ದೆಹಲಿಯಿಂದ ಸತೀಶ್ ಪತ್ರ..

ಸಿ ಎನ್ ಎನ್- ಐ ಬಿ ಎನ್ ನ ಸುದ್ದಿ ಸಂಪಾದಕ ಡಿ ಪಿ ಸತೀಶ್ ಒಂದು ಮುಖ್ಯ ಕಾರ್ಯಕ್ರಮವನ್ನು ರೂಪಿಸಿದ್ದಾರೆ.  ಈ ಕಾರ್ಯಕ್ರಮದ Script ಬರೆದು, ಹೆಸರುಗಳನ್ನು ಅಂತಿಮಗೊಳಿಸಿ, ಕಾರ್ಯಕ್ರಮ ನಿರ್ದೇಶಿಸಿ ಸಿದ್ಧಪಡಿಸಿದ್ದಾರೆ
ಗಣರಾಜ್ಯೋತ್ಸವದ ಅಂಗವಾಗಿ ರೂಪಿಸಿರುವ ಈ ಕಾರ್ಯಕ್ರಮ ದೇಶದ ಶ್ರೇಷ್ಠರನ್ನು ನೆನಪಿಸಿಕೊಳ್ಳಲಿದೆ. ಖಂಡಿತಾ ನೋಡಿ-

ಭಾರತ ಗಣತಂತ್ರಕ್ಕೀಗ 60 ವರ್ಷ. ನಮ್ಮ ಸಂವಿಧಾನ 60 ವರ್ಷ ಹಳೆಯದು ಅಥವಾ ಕೇವಲ 60 ವರ್ಷದ ತರುಣ. ಸಿ ಎನ್ ಎನ್- ಐ ಬಿ ಎನ್ ದೇಶದ ಗಣತಂತ್ರದ 60 ನೇ ವರ್ಷವನ್ನು ವಿಶೇಷ ಕಾರ್ಯಕ್ರಮಗಳ ಮೂಲಕ ಆಚರಿಸುತ್ತಿದೆ.
ಇಂತಹ ಪ್ರಮುಖ ಕಾರ್ಯಕ್ರಮಗಳಲ್ಲಿ ‘ Republic at 60 – Makers of India’ ವೂ ಒಂದು.
ದೇಶದ ವಿವಿಧ ರಂಗಗಳಿಗೆ ಶ್ರೇಷ್ಠ ಕೊಡುಗೆ ನೀಡಿದ, ತಳುಕು ಬಳುಕಿನ ಲೋಕದಿಂದ ಹೊರತಾದ 10 ಶ್ರೇಷ್ಠರನ್ನು ಈ 60 ನಿಮಿಷದ ಕಾರ್ಯಕ್ರಮದಲ್ಲಿ ನೆನಪು ಮಾಡಿಕೊಳ್ಳಲಾಗುತ್ತದೆ. ಇದರಲ್ಲಿ ಕನ್ನಡಿಗರಾದ ಡಾ. ಕೋಟ ಶಿವರಾಮ ಕಾರಂತ ಮತ್ತು ಕಮಲಾದೇವಿ ಚಟ್ಟೋಪಾಧ್ಯಾಯ ಅವರೂ ಇದ್ದಾರೆ.
ಮಾನವಹಕ್ಕುಗಳ ಹೋರಾಟಗಾರ ಮತ್ತು ವಕೀಲ ದಿವಂಗತ ವಿ ಎಂ ತಾರ್ಕುಂಡೆ, ಸ್ವಾತಂತ್ರ್ಯ ಹೋರಾಟಗಾರ್ತಿ ಮೃದುಲಾ ಸಾರಾಭಾಯಿ, ದೇಶದ ಮೊತ್ತ ಮೊದಲ ಚುನಾವಣಾ ಆಯುಕ್ತ ಸುಕುಮಾರ ಸೇನ್, ಮಹಾನ್ ಪರಿಸರವಾದಿ ಮತ್ತು ಚಿಫ್ಕೋ ಆಂದೋಲನದ ಪಿತಾಮಹ ಚಂಡೀಪ್ರಸಾದ್ ಭಟ್, ಹಸಿರು ಕ್ರಾಂತಿಯ ನಾಯಕ ಎಂ ಎಸ್ ಸ್ವಾಮಿನಾಥನ್, ಅಮುಲ್ ಸ್ಥಾಪಕ ಮತ್ತು ಕ್ಷೀರ ಕ್ರಾಂತಿಯ ಹರಿಕಾರ ವರ್ಗೀಸ್ ಕುರಿಯನ್, ಮಹಾನ್ ವಿಜ್ಞಾನಿ ಡಾ. ಸತೀಶ್ ಧಾವನ್ ಮತ್ತು ಬುಡಕಟ್ಟು ಜನಾಂಗದ ಅಭಿವೃದ್ಧಿಗೆ ಬದುಕು ಮೀಸಲಿಟ್ಟಿರುವ ಡಾ. ರಾಣಿ ಮತ್ತು ಡಾ. ಅಭಯ್ ಭಾಂಗ್ ದಂಪತಿಗಳು ಪಟ್ಟಿಯಲ್ಲಿರುವ ಇತರರು.
ಸಿ ಎನ್ ಎನ್ – ಐ ಬಿ ಎನ್ Editor in Chief ರಾಜ್ ದೀಪ್ ಸರ್ ದೇಸಾಯಿ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ವಿದ್ವಾಂಸ, ‘ India After Gandhi ‘ ಯ ಲೇಖಕ ಮತ್ತು ಕನ್ನಡಿಗರೇ ಆದ ರಾಮಚಂದ್ರ ಗುಹಾ ಕಾರ್ಯಕ್ರಮವನ್ನು ಸಂಸತ್ ಭವನದ ಹಿನ್ನೆಲೆಯಲ್ಲಿ ನಿರೂಪಿಸಿದ್ದಾರೆ.
ಅಪಾರ ಹಣ ಮತ್ತು ಸಮಯ ಖರ್ಚುಮಾಡಿ ತಯಾರಿಸಿರುವ ಕಾರ್ಯಕ್ರಮ ಸಂಗ್ರಹಯೋಗ್ಯ.
ಕಾರ್ಯಕ್ರಮ ಜನವರಿ 26 ರಂದು ಮಧ್ಯಾಹ್ನ 12 ಗಂಟೆಗೆ ಮತ್ತು ಅದೇ ರಾತ್ರಿ 10 ಗಂಟೆಗೆ ಪ್ರಸಾರವಾಗಲಿದೆ
-ಡಿ ಪಿ ಸತೀಶ್
ಸುದ್ದಿ ಸಂಪಾದಕ
ಸಿ ಎನ್ ಎನ್- ಐ ಬಿ ಎನ್
.

