'ದಿ ಸೆವೆನ್ ಇಯರ್ ಇಚ್'

‘ಸಿರಿ’ ಬಂದ ಕಾಲಕ್ಕೆ…

-ಮೃಗನಯನಿ

 
ಮೊನ್ನೆ ‘ದಿ ಲಾಸ್ಟ್ ಲಿಯರ್’ ನೋಡುತ್ತಿದ್ದೆ ಅಮಿತಾಬ್ ನ ಅದ್ಭುತವಾದ ನಟನೆ, ಮೂಲ ಕಥೆಗೆ ಸಂಬಂಧವೇ ಇಲ್ಲದ ಶಬ್ನಮ್(ಪ್ರೀತಿ ಜಿಂಟಾ) ಳ ಗಂಡ ಹಾಗೂ ನರ್ಸ್ ಐವಿಯ ಬಾಯ್ ಫ್ರೆಂಡುಗಳ ಹಿಂಸೆ (ನಮಗೂ ಅವರಿಗೂ!). ಹಳೆಯದಾದರೂ ಇಷ್ಟವಾಗುವ ಮನಸ್ಸನ್ನು ಮುಟ್ಟುವ, ಮುಲುಗುಟ್ಟಿಸುವ ಕಾನ್ಸೆಪ್ಟ್ talented and innocent is made victim by intelligent and selfish. .
 
ಕೊನೆಗೆ ಎಂದಿನಂತೆ ಭಾರತೀಯ ಸಿನೆಮಾಗಳ ಎಂಡಿಂಗು, ಫಿಲ್ಮ್ ಶಾಟ್ ಗೋಸ್ಕರ ಮೇಲಿನಿಂದ ಹಾರಿ ಸ್ಪೈನಲ್ ಕಾರ್ಡ್ ಹಾಗೂ ಬ್ರೈನ್ ಡ್ಯಾಮೇಜ್ ಮಾಡಿಕೊಂಡು, ಮುಂದೆಂದೂ ಎದ್ದು ಓಡಾಡುವುದಿಲ್ಲ ಹಿಂದಿನದ್ಯಾವುದೂ ನೆನಪಿರುವುದಿಲ್ಲ ಎಂದು ಡಾಕ್ಟರಿನಿಂದ ಸರ್ಟಿಫಿಕೆಟ್ ಪಡೆದು, ಹಾಸಿಗೆ ಹಿಡಿದ ಅಮಿತಾಬ್, ಸಿನೆಮಾ ಕೊನೆಗೆ ಪ್ರೀತಿ ಜಿಂಟಾ ಅವನ ಮುಂದೆ ಕೂತು ಶೆಕ್ಸ್ಪಿಯರ ನ ‘ದಿ ಕಿಂಗ್ ಲಿಯರ್’ನ ಸಾಲುಗಳನ್ನು ಹೇಳಿದಾಗ ಅವನೂ ಅದರ ಸಾಲುಗಳನ್ನು ಹೇಳುತ್ತಾನೆ. ಪವಾಡಗಳು ನಡೆಯುವುದಿಲ್ಲ ಎಂದು ಹೇಳೋರು ಯಾರ್ರೀ? ಅವರಿಗೆ ನಮ್ಮ ಸಿನೆಮಾಗಳನ್ನು ತೋರಿಸಿ… ಸಿನೆಮಾ ಮುಗಿಯುವ ಹೊತ್ತಿಗೆ ಅಶ್ವಿನಿ ಅಳುತ್ತಿದ್ದಳು, ಅಜರುನ್ ರಮ್ಪಲ್ಗೆ ಗೆ ಅವಳಿಂದ ಬೈಗುಳದ ಸುರಿಮಳೆಯೂ ಆಯ್ತು. ಶೇಕ್ಸ್ಪಿಯರ್ನನಾಟಕಗಳ ಸಾಲುಗಳನ್ನು ಅಮೋಘವಾಗಿ ಹೇಳುವ ಅಮಿತಾಬ್ ಕಂಡು ಆಶ್ಚರ್ಯ ನನಗೆ.

ಸಿನೆಮಾ ಇಷ್ಟ ಆಗುತ್ತೆ. ವಂದನಾ ರಾವ್ (ಸಿನೆಮಾದಲ್ಲಿ ಅಮಿತಾಬ್ ನ ಹೆಂಡತಿ, ಅವಳ ನಟನೆಯೂ ಖುಷಿ ಕೊಡುತ್ತೆ) ಹೇಳುವ ಘಟನೆ ‘I came here to live with my parents in this city, didn’t like anything and one day my dad took me to the theater he(Amitab) was playing Othelo that’s where I saw him! I still get goosefish when I think of him. And we – like hell. What a way to die! waat a waay to die! I just packed my suitcase and came to this house. Asked would you let me stay here with you? Didn’t say anything just looked at me and said ‘upstairs left” ಕಾಡುತ್ತಿತ್ತು. ‘ಹಾಗಿರಲು ಸಾಧ್ಯವಾ?’ ಕೇಳಿಕೊಂಡೆ. ಸಾಧ್ಯವಾದರೆ ಎಷ್ಟು ಚಂದ ಅನ್ನಿಸಿತು.
 
ಅಮ್ಮನಿಗೆ ಹೇಳಿದರೆ ಅದ್ರಲ್ಲೇನು ಚಂದ ಅಂತ ಗಾಬರಿ ಪಟ್ಟುಕೊಂಡಿರೋಳು! ಹೋದ ಸತಿ ಮನೆಗೆ ಹೋದ ದಿನವೇ ಏಳೆಂಟು ಜನ ಅಪ್ಪನ ದೂರದ ಸಂಬಂಧಿಗಳು (ಯಾವ ರೀತಿಯಿಂದ ಸಂಬಂಧ ಎಂದು ಹೇಳಲು ಪ್ರಯತ್ನಿಸಿ ಸೋತರು ಅಪ್ಪ) ಮನೆಗೆ ಬರೋರಿದ್ದರು. ಯಾವುದೋ ಕೆಲಸದಿಂದ ಈ ಊರಿಗೆ ಬಂದಿದ್ದರಂತೆ, ಬ್ಯಾಂಕಿನಿಂದ ಮನೆಗೆ ಬರುತ್ತಿದ್ದಾಗ ಅವರನ್ನು ಕಂಡ ಅಪ್ಪ ಅವರಿಗೆಲ್ಲಾ ನಮ್ಮನೆಯಲ್ಲೇ ಉಳಿದುಕೊಳ್ಳಬೇಕೆಂದು ಬಲವಂತ ಮಾಡಿ ಅಪ್ಪ ಅಮ್ಮನಿಗೆ ಫೋನು ‘ಊರೋರು ಏಳೆಂಟು ಜನ ಬರ್ತಾರೆ ಚಪಾತಿ ಚಟ್ನಿ ಮಾಡಿಟ್ಟಿರು’ ಸ್ಕೂಲಿನಿಂದ ಸುಸ್ತಾಗಿ ಬಂದಿದ್ದ ಅಮ್ಮನಿಗೆ ಸಿಟ್ಟು ‘ಎಷ್ಟ್ ವರ್ಷ ಆದ್ರೂ ನಿಮ್ಮಪ್ಪನಿಗೆ ಬುದ್ದಿ ಬರಲ್ಲ. ಯಾವಾಗ್ಲೂ ಮನೇಲಿ ಜನ. ಬೇಡ್ದಿದ್ದೋರಿಗೆಲ್ಲಾ ನಮ್ಮನೆನೇ ಟೆಂಟು! ಇಷ್ಟ್ ದಿನ ಆದ್ಮೇಲೆ ಬಂದಿದೀಯ ಆರಾಮಾಗ್ ಮಾತಾಡ್ಕೊಂಡ್ ಕೂರಣಾ ಅಂದ್ರೆ ಅದಕ್ಕೂ ಕಲ್ಲು ಬಿತ್ತು. ಈ ಸಂಸಾರದ್ ಬಂಧನಕ್ಕೆ ಒಂದ್ ಸತಿ ಬಿದ್ರೆ ಮುಗೀತು, ಒಂದಲ್ಲ ಒಂದು tension   !’ ಅಂದ್ಲು. ‘ಹೂಂ ಹೌದು ಮದ್ವೇನೇ ಆಗಬಾರದು. ಏನು ಟೆನ್ಷನ್ನೇ ಇರಲ್ಲ ಅಂದೆ’ ಅಮ್ಮನಿಗೆ ಫುಲ್ ಗಾಬರಿ ‘ಹಂಗಲ್ಲ ನಾನು ಹೇಳಿದ್ದು, ಒಂದೊಂದ್ ಸತಿ ಬೇಜಾರಾಗುತ್ತೆ ಅಷ್ಟೆ. ನೀನು ಆ ಥರ ಎಲ್ಲಾ ಏನೇನೋ ಯೋಚಿಸ್ಬೇಡ’ ಅಂದಳು ‘ಛೇ ನಿಂಗೆ ಹೇಳಲೇಬಾರದಿತ್ತು’ ಹಳಹಳಿಸಿದಳು. ‘ನಿಂಗೆ ಏನ್ ವಿಶ್ಯಾನೂ ಹೇಳಂಗಿಲ್ಲ ಹಿಂಗೇ ಎಂತದಾದ್ರೂ ಎಡ್ವಟ್ಟಾಗಿ ತಿಳ್ಕೊತೀಯ’ ಬೇಸರಿಸಿದಳು. ‘ನೀನು ಟೆನ್ಷನ್ ಮಾಡ್ಕೊಬೇಡ ನಾನೇನು ಮದ್ವೆ ಮಾಡ್ಕೊಳಲ್ಲ ಅನ್ಲಿಲ್ವಲ್ಲ ಇನ್ನೂ ಮೂರ್ನಾಲ್ಕು ವರ್ಷದ್ ಮಾತು ತಾನೆ ಆಮೇಲೆ ನೋಡ್ಕೊಂಡ್ರಾಯ್ತು’ ಅಂದೆ. ಆಮೇಲಿಗಾದ್ರೂ ಹಿಂಗೆಲ್ಲಾ ಯೋಚಿಸ್ಬೇಡ ಅಂದಿದ್ ಕೇಳಿ ನಗು ಬರ್ತಿತ್ತು. ‘ಲಿವ್ ಇನ್ ಸಂಭಂದಗಳು ಇರೋದ್ರಲ್ಲಿ ವಾಸಿ ಬಂಧನಗಳಿರೋದಿಲ್ಲ ಅಲ್ಲಿ’ ಅಂದೆ.
 
ರಘು ಅಣ್ಣ ಹೇಳಿದ ‘ನೋಡು ಪುಟ್ಟಾ ಲಿವ್ ಇನ್ ಸಂಬಂಧಗಳ ಕಷ್ಟಗಳೇ ಬೇರೆ. ಅದು ಇನ್ಸೆಕ್ಯುದರ ಲೈಫು! ನೀನು ಯಾವುದೋ ಹುಡುಗನ್ನ ಪ್ರೀತಿಸ್ತೀಯ ಅವನೂ ಪ್ರಿತಿಸ್ತನೆ ಇಬ್ಬರೂ ಜೊತೆಗಿರಲು ಶುರು ಮಾಡುತ್ತೀರಿ ಅಂತಿಟ್ಟುಕೋ, ನೀನು ತುಂಬಾ ಪ್ರೀತಿಸೋ ಅವನು ಹೇಳದೇ ಕೇಳದೇ ಒಂದು ದಿನ ಬಿಟ್ಟು ಹೋಗಬಹುದು ಅನ್ನೋ ಭಯ ನಿನ್ನ ಕಾಡ್ತಾ ಇರುತ್ತೆ ಅಲ್ವಾ? ಅಂಥ ಭಯದಲ್ಲಿ ಬದುಕೋ ಬದುಕೂ ಒಂದು ಬದುಕಾ? ಅಷ್ಟು ಮಾತ್ರ ಅಲ್ಲ ಈ ಎಲ್ ಐ ಸಿ ಫಾರಂ ನೋಡು ಎಂದು ಅವನು ತುಂಬುತ್ತಿದ್ದ ಫಾರಂ ತೋರಿಸಿ ನಾಮಿನೀಗೆ ಅಂತ ಕಾಲಂ ಇದೆ ಹಸ್ಬೆಂಡ್ ಡಾಟರ್ ವೈಫ್ ಮದರ್ ಅಂತೆಲ್ಲಾ ತುಂಬಬಹುದು, ಲಿವ್ ಇನ್ ರಿಲೇಶನ್ಗಳಲ್ಲಿ ಹಸ್ಬೆಂಡ್ ವೈಫ್ ಅನ್ನೋಲ್ಲ ಅಲ್ವ? ಏನಂತ ಕರೀತಾರೆ ಗೊತ್ತಾ? ಹಂಗೆ ಎಂತದಾದ್ರೂ ಇದ್ರೂ ಜೀವನ ಪೂರ್ತಿ jotegirtaaro ಇಲ್ಲವೋ ಎಂದು ಗೊತ್ತಿಲ್ಲದವರ ಹೆಸರಿಗೆ ನಾಮಿನಿ ಹೇಗೆ ಮಾಡಿಸೋದು? ಇಂಥಾ ನೂರಾರು ಸಮಸ್ಯೆಗಳು ಎದುರಾಗುತ್ತವೆ ಇದೊಂದನ್ನ ಉದಾಹರಣೆಗೆ ಹೇಳ್ದೆ ಅಷ್ಟೇ’ ಅಂದ. ಹಾಗಾದರೆ ಮುದುವೆ ಆಗೋದು ಯಾಕೆ ಜೀವನ ಪೂರ್ತಿ ಜೋತೆಗಿತರಿವಿ ಅನ್ನೋ ಸೆಕ್ಯೂರ್ದ್ ಫೀಲಿಂಗ್ನಲ್ಲಿರೋಕ್ಕಾ? ಪ್ರೀತಿಗೆ ಅಲ್ವಾ? ಮದ್ವೆ ಆದ್ಮೇಲೂ ಜೊತೆಗೇ ಇರ್ತೀವಿ ಅಂತ ಗ್ಯಾರೆಂಟಿ ಏನು? ದಿವೊಸರ್ ಕೇಸುಗಳಿಗೇನು ಬರಾನ? ಅಂತೆಲ್ಲಾ ಎಮೋಶನಲ್ಲಾಗಿ ಪ್ರಶ್ನೆಗಳು ಹುಟ್ಟಿದ್ದರೂ ಅವನು ಹೇಳೋ ವಾಸ್ತವತೆಯನ್ನೂ ನಿರಾಕರಿಸಲು ಆಗಲಿಲ್ಲ.
 
ಯಾವುದೇ ಸಂಬಂಧದ ಶುರೂವಿನಲ್ಲಿ ಸಂಗಾತಿಯ ನೆಗೆಟಿವ್ ಪಾಯಿಂಟ್ಗಳನ್ನು ಗಮನಿಸಲು ಹೋಗಿರೋಲ್ಲ. ‘ಅವ್ಳು ಬಟ್ಟೆ ಜೋಡಿಸಿಟ್ಟಿಲ್ಲ’ ‘ಇವ್ನು ನಲ್ಲಿ ಸರಿಯಾಗಿ ನಿಲ್ಸಿಲ್ಲ’ ಇಬ್ಬರಿಗೂ ಏನೂ ಅನ್ಸಲ್ಲ ಅವ್ನೇ ಬಟ್ಟೆ ಜೋಡಿಸಿಟ್ಟ ಇವಳೇ ಹೋಗಿ ಸರಿಯಾಗಿ ನಲ್ಲಿ ನಿಲ್ಲಿಸಿ ಬಂದ್ಲು. ಸ್ವಲ್ಪ ದಿನ ಕಳೀತು ವಾಸ್ತವ ಅರಿವಾಯಿತು ಆದರೂ ಸಂಗಾತಿಯ ತಪ್ಪುಗಳಿಗೆ ತಾವೇ ಕಾರಣ ಸಮರ್ಥನೆ ಕೊಟ್ಟುಕೊಂಡರು ‘ತುಂಬ ಕೆಲ್ಸ ಇತ್ತೆನೋ ಅದಕ್ಕೆ ಬಟ್ಟೆ ಜೋಡ್ಸಿಟ್ಟಿಲ್ಲ’ ‘ಆ ನಲ್ಲಿನೇ ಸರಿಯಿಲ್ಲ ಪಾಪ ಅವ್ನೇನ್ ಮಾಡ್ತಾನೆ, ಅವ್ನಿಗೆ ಅದನ್ನ ನಿಲ್ಲಿಸೋ ಮೆಥೆಡ್ ಗೊತ್ತಿಲ್ಲ’ ಇನ್ನೂ ಸ್ವಲ್ಪ ದಿನಗಳು ಕಳೆದ ಮೇಲೆ ‘ಲೇ ನಿಂಗೆ ಬಟ್ಟೆ ಜೊಡ್ಸಿಡಕ್ ಏನೇ ರೋಗ?’ ‘ರೀ ನಿಮ್ಗೆ ನಲ್ಲಿ ಸರಿಯಾಗಿ ನಿಲಸಕ್ ಆಗಲ್ವಾ ಎಷ್ಟ್ ನೀರು ಹದರ್ು ಹೋಯ್ತು ನೋಡಿ’ ಹಿಂಗಾಗೋಗುತ್ತೆ.
 
ಇದೇ ವಿಶ್ಯದ ಬಗ್ಗೆ ಮಾತಾಡ್ತಿದ್ವಿ ‘ದಿ ಸೆವೆನ್ ಇಯರ್ ಇಚ್’ ಅನ್ನೋ ಸಿನೆಮಾದ ಬಗ್ಗೆ ಹೇಳ್ತಿದ್ದ ಸಾತ್ಯಕಿ ‘ಮದುವೆಯಾಗಿ ಏಳು ವರ್ಷದ ನಂತರ ಗಂಡಸರು ಮದುವೆಯಾಚೆಗಿನ ಸಂಬಂಧಕ್ಕೆ, ಸಂಗಾತಿಗೆ ‘ಮೋಸ’ ಮಾಡೋಕ್ಕೆ ಹಾತೊರೀತಾರೆ ಅಂತ ಕಾನ್ಸೆಪ್ಟ್ ಅಂತೆ. ಮರ್ಲಿನ್ ಮನ್ರೋ ಮತ್ತು ಟಾಮ್ ಎವೆಲ್ ಮಾಡಿದಾರೆ. ನೋಡಬೇಕು ಮೂವಿನ. ಆದ್ರೆ ಈಗ ನಾವು ಸೆವೆನ್ ಇಯರ್ ಇಚ್ ಫ್ರೇಸನ್ನ ಯಾವುದೇ ಸನ್ನಿವೇಶದಿಂದ ಸ್ಠಿತಿಯಿಂದ ಕಳಚಿಕೊಂಡು ಬೇರೆಯದಕ್ಕೆ ಹೋಗಬೇಕು ಅನ್ನಿಸುವ ಭಾವನೆಯನ್ನ ವ್ಯಕ್ತ ಪಡಿಸೋದಕ್ಕೆ ಬಳಸ್ತೀವಿ ಅಲ್ವಾ? ಎಲ್ಲಾ ಸಂಭಂದಗಳೂ ಅಷ್ಟೇ ಅನ್ಸತ್ತೆ. ಅವನು (ಹೆಸರು ಬೇಡ ಅಲ್ವಾ) ಪ್ರಪೋಸ್ ಮಾಡ್ದಾಗ ಹೇಳಿದ್ದೆ. ಎಲ್ಲಾ ಮದುವೆಗಳೂ ಅಷ್ಟೇ ಲವ್ ಆಗ್ಲೀ ಅರೇಂಜ್ಡ್ ಆಗ್ಲಿ ಶುರೂನಲ್ ಚಂದ ಆಮೇಲೆ ಎಲ್ಲಾ ಒಂದೇ. ಅದೇ ಗಂಡ(ಹೆಂಡತಿ), ಅದೇ ಸೆಕ್ಸು, ಅದೇ ಪ್ರೀತಿ, ಅದೇ ಜಗ್ಳ.. ಅದೇ ಹ್ಮ್..ಮ್ಮ್ಮ್ ಅದೇ ಏನೇನೋ..
 
ಈ ಸಂಭ್ರಮಕ್ಕೆ ಅಪ್ಪ ಅಮ್ಮಂಗೆ ಹಿಂಸೆ ಮಾಡಿ, ಹರ್ಟ್ ಮಾಡಿ ಅವರ ವಿರೋಧ ಕಟ್ಕೊಂಡು ಬರೋಕ್ಕೆ ಇಷ್ಟ ಇಲ್ವೋ ಅಂದಿದ್ದೆ. ಹಿಂಗೆ ಹೇಳಿ ರಿಜೆಕ್ಟ್ ಮಾಡ್ದೆ ಅಂತ ಅಮ್ಮಂಗೆ ಖುಶಿಯಾಗಿತ್ತು ಅದೇ ಕಾರಣಕ್ಕೆ ಮದುವೆ ಅಂದ್ರೆ ಬೋರು ಅಂದ್ರೆ ಅಮ್ಮ ಟೆನ್ಷನ್ ಮಾಡ್ಕೊತಾಳೆ. ಮೂರನೇ ಸೆಮ್ ಪರೀಕ್ಷೆಗೆ ಇನ್ನೊಂದು ವಾರ ಉಳಿದಿದೆ. ಅಪ್ಪ ಫೋನ್ ಮಾಡಿ ನೀನು ಚನ್ನಾಗ್ ಓದ್ತೀಯ ಅಂತ ಗೊತ್ತು ನಿಂಗೇನೂ ಹೇಳಲ್ಲಮ್ಮ ನಾನು ಅಂತಾರೆ. ಒಳ್ಳೆ ಟ್ರಿಕ್ಕು ಇದು.
 
ಹಿಂಗೆ ಹೇಳೊದ್ರಿಂದಾನೇ ಭಯ ಆಗಿ ಓದಕ್ ಶುರು ಮಾಡ್ಬಿಡ್ಬೇಕು. ಪರೀಕ್ಷೆಗೆ ಒಂದು ವಾರಾನೂ ಉಳ್ದಿಲ್ಲ ಕಥೆ, ಕಾದಂಬರಿ, ಕಾಲಮ್ಮು, ಸಿನೆಮಾ, ಸೆಮಿನಾರು ಬಿಟ್ಟು ಓದಕ್ ಶುರು ಮಾಡು ಅಂತಾಳೆ ಅಮ್ಮ… wish me goodluck.    Love -Siri

‍ಲೇಖಕರು avadhi

October 14, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ವಿಕಾಸ್ ಹೆಗಡೆ

    ಒಂದು ವಯಸ್ಸಿನ ಹಂತದಲ್ಲಿ ಹೀಗೆಲ್ಲಾ ಅನ್ನಿಸೋದು ಸಹಜವಂತೆ. ಮನಸಿನ ತುಂಬಾ ಗೊಂದಲಗಳು. ಸುಮಾರು ಎರಡ್ಮೂರು ವರುಷಗಳ ಕೆಳಗೆ ಓ ಮನಸೇ ಪತ್ರಿಕೆಯಲ್ಲಿ ’ಹುಡುಗಿಯರಿಗೆ ಮದುವೆ ಬೇಕಾ’ ಮತ್ತು ’ಲಿವಿಂಗ್ ಟುಗೆದರ್’ ಎಂಬ ವಿಷಯಗಳ ಬಗ್ಗೆ ಇದರ ಬಗ್ಗೆ ಬಹಳ ಚೆನ್ನಾಗಿ ಕೊಟ್ಟಿದ್ದರು. ಓದಿದ್ದೀರಾ ಅಂದುಕೊಂಡಿದ್ದೇನೆ. ಮದುವೆಯಾಗೋದು ಎಲ್ಲೈಸಿ ಫಾರಂನಲ್ಲಿ ನಾಮಿನಿ ತುಂಬೋಕೆ ಮಾತ್ರ ಅಲ್ಲ ಅಂತ ಎಕ್ಫೈರಿ ಟೈಮ್ ಬಂದಾದಮೇಲೆ ಗೊತ್ತಾಗತ್ತಂತೆ. 🙂

    ಪ್ರತಿಕ್ರಿಯೆ
  2. agnichandra

    fist f all wl wish u very good luck do good in ur xamz:)matte the concept that bari aaa kelvu dinad santhoshakke yake appa ammang bejar madbeku anno vishya hidsthu adre aaa kelvu dinagla santhoshana jevanvidi gnapskolo hag irbek alwa startinge trouble kodo partner agbitre??

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: