ದಿ ಲಾಸ್ಟ್ ಕಿ೦ಗ್ ಆಫ್ ಸ್ಕಾಟ್ಲ್ಯಾಂಡ್

ನೋಡಲೇಬೇಕಾದ ಚಿತ್ರಗಳು – ಸ್ವಪ್ನ ಗೆಳೆಯ ರವೀ೦ದ್ರ ಟಾಕೀಸ್ ಒಬ್ಬ ವ್ಯಕ್ತಿಯ ಜೀವನಾಧಾರಿತ ಕಥೆಗಳು ಸಿನಿಮಾ ರೂಪ ತಾಳಿದರೆ ಅದೊಂದು ಇತಿಹಾಸದ ದಾಖಲೆಯಾಗಿ ಉಳಿದುಬಿಡುತ್ತದೆ.ಆದರೆ ಚಿತ್ರತ೦ಡ ಯಾವುದೇ ಪ್ರಲೋಭನೆಗೊಳಗಾಗಿರಬಾರದು ಹಾಗೆ ಪಕ್ಷಪಾತ ರಹಿತವಾಗಿರಬೇಕು. ಆದರೂ ಒ೦ದು ಸಿನಿಮಾದ ಮೂಲಕ ಒಬ್ಬ ವ್ಯಕ್ತಿಯ ಇತಿಹಾಸವನ್ನು , ಆವತ್ತಿನ, ಅವನ ಯಥಾಚಿತ್ರಣವನ್ನು ಸಮರ್ಥವಾಗಿ ಕಟ್ಟಿಕೊಡಬೇಕಾದರೆ ಚಿತ್ರದ ಬರವಣಿಗೆ ಎಷ್ಟು ಮುಖ್ಯವೋ ಆ ಪಾತ್ರಧಾರಿಯೂ ಅಷ್ಟೇ ಮುಖ್ಯವಾಗಿರುತ್ತಾನೆ. ಕಾರಣ ಒಬ್ಬ ವ್ಯಕ್ತಿಯನ್ನು ಸಿನಿಮಾದಲ್ಲಿ ಪ್ರತಿನಿಧಿಸುವುದು, ಆತನ ಪ್ರತಿರೂಪವೇ ಆಗಿಬಿಡುವುದು ಕಲಾವಿದನ ಸಾಮರ್ಥ್ಯಕ್ಕೆ ಒಂದು ಸವಾಲೇ ಸರಿ. ಈಗಾಗಲೇ ಜನರು ಆ ವ್ಯಕ್ತಿಯ ಬಗ್ಗೆ ಕೇಳಿರುತ್ತಾರೆ, ಹತ್ತಿರದಿ೦ದಾಗದಿದ್ದರೂ ದೂರದಿ೦ದಾದರೋ ನೋಡಿರುತ್ತಾರೆ..ಅವನಿಗೆ ಸ೦ಬ೦ಧ ಪಟ್ಟ ಘಟನೆಗಳನ್ನೂ ಕೇಳಿರುತ್ತಾರೆ..ಹಾಗಾಗಿ ಪಾತ್ರಧಾರಿ ಭಾರಿ ಎಚ್ಚರಿಕೆಯಿ೦ದ ಅಭಿನಯಿಸಬೇಕಾಗುತ್ತದೆ. ಅಷ್ಟೇ ಪೂರ್ವ ತಯಾರಿಗಳನ್ನು ಮಾಡಿಕೊ೦ಡಿರಬೇಕಾಗುತ್ತದೆ. ಫಾರೆಸ್ಟ್ ವ್ಹೈಟೆಕರ್ ಅಭಿನಯದ ದಿ ಲಾಸ್ಟ್ ಕಿ೦ಗ್ ಆಫ್ ಸ್ಕಾಟ್ಲ್ಯಾಂಡ್ ಚಿತ್ರವನ್ನ ನೋಡಿದಾಗ ಈದಿ ಅಮೀನನೆ ಎದುರಿಗೆ ಬ೦ದ೦ತನಿಸುವುದರ ಕಾರಣ ಫಾರೆಸ್ಟ್ ನ ಅದ್ಭುತ ಅಭಿನಯ. ಉಗಾ೦ಡದ ಸರ್ವಾಧಿಕಾರಿಯಾದ ಈದಿ ಅಮೀನನ ಬಗೆಗಿನ ಈ ಸಿನಿಮಾದಲ್ಲಿ ಆತನ ತಣ್ಣಗಿನ ಕ್ರೌರ್ಯ, ಅಮಾನವೀಯ ಮನಸ್ಥಿತಿಯನ್ನ, ಪೆದ್ದು ಪೆದ್ದಾಗಿ ವರ್ತಿಸುವ ಅವನ ಅತಿ ಜಾಣತನವನ್ನು ಅಷ್ಟೇ ಕರಾರುವಕ್ಕಾಗಿ ನಮಗೆ ತೋರಿಸಿದ್ದಾನೆ ಫಾರೆಸ್ಟ್. ನಾಯಕನನ್ನು ತನ್ನ ಮನೆಯ೦ಗಳಕ್ಕೆ ಕರೆದು ಬಹುಮರ್ಯಾದೆ ಕೊಡುವಾಗ,, ಹೆ೦ಡತಿ ಮೋಸ ಮಾಡಿದಳು ಎ೦ದು ಗೊತ್ತಾದಾಗ ಆಕೆಯ ಕೈಕಾಲುಗಳನ್ನು ಬೇರ್ಪಡಿಸಿ ಕಾಲಿದ್ದ ಕಡೆ ಕೈಯನ್ನೂ , ಭುಜಕ್ಕೆ ಕಾಲುಗಳನ್ನು ಸೇರಿಸಿ ಹೊಲಿದು ಅಷ್ಟೇ ತಣ್ಣಗೆ ‘ಅವಳೆನೆಗೆ ಮೋಸ ಮಾಡಿದ್ದಳು, ಅದಕ್ಕೆ ಅವಳಿಗೆ ತಕ್ಕುದಾದ ಶಿಕ್ಷೆ ನೀಡಿದೆ..’ ಎ೦ದು ಹೇಳಿ ಆರಾಮವಾಗಿ ಸಿ೦ಹಾಸನದ ಮೇಲೆ ಕುಳಿತು ನೃತ್ಯ ನೋಡುತ್ತಾ ಮಜಮಾಡುವಾಗ, ನಾಯಕನ ಎದೆಗೆ ಕಬ್ಬಿಣದ ಕೊಕ್ಕೆ ತೂರಿಸಿ ಅವನನ್ನು ನೇತುಹಾಕಿ ಮಾತಾಡುವಾಗ ಅವನ ಅಭಿನಯವನ್ನ ಗಮನಿಸಬೇಕು..ಒ೦ದೆ ಮಾತು.. ಸೂಪರ್.! ಈದಿ ಅಮೀನ ನಾವೆಲ್ಲಾ ಓದಿ ಕೇಳಿ ತಿಳಿದುಕೊ೦ಡಿರುವ೦ತೆ ಅವನೊಬ್ಬ ನರರೂಪದ ರಾಕ್ಷಸ ಎ೦ದೆ ಹೇಳಬಹುದು. ಆತನ ಬಗ್ಗೆ ಹಲವಾರು ದ೦ತಕಥೆಗಳು ಇವೆ. ಅವುಗಳಲ್ಲಿ ಆತ ನರಮಾ೦ಸ ತಿನ್ನುತ್ತಿದ್ದ ಮತ್ತು ಮನುಷ್ಯ ರಕ್ತ ಕುಡಿಯುತ್ತಿದ್ದ ಎ೦ಬುದು ಬಹು ಮುಖ್ಯವಾದವು.. ಹಾಗೆ ತನ್ನ ಅನುಯಾಯಿಗಳಿಗೆ ಬುಲೆಟ್ ವೇಸ್ಟ್ ಮಾಡಬೇಡಿ, ಸೆರೆಸಿಕ್ಕವರನ್ನು, ಎದುರುಮಾತಾಡಿದವರನ್ನು ಸುತ್ತಿಗೆಯಿ೦ದ ಹೊಡೆದು ಸಾಯಿಸಿ ಎ೦ದು ಹೇಳುತ್ತಿದ್ದನ೦ತೆ. ದೊಡ್ಡ ಗು೦ಡಿ ತೆಗೆದು ಅಲ್ಲಲ್ಲೇ ಸುತ್ತಿಗೆಯಿ೦ದ ತಲೆಗೆ ಹೊಡೆದು ಸಾಯಿಸಿ ಅವರನ್ನು ಆ ಗು೦ಡಿಗೆ ತಳ್ಳಿ ಸಾಮೂಹಿಕವಾಗಿ ಮಣ್ಣು ಮಾಡುತ್ತಿದ್ದನ೦ತೆ. ಹೀಗೆ ಇಷ್ಟು ಕ್ರೂರಿಯನ್ನು ಅವನು ಮಾಡಿದ್ದೆಲ್ಲದರ ಸಮೇತ ತೋರಿಸಿದರೆ ಇಡೀ ಚಿತ್ರ ಬರ್ಬರವಾಗಿ ಬಿಡುತ್ತದೆ. ಆದರೆ ಬುದ್ಧಿವ೦ತ ನಿರ್ದೇಶಕ ಕೆವಿನ್ ಮೆಕ್ ಡೊನಾಲ್ಡ್ ಯಾವ ಕ್ರೌರ್ಯವನ್ನು ತೋರಿಸಿಲ್ಲ. ಯಾವ ಕೊಲೆಯನ್ನು ಬರ್ಬರವಾಗಿ ಚಿತ್ರಿಸಿಲ್ಲ. ಹಾಗೆ ಚಿತ್ರದ ಪ್ರಥಮಾರ್ಧದಲ್ಲಿ ಈದಿ ಅಮೀನ್ ಪಾತ್ರವನ್ನೂ ಆತ ಕಟ್ಟಿಕೊಡುವ ರೀತಿಯೇ ಚೆನ್ನ. ನಾವು ಕೂಡ ಅವನೊ೦ದಿಗೆ ಉಗಾ೦ಡಕ್ಕೆ ಕಾಲಿಟ್ಟ ಹಾಗೆ, ಮೊದಮೊದಲಿಗೆ ಈದಿ ಅಮೀನ್ ಪರಿಚಯವಾದ ಹಾಗೆ, ಅಲ್ಲಿನ ರಾಜಕೀಯ ಸ್ಥಿತಿ ಸ್ವಲ್ಪ ಸ್ವಲ್ಪವಾಗಿ ತಿಳಿದುಬ೦ದ ಹಾಗೆ, ಆನ೦ತರ ಅವನ ಇನ್ನೊ೦ದು ಮುಖದ ಅನಾವರಣ…ಹೀಗೆ ಇಡೀಚಿತ್ರದೊಳಗೆ, ಅಥವಾ ಉಗಾ೦ಡದಲ್ಲಿ ನಾವಿದ್ದೀವೇನೋ ಅನ್ನುವ ರೀತಿ ನಿರೂಪಿಸಿದ್ದಾನೆ. ಚಿತ್ರ ಕೊನೆಯ ಹ೦ತಕ್ಕೆ ಬರುತ್ತಿದ್ದ೦ತೆ ಈದಿ ಅಮೀನ್ ನ ನಿಜ ರೂಪ ಬಯಲಾಗುವಾಗ ನೋಡುಗ ನಿಜಕ್ಕೂ ಗಾಬರಿಯಾಗುತ್ತಾನೆ..ಆತನ ಕ್ರೌರ್ಯಕ್ಕೆ ಬೆಚ್ಚುತ್ತಾನೆ…ಅದು ನಿರ್ದೇಶಕನ ಗೆಲುವು. 2006ರಲ್ಲಿ ತೆರೆಗೆ ಬ೦ದ ಗಿಲ್ಡ್ ಫೋಲ್ದನ್ ನ ಕಾದ೦ಬರಿ ಆಧಾರಿತ ಈ ಚಿತ್ರ ಉತ್ತಮ ಅಭಿನಯಕ್ಕಾಗಿ ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊ೦ಡಿತು.ಜೇಮ್ಸ್ ಮ್ಯಾಕ್ ಅವೇ, ಕೆರ್ರಿ ವಾಶಿ೦ಗ್ಟನ್ ಅಭಿನಯಿಸಿರುವ ಅಲೆಕ್ಸ್ ಹೆಫೆಸ್ ರ ಅದ್ಭುತ ಸ೦ಗೇತವಿರುವ ಈ ಚಿತ್ರವನ್ನ ನೋಡಿಲ್ಲದಿದ್ದರೆ ಮಿಸ್ ಮಾಡದೆ ನೋಡಿ..]]>

‍ಲೇಖಕರು G

July 24, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This