‍ಲೇಖಕರು avadhi

January 20, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

2 ಪ್ರತಿಕ್ರಿಯೆಗಳು

 1. Iranna Shettar

  ಕನ್ನಡ ಬ್ಲಾಗ ಲೋಕದ ಸಮೀಕ್ಷೆ: ಹೀಗೊಂದು ಅಧ್ಯಯನ
  ಆತ್ಮೀಯರೆ,
  ಅತ್ಯಂತ ಶೀಘ್ರವಾಗಿ ಹಾಗೂ ಗುಣಾತ್ಮಕವಾಗಿ ಬೆಳೆಯುತ್ತಿರುವ ಒಂದು ಪ್ರಬಲ ಮಾದ್ಯಮ “ಬ್ಲಾಗಿಂಗ್”, ಇದಕ್ಕೆ ಕನ್ನಡಿಗರು ಮತ್ತು ಕನ್ನಡ ಬ್ಲಾಗಿಂಗ ಹೋರತಲ್ಲ. ಇವತ್ತಿಗೆ ಕನ್ನಡದಲ್ಲು ಸುಮಾರು ೮೦೦ಕ್ಕೂ ಹೆಚ್ಚು ಬ್ಲಾಗಗಳಿವೆ. ಭಾರತಿಯ ಭಾಷೆಗಳ ಬ್ಲಾಗಿಂಗ ಸಂಭ್ರಮದಲ್ಲಿ ಕನ್ನಡವಿಗ ಪ್ರಖರ ಪ್ರಕಾಶ, ಸುಂದರ ಅಕ್ಷರಗಳ ಉದ್ಯಾನ.
  ಬಹಳಷ್ಟು ಬ್ಲಾಗ್‍ಗಳಲ್ಲಿ ಒಂದು, ಎರಡು ಪೋಸ್ಟುಗಳಿವೆ. ಕೆಲವೆಡೆ ಒಬ್ಬರೇ ಐದಾರು ಬ್ಲಾಗ್ ಮಾಡಿಕೊಂಡಿದ್ದಾರೆ. ಏನೇ ಆದರೂ ಉತ್ಸಾಹ-ಆಕಾಶಕ್ಕೆ ಏಣಿ ಹಾಕುವಷ್ಟಿದೆ. ಹೀಗಾಗಿ ಕನ್ನಡ ಬ್ಲಾಗುಗಳ ಮತ್ತು ಬ್ಲಾಗಿಗರ ಈ ಸಮೀಕ್ಷೆ ನಮ್ಮ ಮನದಲ್ಲಿ ಹುಟ್ಟಿದ್ದು, ಈ ಸಮೀಕ್ಷೆ ಕನ್ನಡ ಬ್ಲಾಗುಗಳ ಮತ್ತು ಬ್ಲಾಗಿಗರ ವಿಶೇಷಗುಣ, ಅಪೂರ್ವಲಕ್ಷಣ, ವೈಶಿಷ್ಟ್ಯಗಳನ್ನು ಅರ್ಥೈಸಿಕೊಳ್ಳುವ ಒಂದು ಸಣ್ಣ ಪ್ರಯತ್ನ.
  ಆತ್ಮೀಯ ಬ್ಲಾಗ ಬಂಧುಗಳೇ, ಈ ಸಮೀಕ್ಷೆಯ ಸಫಲತೆ ನಿಮ್ಮ ಸಹಯೋಗದಿಂದ ಮಾತ್ರ ಸಾಧ್ಯ. ಹೀಗಾಗಿ ದಯವಿಟ್ಟು ಈ ಕೆಳಗೆ ನೀಡಿದ ಸಂಪರ್ಕ ಕೊಂಡಿ (Link) ಚಿಟುಕಿಸಿ ಅಲ್ಲಿ ನೀಡಲಾಗಿರುವ ಕೆಲವು ಪ್ರಶ್ನೆಗಳಿಗೆ ಉತ್ತರಿಸಿ. ನೀವು ನಿಡಿದ ಎಲ್ಲ ಮಾಹೀತಿಗಳನ್ನು ರಹಸ್ಯವಾಗಿರಿಸುವುದಾಗಿಯೂ ಮತ್ತು ಸಮೀಕ್ಷೆಯ ಫಲಿತಾಂಶವನ್ನು ಕೇವಲ ಶೈಕ್ಷಣಿಕ ಕಾರ್ಯಗಳಿಗೆ ಮಾತ್ರ ಉಪಯೋಗಿಸಿಕೊಳ್ಳಲಾಗುವುದಾಗಿ ಈ ಮೂಲಕ ಪ್ರಮಾಣಿಸುತ್ತೆವೆ.
  http://spreadsheets.google.com/viewform?formkey=dF90eEtaNDlnNkRQQmVPZlBRSE02OGc6MA..
  ತಮ್ಮ ಸಲಹೆ ಮತ್ತು ಸಂದೇಹಗಳಿಗಾಗಿ [email protected] ಗೆ ಮಿಂಚಂಚೆ ಕಳುಹಿಸಿ.
  ಧನ್ಯವಾದಗಳೊಂದಿಗೆ
  ಈರಣ್ಣ ಶೆಟ್ಟರು ಮತ್ತು ಗ್ರಂಥಪಾಲಕ ಗೆಳೆಯರು

  ಪ್ರತಿಕ್ರಿಯೆ
 2. Mahendra Kumar H M

  Goodmorning, its good concept of News. u have recalled our india in in 60 minites.
  thanks. Mahendra kumar H M – Journalist

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: