್ಕಂಡೆ.
ಅಲ್ಲಾ ದಿನಾ ನನ್ನ ಜೊತೇನೇ ಇದ್ದು ಏನಾದ್ರೂ ಸಮಸ್ಯೆ ಇದ್ದಿದ್ರೆ ನಂಗೇ ಹೇಳ್ಕೋಬೌದಿತ್ತು. ಅದನ್ನ ಬಿಟ್ಟು ಆ ಅಮೇರಿಕಾದವ್ರಿಗೆ ಯಾಕಪ್ಪಾ ಹೇಳ್ದ ಅಂತ ವರಿ ಶುರುವಾಯ್ತು. ಆಗಿದ್ದಿಷ್ಟೇ, ಇಮೇಲ್ ಚೆಕ್ ಮಾಡ್ಬೇಕು ಅಂತ ಹೊರಟ್ನಾ, ಇನ್ಬಾಕ್ಸ್ನಲ್ಲಿ ನಿಗಿನಿಗಿ ಅನ್ತಾ ಈ ಮೇಲ್ ಕೂತಿತ್ತು. ನಂಗೋ ಹತ್ತು ನಿಮಿಷಕ್ಕೆ ಒಂದ್ಸಲಾ ಇಂಟರ್ನೆಟ್ ತಡಕೋ ಚಪಲ. ಒಂಥರಾ `ಜಪಾನ್ ಶೋಕಿ’ ಇದ್ದಂಗೆ. ತಡಕ್ತಾ ಇರ್ಬೇಕು ಅಷ್ಟೇ. ಆದ್ರೆ ನಾನು ಹತ್ತು ನಿಮಿಷಕ್ಕೆ ಒಂದ್ಸಲ ಬರ್ತೀನಿ ಅಂತ ಊರ್ನೋರೆಲ್ಲಾ ನನಗೆ ಮೇಲ್ ಕಳಸ್ತಾ ಕೂತ್ಕಳ್ತಾರಾ? ಹಾಗಾಗಿನೇ ಅವತ್ತು ಈ ನಿಗಿನಿಗಿ ಮೇಲ್ ನೋಡ್ದಾಗ ಖಂಡಾಪಟ್ಟೆ ಖುಸ್ ಆಗೋಯ್ತು. ಮೇಲ್ ಓಪನ್ ಮಾಡಿದ್ನಾ…ಥೂ! ಯಾಕಾದ್ರೂ ಓಪನ್ ಮಾಡಿದ್ನೋ, ದರಿದ್ರ ನನ್ಮಗಂದು ಹಗಲೂ ರಾತ್ರಿ ತಲೆ ತಿನ್ನೋದಕ್ಕೆ ಶುರುವಾಯ್ತು. `ನಿಮ್ದು ಸ್ವಲ್ಪ ಉದ್ದ ಜಾಸ್ತಿ ಮಾಡ್ಕೊಳಿ, ಮಾಡ್ಕೊಂಡ್ ನೋಡಿ, ಸ್ವರ್ಗ, ಸ್ವರ್ಗ’ ಅನ್ನೋ ಮೇಲ್ ಅದು.
ಯಾವ ಫ್ರೆಂಡಪ್ಪಾ ಇಷ್ಟೊಂದು ಕಷ್ಟುಸುಖ ವಿಚಾರಿಸ್ಕೊಳ್ತಾ ಇದಾನೆ. ನನ್ನ ಕ್ಲೋಸ್ ಫ್ರೆಂಡ್ಗಲ್ಲದೆ ಇನ್ಯಾರಿಗೆ ಗೊತ್ತಾಗಬೇಕು ಇಂತಾ ಕಷ್ಟ ಅಂತ ನೋಡಿದ್ರೆ ಪಾಪ ಯಾರೋ ಅಮೇರಿಕಾದವ್ನು. ಗುತರ್ಿಲ್ಲ ಪರಿಚಯ ಇಲ್ಲ, ಅದಿರ್ಲಿ, ನನ್ನ ಮುಖಾನೂ ನೋಡಿಲ್ಲ. ಅವಾಗ್ಲೇ ನಂಗೆ ಅದರ ಮೇಲೆ ಬೇಸರ ಬಂದಿದ್ದು. ‘ಗಂಡಸರಿಗೆ ಯಾಕೆ ಗೌರಿ ದುಃಖಾ’ ಅನ್ನೋ ಅಂಗೆ ಇದಕ್ಯಾಕಪ್ಪಾ ಅಮೇರಿಕಾದವರ ಮುಂದೆ ಕಷ್ಟಸುಖ ಹೇಳ್ಕೊಳ್ಳೋ ತೆವಲು ಅನಿಸ್ತು. ನಮ್ಮ ಜಮಾನಾದಲ್ಲಿ `ಪ್ರಜಾಮತ’ ಬರ್ತಿತ್ತು. ಅದು ನಮ್ಮನೆಗೆ ಬರ್ತಾ ಇದ್ದಾಗೆ ಎಲ್ಲಿ ಹೋಗ್ತಿತ್ತಪ್ಪ, ಒಳ್ಳೇ ಪಿ.ಸಿ.ಸಕರ್ಾರ್ ಕೈಯಲ್ಲಿ ಸಿಕ್ಕ ಸುಂದ್ರಿ ಥರಾ ಮಾಯಾ ಆಗೋಗೋದು. ಇನ್ನೂ ಮೀಸೆ ಬಂದಿರ್ಲಿಲ್ಲ. ಚಡ್ಡಿಯಿಂದ ಪ್ಯಾಂಟ್ಗೆ ಪ್ರಮೋಶನ್ ಸಿಕ್ಕಿರ್ಲಿಲ್ಲ. ಬಂದ ಮ್ಯಾಗಜಿನ್ ಎಲ್ಲೋಯ್ತಪ್ಪಾ ಅಂತ ಕೇಳಿದ್ರೆ `ಬಚ್ಚಾ’ ಅನ್ನೋಹಂಗೆ ನೋಡೋರು.

ಅದು ಬರ್ತಿದ್ದಂಗೆ ಗುಸುಗುಸು ಪಿಸಪಿಸ ಅಂತ ಏನೇನೋ ದೊಡ್ಡೋರು ಮಾತಾಡ್ಕೊಳ್ಳೋರು. ವಿಷಯ ಇಷ್ಟೇ. ಅದ್ರೊಳಗೆ `ಗುಪ್ತ ಸಮಾಲೋಚನೆ’ ಬರ್ತಿತ್ತು. ಪಾಪ ಯಾರ್ಯಾರಿಗೋ ಏನೇನೋ ಸಮಸ್ಯೆ. ನಂಗ್ ಅಂಗ್ ಆಗ್ಲಿಲ್ಲ. ನಂಗ್ ಇಂಗ್ ಆಗ್ಲಿಲ್ಲ. ದಪ್ಪ ಆಗ್ಲಿಲ್ಲ. ದಪ್ಪ ಅಂತಾನೇ ಇವ್ರಿಗೆ ಇಷ್ಟ ಆಗ್ಲಿಲ್ಲ ಅಂತ ಏನೇನೋ ಕೇಳೋರು. ಯಾರೋ ಉತ್ತರ ಹೇಳೋರು. ಇಷ್ಟಕ್ಕೆ ಪ್ರಜಾಮತಾನೇ ಗುಪ್ತಾಗುಪ್ತ ಆಗೋಗಿತ್ತು. ನಮ್ ಹಿಂದಿನ ರೋಡಲ್ಲಿ ಒಬ್ರು ಎಡಿಟರ್ ಇದ್ರು. ಅವ್ರ ಮನೇಗೋದ್ರೆ ಒಂದು ಪೇಪರ್ ಸಿಗೋದು. 20 ಪುಟ ಇರೋ ಪೇಪರ್-ಪ್ರಜಾಪ್ರಭುತ್ವ. ಅದ್ರಲ್ಲಿ ಅರ್ಧ ಪೇಜ್ ಹಾಟ್ ಹಾಟ್ ಆಗಿರೋದು. ಅಷ್ಟಕ್ಕೇ ಆ ಮ್ಯಾಗಜಿನ್ ನಮ್ಮ ಕೈಗೆಟುಕದಂಗೆ ಮೇಲಿಟ್ಟಿರೋರು. ಬಾಂಬೇನಲ್ಲಿ `ಬ್ಲಿಟ್ಜ್’ ಬಂತಾ, ಮೂರನೇ ಪುಟದಲ್ಲಿ ಹಾ! ಅನ್ನೋಂಗಿರೋ ಹುಡುಗೀರ್ ಬಂದ್ರಾ. ಇಲ್ಲೂ ಒಂದು ಪೇಪರ್ ಹಂಗೇ ಶುರು ಮಾಡಿದ್ರು. ಪೇಪರ್ರೇ ಹಾಂ! ಅಂದೋಯ್ತು.
ಇಷ್ಟ್ ಆಗಿ ಕೈಗೆ ಸಿಗದ ಅಟ್ಟ ಕೈಗೆ ಸಿಗೋ ಅಷ್ಟು ಬೆಳೆದ್ವಾ ತಕ್ಕಳಪ್ಪ ಬಳೇಪೇಟೇಲೆ ಬುಕ್ ತಗಳೋಕೆ ಅಂತಾ ಹೋದ್ರೆ ಮದನ, ರಮಣಿ ಬುಕ್ ಕೆಳಗೆ ಮಲಗಿರೋರು. ಇವೆಲ್ಲಾ ಗೊತ್ತಾಗೋದಿಕ್ಕೆ ಮುಂಚೆ ಜಿಂದೆ ನಂಜುಂಡಸ್ವಾಮಿ ಶಿವ!ಶಿವಾ! ಅನ್ನೋ ಹಾಗೆ ಪತ್ತೇದಾರೀನಲ್ಲಿ ಸಿಕ್ಸಿಕ್ದೋರ ಬಟ್ಟೆ ಬಿಚ್ಚಿಹಾಕವ್ರು. ಇಷ್ಟೇ ನಾವು ಮೈನೆರದ್ವಿ ಅನ್ನೋದಕ್ಕೆ ಇದ್ದ ಲಕ್ಷಣಗಳು. ಮದನ, ರಮಣಿ, ಜಿಂದೆ, ಪ್ರಜಾಮತ, ಪ್ರಜಾಪ್ರಭುತ್ವ ಇವೆಲ್ಲಾ ಓದಿದ್ರೆ ಅಬ್ಬಬ್ಬಾ ಅಂದ್ರೆ ಅದುವರ್ಗೂ ನಮಗೆ ಗೊತ್ತಿಲ್ಲದ ನಾಲ್ಕು ದರಿದ್ರ ಪದಗಳು ಗೊತ್ತಾಗಿತ್ತೇ ಹೊರ್ತು ಇನ್ನೇನೂ ಇಲ್ಲ. ಆದ್ರೆ ಇವಾಗ ಬಳೇಪೇಟೆಗೆ ಹೋಗ್ಬೇಕಾಗಿಲ್ಲ. ಪತ್ತೇದಾರಿ ಹುಡುಕಬೇಕಾಗಿಲ್ಲ. ಪ್ರಜಾಮತ ಬರ್ಬೇಕಾಗಿಲ್ಲ. ಕಂಪ್ಯೂಟರ್ ತಗೋ, ಇಂಟರ್ನೆಟ್ ಜೋಡಿಸ್ಕೋ. ಒಂದು ಬಟನ್ ಕುಟ್ಟಿದ್ರೆ ಇಪ್ಪತ್ತು ದಾರಿ. ಒಂದ್ರಲ್ಲಿ ಎಡವಿದ್ರೆ ನೂರು ಮುಲಾಮು. ಎಡವಿದ್ರೋ ಬಿಟ್ರೋ ಖಾಯಿಲೆ ಹಚ್ಚೋದೂ ಅವ್ರೇ, ಮುಲಾಮು ಸವರೋರು ಇವರೇ.
ಮೊನ್ನೆ ಯಾವುದೋ ಲೇಖನ ಓದ್ತಾ ಇದ್ದೆ. ಅದ್ರಲ್ಲಿ ಆ ಹುಡುಗಿ ಎಷ್ಟು ಚೆನ್ನಾಗಿ ಹೇಳಿದ್ಲು. `ದಿಸ್ ಈಸ್ ಮೈ ಬಾಡಿ, ಐ ಎಂಜಿನೀರ್ ಇಟ್’ ಅಂತ. ಹೌದಲ್ವಾ ಅನಿಸ್ತು. ನಮ್ಮ ದೇಹ ನಮಗೆ ಬೇಕಾದ ಹಾಗೆ ಕಟ್ಟೋಬೇಕು ಅಲ್ವ. ಈ ದೇಹ ಅನ್ನೋದು ಹಿಂಗಿಂಗ್ ಇರ್ಬೇಕು. ಅದ್ನ ವಾಸ್ತು ಪ್ರಕಾರ ಆದ್ರೂ ಕಟ್ರಿ, ಫೆಂಗ್ ಶುಯಿ ಕೇಳಿಯಾದ್ರೂ ಅಲಂಕಾರ ಮಾಡಿ, ಗಟ್ಟಿಮುಟ್ಟಾಗಿ ನೀಟಾಗಿದ್ರೆ ಸಾಕು ಅಂತಾನಾದ್ರೂ ವ್ಯವಸ್ಥೆ ಮಾಡ್ರಿ ಒಟ್ಟಿನಲ್ಲಿ ನಮ್ಮನೆ ನಮಗೆ ಬೇಕಾದಂಗೆ ಇರ್ಬೇಕಪ್ಪ.
ಒಂದ್ಸಲಾ ನನ್ನ ಮಗಳನ್ನ ಯಾಕೋ ರೇಗಿಸ್ದೆ. `ಡೋಂಟ್ ಟಚ್’ ಅಂದ್ಳು. ಯಾಕೆಯಾಕೆ ಮುಟ್ಬಾದರ್ು ಅಂದೆ. ಪಪ್ಪಾ, ದಿಸ್ ಈಸ್ ಮೈ ಬಾಡಿ ಅಂದ್ಳು. ಅವಾಗ್ಲೇ ನನ್ನ ತಲೆ ಗಿರಗಿರಾ ಅಂದಿದ್ದು. ಅವತ್ತಿನವರೆಗೆ `ಮೈ ಬಾಡಿ’ ಅನ್ನೋ ಕಲ್ಪನೇನೇ ನಂಗಿರ್ಲಿಲ್ಲ. ನಮ್ಮ ಜಮೀನು ಮಾಡಿಸೋಕೆ ಇನ್ನಾರಿಗೋ ಕಂಟ್ರಾಕ್ಟ್ ಕೊಟ್ಟೀರ್ತೀವಲ್ಲಾ ಹಂಗೆ ನನ್ನ ಬಾಡೀನೂ ಯಾರ್ಯಾರೋ ಮೈಂಟೇನ್ ಮಾಡ್ತಾ ಇದಾರೆ ಅಂತ ಗೊತ್ತಾಗೋಯ್ತು. ಹೆಂಡತಿ-ಗಂಡ ಇರ್ಬೋದು ಸ್ವಾಮಿ. ಆದ್ರೆ ಹೆಂಡ್ತೀಗೆ ಬೇಕಾಗ್ದೇ ಇರೋವಾಗ ಆಕೆ ಮೈ ಮುಟ್ಟಿದ್ರೂ ಅದು ರೇಪೇ ಅನ್ನೋ ಥರಾ ಸುಪ್ರೀಂಕೋಟರ್್ ಜಡ್ಜ್ಮೆಂಟ್ ಕೊಟ್ಟಾಗಲೇ `ಮೈ ಬಾಡಿ ಈಸ್ ಮೈನ್’ ಅನ್ನೋದು ಗೊತ್ತಾಗಿದ್ದು.
ವಾಕಿಂಗ್ ಹೋಗು, ಎರಡು ಲಾಗ ಹೊಡಿ, ರನ್ ಇಂಡಿಯಾ ರನ್, ಕಬಡ್ಡಿ ಆಡು, ಟೆನಿಸ್ ಆಡು, ಟೆನಿಸ್ ಇರ್ಬೇಕು ಗುರೂ, ದಿನಾ ಬೆಳಗ್ಗೆ ಎದ್ದ ತಕ್ಷಣ ನಾನು ಶಟಲ್…ಅಂತಾ ನೂರೆಂಟು ಕೊರೀತೀವಲ್ಲ ಅದ್ರ ಬದ್ಲು `ನಿನ್ನ ಬಾಡೀ ಕಣಪ್ಪ, ನೀನು ನೆಟ್ಟಗಿಟ್ಕೋ’ ಅನ್ನೋದು ಗೊತ್ತು ಮಾಡಿದ್ರೆ. ಒಳ್ಳೆ ಆಕರ್ಿಟೆಕ್ಟ್ನ ಕನ್ಸಲ್ಟ್ ಮಾಡಿ, ಒಳ್ಳೇ ಇಂಟಿರೀಯರ್ ಡೆಕೋರೇಟರ್ನ ಹುಡುಕಿ ಬಾಡೀನ ಒಂದು ಬ್ಯೂಟಿಫುಲ್ ಮನೆ ಥರಾ ಮಾಡ್ಕೊಳ್ತಿರ್ಲಿಲ್ಲವಾ.
ಹಿಂಗಿರೋವಾಗಾನೇ `ನಿಂದು ಅದು ಇನ್ನಷ್ಟು…’ಅಂತ ಮೇಲ್ ಬಂದ್ರೆ ಏನು ಮಾಡ್ಬೇಕು. ಅಲ್ಲಾ ಸ್ವಾಮಿ ಇದು ನನ್ನ ಬಾಡಿ, ಹೆಂಗಿದೆ, ಹೆಂಗಿರ್ಬೇಕು ಅನ್ನೋದು ನನಗ್ ಗೊತ್ತು. ಆದ್ರೆ ಅದು ಬಿಟ್ಟು ಸಡನ್ನಾಗಿ ಹೀಂಂಂಗ್…ಮಾಡ್ಕಳಿ ಅಂತ ಅಮೇರಿಕಾದಿಂದ ಸಡನ್ನಾಗಿ ಷಾಕ್ ಆಗೋ ಹಾಗೆ ಪತ್ರ ಬರೆದ್ಬಿಟ್ರಲ್ಲಾ ಹೆಂಗ್ ಗೊತ್ತಾಯ್ತು ನಿಮ್ಗೆ?
ಕಾಟ ಇಲ್ಲಿಗೇ ಎಂಡ್ ಆಗಲ್ಲ. ಹೋಗ್ಲಿಬಿಡು ಎಲ್ಲಾ ನೆಟ್ಟಗಿದೆ ಅಂತಾ ಸುಮ್ಮನಾದ್ರೆ ಇನ್ನೊಂದು ಮೇಲ್ ಬರುತ್ತೆ. ಈ ಮಾತ್ರೆ ತಗಳಿ, ತಗಂಡ್ ನೋಡಿ…ಅಂತಾ ಯಾವುದೋ ಪೇಪರ್ನಲ್ಲಿ ವಯಾಗ್ರಾ ಬಂದಾಗ ವಿಸ್ತಾರವಾಗಿ ಬರೆದಿದ್ರು. ಟೈಟಲ್-ಕೊರಡು ಕೊನರುವುದಯ್ಯಾ…ಅಂತಿತ್ತು. ನಂಗೆ ಕಣ್ಕಣ್ ಬಿಡೋ ಹಂಗಾಗುತ್ತೆ. ಅಲ್ಲಾ ಯಾವ ಗ್ಯಾರಂಟಿ ಮೇಲೆ ನಂಗೆ ಈ ಮಾತ್ರೆ ತಗಳಿ ಅಂತ ಮೇಲ್ ಕಳಿಸಿದ್ರು. ಅಮೇರಿಕಾದೋರಿಗೆ, ಇಂಗ್ಲೆಂಡ್ನವರಿಗೆ, ಥ್ಯಾಲ್ಯಾಂಡ್ನವರಿಗೆ, ಆಸ್ಟ್ರೇಲಿಯಾದವರಿಗೆ, ಆಕಡೆ ಈಕಡೆ ಎಲ್ಲಾ ದೇಶದೋರ್ಗೂ ನನ್ನ ಬಾಡಿ ಬಗ್ಗೆ ಕಾಳಜಿ. ಇದೇನಪ್ಪಾ ಅಂತಾ ಸುಸ್ತಾಗಿ ಕೂತ್ರೆ ಇನ್ನೊಂದು ಮೇಲ್ ಬಂತು. ನಿಮ್ಮ ಕಷ್ಟ ನಮಗೆ ಅರ್ಥ ಆಗುತ್ತೆ. ಅದಕ್ಕೋಸ್ಕರ, ನಿಮಗೋಸ್ಕರ 80 ಪಸರ್ೆಂಟ್ ರಿಯಾಯಿತಿ ಅಂತ!
`ದಂಡಪಿಂಡಗಳು, ಇವರು ದಂಡಪಿಂಡಗಳು, ವೇಸ್ಟ್ಬಾಡಿಗಳು’ ಅಂತ ಜಿಂಗಲ್ ಬರ್ತಿತ್ತಲ್ಲಾ ಟಿವಿನಲ್ಲಿ ಯಾರು ಸ್ವಾಮಿ ಹೇಳ್ತಾರೆ ಇವಾಗ ವೇಸ್ಟ್ ಬಾಡಿ ಅಂತ. ಅದು ಎಂತಾ ಬಾಡಿ ಆದ್ರೂ ಮಾತ್ರೆ ತಿನ್ನಿಸೋಕೆ ರೆಡಿ. ಈ ವೇಸ್ಟ್ ಬಾಡಿಗಳಿಗೆಲ್ಲಾ ಈಗ ಡಿಮ್ಯಾಂಡ್ ಬಂದ್ಬಿಟ್ಟಿದೆ. ಇದು `ಬಾಡಿ ಇಂಡಸ್ಟ್ರಿ’. ಅಲ್ಲಾ ತಲೆನೋವ್ ಬಂದಿದೆ ಅನಾಸಿನ್ ತಿನ್ಬುಡಿ ಅನ್ನೋಷ್ಟು ಸಲೀಸಾ?
`ಮಾನವಾ ದೇಹವು ಮೂಳೆಮಾಂಸದ ತಡಿಕೆ’ ಅನ್ನೋದಕ್ಕೂ ಗುಡಿಯ ನೋಡಿರಣ್ಣಾ ದೇಹದ ಗುಡಿಯ ನೋಡಿರಣ್ಣಾ ಅನ್ನೋದಕ್ಕೂ-ಎನ್ನ ಕಾಯವ ದಂಡಿಗೆಯ ಮಾಡಯ್ಯ ತಂದೆ ಅನ್ನೋದಕ್ಕೂ-ಎನ್ನ ಕಾಲೇ ಕಂಬ, ದೇಹವೇ ದೇಗುಲ, ಎನ್ನ ಶಿರವೇ ಹೊನ್ನ ಕಳಶವಯ್ಯ-ಅನ್ನೋದನ್ನ ಕೇಳಿರೋ ನಾವು ಈಗ ನಿಮ್ದು ಹಂಗೆ, ನಿಮ್ದು ಹಿಂಗೆ ಅಂತಾ ಅಮೇರಿಕಾ ಆಸ್ಟ್ರೇಲಿಯಾದಿಂದ ದುಬರ್ಿನು ಹಾಕಿ ಹೇಳೋ ಕಾಲಕ್ಕೆ ಬಂದ್ ನಿಂತಿದೀವಿ’.
ಓ.ಕೆ., ನಮಗಾದ್ರೂ ಅವರ ಕಳಿಸಿರೋ ಮೇಲ್ ಬರೀ ಮಣ್ಣಾಂಗಟ್ಟಿ ಅಂತ ಗೊತ್ತಾಗುತ್ತೆ, ಆದ್ರೆ ಈಗ ಮೀಸೆ ಬರ್ತಾ ಇರೋರು ಕಂಪ್ಯೂಟರ್ ಓಪನ್ ಮಾಡಿದ ತಕ್ಷಣ ಇದೆಲ್ಲಾ ಅವರ ಮುಂದೆ ರಾಶಿರಾಶಿ ಬೀಳುತ್ತಲ್ಲಾ-ಅವ್ರೇನಾಗ್ಬೇಕು? ಇದನ್ನೆಲ್ಲಾ ಯಾಕೆ ಹೇಳಿದೆ ಅಂದ್ರೆ ನನ್ನ ಕಸಿನ್ ಮೊನ್ನೆ ತಾನೇ ಎಸ್ಎಸ್ಎಲ್ಸಿ ಪಾಸಾದ. ಕಾಲೇಜಿಗೆ ರೆಡಿಯಾಗೋ ಸಂಭ್ರಮ. ಒಂದು ಒಳ್ಳೇ ಡ್ರೈ ಶೇವಿಂಗ್ ಮಾಡ್ದ. `ಅಡಲ್ಟ್’ ಅನ್ನೋ ಖುಷಿ ಮುಖದ ಮೇಲೆ `ಥಯ್ಯಾ ಥಕ್ಕ ಥಕ್ಕ ಥಯ್ಯಾ ಥಕ್ಕ…’ ಅಂತ ನಾಟ್ಯ ಆಡ್ತಿತ್ತು. ಅವಾಗ ಅನಿಸ್ತು ಇವ್ರ ಬಾಡಿ ಮೇಲೆ ಕಣ್ ಬಿದ್ರೆ ಪಾಪ ಏನಾಗ್ತಾರೋ ಅಂತ. ದಟ್ಸಾಲ್…

‍ಲೇಖಕರು avadhi

June 11, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ avaniCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: